ಗಸಗಸೆ ಆರೋಗ್ಯ ಪ್ರಯೋಜನಗಳು..!

  • by

ಗಸಗಸೆ ಹೆಚ್ಚಾಗಿ ಸಿಹಿ ತಿಂಡಿಗಳಲ್ಲಿ ಬಳಸಲಾಗುತ್ತದೆ. ಗಸಗಸೆ ಬೀಜಗಳು ಸಿಹಿತಿಂಡಿಗಳಲ್ಲಿ ಪರಿಮಳ ನೀಡುವುದಲ್ಲದೇ, ಅನೇಕ ಆರೋಗ್ಯ ಪ್ರಯೋಜನಕಾರಿಗಳನ್ನು ಹೊಂದಿದೆ. ನಿಮ್ಮನ್ನು ತಂಪಾಗಿಸಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಚರ್ಮದ ತೊಂದರೆಗಳು ಮತ್ತು ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿಡುತ್ತದೆ. 

ಗಸಗಸೆ ಸೇವಿಸುವುದರಿಂದ ಪ್ರಯೋಜನಗಳೇನು..?

ವಾಯು ಸಮಸ್ಯೆ ನಿವಾರಣೆ!

ನಿಮಗೆ ವಾಯು ಸಮಸ್ಯೆ ಹೆಚ್ಚಾಗಿ ಆಗುತ್ತಿದ್ದರೆ, ಈ ನೈಸರ್ಗಿಕ ವಿಧಾನಗಳನ್ನು ವಿಧಾನಗಳನ್ನು ಪ್ರಯತ್ನಿಸಬಹುದು. ಗಸಗಸೆ ಬೀಜಗಳ ಸೇವನೆಯಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದು. 

ಬಾಯಿ ಹುಣ್ಣಿಗೆ ಪರಿಹಾರ..

ಗಸ ಗಸೆ ಬೀಜಗಳನ್ನು ಸೇವಿಸುವುದರಿಂದ ಬಾಯಿ ಹುಣ್ಣನ್ನು ತಡೆಗಟ್ಟಬಹುದು. ಸಾಮಾನ್ಯವಾಗಿ ಬಾಯಿ ಹುಣ್ಣು ಹೆಚ್ಚು ನೋವು ಉಂಟು ಮಾಡುತ್ತದೆ. ಆಗ ಗಸಗಸೆಯನ್ನು ಸೇವಿಸಿ. ಇನ್ನು ಗಸಗಸೆ ಬೀಜ ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಆಹಾರ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ. ಬಾಯಿ ಗುಳ್ಳೆಗಳನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 

ಮಲಬದ್ಧತೆ ನಿವಾರಣೆ!

ಗಸಗಸೆ ಮಲಬದ್ಧತೆಯನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು, ಇದು ಮಲಬದ್ಧತೆಯನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಎಲಬುಗಳನ್ನು ಬಲಪಡಿಸಲು!

ಗಸಗಸೆ ಬೀಜಗಳಲ್ಲಿ ಕಂಡು ಬರುವ ಪ್ರಮುಖ ಅಂಶಗಳಲ್ಲಿ ಕ್ಯಾಲ್ಸಿಯಂ ಮತ್ತು ರಂಜಕ ಆಹಾರದ ಮೂಲವಾಗಿದೆ. ಈ ಎರಡು ಅಂಶಗಳು ಮೂಳೆಗಳ ಆರೋಗ್ಯವನ್ನು ಸುಧಾರಿಸುವ ಗುಣಗಳನ್ನು ಹೊಂದಿವೆ. ಮೂಳೆ ಹಾನಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಗಸಗಸೆ ಬೀಜಗಳು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ