ನೀವು ನಿದ್ರೆ ಮಾಡುವ ಭಂಗಿ ಸರಿಯಾಗಿದೆಯಾ? ಪರೀಕ್ಷಿಸಿ!

ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಉತ್ತಮ ಮತ್ತು ಸಂಪೂರ್ಣ ನಿದ್ರೆ ಅತ್ಯವಶ್ಯಕ ಎಂದು ಹೇಳಬಹುದು. ಇಂದಿನ ಜೀವನಶೈಲಿ ಹಾಗೂ ಅಗತ್ಯಗನುಗುಣವಾಗಿ ನಿದ್ರೆ ಮಾಡುವ ಅಭ್ಯಾಸಗಳು ಬದಲಾಗುತ್ತಿದೆ. ಆರೋಗ್ಯಕರವಾಗಿರಲು ನಿದ್ರೆಯ ಭಂಗಿಯು ಮುಖ್ಯವಾಗುತ್ತದೆ. ಸರಿಯಾದ ಭಂಗಿಯಲ್ಲಿ ಮಲಗುವ ಅಭ್ಯಾಸ ಹೊಂದಿರಬೇಕು. ಇಲ್ಲದಿದ್ದರೆ, ದೈಹಿಕವಾಗಿ ನೋವು , ಗ್ಯಾಸ್, ಅಜೀರ್ಣ ಸಮಸ್ಯೆ ಹಾಗೂ ಇತರ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ.

position to sleep, ಮಲಗುವ ಭಂಗಿ,

ನಿದ್ರೆ ಮಾಡಲು ಉತ್ತಮ ಸಮಯ ಯಾವುದು?

ನಿದ್ರೆಯ ಸಮಯವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಮೊದಲ ಮತ್ತು ಕೊನೆಯ ಸೂರ್ಯ ಮುಳುಗಿದ 3 ಗಂಟೆ ನಂತರ, ಬ್ರಹ್ಮ ಮುಹೂರ್ತಕ್ಕೆ 3 ಗಂಟೆಗಳ ಮೊದಲು, (ಬೆಳಿಗ್ಗೆ 3ರಿದಂ 6 ಗಂಟೆಯವೆರೆಗೆ, ಸಂಜೆ 6.30 ರಿಂದ ರಾತ್ರಿ 9ರವರೆಗೆ) ಧ್ಯಾನ ಮಾಡಲು, ಓದಲು ,ಜ್ಞಾನವನ್ನು ಪಡೆಯಲು, ಮತ್ತು ಪ್ರಾರ್ಥಿಸಲು ಇದು ಅತ್ಯುತ್ತಮ ಸಮಯ ಎಂದು ಪರಿಗಣಿಸಲಾಗಿದೆ. ಎರಡನೇಯ ಹಾಗೂ ಮೂರನೇಯ ವಿಧಾನ, (ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ) ನಿದ್ರೆ ಮಾಡಲು ಉತ್ತಮ ಸಮಯ ಎಂದು ಹೇಳಬಹುದು.

ಮಲಗುವ ಮೊದಲು ಇವುಗಳನ್ನು ಪಾಲಿಸಿ..!


1.ಮಲಗುವ ಮುನ್ನ ಪಾದಗಳನ್ನು ಸರಿಯಾಗಿ ತೊಳೆಯಿರಿ
2.ನಿಮ್ಮ ಕಾಲಿನ ಅಡಿಭಾಗಕ್ಕೆ ಚೆನ್ನಾಗಿ ಮಸಾಜ್ ಮಾಡುವುದು ಒಳ್ಳೆಯದು
3.ದೇಹದಲ್ಲಿ ಗಾಳಿ ಪ್ರಸರಿಸಲು ಮಲಗುವ ವೇಳೆ ಸಡಿಲ ಹಾಗೂ ಆರಾಮದಾಯಕ ಬಟ್ಟೆಗಳನ್ನು ಧರಿಸಿ
4.ಹಾಸಿಗೆಗೆ ಹೋಗುವ ಮುನ್ನ ದೀರ್ಘವಾದ ಆಳವಾದ ಉಸಿರನ್ನು ತೆಗೆದುಕೊಂಡು ಧ್ಯಾನ ಮಾಡಿ.
5.ನಿಮ್ಮ ಪಾದಗಳನ್ನು ದಕ್ಷಿಣ ಕಡೆಗೆ ಮಾಡಿ ಮಲಗಬೇಡಿ. ಗುರು, ದೇವರ ವಿಗ್ರಹ, ದೇವರ ಮೂರ್ತಿ ಇರುವ ದಿಕ್ಕಿಗೆ ನಿಮ್ಮ ಪಾದಗಳು ಇರದಂತೆ ನೋಡಿಕೊಳ್ಳಿ.
6.ಅಡುಗೆ ಮನೆಯೊಳಗೆ ಮಲಗಬೇಡಿ, ಯಾವುದೇ ಆಹಾರ ಪದಾರ್ಥಗಳನ್ನು ಮಲಗುವ ಕೋಣೆಯೊಳಗೆ ಇಡಬೇಡಿ.
7.ಮಲಗುವ ಕೋಣೆಯೊಳಗೆ ತಾಜಾ ಗಾಳಿ ಇರುವಂತೆ ನೋಡಿಕೊಳ್ಳಿ.
8.ಕತ್ತಲೆ, ಒದ್ದೆಯಾದ ಕೋಣೆಯಲ್ಲಿ ಮಲಗಬೇಡಿ.
9.ತಲೆಯನ್ನು ಸ್ವಲ್ಪ ಮೇಲಕ್ಕೆ ಇರಿಸಿ, ತೆಳುವಾದ ದಿಂಬನ್ನು ಉಪಯೋಗಿಸಿ.
10.ಬೇಸಿಗೆ ಕಾಲದಲ್ಲಿ ಟೆರಸ್ ಮೇಲೆ ಮಲಗಬಹುದು
11.ಸೂರ್ಯನ ನೇರ ಬೆಳಕಿನಲ್ಲಿ ಮಲಗುವುದು ಒಳ್ಳೆಯದಲ್ಲ. ಬೆಳದಿಂಗಳ ರಾತ್ರಿಯಲ್ಲಿ ಮಲಗುವ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

position to sleep, ಮಲಗುವ ಭಂಗಿ,

ಹಗಲು ಹೊತ್ತಿನಲ್ಲಿ ನಿದ್ರೆ ಮಾಡಬಾರದಾ..?

ಆಯುರ್ವೇದದ ಪ್ರಕಾರ, ಮಧ್ಯಾಹ್ನ ಹೊತ್ತು ಮಲಗುವುದು, ದೇಹದಲ್ಲಿ ಕಫವನ್ನು ಹೆಚ್ಚಿಸುತ್ತದೆ. ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ. ಇದರಿಂದ ತಲೆ ಭಾರವಾಗುತ್ತದೆ. ಉಸಿರಾಡಲು ನೆರವಾಗುತ್ತದೆ. ಅರೆ ನಿದ್ರಾವಸ್ಥೆ , ಶೀತ, ಕೆಮ್ಮು, ತಲೆ ನೋವು , ಜೀರ್ಣಕಾರಿ ಗುಳ್ಳೆಗಳು, ತುರಿಕೆ , ನೋಯುತ್ತಿರುವ ಗಂಟಲು, ರಕ್ತದ ನಷ್ಟ ಇತ್ಯಾದಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

position to sleep, ಮಲಗುವ ಭಂಗಿ,

ಮಧ್ಯಾಹ್ನ ಯಾರು ಮಲಗಬಹುದು..!

ಊಟ ವಾದ ತಕ್ಷಣ ನಿದ್ರಿಸಬಾರದು. ಭಾರವಾದ ಆಹಾರ ಸೇವಿಸಿ ನಂತರ ಸ್ವಲ್ಪ ಹೊತ್ತ ವಿಶ್ರಾಂತಿ ಪಡೆಯುವುದು ಆರೋಗ್ಯಕ್ಕೆ ಒಳ್ಳೆಯದು. ಮಲಗುವುದಕ್ಕೂ ಮುನ್ನ 5 ರಿಂದ 10 ನಿಮಿಷ ಕುಳಿತು, ನಂತರ ನಿದ್ರಿಸಬಹುದು.
ಮಕ್ಕಳು ಮತ್ತು ವೃದ್ಧರು ನಿದ್ರಿಸುವುದು ಉತ್ತಮ
ರಾತ್ರಿ ವೇಳೆ ಕೆಲಸ ಮಾಡುವವರು
ಕಠಿಣ ದೈಹಿಕ ಅಥವಾ ಮಾನಸಿಕ ದಣಿವು ಹೆಚ್ಚಾಗಿದ್ದರೆ
ಯಾವುದೇ ರೀತಿಯ ನೋವು, ಗಾಯ, ಹಾಗೂ ಉಸಿರಾಟದ ತೊಂದರೆ, ಮುಟ್ಟಿನ ಸಮಯದಲ್ಲಿ ನಿದ್ರಿಸುಬಹುದು.ದೀರ್ಘಕಾಲ ಪ್ರಯಾಣ ಮಾಡಿದ ನಂತರ, ಹೆಚ್ಚು ಭಾರವಾದ ವಸ್ತುಗಳನ್ನು ಎತ್ತಿದ ನಂತರ, ದೀರ್ಘಕಾಲ ಅಧ್ಯಯನ ಮಾಡಿದ ನಂತರ ನಿದ್ರಿಸಬಹುದು.


ಮಲಗುವ ಭಂಗಿ ಹೇಗಿರಬೇಕು..?

ಮಲಗುವ ವಿಧಾನ , ಮೂರು ವಿಧಾನಗಳನ್ನು ಹೊಂದಿದೆ. ಸರಿಯಾಗಿ ಮಲಗುವ ಭಂಗಿ ಯಾವುದು ಇಲ್ಲಿದೆ ಮಾಹಿತಿ.
ದೇಹದ ನೋವನ್ನು ನಿವಾರಿಸಲು ಮಲಗುವ ಭಂಗಿಗಳು ಇಲ್ಲಿವೆ.ಕುತ್ತಿಗೆ ನೋವನ್ನು ನಿವಾರಿಸಲು ಮಲಗುವ ಭಂಗಿ ಕುತ್ತಿಗೆ ನೋವು ನಿವಾರಿಸಲು ಮಲಗುವ ಭಂಗಿ.


ದೇಹದ ಸಾಮಾನ್ಯ ನೋವನ್ನು ನಿವಾರಿಸಲು ಪರಿಪೂರ್ಣ ನಿದ್ರೆ ಅವಶ್ಯಕ. ಆದರೆ ಸರಿಯಾದ ಭಂಗಿಯಲ್ಲಿ ನಿದ್ರೆ ಮಾಡಬೇಕಾಗುತ್ತದೆ. ಭುಜದ ನೋವಿನಿಂದ ನೀವು ತೊಂದರೆಗೊಳಗಾಗಿದ್ದರೆ, ಹಲವು ಕಾರಣಗಳಿವೆ. ಅತಿಯಾದ ಒತ್ತಡ, ಸ್ನಾಯು ಉರಿಯೂತ, ಅಸ್ಥಿರತೆ, ನರಗಳ ಸೆಳೆತ ಇತ್ಯಾದಿಗಳು ಸೇರಿದ್ದು, ನೀವು ಮಲಗುವ ವಿಧಾನವನ್ನು ಬದಲಾಯಿಸುವ ಮೂಲಕ ಈ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ.


ಭುಜದ ನೋವು ನಿವಾರಣೆಗೆ , ಬೆನ್ನಿಗೆ ಸಂಪೂರ್ಟ್ ಮಾಡಿ ಮಲಗುಬೇಕು. ಭುಜಗಳ ಮೇಲೆ ಇದು ಒತ್ತಡ ಬೀರುವುದಿಲ್ಲ. ಇನ್ನು ನೋವು ಹೊಂದಿರುವ ಭುಜದ ಮೇಲೆ ಪರಿಣಾಮ ಬೀರುವ ಭಂಗಿಯಲ್ಲಿ ಮಲಗದಂತೆ ನೋಡಿಕೊಳ್ಳಿ. ಮಲಗುವ ಸಮಯದಲ್ಲಿ ನಿಮ್ಮ ಎದೆಯ ಎತ್ತರದ ಮುಂಭಾಗದಲ್ಲಿ ದಿಂಬನ್ನು ಇರಿಸಿ. ಅದರ ಮೇಲೆ ಕೈಯಿಟ್ಟು ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ಭುಜದ ನೋವಿನಿಂದ ಪರಿಹಾರ ಸೀಗುತ್ತದೆ.

ತಪ್ಪಾಗಿ ಮಲಗುವ ಭಂಗಿ ಕೂಡಾ ಕೆಲಮೊಮ್ಮೆ ಕುತ್ತಿಗೆ ನೋವಿಗೆ ಕಾರಣವಾಗಬಹುದು. ಹಾಗಾಗಿ ಮಲಗುವ ಭಂಗಿ ಸರಿಯಾಗಿರಬೇಕು. ಆದ್ದರಿಂದ ನಿದ್ದೆ ಮಾಡುವಾಗ ನಿಮ್ಮ ತಲೆಯ ಕೆಳಗೆ 1 ಕ್ಕಿಂತ ಹೆಚ್ಚು ದಿಂಬುಗಳನ್ನು ಇಟ್ಟುಕೊಳ್ಳಬೇಡಿ.ಕುತ್ತಿಗೆ ನೋವು ನಿವಾರಿಸಲು ರಾತ್ರಿ ಮಲಗುವ ಸಮಯದಲ್ಲಿ ಹಾಗೂ ಮಲಗಿರುವಾಗ ನಿಮ್ಮ ಕುತ್ತಿಗೆಯನ್ನು ನೇರವಾಗಿ ಹಾಗೂ ರಿಲ್ಯಾಕ್ಸ್ ಭಂಗಿಯಲ್ಲಿ ಇರಲಿ. ದೇಹದ ಉಳಿದ ಭಾಗಗಳೊಂದಿಗೆ ಕುತ್ತಿಗೆ ಚಪ್ಪಟೆಯಾಗಿರಬಾರದು. ಇದರರ್ಥ ನೀವು ಅಗತ್ಯವಿದ್ದರೆ ಮಾತ್ರ ದಿಂಬನ್ನು ಬಳಸಬೇಕು. ದಿಂಬಿನ ಬದಲು, ನಿಮ್ಮ ತಲೆಯ ಕೆಳಗೆ ಟವಲ್ ಅನ್ನು ಮಡಿಸಬಹುದು.ನಿಮಗೆ ಬೆನ್ನು ನೋವು ಸಮಸ್ಯೆ ಇದ್ದರೆ, ಬೆನ್ನು ನೋವನ್ನು ನಿವಾರಿಸಲು ಮಲಗುವ ಸ್ಥಾನಗಳು ಸಹ ಬಹಳ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ