ಪರ್ಸಾನಾಲಿಟಿ ಡಿಸಾರ್ಡರ್ ಬಗ್ಗೆ ಇರಲಿ ಎಚ್ಚರ.. ರೋಗನಿರ್ಣಯ, ಚಿಕಿತ್ಸೆಗಳೇನು! – ( Personality Disorder: Types, Diagnosis and Treatment)

  • by

ಪರ್ಸನಾಲಿಟಿ ಡಿಸಾರ್ಡರ್ ಒಂದು ಮಾನಸಿಕ ಕಾಯಿಲೆ ಎಂದು ಹೇಳಬಹುದು. ಈ ಸಮಸ್ಯೆ ಆಲೋಚನೆ, ಕಾರ್ಯಗಳು ಹಾಗೂ ನಡುವಳಿಕೆ ಮೇಲೆ ಪರಿಣಾಮ ಬೀರುತ್ತವೆ. ಅನೇಕ ಸಂದರ್ಭಗಳಲ್ಲಿ ಜನರ ಜತೆಗೆ ಸಾಮಾಜಿಕವಾಗಿ ಸಂಬಂಧ ಹೊಂದಲು ಪ್ರಯತ್ನಿಸುವಾಗ ನಿಮಗೆ ಸಮಸ್ಯೆಯಾಗಬಹುದು. ಇದು ಸಾಮಾನ್ಯ ಹಾಗೂ ಆರೋಗ್ಯಕರ ಜೀವನ ನಡೆಸುವಲ್ಲಿ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡಬಹುದು. ಇದು ನಿಮ್ಮ ವೃತ್ತಿ ಜೀವನವನ್ನು ಅಪಾಯಕ್ಕೆ ತಳ್ಳಬಹುದು.


Personality Disorder,Types, Diagnosis, Treatment,ಪರ್ಸನಾಲಿಟಿ ಡಿಸಾರ್ಡರ್ , ಚಿಕಿತ್ಸೆ, ರೋಗನಿರ್ಣಯ, ವಿಧಗಳು

ಕೆಲವು ಸಂದರ್ಭಗಳಲ್ಲಿ ನಿಮಗೆ ಪರ್ಸನಾಲಿಟಿ ಡಿಸಾರ್ಡರ್ ಇದೆ ಎಂದು ತಿಳಿದಿಲ್ಲದೇ ಇರಬಹುದು.. ಏಕೆಂದರೆ ನಿಮ್ಮ ಆಲೋಚನೆ ಮತ್ತು ವರ್ತನೆ ವಿಧಾನವು ನಿಮಗೆ ಸ್ವಾಭಾವಿಕವೆಂದು ತೋರುತ್ತದೆ. ನೀವು ಎದುರಿಸುತ್ತಿರುವ ಸವಾಲುಗಳಿಗೆ ಇತರರನ್ನು ದೂಷಿಸಬಹುದು. ಪರ್ಸನಾಲಿಟಿ ಡಿಸಾರ್ಡರ್ ಸಾಮಾನ್ಯವಾಗಿ ಹದಿಹರೆಯದವರಲ್ಲಿ ಹಾಗೂ ಪ್ರೌಢಾವಸ್ಥೆಯಲ್ಲಿ ಪ್ರಾರಂಭವಾಗುತ್ತದೆ. ಮಧ್ಯವಯಸ್ಸಿನಲ್ಲಿಯೂ ಆಗಾಗ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ಪರ್ಸನಾಲಿಟಿ ಡಿಸಾರ್ಡರ್ ಅನ್ನು ಮೂರು ವಿಧಗಳಾಗಿ ವಿಂಗಡಿಸಬಹುದು. ಕ್ಲಸ್ಟರ್ ಎ ಪರ್ಸನಾಲಿಟಿ ಡಿಸಾರ್ಡರ್, ಕ್ಲಸ್ಟರ್ ಬಿ ಪರ್ಸನಾಲಿಟಿ ಡಿಸಾರ್ಡರ್, ಹಾಗೂ ಕ್ಲಸ್ಟರ್ ಸಿ ಪರ್ಸನಾಲಿಟಿ ಡಿಸಾರ್ಡರ್ . ಕ್ಲಸ್ಟರ್ ಎ ಪರ್ಸನಾಲಿಟಿ ಡಿಸಾರ್ಡರ್ ಗಳಲ್ಲಿ ಪ್ಯಾರನಾಯ್ಡ್ ಪರ್ಸನಾಲಿಟಿ ಡಿಸಾರ್ಡರ್, ಸ್ಕಿಜಾಯ್ಡ್ ಪರ್ಸನಾಲಿಟಿ ಡಿಸಾರ್ಡರ್ ಮತ್ತು ಸ್ಕಿಜೋಟೈಪಾಲ್ ಪರ್ಸನಾಲಿಟಿ ಡಿಸಾರ್ಡರ್ ಕಾಣಬಹುದು.

ಪರ್ಸನಾಲಿಟಿ ಡಿಸಾರ್ಡರ್ ಲಕ್ಷಣಗಳೇನು..?

ವ್ಯಾಪಕವಾದ ಅಪನಂಬಿಕೆ
ಇತರರ ಉದ್ದೇಶಗಳು ಇತರರು ನಮಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂಬ ಭಾವನೆ
ಇತರರ ನಿಷ್ಠೆ ಬಗ್ಗೆ ನಂಬಿಕೆ ಇರುವುದಿಲ್ಲ.
ಇತರರ ನಮ್ಮ ಬಗ್ಗೆ ಮಾಹಿತಿಯನ್ನು ದುರಪಯೋಗಪಡಿಸಿಕೊಳ್ಳುತ್ತಾರೆ ಎಂಬ ಭಯ
ವಿಶ್ವಾಸ ಹೊಂದಲು ಹಿಂಜರಿಕೆಯಾಗುವುದು
ದ್ವೇಷ ಸಾಧಿಸುವ ಪ್ರವೃತ್ತಿ
ಸಂಗಾತಿ ತನಗೆ ವಿಶ್ವಾಸದ್ರೋಹ ಮಾಡಿದರು ಎಂಬ ನ್ಯಾಯಸಮ್ಮತವಲ್ಲದ ಯೋಚನೆಗಳು.

ಕ್ಲಸ್ಟರ್ -ಬಿ ಪರ್ಸನಾಲಿಟಿ ಡಿಸಾರ್ಡರ್ ಗಳಲ್ಲಿ ಉಪವರ್ಗಗಳನ್ನು ಕಾಣಬಹುದು. ಈ ಸಮಸ್ಯೆಗಳಿರುವವರು ಅತಿಯಾದ ಭಾವನಾತ್ಮಕ ಅಥವಾ ಅನೀರಿಕ್ಷಿತ ಚಿಂತನೆ ಮತ್ತು ನಡುವಳಿಕೆಗಳನ್ನು ಹೊಂದಿರುತ್ತಾರೆ.


Personality Disorder,Types, Diagnosis, Treatment,ಪರ್ಸನಾಲಿಟಿ ಡಿಸಾರ್ಡರ್ , ಚಿಕಿತ್ಸೆ, ರೋಗನಿರ್ಣಯ, ವಿಧಗಳು

ಆ್ಯಂಟಿ ಸೋಷಿಯಲ್ ಡಿಸಾರ್ಡರ್
ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್
ಹಿಸ್ಟ್ರಿಯಾನಿಕ್ ಡಿಸಾರ್ಡರ್
ನಾರ್ಸಿಸಿಸ್ಟಿಕ್ ಡಿಸಾರ್ಡರ್

ಇನ್ನೂ ಕ್ಲಸ್ಟರ್ ಬಿ ಪರ್ಸನಾಲಿಟಿ ಡಿಸಾರ್ಡರ್ ನಲ್ಲಿ ಉಪ ವಿಭಾಗಗಳನ್ನು ಬಗ್ಗೆ ನೋಡುವುದಾದರೆ, ಇಲ್ಲಿ ಆತಂಕ, ಭಯ ಮುಂತಾದ ನಡುವಳಿಕೆಗಳು ಕಂಡು ಬರುತ್ತವೆ.

ಅವೈಡೆಂಟ್ ಪರ್ಸನಾಲಿಟಿ ಡಿಸಾರ್ಡರ್
ಇನ್ ಡಿಂಪೆಂಡೆಟ್ ಪರ್ಸನಾಲಿಟಿ ಡಿಸಾರ್ಡರ್,
ಒಬ್ಬೆಸ್ಸಿವ್ ಕಂಪಲ್ಸಿವ್ ಪರ್ಸನಾಲಿಟಿ ಡಿಸಾರ್ಡರ್

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು..?

ಮನಃಶಾಸ್ತ್ರಜ್ಞರು ಟಾಕ್ ಥೆರಪಿ ಮೂಲಕ ಸಮಸ್ಯೆ ನಿವಾರಿಸುತ್ತಾರೆ. ಅಲ್ಲದೇ ಕೆಲವು ಸಂದರ್ಭಗಲ್ಲಿ ಸೈಕೋಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಪರ್ಸನಾಲಿಟಿ ಡಿಸಾರ್ಡರ್ ಸಮಸ್ಯೆಯ ಯಾವುದೇ ಲಕ್ಷಣಗಳು ನಿಮ್ಮಲ್ಲಿದ್ದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಪ್ರಾಥಮಿಕ ಆರೈಕೆಯ ವೃತ್ತಿಪರರು, ಕೌನ್ಸಲರ್ , ಹಾಗೂ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ನಮ್ಮ Spark.Live ಎಕ್ಸ್ ಪರ್ಟ್, ಖ್ಯಾತ ಮನಃಶಾಸ್ತ್ರಜ್ಞೆ ಡಾ. ಹೇಮಾ ಸಂಪತ್ ಅವರೊಂದಿಗೆ ಸಮಗ್ರ ಆರೋಗ್ಯದ ಬಗ್ಗೆ ಮಾಹಿತಿ, ಸಲಹೆ ಪಡೆಯಿರಿ. ಪ್ರತಿದಿನ: ಸಮಯ, ಬೆಳಿಗ್ಗೆ 10.30 ರಿಂದ, ಮಧ್ಯಾಹ್ನ 2 ಗಂಟೆಯವೆರೆಗೆ, ಸಂಜೆ 4.30ರಿಂದ 7ಗಂಟೆಯವರೆಗೆ ವೈದ್ಯರನ್ನು ಸಂಪರ್ಕಿಸಬಹುದು. Spark.Live.ನಲ್ಲಿ ಸೆಷನ್ ಬುಕ್ ಮಾಡಿ, ಡಾ ಹೇಮಾ ಅವರ ಜತೆ ಮಾತನಾಡಬಹುದು.

ವೈದ್ಯರ ಬಗ್ಗೆ ಪರಿಚಯ
ಡಾ.ಹೇಮಾ ಸಂಪತ್
ಮನಃಶಾಸ್ತ್ರಜ್ಞೆ,

Personality Disorder,Types, Diagnosis, Treatment,ಪರ್ಸನಾಲಿಟಿ ಡಿಸಾರ್ಡರ್ , ಚಿಕಿತ್ಸೆ, ರೋಗನಿರ್ಣಯ, ವಿಧಗಳು

ಡಾ. ಹೇಮಾ ಸಂಪತ್ ಅವರು, ತಮ್ಮ ವೃತ್ತಿಯಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. ಡಾ. ಹೇಮಾ ಸಂಪತ್ ಆತಂಕ ಮತ್ತು ಖಿನ್ನತೆ, ಸಂಬಂಧಗಳ ಪರಿಹಾರಗಳ ಬಗ್ಗೆ ಸಲಹೆ ನೀಡುತ್ತಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ