ಕಿಡ್ನಿ ಸಮಸ್ಯೆಗೆ ಶಾಶ್ವತ ಪರಿಹಾರ..!? – (Solution for kidney problem)

  • by

ಮೂತ್ರಪಿಂಡ ಮನುಷ್ಯನ ದೇಹದಲ್ಲಿ ನಿರ್ಣಾಯಕ ಪಾತ್ರ ವಹಿಸುತತ್ದೆ. ವಿಷವನ್ನು ಹಾಗೂ ತ್ಯಾಜ್ಯವನ್ನು ಹೊರಹಾಕಲು ನೆರವಾಗುತ್ತದೆ. ಒಂದು ವೇಳೆ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ, ಕಿಡ್ನಿ ಸೋಂಕಿಗೆ ಒಳಗಾಗುತ್ತವೆ. ಮತ್ತು ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೂತ್ರ ಪಿಂಡವನ್ನು ಆರೋಗ್ಯವಾಗಿಡಲು ಯಾವ ಯಾವು ಹೆಲ್ತಿ ಟಿಪ್ಸ್ ಗಳನ್ನು ಅನುಸರಿಸಬೇಕು. ಇಲ್ಲಿದೆ ಡಿಟೇಲ್ಸ್.


ಮೂತ್ರಪಿಂಡದ ಸಮಸ್ಯೆಯ ಲಕ್ಷಣಗಳು

ಹಸಿವಿನ ಕೊರತೆ
ವಾಂತಿ
ದೌರ್ಬಲ್ಯದ ಭಾವನೆ
ಆರಂಭಿಕ ಆಯಾಸ
ರಕ್ತಹೀನತೆ
ಅಧಿಕ ರಕ್ತದೋತ್ತಡ

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ. ಹಾಗೇ ಮಧುಮೇಹ ಹೊಂದಿರುವವರು ಕಿಡ್ನಿ ಸಮಸ್ಯೆಯ ಅಪಾಯ ಹೆಚ್ಚಿರುತ್ತದೆ. ಮಧುಮೇಹ ರೋಗಿಗಳು ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿರುತ್ತಾರೆ. ಆದ್ದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದಕ್ಕೆ ಡಯಾಲಿಸಿಸ್ ಅಥವಾ ಅಂಗಾಂಗ ಕಸಿ ಅಗತ್ಯವಿರುತ್ತದೆ. ಆದ್ದರಿಂದ ಮೂತ್ರಪಿಂಡದ ಸಮಸ್ಯೆ ನಿವಾರಿಸಲು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಮಧುಮೇಹದಿಂದ ಮೂತ್ರಪಿಂಡದ ಹಾನಿಯನ್ನು ಮೊದಲೇ ಪತ್ತೆ ಹಚ್ಚಿದರೆ ಅಪಾಯವನ್ನು ತಡೆಗಟ್ಟಬಹುದು.

ರಕ್ತದೋತ್ತಡ ಸಮತೋಲನವಾಗಿರಲಿ

ಅಧಿಕ ರಕ್ತದೋತ್ತಡ ಪಾರ್ಶ್ವವಾಯು ಮತ್ತು ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಮೂತ್ರಪಿಂಡದ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಡಯಾಬಿಟಿಸ್ ರೋಗಿಯಾಗಿದ್ದರೆ ಅಥವಾ ಅಧಿಕ ರಕ್ತದೋತ್ತಡದಿಂದ ಬಳಲುತ್ತಿದ್ದರೆ , ಅಥವಾ ಮೂತ್ರಪಿಂಡ ಕಾಯಿಲೆಯ ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದರೆ, ನಿಮ್ಮ ರಕ್ತದೋತ್ತಡವನ್ನು ಕಟ್ಟು ನಿಟ್ಟಾಗಿ ಪರೀಕ್ಷೆಗೆ ಒಳಪಡಿಸಬೇಕು. ಆರೋಗ್ಯಕರ ಜೀವನ ನಡೆಸುವ ಮೂಲಕ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಿ.

ಸಕ್ರೀಯ ಜೀವನ ನಡೆಸಿ..

ದೈಹಿಕ ಚಟುವಟಿಯ ಕೊರತೆಯಿಂದಾಗಿ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದೆ. ಜೀವನಶೈಲಿಯ ಬದಲಾವಣೆಯಿಂದಾಗಿ ಅಧಿಕ ರಕ್ತದೋತ್ತಡ, ಹೃದ್ರೋಗ, ಬೊಜ್ಜು ಮುಂತಾದವುಗಳು ಮಧುಮೇಹದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಡಯಾಬಿಟಿಸ್ ರೋಗಿಗಳು ತಮ್ಮ ದೈನಂದಿನ ಬದುಕಿನಲ್ಲಿ ಅರ್ಧಗಂಟೆಯವರೆಗೂ ವ್ಯಾಯಾಮ ಮಾಡುವುದು ಉತ್ತಮ.

ಆರೋಗ್ಯಕರ ಆಹಾರ ಸೇವಿಸಿ

ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯಕಾರಿ ಆಹಾರಗಳನ್ನು ಸೇವಿಸುವುದರಿಂಗ ನೀವು ಅನೇಕ ರೋಗಗಳಿಂದ ಸುರಕ್ಷಿತವಾಗಿರುತ್ತೀರಿ. ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಒಳಿತು. ಸಂಸ್ಕರಿಸಿದ ಮತ್ತು ಪ್ಯಾಕಡ್ ಆಹಾರವನ್ನು ಸೇವಿಸಬೇಡಿ.

ಧೂಮಪಾನ ಮತ್ತು ಮಧ್ಯಪಾನ ತ್ಯಜಿಸಿ

ಅತಿಯಾದ ಮಧ್ಯಪಾನ ಮಾಡುವುದು ಯಕೃತ್ತಿಗೆ ಅಪಾಯವನ್ನುಂಟು ಮಾಡಬಲ್ಲದ್ದು. ಇದು ಮೂತ್ರಪಿಂಡದ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ. ಅತಿಯಾದ ಧೂಮಪಾನವು ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದು ಮೂತ್ರಪಿಂಡದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಸಾಕಷ್ಟು ನೀರು ಕುಡಿಯಿರಿ

ಮೂತ್ರಪಿಂಡಗಳ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಸಾಕಷ್ಟು ನೀರು ಕುಡಿಯುವುದರಿಂದ ಮೂತ್ರಪಿಂಡಗಳು ದೇಹದಿಂದ ಸೋಡಿಯಂ, ಯೂರಿಯಾ ಮತ್ತು ಇತರ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ಕಿಡ್ನಿಯನ್ನು ಆರೋಗ್ಯವಾಗಿರಿಸುತ್ತದೆ.

ನಿಮ್ಮ ಕುಟುಂಬದ ವೈದ್ಯಕೀಯ ಇತಿಹಾಸ ತಿಳಿದುಕೊಳ್ಳಿ

ಅನುವಂಶೀಯತೆ ಯಿಂದಾಗಿ ಕೆಲವು ಕಾಯಿಲೆಗಳು ಬರಬಹುದು. ಹಾಗಾಗಿ ನಿಮ್ಮ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರಲ್ಲಿ ಮೂತ್ರಪಿಂಡದ ಸಮಸ್ಯೆ ಇದ್ದರೆ, ಮುಂದೆ ನಿಮ್ಮನ್ನು ಹೆಚ್ಚು ಅಪಾಯಕ್ಕೆ ತಂದೊಡ್ಡುತ್ತವೆ. ನೀವು ಹೆಚ್ಚು ಅಪಾಯದಲ್ಲಿದ್ದರೆ, ನಿಮ್ಮ ಮೂತ್ರಪಿಂಡದ ಆರೋಗ್ಯದ ಬಗ್ಗೆ ತಿಳಿಯಲು ಪರೀಕ್ಷೆಗೆ ಒಳಪಡುವುದು ಉತ್ತಮ. ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇದ್ದರೂ, ಕಾಯಿಲೆ ಸಮಸ್ಯೆ ಎದುರಾಗುವ ಸಂಭವ ಹೆಚ್ಚಿರುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಿ

ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹಾಗೂ ದೈಹಿಕ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುವುದರಿಂದ ರಕ್ತದೋತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಇದರಿಂದಾಗಿ ಮಧುಮೇಹ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.

ಮೆಗ್ನೇಶಿಯಂ ಸೇವನೆ

ಮೆಗ್ನೇಶಿಯಂ ಪ್ರಮಾಣದ ಕೊರತೆಯಿಂದಾಗಿ ಅಧಿಕ ರಕ್ತದೋತ್ತಡ ಹಾಗೂ ಮೂತ್ರಪಿಂಡದ ಸಮಸ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಮೆಗ್ನೇಶಿಯಂ ಅನ್ನು ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸಿ. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಹಸಿರು ತರಕಾರಿ, ಬೀಜಗಳು ಮತ್ತು ಧಾನ್ಯಗಳನ್ನು ಹೆಚ್ಚಾಗಿ ಉಪಯೋಗಿಸಿ

ತೂಕವನ್ನು ನಿಯಂತ್ರಿಸಿ

ಅಧಿಕ ತೂಕವು ಮೂತ್ರಪಿಂಡದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆಹಾರ ಹಾಗೂ ನಿಯಮಿತ ವ್ಯಾಯಾಮದಿಂದ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ. ಇದನ್ನು ಮಾಡುವುದರಿಂದ ದೀರ್ಘಕಾಲದ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುವ ಮಧುಮೇಹ ಹಾಗೂ ಹೃದ್ರೋಗವನ್ನು ಹಾಗೂ ಇತರ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡಬಹುದು.

ನೋವು ನಿವಾರಕ ಮಾತ್ರಗಳ ಸೇವನೆ ಬೇಡ

ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದರಿಂದ ಕಿಡ್ನಿಗೆ ಹೆಚ್ಚು ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ