ಗರ್ಭವಸ್ಥೆಯಲ್ಲಿ ಹೇರ್ ಡೈ ಬಳಸಬೇಕಾ? ಬಳಸಬಾರದಾ ?

  • by

ಗರ್ಭಧಾರಣೆ ಎಲ್ಲಾ ಮಹಿಳೆಯರಿಗೆ ಒಂದು ವಿಭಿನ್ನ ಅನುಭವ ನೀಡುತ್ತದೆ.  ಹೊಟ್ಟೆಯಲ್ಲಿ ಮಗು ಬೆಳೆದಂತೆ ದೇಹದ ಅನೇಕ ಬದಲಾವಣೆಗಳನ್ನು ಕಾಣಬಹುದು. ಗಣನೀಯ ಪ್ರಮಾಣದಲ್ಲಿ ತೂಕ ಹಾಗೂ ಆಹಾರದ ಬಯಕೆಗಳು ಕಾಣುವುದು ಸಹಜ… ಗರ್ಭಾವಸ್ಥೆಯಲ್ಲಿ ಎದೆಉರಿ, ಬಳಲಿಕೆ ಅನುಭವಿಸುವ ಸಾಧ್ಯತೆ ಹೆಚ್ಚು.

ನಿಮ್ಮ ದೇಹದಲ್ಲಾಗುವ ಪ್ರತಿಯೊಂದು ಬದಲಾವಣೆ ನಿಮಗೆ ಕೆಲವೊಂದು ಸಲ ಕಿರಿ ಕಿರಿ ಉಂಟು ಮಾಡಬಹುದು. ಆದ್ರೆ ದೈಹಿಕ ಬದಲಾವಣೆಗಳ ಮೇಲೆ ನಿಮಗೆ ನಿಯಂತ್ರಣವಿದೆ. ಆದ್ರೆ ನೀವು ನಿಯಂತ್ರಿಸುವ ಒಂದು ವಿಷಯವೆಂದರೆ ನಿಮ್ಮ ಕೂದಲಿನ ಬಣ್ಣ.

ಹೊಸದಾಗಿ ಹೇರ್ ಡೈ ಮಾಡುವುದರಿಂದ ನಿಮಗೆ ಉತ್ತಮ ಅನುಭವ ಸೀಗಬಹುದು. ಆದ್ರೆ ಗರ್ಭಾವಸ್ಥೆಯಲ್ಲಿ ಹೇರ್ ಡೈ ಮಾಡುವುದಕ್ಕೆ ಭಯ ಕಾಡಬಹುದು. ಅನೇಕ ಹೇರ್ ಡೈ ಗಳಲ್ಲಿ ಕೂದಲಿನ ಬಣ್ಣ ಗಳು ನಿಮ್ಮ ರಾಸಾಯನಿಕಗಳನ್ನ ಹೊಂದಿರುತ್ತವೆ. ಆದ್ರೆ ನೈಸರ್ಗಿಕವಾಗಿ ಮನೆಯಲ್ಲಿ ಸಿಗಬಹುದಾದ ಹೇರ್ ಡೈ ಗಳನ್ನು ಹೇಗೆ ಬಳಸಬಹುದು?. ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ. 

Pregnancy safe, hair dye ,ಗರ್ಭಾವಸ್ಥೆ, ಹೇರ್ ಡೈ, ರಕ್ಷಣೆ,

ಕೇವಲ ಗರ್ಭಿಣಿಯಾಗಿದ್ದಾಗ ಬಳಸಬಹುದಾದ ನೈಸರ್ಗಿಕ ಹೇರ್ ಡೈ ಮಾರ್ಗಗಳು 

ಮದರಂಗಿ 

ಚಹಾ ಡಿಕಾಕ್ಷನ್ ಮತ್ತು ನಿಂಬೆ ರಸ, ಮದರಂಗಿ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ.. ಸಮ ಪ್ರಮಾಣದಲ್ಲಿ ಎಲ್ಲಾ ಕೂದಲಿಗೂ ತಲುಪವಂತೆ ಹಚ್ಚಿಕೊಳ್ಳಬೇಕು. ನಂತರ ಒಣಗಲು ಬಿಡಿ. ನಂತರ ಶಾಂಪು ಬಳಸಿ ಕೂದಲನ್ನು ತೊಳೆಯಿರಿ. ಇದು ನಿಮ್ಮ ಕೆಂಪು ಕಿತ್ತಳೆ ವರ್ಣವನ್ನು ನೀಡುತ್ತದೆ.  ನಿಮ್ಮ ಕೂದಲು ಹೊಳೆಯುವಂತೆ ಮಾಡುತ್ತದೆ. 

ಕ್ಯಾರೆಟ್ ರಸ 

ಕ್ಯಾರೆಟ್ ರಸ ನಿಮ್ಮ ಕೂದಲನ್ನು ಕೆಂಪು ಮಿಶ್ರಿತ ಕೇಸರಿ ಬಮ್ಣ ನೀಡಬಹುದು. ಕ್ಯಾರೆಟ್ ರಸವನ್ನು ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯ ಜತೆಗೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. ೧ ಗಂಟೆ ನಂತರ  ಆಪಲ್ ವಿನಿಗರ್ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ. ಒಂದು ವೇಳೆ ನೀವು ಗಾಢ ಕೆಂಪು ವರ್ಣವನ್ನು ಬಯಸುತ್ತೀರಾದರೆ ಕ್ಯಾರೆಟ್ ಜ್ಯೂಸ್ ಬೀಟ್ ರೂಟ್ ಜ್ಯೂಸ್ ರಸವನ್ನು ಕೂಡ ಬಳಕೆ ಮಾಡಬಹುದು. 

ನಿಂಬೆಯ ರಸ 

ನಿಂಬೆಯ ರಸ ಇದು ಶಾಶ್ವತವಾಗಿ ಕೂದಲಿನ ಬಣ್ಣ ನೀಡುತ್ತದೆ. ನಿಂಬೆಯ ರಸವನ್ನು ೧ ಗಂಟೆಯ ನಂತರ ಹಚ್ಚಿ ಹಾಗೆಯೇ ಬಿಡಿ. ಸೂಕ್ಯ ಫಲಿತಾಂಶಕ್ಕಾಗಿ ನಿಂಬೆಯ ರಸ ಹಚ್ಚಿದ ನಂತರ, ಸೂರ್ಯನ ಕಿರಣಗಳಿಗೆ ನಿಮ್ಮ ಕೂದಲನ್ನು ಒಡ್ಡುವುದು ಒಳ್ಳೆಯದು. 

ಕೂದಲನ್ನು ಸೇಫ್ ಆಗಿ ಡೈ ಮಾಡುವುದು ಹೇಗೆ..

ಸುರಕ್ಷಿತವಾಗಿ ಕೂದಲಿಗೆ ಬಣ್ಣ ಹಚ್ಚುವುದಕ್ಕಾಗಿ ಈ ಹಂತಗಳನ್ನು ಪಾಲಿಸಬೇಕು. ಎರಡನೇ ತ್ರೈಮಾಸಿಕ ಬರುವರೆಗೂ ಕಾಯಿರಿ. ಗರ್ಭಧಾರಮೆ. ಪ್ರಾರಂಭಿಕ ೧೨ ವಾರಗಳಲ್ಲಿ ನಿಮ್ಮ ಮಗುವು ದುರ್ಬಲವಾಗಿರುವ ಹಂತದಲ್ಲಿರುತ್ತದೆ. ಅದೇ ಕಾರಣಕ್ಕೆ ಯಾವುದೇ ಹಾನಿಕಾರಕ ರಾಸಾಯನಿಕವನ್ನು ಬಳಸದಂತೆ ತಜ್ಞರು ಸಲಹೆ ನೀಡುತ್ತಾರೆ. ಕೂದಲಿನ ಬಣ್ಮ ಮತ್ತು ಭ್ರೂಣದ ನಡುವಿನ ಸಂಬಂಧ ಬಗೆಗಿನ ಅಪಾಯವನ್ನು ತಿಳಿಸುವ ಅಧ್ಯಯನಗಳು ಇಲ್ಲವಾದರೂ ಕೂಡಾ ೧೨ ವಾರಗಳವರೆಗೆ ರಾಸಾಯನಿಕವನ್ನು ಬಳಸದೇ ಸುರಕ್ಷಿತವಾಗಿರುವುದು ಉತ್ತಮ

ಬಣ್ಣಗಳ ಆಯ್ಕೆ ಹೇಗಿರಬೇಕು.. 

ಅರೆ ಶಾಶ್ವತ ಬಣ್ಣಗಳು ಹೆಚ್ಚು ಉಪಯುಕ್ತ.. ಇದರಲ್ಲಿ ಬ್ಲೀಚ್ ಇರುವುದಿಲ್ಲ. ಮತ್ತು ರಾಸಾಯನಿಕಗಳಿಗೆ , ವಿಶಪೂರಿತ ವಸ್ತುಗಳಿಗೆ ಒಡ್ಡುವಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಬಹುದಾಗಿದೆ. 

ಮನೆಯಲ್ಲಿನ ತೆರೆದ ಪ್ರದೇಶದಲ್ಲಿ ಕೂದಲನ್ನು ಡೈ ಮಾಡಿಕೊಳ್ಳಿ.  ಅಲ್ಲಿ ನೀವು ತಾಜಾ ಗಾಳಿಯನ್ನು ಉಸಿರಾಡುವಂತಿರಬೇಕು. ಟಾಕ್ಸಿಕ್ ಗ್ಯಾಸಗಳ ಸೇವನೆ ಆಗದಂತೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಉತ್ತಮ. ನೀವೇ ಹೇರ್ ಗಳನ್ನು ಡೈ ಮಾಡುತ್ತಿದ್ದರೆ ಸರಿಯಾಗಿ ಕವರ್ ಮಾಡಿಕೊಳ್ಳಿ. ಕೈಗಳಿಗೆ ಗ್ಲೌನ್ ನ್ನು ತೊಟ್ಟುಕೊಳ್ಳಿ. ಈ ಮೂಲಕ ರಾಸಾಯನಿಕ ನಿಮ್ಮ ಕೈಗಳನ್ನು ಒಡ್ಡಿಕೊಳ್ಳುವುದು ಕಡಿಮೆ ಮಾಡಿದಂತಾಗುತ್ತದೆ. ಹೇರ್ ಡೈ ಮಾಡುವುದಕ್ಕೂ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. 

ಖರೀದಿಗೂ ಮುನ್ನ ಹೇರ್ ಡೈ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮೊದಲಿಗೆ ನೀವು ಕಂಕುಳ ಭಾಗಕ್ಕೆ ಅಪ್ಲೈ ಮಾಡಿಕೊಂಡು ಟೆಸ್ಟ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮಗೆ ತುರಿಕೆ, ಚರ್ಮ ಕೆಂಪಾಗುವ ನೋವು ಅಥವಾ ಉರಿಯೂತ ಅನುಭವವಾದರೆ, ಕೂಡಲೇ ತೊಳೆಯಿರಿ. ಮತ್ತು ಡೈಯನ್ನು ಬಳಕೆ ಮಾಡಬೇಡಿ. 

ಬಣ್ಣ ಹಚ್ಚುವುದಕ್ಕೂ ಮುನ್ನ ಮುಂಜಾಗ್ರತಾ ಕ್ರಮಗಳೇನು.. 

ಕೈಪಿಡಿಯಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಅನುಸರಿಸಬೇಕು.

ಹೇರ್ ಕಲರ್ ಬಳಕೆಯನ್ನು ಮಾಡುವ ಮೊದಲು ಪ್ಯಾಚ್ ಪರೀಕ್ಷೆ ಮಾಡಿ.

ಕಡಿಮೆ ಬೆಲೆಯ ಹೇರ್ ಡೈ ಅಡ್ಡ ಪರಿಣಾಮಗಳನ್ನು ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ 

ಕಣ್ಣು ಮತ್ತು ಚರ್ಮಕ್ಕೆ ನೇರವಾಗಿ ಎಫೆಕ್ಟ್ ಆಗದಂತೆ ಜಾಗೃತೆ ವಹಿಸಿ. ನಂಬಿಕಸ್ಥ ಬ್ರ್ಯಾಂಡ್ ನ ಹೇರ್ ಡೈ ಗಳನ್ನೇ ಖರೀದಿಸಿ. ಅಲ್ಲದೇ ಉತ್ತಮ ಗುಣಮಟ್ಟದ ಶಾಂಪು ಮತ್ತು ಕಂಡೀಷನರ್ ನ್ನು ಕೂದಲು ಹೊಳೆಯುವುದನ್ನು ಬಳಸಿ. ಸ್ಕಾಲ್ಸ್ ನ್ನು ಚೆನ್ನಾಗಿ ತೊಳೆಯಿರಿ. ಈ ಮೂಲಕ  ಡೈ ಚರ್ಮದಲ್ಲಿ ಹೀರಿಕೊಳ್ಳುವುದನ್ನು ತಡೆಯಬಹುದು. ಕಣ್ಣಿಗೆ ನೇರವಾಗಿ ಎಫೆಕ್ಟ್ ಆಗದಂತೆ ಜಾಗ-ತೆ ವಹಿಸಿ. ಹೀಗೆ ಮುಂಜಾಗ್ರತೆ ತೆಗೆದುಕೊಂಡಾಗ ಅಡ್ಡ ಪರಿಣಾಮಗಳಾಗುವ ಸಾಧ್ಯತೆಗಳ ಬಹಳ ಕಡಿಮೆ ಇರುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ