ಗುಲಾಬಿ ಕಣ್ಣುಗಳು ಕೊರೊನಾ ವೈರಸ್ ಲಕ್ಷಣವಾಗಿರಬಹುದಾ..! – ( is pink Eyes a Symptom of coronavirus?)

  • by

ಇಡೀ ಜಗತ್ತು ಕೊರೊನಾ ವೈರಸ್ ನಿಂದ ಬಳಲುತ್ತಿದೆ. ಮತ್ತು ಲಾಕ್ ಡೌನ್ ಮೂಲಕ ಮತ್ತಷ್ಟು ಹರಡುವುದನ್ನು ತಡೆಯಲು ಪ್ರಯತ್ನಿಸುತ್ತಿದೆ. ಲಾಕ್ ಡೌನ್ ಹಾಗೂ ಸಾಮಾಜಿಕ ಅಂತರ ಅದನ್ನು ನಿಯಂತ್ರಿಸಲು ಸಾಕಷ್ಟು ಸಹಾಯ ಮಾಡಿದೆ. ಆದರೆ ಒಣ ಕೆಮ್ಮು, ಹಾಗೂ ಶೀತ ಮತ್ತು ಅಧಿಕ ಜ್ವರವು ಕೊರೊನಾ ವೈರಸ್ ನ ಪ್ರಮುಖ ಲಕ್ಷಣವಾಗಿವೆ. ಸಂಶೋಧನೆ ಪ್ರಕಾರ, ಕೆಮ್ಮ, ಶೀತದ ಹೊರತಾಗಿಯೂ, ಕೊರೊನಾ ವೈರಸ್ ಕಣ್ಣೀರಿನ ಮೂಲಕ ಹರಡುತ್ತದೆ ಎಂದು ತಿಳಿದು ಬಂದಿದೆ.


pink-eyes, corona-virus, ಕೊರೊನಾ ವೈರಸ್, ಗುಲಾಬಿ ಕಣ್ಣು

ಚೀನಾದ ನೇತ್ರ ವಿಜ್ಞಾನ ವಿಭಾಗದ ಗೋರ್ಜಸ್ ವಿಶ್ವವಿದ್ಯಾಲಯದ ಸಂಶೋಧಕ ಡಾ. ಲಿಯಾಂಗ್ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ತಜ್ಞರ ಪ್ರಕಾರ, ಕೊರೊನಾ ವೈರಸ್ ಕಣ್ಣಿನ ರೆಪ್ಪೆಯನ್ನು ಕಾಂಜಂಕ್ಟಿವಾ ಪದರದಲ್ಲಿ ಆಕ್ರಮಣ ಮಾಡುತ್ತದೆ. ಇದ್ರಿಂದ ಸೋಂಕು ಬರಬಹುದು. ಇದರರ್ಥ ಸೋಂಕಿತ ವ್ಯಕ್ತಿಯು ತನ್ನ ಕಣ್ಣನ್ನು ಉಜ್ಜಿದಾಗ, ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯನ್ನು ಮುಟ್ಟಿದರೆ, ವೈರಸ್ ಸೋಂಕು ತಗಲುತ್ತದೆ ಎಂದು ಹೇಳಬಹುದು.

ಕಣ್ಣಿನ ಗುಲಾಬಿ ಬಣ್ಣ ರೋಗಿಯಲ್ಲಿ ವೈರಸ್ ತೀವ್ರತೆಯನ್ನು ತಿಳಿಸುತ್ತದೆ. ಮತ್ತೊಂದು ವರದಿ ಪ್ರಕಾರ, ರೋಗಿಯಲ್ಲಿ ಕೊರೊನಾ ವೈರಸ್ ಸ್ಥಿತಿಯು ಹೆಚ್ಚು ತೀವ್ರವಾಗಿರುತ್ತದೆ. ಪ್ರತ್ಯೇಕ ವಾರ್ಡ್ ಗಲ್ಲಿ ರೋಗಿಗಳನ್ನು ನೋಡಿಕೊಳ್ಳುತ್ತಿರುವ ವೈದ್ಯರು ಮತ್ತು ದಾದಿಯರು ಯಾವುದೇ ಸೋಂಕನ್ನು ತಡೆಗಟ್ಟಲು ಮುಖವಾಡಗಳು ಕನ್ನಡಕಗಳು ಮತ್ತು, ಕೈಗೆ ಹಾಕುವ ಗ್ಲೌಸ್ ಗಳನ್ನು ಬಳಸಬೇಕಾಗುತ್ತದೆ.ಅಂತಹ ಸಂದರ್ಭದಲ್ಲಿ ಅಮೆರಿಕಾ ತಜ್ಞರ ಪ್ರಕಾರ, ಕೊರೊನಾ ವೈರಸ್ ತಡೆಗಟ್ಟಲು ಯಾವುದೇ ಮೆಡಿಸಿನ್ ಅಥವಾ ಲಸಿಕೆ ಕಂಡು ಬಂದಿಲ್ಲ. ಹೀಗಾಗಿ ಒಬ್ಬ ವ್ಯಕ್ತಿಯ ಕೊರೊನಾ ವೈರಸ್ ವೈರಸ್ ಸೋಂಕಿಗೆ ಒಳಗಾಗಿದ್ದರೆ, ಅವರ ಹತ್ತಿರ ಹೋಗಬೇಡಿ. ನೀವು ಸೋಂಕಿತ ವ್ಯಕ್ತಿ ಅಥವಾ ಬಟ್ಟೆಗಳನ್ನು ಮುಟ್ಟಿದರೆ, ನಂತರ ಕನಿಷ್ಠ 20 ಸೆಕೆಂಡ್ ಗಳ ಕಾಲ ಕೈಗಳನ್ನು ಸ್ವಚ್ಛಗೊಳಿಸಿ. ಕೈ ತೊಳೆಯದೇ ಯಾವುದನ್ನೂ ಮುಟ್ಟದೇ ನಿಮ್ಮ ಬಾಯಿ, ಕಣ್ಣು ಅಥವಾ ಮೂಗನ್ನು ಮುಟ್ಟಬೇಡಿ.

ವಾಸ್ತವವಾಗಿ ಚೀನಾದ ವುಹಾನ್ ನಿಂದ ಕೊರೊನಾ ವೈರಸ್ ಹರಡಲು ಪ್ರಾರಂಭಿಸಿದಾಗ, ಈ ರೋಗದ 2 ಲಕ್ಷಣಗಳು ಮುಖ್ಯವೆಂದು ಪರಿಗಣಿಸಲಾಗಿದೆ. ಈ ಲಕ್ಷಣಗಳು ಒಣ ಕೆಮ್ಮು, ಕೆಮ್ಮು, ಜ್ವರ ವೈರಸ್ ಹರಡುತ್ತಿದ್ದಂತೆ ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ. ನಿಮ್ಮ ಕಣ್ಣುಗಳು ಗುಲಾಬಿ ಬಣ್ಣದಾಗಿದ್ದರೂ ಸಹ, ನೀವು ಇನ್ನು ಕೊರೊನಾ ವೈರಸ್ ನ ಲಕ್ಷಣಗಳನ್ನು ಪಡೆಯಬಹುದು.ಕೊರೊನಾ ವೈರಸ್ ನ 38 ರೋಗಿಗಳ ಮೇಲೆ ಈ ಸಂಶೋಧನೆ ಮಾಡಲಾಗಿದೆ. ಸುಮಾರು ಒಂದು ಡಜನ್ ಸೋಂಕಿತ ವ್ಯಕ್ತಿಗಳು ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರಿಗಿದ್ದವು ಎಂದು ತಿಳಿದು ಬಂದಿದೆ.


pink-eyes, corona-virus, ಕೊರೊನಾ ವೈರಸ್, ಗುಲಾಬಿ ಕಣ್ಣು

ಕೊರೊನಾ ವೈರಸ್ ನ ಇತರ ಲಕ್ಷಣಗಳು

ಉಸಿರಾಟದಲ್ಲಿ ತೊಂದರೆ
ಕೊರೊನಾ ಪ್ರಮುಖ ಲಕ್ಷಣ ಎಂದರೆ ಜ್ವರ
ಕೆಮ್ಮು ಹಾಗೂ ಶೀತ ಕೂಡಾ ಲಕ್ಷಣವಾಗಿರಬಹುದು
ತೀವ್ರ ಮೈಕೈ ನೋವು

ಈ ಎಲ್ಲದರ ಹೊರತಾಗಿ ಕೊರೊನಾ ವೈರಸ್ ರೋಗಿಗಳಲ್ಲಿ ಇನ್ನು ಅನೇಕ ರೀತಿಯ ಲಕ್ಷಣಗಳು ಕಂಡು ಬರುತ್ತವೆ. ಇದರಲ್ಲಿ ವಾಸನೆ ಮತ್ತು ರುಚಿಯ ಸಾಮರ್ಥ್ಯವು ಸೇರಿರಿಬಹುದು. ನೋಯುತ್ತಿರುವ ಗಂಟಲಿನ ಜತೆಗೆ ಕಣ್ಣಿನ ಬಣ್ಣ ಗುಲಾಬಿ ಬಣ್ಣಕ್ಕೆ ತಿರುಗುವುದು ಇದರ ಲಕ್ಷಣಗಳಲ್ಲಿ ಸೇರಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ