ಚರ್ಮದ ಹೊಳಪು ಹೆಚ್ಚಲು ದಾಳಿಂಬೆ ಜ್ಯೂಸ್ ಸೇವಿಸಿ..!

  • by

ದಾಳಿಂಬೆ ಅನೇಕ ರೋಗಗಳಿಂದ ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಇದು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಜೀವಸತ್ವಗಳು, ಖನಿಜಗಳು ಸಾಕಷ್ಟಿದ್ದು, ದಾಳಿಂಬೆ ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಹಲವು ಕಾಯಿಲೆಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ದಾಳಿಂಬೆ ಅನೇಕ ಪೌಷ್ಟಿಕಾಂಶವನ್ನು ಹೊಂದಿರುವ ಅತ್ಯುತ್ತಮ ಹಣ್ಣು ಎಂದು ಹೇಳಬಹುದು. ಅಕಾಲಿಕ ವಯಸ್ಸಾಗುವಿಕೆಯನ್ನು ಇದು ತಡೆಗಟ್ಟುತ್ತದೆ. ಚರ್ಮದ ಗುಳ್ಳೆಗಳನ್ನು, ಮೊಡವೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.


pomegranate-anar-benefits-health-bebefits, ದಾಳಿಂಬೆ ಜ್ಯೂಸ್ , ಚರ್ಮದ ಕಾಂತಿ, ಆರೋಗ್ಯ ಪ್ರಯೋಜನಗಳು

ಚರ್ಮಕ್ಕಾಗಿ ದಾಳಿಂಬೆಯ ಪ್ರಯೋಜನಗಳು!

ದಾಳಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುವುದರಿಂದ ಮತ್ತು ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಇದು ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಾಳಿಂಬೆ ರಸವು ಅತ್ಯುತ್ತಮ ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ನೀವು ಹತ್ತಿಯಲ್ಲಿ ದಾಳಿಂಬೆ ರಸವನ್ನು ಮುಳುಗಿಸಿ, ಮುಖಕ್ಕೆ ಹಚ್ಚಿ. ಇದ್ರಿಂದ ತ್ವಚೆಗೆ ಧೂಳಿನ ಪರಿಣಾಮವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಡೆಡ್ ಚರ್ಮದ ಕೋಶವನ್ನು ತಡೆಗಟ್ಟುತ್ತದೆ..!

ದಾಳಿಂಬೆ ರಸವನ್ನು ಮುಲ್ತಾನಿ ಮಿಟ್ಟಿಯಲ್ಲಿ ಬೆರೆಸಿ ಹಚ್ಚಿದಾಗ ಚರ್ಮ ಮೃದುವಾಗಿ ಹಾಗೂ ಸುಂದರವಾಗಿ ಕಾಣುತ್ತದೆ. ಚರ್ಮವು ಶುಷ್ಕ ಅಥವಾ ಎಣ್ಣೆಯುಕ್ತವಾಗಿದ್ದರೂ, ದಾಳಿಂಬೆ ಚರ್ಮಕ್ಕೆ ಅಗತ್ಯವಾದ ಮಾಯಿಶ್ಚರೈಸರ್ ಒದಗಿಸುತ್ತದೆ. ಅಲ್ಲದೇ ಮುಖದಲ್ಲಿ ಊತ ದಂತಹ ಯಾವುದೇ ಸಮಸ್ಯೆಯಿದ್ದರೆ, ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ದಾಳಿಂಬೆ ರಸವು ಟೋನರ್ ಆಗಿ ಕಾರ್ಯ ನಿರ್ವಹಿಸುತ್ತದೆ.

ಕೂದಲಿನ ಆರೋಗ್ಯಕ್ಕೆ ದಾಳಿಂಬೆ..!

ಇನ್ನು ಕೂದಲು ಉದುರುವುದನ್ನು ತಡೆಗಟ್ಟಲು ದಾಳಿಂಬೆ ರಸವನ್ನು ಸೇವಿಸಬಹುದು. ದಾಳಿಂಬೆ ಚರ್ಮದ ತೇವಾಂಶವನ್ನು ನೀಡುವುದಲ್ಲದೇ, ಕೂದಲಿಗೂ ತೇವಾಂಶ ನೀಡುತ್ತದೆ. ದಾಳಿಂಬೆ ಬಳಸುವ ಮೂಲಕ ಕೂದಲು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಬಹುದು. ದಾಳಿಂಬೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಒರಟಾದ ಕೂದಲಿಗೆ ಪ್ರಯೋಜನಕಾರಿ. ಇದು ಕೂದಲಿಗೆ ಸಾಕಷ್ಟು ಮಾಯಿಶ್ಚರೈಸರ್ ನೀಡುವುದಲ್ಲದೇ,ಕೂದಲಿನ ಆರೋಗ್ಯ ಕಾಪಾಡುತ್ತದೆ. ದಾಳಿಂಬೆ ಬೀಜಗಳ ಪೇಸ್ಟ್ ನಿಂದ ಹೇರ್ ಮಾಸ್ಕ್ ಕೂಡಾ ಮಾಡಬಹುದು. 1 ಕಪ್ ಮೊಸರಿನ ಜತೆಗೆ ದಾಳಿಂಬೆ ಬೀಜಗಳನ್ನು ರುಬ್ಬಿಕೊಳ್ಳಿ. ನಂತರ ಪೇಸ್ಚ್ ತಯಾರಿಸಿಕೊಳ್ಳಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ. ಇದ್ರಿಂದ ಕೂದಲಿನ ಬುಡ ಬಲವಾಗುವುದಲ್ಲದೇ, ಹೊಳೆಯುತ್ತವೆ.


pomegranate-anar-benefits-health-bebefits, ದಾಳಿಂಬೆ ಜ್ಯೂಸ್ , ಚರ್ಮದ ಕಾಂತಿ, ಆರೋಗ್ಯ ಪ್ರಯೋಜನಗಳು

ದಾಳಿಂಬೆ ಹೇಗೆ ಸೇವಿಸಬೇಕು?

ನೀವು ದಾಳಿಂಬೆಯನ್ನು ಜ್ಯೂಸ್ ಹಾಗೂ ಹಣ್ಣಿನ ಸಲಾಡ್ ರೂಪದಲ್ಲಿ ಸೇವಿಸಬಹುದು. ನೀವು ಮನೆಯಲ್ಲಿ ಕಸ್ಟರ್ಡ್ . ಕೇಕ್, ಅಥವಾ ಐಸ್ ಕ್ರೀಮ್ ತಯಾರಿಸುತ್ತಿದ್ದರೆ, ನೀವು ದಾಳಿಂಬೆಯನ್ನು ಸೇರಿಸಬಹುದಾಗಿದೆ. ಇದು ಹೆಚ್ಚಿನ ಪರಿಮಳ ನೀಡುತ್ತದೆ.

ದಾಳಿಂಬೆ ಹಣ್ಣು ಯಾವಾಗ ಸೇವಿಸಬಾರದು..?

ಕೆಮ್ಮು ಅಥವಾ ಜ್ವರ ಇದ್ದರೆ ದಾಳಿಂಬೆ ಸೇವಿಸಬಾರದು. ಕೆಲವು ಜನರಿಗೆ ದಾಳಿಂಬೆ ತಿನ್ನುವುದರಿಂದ ಅಲರ್ಜಿ ಉಂಟಾಗಬಹುದು. ದೇಹದ ಮೇಲೆ ದದ್ದುಗಳು, ಊತ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಉಂಟು ಮಾಡಬಹುದು. ಹೆಚ್ಚು ದಾಳಿಂಬೆ ಸೇವಿಸುವುದರಿಂದ ಹೊಟ್ಟೆಯ ಗ್ಯಾಸ್ ಗೆ ಕಾರಣವಾಗಬಹುದು,ಯಾರಾದರೂ ರಕ್ತದೋತ್ತಡಕ್ಕೆ ಸಂಬಂಧಪಟ್ಟ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಅಂಥವರು ದಾಳಿಂಬೆ ಸೇವಿಸುವ ಮುನ್ನ, ವೈದ್ಯರ ಸಲಹೆ ಪಡೆಯಿರಿ.

ಹೃದಯ ಕಾಯಿಲೆ ಕಡಿಮೆಯಾಗುತ್ತದೆ

ದಾಳಿಂಬೆ ಹಣ್ಣು ಸಾಕಷ್ಟು ಉತ್ಕರ್ಷಣಾ ನಿರೋಧಕ ಗುಣಗಳನ್ನು ಹೊಂದಿದೆ. ಇದಕ್ಕಾಗಿಯೇ ಹೃದಯದ ಆರೋಗ್ಯಕ್ಕೆ ಇದು ಉತ್ತಮ ಎಂದು ಪರಿಗಣಿಸಲಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ದಾಳಿಂಬೆ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ