ಪುರುಷರು ಮಾವಿನ ಉಪ್ಪಿನಕಾಯಿ ಸೇವಿಸಬಾರದು ಏಕೆ?

  • by

ಉಪ್ಪಿನಕಾಯಿ ಮಸಾಲೆಯುಕ್ತವಾದದ್ದು, ಆಹಾರದಲ್ಲಿ ರುಚಿ ಹೆಚ್ಚಿಸುತ್ತೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಹೆಚ್ಚು ಉಪ್ಪಿನಕಾಯಿ ಸೇವಿಸುವುದರಿಂದ ತೊಂದರೆ ಕಾದಿದೆ. ಹಾಗಾಗಿ ಉಪ್ಪಿನಕಾಯಿಯನ್ನು ಮಿತವಾಗಿ ಬಳಸುವುದರಿಂದ ಅಪಾಯ ತಪ್ಪಿಸಬಹುದು. ಅದರಲ್ಲೂ ಪುರುಷರು ಮಾವಿನಹಣ್ಣಿನ ಉಪ್ಪಿನಕಾಯಿ ಸೇವಿಸಲೇಬಾರದು. ಹೆಚ್ಚು ಉಪ್ಪಿನಕಾಯಿ ಸೇವಿಸುವುದರಿಂದ ಅಪಾಯಗಳೇನು. ಇಲ್ಲಿದೆ ಕಾರಣಗಳು.. 

ಮಾವಿನ ಉಪ್ಪಿನಕಾಯಿ ರುಚಿಕರವಾಗಿ, ಹುಳಿಯಾಗಿರುತ್ತದೆ. ಮಾವಿನಹಣ್ಣಿನ ಉಪ್ಪಿನಕಾಯಿ ಪುರುಷತ್ವದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮಾವಿನ ಹಣ್ಣಿನ ಉಪ್ಪಿನಕಾಯಿ ಯನ್ನು ಅತಿಯಾಗಿ ಸೇವಿಸುವುದರಿಂದ ಪುರುಷರಿಗೆ ಹಾನಿಕಾರಕ ಎಂದು ಹೇಳಲಾಗುತ್ತದೆ. 

pickle, men health, 
ಪುರುಷರು ಉಪ್ಪಿನಕಾಯಿ, ಅಪಾಯ

ದೀರ್ಘಕಾಲದವರೆಗೂ ಪುರುಷರು ಅತಿಯಾಗಿ ಉಪ್ಪಿನಕಾಯಿ ಸೇವಿಸಬಾರದು. ಕೆಲವರು ಉಪ್ಪಿನಕಾಯಿ ಸೇವಿಸುವುದರಿಂದ ಏನು ಆಗುವುದಿಲ್ಲ, ಇದೆಲ್ಲಾ ಸುಳ್ಳು ಎಂದು ಹೇಳುತ್ತಾರೆ. ಆದ್ರೆ ವೈಜ್ಞಾನಿಕ ಅಧ್ಯಯನದ ನಂತರ ಅನೇಕ ವರದಿಗಳು ಸಾಬೀತುಪಡಿಸಿವೆ.  ಕೆಲವು ವರದಿಗಳ ಪ್ರಕಾರ, ಪುರುಷರು  ನಿರಂತರವಾಗಿ ಸಿಟ್ರಸ್ ಅಂಶವಿರುವ ಆಹಾರಗಳನ್ನು ಆದಷ್ಟು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಿವೆ. ಇವುಗಳನ್ನು ಪಾಲಿಸದಿದ್ದರೆ, ಪುರುಷರಲ್ಲಿ ಪುರುಷತ್ವದ ಸಮಸ್ಯೆ, ಬಂಜೆತನ ಅನೇಕ ಸಮಸ್ಯೆಗಳು ಕಾಡಬಹುದು. 

ಆದ್ರೆ ಪುರುಷರು ಮಾವಿನ ಹಣ್ಣಿನ ಉಪ್ಪಿನಕಾಯಿ ಯಾಕೆ ಸೇವಿಸಬಾರದು.. ಎಂದು ಮತ್ತೊಂದು ಅಧ್ಯಯನ ವಿವರಿಸಿದೆ.  ಅಸೆಟಾಮಿಪ್ರಿಡ್ ಪ್ರಮಾಣ ಸಮಸ್ಯೆಯನ್ನುಂಟು ಮಾಡಬಹುದು. ಉಪ್ಪಿನಕಾಯಿಯನ್ನು ನೇರವಾಗಿ ಸೇವಿಸುವುದರಿಂದ ಕ್ರಮೇಣ ಇದು ನಿಮ್ಮ ಲೈಂಗಿಕ ಬಯಕೆಯನ್ನು ಹೋಗಲಾಡಿಸುತ್ತದೆ. ಇದಲ್ಲದೇ, ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ..  ಅದ್ಕಕಾಗಿಯೇ ಮಾವಿನ ಹಣ್ಣಿನ ಉಪ್ಪಿನಕಾಯಿ ಸೇವಿಸಬಾರದು ಎಂದು ಹೇಳಲಾಗುತ್ತದೆ. ಯಾವುದೇ ರಾಸಾಯನಿಕ ವಿಲ್ಲದೇ ಯಾವುದೇ ಹಣ್ಣುಗಳನ್ನು ತಯಾರಿಸಲಾಗುವುದಿಲ್ಲ. ಆದ್ದರಿಂದ ಆರೋಗ್ಯವಾಗಿರಲು ನಿಮ್ಮ ಆಹಾರದಲ್ಲಿ ಉತ್ತಮ ಆಹಾರಗಳನ್ನು ಸೇವಿಸಿ. 

ಉಪ್ಪಿನಕಾಯಿಯ ಅಡ್ಡಪರಿಣಾಮಗಳು ಹಾಗೂ ಅಲರ್ಜಿಗಳು

ಉಪ್ಪಿನಕಾಯಿ ಆರೋಗ್ಯಕ್ಕೆ ಒಳ್ಳೆಯದು,. ಆದರೆ ಮಿತವಾಗಿ ಸೇವಿಸಿದಾಗ ಮಾತ್ರ ಉಪ್ಪಿನಕಾಯಿ ಅನ್ನನಾಳದ ಕ್ಯಾನ್ಸರ್ ಹಾಗೂ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಬಹುದು.  ಉಪ್ಪಿನಕಾಯಿಯಲ್ಲಿ ಉಪ್ಪಿನಾಂಶ ಹೆಚ್ಚಾಗಿರುತ್ತದೆ. ಇದು ಅಧಿಕ ರಕ್ತದೋತ್ತಡ ಹಾಗೂ ಹೃದ್ರೋಗದಂತಹ ಸಮಸ್ಯೆಯನ್ನು ಹೆಚ್ಚಿಸಬಹುದು. ಹೊರಗಡೆ ಸೀಗುವ ಉಪ್ಪಿನಕಾಯಿಯಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹಾಗಾಗಿ ಹೊರಗಡೆ ತಯಾರಿಸಿದ ಉಪ್ಪಿನಕಾಯಿಯನ್ನು ಸೇವಿಸಬಾರದು. ಇನ್ನು ಉಪ್ಪಿನಕಾಯಿಯಲ್ಲಿ ಹೆಚ್ಚು ಎಣ್ಣೆ ಅಂಶವಿದ್ದಾಗ, ಇದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. 

pickle, men health, 
ಪುರುಷರು ಉಪ್ಪಿನಕಾಯಿ, ಅಪಾಯ

ಜೀರ್ಣಾಂಗ ವ್ಯವಸ್ಥೆಯಲ್ಲಿ ಖಾರದ ಆಹಾರ ವಸ್ತುಗಳು ಬೇಗನೇ ಜೀರ್ಣವಾಗುವುದಿಲ್ಲ. ಏನಾದರೂ ಅನಾರೋಗ್ಯವಾದಾಗ ವೈದ್ಯರು ಖಾರ ತಿನ್ನದಂತೆ ಸಲಹೆ ಕೊಡುತ್ತಾರೆ. ಖಾರ ತಿನ್ನುವುದರಿಂದ ಸಾಮಾನ್ಯವಾಗಿ ಬರುವ ಸಮಸ್ಯೆಯೆಂದರೆ ಹೊಟ್ಟೆಯುರಿ. ಇದರಲ್ಲಿ ಉಪ್ಪಿನ ಅಂಶ ಹೆಚ್ಚು ಎನ್ನುವುದು ಮಾತ್ರವಲ್ಲ, ಇದನ್ನು ಹಲವು ದಿನ ಶೇಖರಿಸಿಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದು ಸಹಜ. 

 ಹೊಟ್ಟೆಯುರಿ, ಎದೆಯುರಿ ಇರುವವರು ಉಪ್ಪಿನಕಾಯಿ ಸೇವಿಸದೇ ಇರುವುದೇ ವಾಸಿ ಎನ್ನುವುದು ಅದಕ್ಕೇ.

 ಅಧಿಕ ಉಪ್ಪಿನ ಅಂಶ ಸೇವಿಸುವುದರಿಂದ ಶರೀರದಲ್ಲಿ ಸೋಡಿಯಂನ ಅಂಶ ಹೆಚ್ಚಾಗುವುದು. ಇದು ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವುದು. ಇದ್ರಿಂದ ಗಂಭೀರ ಕಾಯಿಲೆಗಳು ಬರುವ ಅಪಾಯ ಹೆಚ್ಚು.

ಉಪ್ಪಿನ ಕಾಯಿಯಲ್ಲಿ ಎಣ್ಣೆಯ ಅಂಶ ಹೆಚ್ಚಿರುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ಇದು ರಕ್ತದೊತ್ತಡ, ಹೃದಯ ಖಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಉಪ್ಪಿನಕಾಯಿ ತಿನ್ನುವ ಮೊದಲು ಯೋಚಿಸಿ. 

ಉಪ್ಪಿನಕಾಯಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಉಪ್ಪು, ಮಸಾಲೆಗಲಿರುತ್ತವೆ. ಉಪ್ಪಿನಕಾಯಿ ಮಸಾಲೆಗಳಿರುತ್ತವೆ. ಉಪ್ಪಿನಕಾಯಿ ತಯಾರಿಸುವಾಗ ಅದು ಬಹಳ ದಿನ ಕೆಡದಂತಿರಲು ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಬಳಸುವುದುಂಟು. ಉಪ್ಪಿನಕಾಯಿ ಹೋಳುಗಳು ಎಣ್ಣೆಗಳು ಹೀರಿಕೊಳ್ಳುತ್ತವೆ. ಅತಿಯಾಗಿ ಉಪ್ಪಿನಕಾಯಿ ಸೇವಿಸಿದರೆ.. ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಅಂಶಗಳು ದೇಹವನ್ನು ಸೇರಿ ಹೃದಯ ಮತ್ತು ರಕ್ತನಾಳಗಳ ಮೇಲಿನ ಒತ್ತಡ ಹೆಚ್ಚಾಗಲು ಕಾರಣವಾಗುತ್ತವೆ. ಉಪ್ಪಿನಕಾಯಿಯಲ್ಲಿ ಉಪ್ಪಿನಾಂಶವು ಅಧಿಕವಾಗಿರುತ್ತದೆ. ಇದೂ ಕೂಡಾ ಹೃದಯದೋತ್ತಡಕ್ಕೆ ಕಾರಣವಾಗುತ್ತದೆ. 

ಹೆಚ್ಚು ಉಪ್ಪು ದೇಹಕ್ಕೆ ಸೇರಿದಲ್ಲಿ ಉರಿಯೂತ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳಲು ಆಸ್ಪದ ಸೀಗುವುದಿಲ್ಲ. ಹೃದಯ ಸಂಬಂಧಿ ಕಾಯಿಲೆ ಇದ್ದವರು, ಉಪ್ಪಿನಕಾಯಿ ಸೇವನೆ ಕುರಿತು ಎಚ್ಚರದಿಂದರಬೇಕು. ಹೃದಯದ ಒತ್ತಡದ ಸಮಸ್ಯೆಗಳಿರುವವರು ಇದರ ಬಳಕೆ ಯಿಂದ ದೂರ ಉಳಿದರೂ ಒಳ್ಳೆಯದಾಗುತ್ತದೆ. ಉಪ್ಪಿನಕಾಯಿ ಯಲ್ಲಿರುವ ಸೋಡಿಯಂ ಲವಣ,. ಉಪ್ಪಿನಕಾಯಿ ಯಲ್ಲಿರುವ ಸೋಡಿಯಂ ಲವಣ, ಹೊಟ್ಟೆಯುಬ್ಬರಿಕೆಗೂ ದಾರಿ ಮಾಡಿಕೊಡುತ್ತದೆ. ಈ ಲವಣಾಂಶದಿಂದ ಹೊಟ್ಟೆಯಲ್ಲಿ ನೀರು ಉಳಿದು ಕೊಳ್ಳಲು ಸಾಧ್ಯವಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ