ಕಪ್ಪು ತುಟಿಗಳಿಗೆ ಹೇಳಿ ಗುಡ್ ಬೈ.. ಗುಲಾಬಿ ತುಟಿ ನಿಮ್ಮದಾಗಲು ಇಲ್ಲಿದೆ ಉಪಾಯ

  • by

ಮೃದು ಮತ್ತು ಗುಲಾಬಿ ತುಟಿಗಳು ನಾವೆಲ್ಲರೂ ಬಯಸುತ್ತೇವೆ. ಆದ್ರೆ ನಿಮ್ಮ ತುಟಿಗಳು ಎಶ್ಟು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಎಂಬುವುದು ಮುಖ್ಯ. ಡಾರ್ಕ್ ತುಟಿಗಳು ಕೆಲವು ಬಾರಿ ಮುಜುಗರಕ್ಕೆ ಈಡು ಮಾಡುತ್ತವೆ. ಇಂಥ ಸಂದರ್ಭದಲ್ಲಿ ಹಲವರು ಆತಂಕಕ್ಕೆ ಒಳಗಾಗುತ್ತಾರೆ. ಆದ್ರೆ ಸುಲಭವಾಗಿ ಮನೆಯಲ್ಲೇ ಮೃದು ಹಾಗೂ ಗುಲಾಬಿ ಬಣ್ಣದ ತುಟಿಗಳು ನಿಮ್ಮದಾಗುತ್ತವೆ. ಸ್ವಾಭಾವಿಕವಾಗಿ ಗುಲಾಬಿ ತುಟಿಗಳು ಮಹಿಳೆಯ ಸೌಂದರ್ಯ ಹೆಚ್ಚಿಸುತ್ತವೆ. 

ತುಟಿಗಳು ಕಪ್ಪಾಗಲು ಪ್ರಮುಖ ಕಾರಣ ಸೂರ್ಯನ ಕಿರಣಗಳು, ಅಲರ್ಜಿ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುತ್ತದೆ. ಕಡಿಮೆ ಗುಣಮಟ್ಟದ ಸೌಂದರ್ಯವರ್ಧಕಗಳ ಬಳಕೆ, ತಂಬಾಕು, ಅತಿಯಾದ ಧೂಮಪಾನ, ಹೆಚ್ಚಿನ ಕೆಫೀನ್ ಸೇವನೆ ಹಾಗೂ ಹಾರ್ಮೋನಗಳ ಅಸಮತೋಲನ ಕಪ್ಪು ತುಟಿ ಹೊಂದಲು ಕಾರಣವಾಗುತ್ತದೆ. 

ನಿಮ್ಮ ತುಟಿಗಳಿಗೆ ಸ್ವಲ್ಪ ರುಚಿಕರವಾದ ಜೇನುತುಪ್ಪ ಹಾಗೂ ಸಕ್ಕರೆಯನ್ನು ಬಳಸಬಹುದು. ಈ ಸ್ಕ್ರಬ್ ತುಂಬಾ ಉಪಕಾರಿಯಾಗಿದೆ. ನಿಮ್ಮ ತುಟಿಗಳು ತುಂಬಾ ಕೋಮಲವಾಗಬೇಕಾದರೆ, ಸಕ್ಕರೆಯ ಹಾಗೂ ಜೇನುತುಪ್ಪ ಸ್ಕ್ರಬ್ ಚರ್ಮದ ಡೆಡ್ ಕೋಶಗಳನ್ನು ಹೊರಹಾಕುತ್ತವೆ. 

ಬಿಳಿ ಸಕ್ಕರೆಯೊಂದಿಗೆ ನೀವು ಈ ಸ್ಕ್ರಬ್ ಅನ್ನು ತಯಾರಿಸಬಹುದು. ಕಂದು ಸಕ್ಕರೆ ಚರ್ಮದ ಮೇಲೆ ಹೆಚ್ಚು ಮೃದುವಾಗಿರುತ್ತದೆ. ಇದರಲ್ಲಿ ಆಂಟಿ ಆಕ್ಯಿಡೆಂಟ್ ಗಳಿಂದ ಕೂಡಿದ್ದು, ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮವನ್ನು  ಆಂಟಿ ಆಕ್ಸಿಡೆಂಟ್ ಗಳಿಂದ ರಕ್ಷಿಸುತ್ತದೆ. ನಿಮ್ಮ ಚರ್ಮವನ್ನು ಸಕ್ಕರೆಯಲ್ಲಿರುವ ಗ್ಲೈಕೋಲಿಕ್ ಆಮ್ಲವು ಚರ್ಮವನ್ನು  ಸುಸ್ಥಿತಿಗೆ ತರುತ್ತದೆ. ಮತ್ತು ವಿಷದಿಂದ ರಕ್ಷಿಸುತ್ತದೆ.

ರಾಸ್ಪರೀಸ್, ಆರ್ಗನಿಕ್ ಜೇನುತುಪ್ಪ, ಅಲೋವೇರಾ 

ನಿಮ್ಮ ತುಟಿಗಳು ಆರೋಗ್ಯಕರವಾಗಿರಲು ರಾಸ್ಬೇರಿ ಹಣ್ಣು ಸಹಾಯಕಾರಿಯಾಗುತ್ತದೆ. ಇದರಲ್ಲಿ ಖನಿಜಗಳು ಹಾಗೂ ಜೀವಸತ್ವಗಳು ಹೆಚ್ಚಾಗಿದ್ದು, ಇವು ನಿಮ್ಮ ಡಾರ್ಕ್ ತುಟಿಗಳನ್ನು ಗುಲಾಬಿ ಬಣ್ಣಕ್ಕೆ ಪರಿವರ್ತಿಸುತ್ತವೆ. ಅದೇ ರೀತಿ ಅಲೋವೇರಾವನ್ನು ಆರ್ಯುವೇದದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಗುಲಾಬಿ ಬಣ್ಣಕ್ಕೆ ತಿರುಗಿಸುತ್ತವೆ. ಚರ್ಮ ಕೋಶದ ಬೆಳೆವಣಿಗೆಯನ್ನು ಹೆಚ್ಚಿಸುತ್ತವೆ.  ಸೂರ್ಯನಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಗಟ್ಟುತ್ತವೆ. 

ನಿಂಬೆರಸ ಕೂಡಾ ನಿಮ್ಮ ತುಟಿಗಳ ಬಣ್ಣ ಹೆಚ್ಚಿಸಬಹುದು. ನ್ಯಾಚುರಲ್ ಬ್ಲೀಚ್ ಗೆ ನಿಂಬೆರಸ ಹೆಚ್ಚು ಉಪಯುಕ್ತ ಎಂದೇ ಹೇಳಬಹುದು.  ಚರ್ಮದ ಆರೈಕೆಗೆ ನಿಂಬೆ ಜ್ಯೂಸ್ ಅತ್ಯುತ್ತಮ. ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ಅನ್ನು ಇದು ನೀಡುತ್ತದೆ . 

ಬೀಟ್ ರೂಟ್ ಜ್ಯೂಸ್ ಸಹ ಗುಲಾಬಿ ಬಣ್ಣದ ತುಟಿ ಹೊಂದಲು ಸಹಾಯಕಾರಿಯಾಗಿದೆ. ಕೇವಲ ತುಟಿಗೆ ಮಾತ್ರವಲ್ಲದೇ, ನಾಲಿಗೆ, ಹಾಗೂ ಹಲ್ಲುಗಳಿಗೆ ಪ್ರಯೋಜನಕಾರಿಯಾಗಿದೆ. 

ಗುಲಾಬಿ ಬಣ್ಣದ ತುಟಿ ಹೊಂದಲು ಮನೆಮದ್ದುಗಳು..? 

ಹಸಿ ಹಾಲನ್ನು ಮುಖ, ಕೈ, ಕಾಲು ಮತ್ತು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಸ್ನಾನ ಮಾಡಿದರೆ ನ್ಯಾಚುರಲ್ ಕಂಡೀಶನರ್‌ನಂತೆ ಕೆಲಸ ಮಾಡುತ್ತದೆ ಮತ್ತು ಮುಖ ಹಾಗೂ ಕೂದಲಿನ ಹೊಳಪನ್ನು ಕಾಯ್ದಿರಿಸಿ ಸೌಂದರ್ಯ ಹೆಚ್ಚಲು ಸಹಕಾರಿಯಾಗುತ್ತದೆ.

ದಾಲ್ಚಿನಿ ಚೆಕ್ಕೆಗಳನ್ನು ಪುಡಿ ಮಾಡಿ ನಿಂಬೆರಸ ಸೇರಿಸಿ ಹಚ್ಚಿಕೊಂಡರೆ ಮೊಡವೆಗಳು ಮಾಯವಾಗುತ್ತದೆ.

ಕಡಲೇ ಹಿಟ್ಟಿಗೆ ಸೌತೆ ರಸ ಬೆರೆಸಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ. ಪ್ರತಿನಿತ್ಯ ಈ ರೀತಿ ಮಾಡಿದರೆ ತ್ವಚೆ ನುಣುಪು, ಕೋಮಲತೆ ಪಡೆಯುತ್ತದೆ.

ಸೌತೆಕಾಯಿಯನ್ನು ಅತಿ ತೆಳುವಾಗಿ ಕತ್ತರಿಸಿ, ಅವುಗಳನ್ನು 10 ನಿಮಿಷ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪುವೃತ್ತ ಮಾಯವಾಗುತ್ತದೆ.

ಟೊಮ್ಯಾಟೋ ಕತ್ತರಿಸಿ ಪ್ರತಿದಿನ ಮುಖದ ಮೇಲೆ ತಿಕ್ಕುವುದರಿಂದ ತ್ವಚೆ ಹೊಳಪು ಪಡೆಯುತ್ತದೆ.

ಹಾಲಿನ ಕೆನೆಯನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ತ್ವಚೆ ಮೃದುವಾಗುತ್ತದೆ ಅಲ್ಲದೆ ನಂಜುನಿರೋಧಕ ಶಕ್ತಿ ಪಡೆಯುತ್ತದೆ ಜೊತೆಗೆ ಕಪ್ಪು ಕಲೆ ಹಾಗೂ ನೆರಿಗೆಗಳು ಮಾಯವಾಗುತ್ತದೆ.

ಪಪ್ಪಾಯಿ ಕಾಯಿಯ ಸಿಪ್ಪೆಯಿಂದ ನಿಯಮಿತವಾಗಿ ಉಜ್ಜಿಕೊಳ್ಳುತ್ತಿದ್ದರೆ ಮಚ್ಚೆಗಳು ನಿವಾರಣೆಯಾಗುತ್ತದೆ.

ಪ್ರತಿದಿನ ಊಟದ ನಂತರ ಸೇಬುಹಣ್ಣನ್ನು ತಿನ್ನುವುದರಿಂದ ಹಲ್ಲುಗಳು ಹೊಳೆಯುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ