ಎಷ್ಟನೇ ವಯಸ್ಸಿಗೆ ನಿಮ್ಮ ಮಗಳಿಗೆ ಮುಟ್ಟಿನ ಬಗ್ಗೆ ಅರಿವು ಮೂಡಿಸಬೇಕು? ಸಲಹೆ ಇಲ್ಲಿದೆ

  • by

ಹದಿಹರೆಯದ ಹೆಣ್ಣುಮಕ್ಕಳಿಗೆ ಖುತುಚಕ್ರ ಪ್ರಮುಖ ಘಟ್ಟ. ಬದಲಾದ ಜೀವನಶೈಲಿಯಿಂದಾಗಿ ಹುಡುಗಿಯರಿಗೆ 11 ವರ್ಷಕ್ಕೆಲ್ಲಾ ಬೇಗ ಮುಟ್ಟಾಗುತ್ತಿದೆ. ಆದ್ರೆ ಶಾಲೆಗೆ ಹೋಗುವ ಮಕ್ಕಳಿಗೆ ಮುಟ್ಟು ಎಂದರೇನು ಎಂಬ ಬಗ್ಗೆ ತಿಳಿದಿರುವುದಿಲ್ಲ. ಮೊದಲ ಬಾರಿಗೆ ಹುಡುಗಿಯವರು ಮುಟ್ಟದಾಗ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಆಗುತ್ತವೆ. ಈ ಅವಧಿ ಹುಡುಗಿಯರ ಜೀವನದಲ್ಲಿ ಪ್ರಮುಖ ಬದಲಾವಣೆಯ ಪರ್ವ ಅಂತಲೇ ಹೇಳಬಹುದು.ಈ ಅವಧಿ ಪ್ರಾರಂಭವಾದ ನಂತರವೇ ಹುಡಿಗಿಯರು ತನ್ನೋಳಗೆ ಅನೇಕ ಬದಲಾವಣೆಗಳನ್ನು ಕಾಣುತ್ತಾರೆ. ಕೆಲವರಿಗೆ ಇದು ಸಂತೋಷಕರವಾಗಿದ್ದರೆ, ಮತ್ತೆ ಕೆಲವರು ಭಯಗೊಳ್ಳುತ್ತಾರೆ. ಪಿರೀಯಡ್ಸ್ ಬರುವ ಮುನ್ನವೇ ಶಾಲೆಗೆ ಹೋಗುವ ಹದಿ ಹರೆಯದ ಹುಡುಗಿಯರಿಗೆ ಏನು ತಿಳಿದಿರುವುದಿಲ್ಲ. ಆದ್ರೆ ರಕ್ತ ನೋಡಿ ಹೆದರುತ್ತಾರೆ. ಆದ್ದರಿಂದ ತಾಯಂದಿರು ನಿಮ್ಮ ಮಕ್ಕಳನ್ನು ಮುಂಚಿತವಾಗಿಯೇ ಸಿದ್ಧಪಡಿಸುವುದು ಕರ್ತವ್ಯವಾಗಿರುತ್ತದೆ.

ಹೀಗಾಗಿ ಅಮ್ಮಂದಿರು 10 ವರ್ಷ ಇದ್ದಾಗಲೇ ನಿಮ್ಮ ಮಗಳಿಗೆ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ. ನಿಮ್ಮ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಶಾರೀರಿಕವಾಗಿ ತುಂಬಾ ಬದಲಾವಣೆಗಳಾಗುತ್ತವೆ. ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡಬಹುದು. ಮಕ್ಕಳನ್ನು ಸುಮ್ಮನೆ ಕುಳಿತುಕೊಳ್ಳಿ ಎಂದು ಗದರುವ ಬದಲು, ಮಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವುದು ಒಳ್ಳೆಯದು.

Ways Prepare ,Daughter ,First Period, 
ಮೊದಲ ಬಾರಿಗೆ ಮುಟ್ಟು, ಸಲಹೆಗಳು,

ಪೀರಿಯಡ್ಸ್ ಬರುವ ಮುನ್ನ ನಿಮ್ಮ ಮಗಳನ್ನು ಹೇಗೆ ಸಿದ್ಧಗೊಳಿಸಬೇಕು? ಮುಟ್ಟಿನ ವಿಚಾರ ಹೇಗೆ ಹೇಳುವುದು? ಈ ಬಗ್ಗೆ ಇಲ್ಲಿದೆ ಮಾಹಿತಿ. 

ಯಾವುದೇ ಹಿಂಜರಿಕೆ ಬೇಡ.!.

ಮುಟ್ಟು ಒಂದು ನೈಸರ್ಗಿಕ ಪ್ರಕ್ರಿಯೆ..ಇನ್ನು ಈ ಬಗ್ಗೆ ಮರೆಮಾಚುವ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ. ಪೀರಿಯಡ್ಸ್ ಆದ ದಿನಗಳಲ್ಲಿ ಅಡುಗೆ ಮನೆಗೆ ಹೆಣ್ಣುಮಕ್ಕಳು ಹೋಗಬಾರದು. ಖುತುಸ್ರಾವದ ಸಮಯದಲ್ಲಿ ಮಹಿಳೆ ಸಂಪೂರ್ಣವಾಗಿ ಒಂಟಿಯಾಗಿರಬೇಕು. ಹೀಗಾಗಿ ಮುಟ್ಟಿನ ವಿಷಯವಾಗಿ ನಿಮ್ಮ ಮಗಳಿಗೆ ಇದನ್ನು ಹೇಳಲು ನೀವು ಮುಂದೆ ಬರದೇ ಇರಬಹುದು. ಆದ್ರೆ ನಿಮ್ಮ ಮಗಳನ್ನು ಮಾನಸಿಕವಾಗಿ ಸಿದ್ಧಪಡಿಸಲು ನೀವು ಬಯಸುವಿರಾದರೆ, ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಹಿಂಜರಿಕೆಯನ್ನು ತೆಗೆದುಹಾಗುವುದು ಮುಖ್ಯ. ಇದೊಂದು ನೈಸರ್ಗಿಕ ಪ್ರಕ್ರಿಯೆ, ಸ್ತ್ರೀ ತನ್ನ ಜೀವನದಲ್ಲಿ ಈ ಪ್ರಕ್ರಿಯೆಯನ್ನು ನಿಭಾಯಿಸಬೇಕಾಗುತ್ತದೆ. 

Ways Prepare ,Daughter ,First Period, 
ಮೊದಲ ಬಾರಿಗೆ ಮುಟ್ಟು, ಸಲಹೆಗಳು,

2..ಮಗಳ ಜತೆ ಮಾತನಾಡಿ!

ನಿಮ್ಮ ಮಗಳ ಮನಸ್ಸಿನಲ್ಲಿ ಮುಟ್ಟಿನ ಬಗ್ಗೆ ಏನಾದರೂ ಪ್ರಶ್ನೆ, ಅನುಮಾನ , ಗೊಂದಲ ಗಳಿದ್ದರೆ ನಿವಾರಿಸಲು ಪ್ರಯತ್ನಿಸಿ. ಇದಕ್ಕಿರುವ ಸುಲಭ ಮಾರ್ಗವೆಂದರೆ ಮಾತನಾಡುವುದು. ನಿಮ್ಮ ಪ್ರೀತಿಯ ಮಗಳಿಗೆ 10 ವರ್ಷವಾದಾಗ ಎಲ್ಲಾ ತಾಯಂದಿರಿಗೂ ಮಕ್ಕಳ ಜತೆ ಮಾತನಾಡುವುದು ಮುಖ್ಯವಾಗುತ್ತದೆ. ಹಾಗಾಗಿ 10 ವರ್ಷ ತುಂಬಿದಾಗ ನಿಮ್ಮ ಮಗಳ ಜತೆ ಪೀರಿಯಡ್ಸ್ ಬಗ್ಗೆ ಮಾತನಾಡಿ. ಕೇವಲ ಮುಟ್ಟು ಕುರಿತಾಗಿ ಅಷ್ಟೇ ಅಲ್ಲ, ಸ್ತನಗಳ ಆಕಾರ, ಗಾತ್ರದಲ್ಲಿ ಬದಲಾವಣೆ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ. ಹೀಗಾಗಿ ಮುಂದೊದು ದಿನ ನಿಮ್ಮ ಮಗಳ ದೇಹದಲ್ಲಿ ಬದಲಾವಣೆಯಾದಾಗ, ಆಕೆಗೆ ಆತಂಕ, ಭಯ ಆಗುವುದಿಲ್ಲ. ಇದಕ್ಕಾಗಿ ಆಕೆ ಸಂಪೂರ್ಣವಾಗಿ ಸಿದ್ಧಳಾಗುತ್ತಾಳೆ. ಅಲ್ಲದೇ, ಮಗಳ ಮನಸ್ಸಿನಲ್ಲಿ ಉದ್ಭವಿಸಬಹುದಾದ ಪ್ರತಿಯೊಂದು ಪ್ರಶ್ನೆಗೂ ತುಂಬಾ ತಾಳ್ಮೆಯಿಂದ ಉತ್ತರಿಸಿ. ನೀವು ಆಕೆಯನ್ನು ಗದರಿಸಿ ಮೌನಗೊಳಿಸಿದರೆ, ಆ ಪ್ರಶ್ನೆ ಅವಳ ಮನಸ್ಸಿನಲ್ಲೇ ಉಳಿಯುತ್ತದೆ. ಆಮೇಲೆ ಇತರರು ಹೇಳಿದ ಮಾತುಗಳನ್ನೇ ನಂಬಿ ಬೀಡುತ್ತಾಳೆ.

3.ಪೀರಿಯಡ್ಸ್ ಹೈಜೀನ್ ಬಗ್ಗೆ ತಿಳಿಸಿ!

ಮುಟ್ಟಿನ ಸ್ವಚ್ಛತೆಯ ಬಗ್ಗೆ ನಿಮ್ಮ ಮಗಳಿಗೆ ಅರಿವು ಮೂಡಿಸುವುದು ತಾಯಿಯ ಕರ್ತವ್ಯ.ಮುಟ್ಟಾದಾಗ ಸ್ವಚ್ಛತೆ ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ ತಿಳಿಸುವುದು ಮುಖ್ಯ ಈ ಸಮಯದಲ್ಲಿ ಹಲವರು ಸ್ವಚ್ಛತೆಯ ಕೊರತೆಯಿಂದಾಗಿ ಹಲವು ಇನ್ಫೆಕ್ಷನ್, ಸಮಸ್ಯೆಗಳಿಗೆ ಒಳಗಾಗುತ್ತಾರೆ. ಮುಟ್ಟಿನ ಸಮಯದಲ್ಲಿ ಸರಿಯಾಗಿ ಸ್ವಚ್ಛ ಮಾಡದಿದ್ದಾಗ ದದ್ದುಗಳಿಗೆ ಹಾಗೂ ಬ್ಯಾಕ್ಟೇರಿಯಾ ಸೋಂಕುಗಳಿಗೆ ಕಾರಣವಾಗುತ್ತದೆ. ಪ್ರತಿ ನಾಲ್ಕೈದು ಗಂಟೆಗಳಿಗೊಮ್ಮೆ ಬಟ್ಟೆ, ಪ್ಯಾಡ್ ಬದಲಾಯಿಸಬೇಕು. ಸ್ವಚ್ಛತೆ ಕಾಪಾಡಬೇಕು ವಿವರಿಸಿ. ಮತ್ತು ವಿವಿಧ ಬ್ರ್ಯಾಂಡ್ ಪ್ಯಾಡಗಳ ಬಗ್ಗೆಯೂ ಅವರಿಗೆ ತಿಳಿಸಿ.

Ways Prepare ,Daughter ,First Period, 
ಮೊದಲ ಬಾರಿಗೆ ಮುಟ್ಟು, ಸಲಹೆಗಳು,

4.ಇಂಟರ್ನೆಟ್ ಸಹಾಯ ಪಡೆದುಕೊಳ್ಳಿ…!

ನಿಮ್ಮ ಮಗಳಿಗೆ ಮುಟ್ಟಿನ ಬಗ್ಗೆ ಹೇಗೆ ಹೇಳಬೇಕು ಎಂಬ ಅರ್ಥವಾಗದಿದ್ದರೆ, ಇಂಟರ್ನೆಟ್ ಸಹಾಯ ಪಡೆದುಕೊಳ್ಳುವುದು ಉತ್ತಮ. ಈ ಸಂದರ್ಭದಲ್ಲಿ ಹೆಚ್ಚುವರಿ ಸಹಾಯದ ಅಗತ್ಯವಿರುತ್ತದೆ. ನಿಮ್ಮ ಮಗಳಿಗೆ ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ವಿವರಿಸಲು ಟಿವಿ, ಇಂಟರ್ನೆಟ್, ಪುಸ್ತಕಗಳು, ಕಿರುಚಿತ್ರಗಳ ಸಹಾಯ ತೆಗೆದುಕೊಳ್ಳಬಹುದು. ಇದು ಮಾತ್ರವಲ್ಲ, ಮೊದಲ ಮುಟ್ಟಾದ ನಂತರ ಸ್ತ್ರೀರೋಗ ತಜ್ಞರ ಹತ್ತಿರ ಕರೆದುಕೊಂಡು ಹೋಗಬೇಕು. ವೈದ್ಯರು ಎಲ್ಲವನ್ನು ಬಹಳ ಹತ್ತಿರದಿಂದ ವಿವರಿಸಬಲ್ಲರು. ನಂತರ ನಿಮ್ಮ ಮಗಳ ಮನಸ್ಸಿನಲ್ಲಿ ಈ ಬಗ್ಗೆ ಯಾವುದೇ ಸಂದೇಹವಿರುವುದಿಲ್ಲ. 

ನೈರ್ಮಲ್ಯ ಕಾಪಾಡಿಕೊಳ್ಳುವುದು ಹೇಗೆ..?

1. ಬಟ್ಟೆ, ಸ್ಯಾನಿಟರಿ ಪ್ಯಾಡ್, ಟ್ಯಾಂಫೋನ್, ಮೆನುಸ್ಟ್ರುವಲ್ ಕಪ್ ಉಪಯೋಗಿಸಬಹುದು. ಏನೇ ಆದರೂ ದಿನಕ್ಕೆ ನಾಲ್ಕೈದು ಬಾರಿ ಬಟ್ಟೆಗಳನ್ನು ಬದಲಾಯಿಸಿಕೊಳ್ಳಬೇಕು. ಬಿಸಿಲಿನಲ್ಲಿ ಒಣಗಿಸಿದ ಹತ್ತಿ ಬಟ್ಟೆಗಳನ್ನು ಉಪಯೋಗಿಸುವುದು ಉತ್ತಮ. 

2.ಸ್ಯಾನಿಟರಿ ಪ್ಯಾಡ್ ಖರೀದಿ ಮಾಡಲು ಆಗದಿದ್ದರೆ, ಹತ್ತಿ ಬಟ್ಟೆಗಳನ್ನು ಬಳಸುವುದು ಉತ್ತಮ. ನಂತರ  ಬ್ರಶ್ ನಿಂದ ಸ್ವಚ್ಛ ಮಾಡಿ, ಈ ಬಟ್ಟೆಗಳನ್ನು 3 ರಿಂದ 4 ತಿಂಗಳಿಗಿಂತಲೂ ಹೆಚ್ಚು ಬಳಸಬಾರದು. ಮುಟ್ಟಿಗೂ ಮುನ್ನ ಕೂದಲಗಳನ್ನು ಕತ್ತರಿಯಿಂದ ಟ್ರೀಂ ಮಾಡಿ. ಬ್ಲೇಡ್ ಬಳಸಬೇಡಿ.

3. ಶೌಚಾಲಯದ ನಂತರ ಜನನಾಂಗ ಭಾಗವನ್ನು ಸ್ವಚ್ಛ ನೀರಿನಿಂದ ತೊಳೆದು, ಒಣ ಬಟ್ಟೆಯಿಂದ ತೊಡೆ ಸಂದಿಗಳನ್ನು ಒರೆಸಿಕೊಳ್ಳಬೇಕು. 

4. ಮೆನ್ ಸ್ಟ್ರುವಲ್ ಕಪ್ ಉಪಯೋಗಿಸುವ ತರಬೇತಿ ಪಡೆದಿರಬೇಕು. ಹಾಗೂ ಮಾರ್ಗದರ್ಶನ ಅಗತ್ಯವಿರುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ