ಮದುವೆ ದಿನ ಪೀರಿಯಡ್ಸ್ ಆದ್ರೆ ಈ ಉಪಾಯ ಅನುಸರಿಸಿ..!

  • by

ಮುಟ್ಟು ಪ್ರತಿಯೊಬ್ಬ ಮಹಿಳೆಗೆ ಪ್ರಕೃತಿದತ್ತವಾದ ಕೊಡುಗೆ. ಮಹಿಳೆಯರಿಗೆ ಪ್ರತಿ ತಿಂಗಳು ಕಾಡುವ ಸಮಸ್ಯೆಗಳಲ್ಲಿ ಒಂದು.. ಮದುವೆ ದಿನ ಮುಟ್ಟಾದ್ದರೆ ಎಲ್ಲಾ ಮಹಿಳೆಯರು ಆತಂಕಕ್ಕೆ ಒಳಗಾಗುತ್ತಾರೆ. ಪ್ಯಾಡ್ ಚೇಂಜ್ ಮಾಡಲು ಸಮಯ ಸೀಗುವುದಿಲ್ಲ.. ಪದೇ ಪದೇ ಪ್ಯಾಡ್ಸ್ ಚೇಂಜ್ ಮಾಡಬೇಕಾಗಿರುತ್ತದೆ. ಹೀಗಾಗಿ ಈ ವೇಳೆ ಭಯ, ಆತಂಕಕ್ಕೆ ಒಳಗಾಗಿ  ತುಂಬಾ ಮಹಿಳೆಯರು ಕಿರಿ ಕಿರಿ ಅನುಭವಿಸುತ್ತಾರೆ. ಆದ್ದರಿಂದ ಮದುವೆ ದಿನ ಮುಟ್ಟಾದ್ರೆ ಚಿಂತೆ ಮಾಡಬೇಕಿಲ್ಲ. ಈ ಟಿಪ್ಸ್ ಫಾಲೋ ಮಾಡಿ.

Period handle, wedding day, ಪೀರಿಯಡ್ಸ್ , ಮದುವೆ ದಿನ,

ಪ್ಯಾಡ್ ಬಳಕೆ ಹೀಗಿರಲಿ..!

ಬಹುತೇಕರು ಇಂಥ ಸಂದರ್ಭದಲ್ಲಿ ಟ್ಯಾಂಪನ್ ಬಳಕೆ ಮಾಡುತ್ತಾರೆ. ಇದು ಕೆಲವರಿಗೆ ಕಿರಿ ಕಿರಿ ಅನ್ನಿಸುತ್ತದೆ. ಅಂತವರು ಟ್ಯಾಂಪನ್ ಬದಲು ಬಹಳ ಹೊತ್ತು ಬರುವ ಪ್ಯಾಡ್ ಆಯ್ಕೆ ಮಾಡಿಕೊಳ್ಳಿ. ಒಂದೇ ಬಾರಿ ಎರಡು ಪ್ಯಾಡ್ ಕೂಡಾ ಬಳಸಬಹುದು. ಇದು ಸುರಕ್ಷಿತ. ಹಾಗೂ ಬಟ್ಟೆ ಒದ್ದೆಯಾಗುವ ಭಯ ಇರುವುದಿಲ್ಲ. 

ಮುಟ್ಟಿನ ಸಮಯದಲ್ಲಿ ಮೊಡವೆ ಸಾಮಾನ್ಯ. ಮೊಡವೆ ಶುರುವಾಗ್ತಿದೆ ಎಂದರೆ ಟೂತ್ ಪೇಸ್ಟ್ ಹಚ್ಚಿ. ಆಗ ಮೊಡವೆ ದೊಡ್ಡದಾಗಲು ಬಿಡುವುದಿಲ್ಲ. ಇನ್ನು ಮುಟ್ಟಿನ ಸಂದರ್ಭದಲ್ ಕಾಲು ನೋವು, ಹೊಟ್ಟೆ ನೋವು . ಬೆನ್ನು ನೋವು ಅನುಭವಿಸುತ್ತಿದ್ದರೆ. ಅಂಥ ಸಂದರ್ಭದಲ್ಲಿ ಹೈ ಹೀಲ್ಡ್ ಬದಲು, ಕಡಿಮೆ ಹೀಲ್ಡ್ ಇರುವ ಚಪ್ಪಲಿ ಬಳಸಿ.

ಹಿಂದೂ ಶಾಸ್ತ್ರದ ಪ್ರಕಾರ, ಮದುವೆಯ ದಿನಾಂಕಗಳನ್ನು ಸಾಮಾನ್ಯವಾಗಿ 2 ಮನೆಯ ಪೋಷಕರು ಆಯ್ಕೆ ಮಾಡುತ್ತಾರೆ. ಆದಾಗ್ಯೂ ಕೆಲವು ಸಂದರ್ಭದಲ್ಲಿ ಮದುವೆ ಮುನ್ನಾ ದಿನ ಪೀರಿಯಡ್ಸ್ ಬರುವ ಸಾಧ್ಯತೆ ಇರುತ್ತದೆ. ಅಂಥ ಸಮಯದಲ್ಲಿ ನೀವು ಸ್ತ್ರೀರೋಗ ತಜ್ಞರ ಸಹಾಯ ಪಡೆದುಕೊಳ್ಳುವುದು ಉತ್ತಮ. ಪೀರಿಯಡ್ಸ್ ಮುಂದೂಡಲು ಹಾಗೂ ಮುದುವೆಗೂ ಮುಂಚಿತವಾಗಿ ಪೀರಿಯಡ್ಸ್ ಆಗಲು ಔಷಧಿಗಳನ್ನು ಸೇವಿಸಿದರೆ ಉತ್ತಮ. ಮುದುವೆಗೆ 2 ತಿಂಗಳ ಮುನ್ನ ನೀವು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ವಾಕರಿಕೆ, ಅನಿಯಮಿತ ರಕ್ತಸ್ರಾವ, ಖಿನ್ನತೆಗೆ ಕಾರಣವಾಗುವ ಔಷಧಿಗಳನ್ನು ತೆಗೆದುಕೊಳ್ಳಬೇಡಿ. ವೈದ್ಯರ ಸಲಹೆ ಪಡೆಯಿರಿ. 


.Period handle, wedding day, ಪೀರಿಯಡ್ಸ್ , ಮದುವೆ ದಿನ,

ನಿಮ್ಮ ಪಾರ್ಟನರ್ ಜತೆ ಚರ್ಚಿಸಿ..!

ಸಂಪ್ರದಾಯದ ಪ್ರಕಾರ, ಮದುವೆಗೂ ಮುನ್ನ ಸಂಗಾತಿಯನ್ನು ಮಾತನಾಡುವುದು ಅಥವಾ ಭೇಟಿಯಾಗುವುದು ಹೊಸದಾಗಿ ಮದುವೆಯಾಗುವ ಕಪಲ್ಸ್ ಗಳು ಭೇಟಿಯಾಗುವುದು ನಿಷೇಧವಿರುತ್ತದೆ. ಇಂಥ ಅವಧಿಯಲ್ಲಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಯಾವುದೇ ಪವಿತ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಸಂಗಾತಿಯ ಸಹಾಯ ಪಡೆದುಕೊಳ್ಳಿ. ಮತ್ತು ಮದುವೆಯನ್ನು ಕೆಲವು ದಿನಗಳವರೆಗೆ ಮುಂದೂಡುವುದು ಉತ್ತಮ. ಎರಡು ಕುಟುಂಬದವರು ಸೇರಿ ಮದುವೆ ದಿನಾಂಕ ನಿರ್ಧರಿಸುತ್ತಾರೆ. ಹಾಗಾಗಿ ನಿಮ್ಮ ಸಂಗಾತಿ ಜತೆ ಮಾತನಾಡಿದಾಗ ಮದುವೆ ದಿನಾಂಕ ನಿಮ್ಮಗೆ ಬೇಕಾದಂತೆ ಫಿಕ್ಸ್ ಮಾಡಬಹುದು.

ಅನೇಕ ಸಂಧಭಗಳಲ್ಲಿ ಧಾರ್ಮಿಕ ನಂಬುಗೆಗಳು ನಮ್ಮಲ್ಲಿ  ಹಿಂಜರಿಕೆಯನ್ನುಂಟು ಮಾಡುತ್ತದೆ. ಮದುವೆ ದಿನ ಮುಟ್ಟು ಆದರೆ ನಿಮ್ಮ ಸಂಗಾತಿಗೆ ಮಾತ್ರ ತಿಳಿಸಿ. ಇದರ ರಹಸ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

Period handle, wedding day, ಪೀರಿಯಡ್ಸ್ , ಮದುವೆ ದಿನ,

ಮದುವೆ ದಿನ ಪೀರಿಯಡ್ಸ್ ಆದರೆ ಮುನ್ನೇಚ್ಚರಿಕೆಗಳೇನು?

1.ಸ್ಯಾನಿಟರಿ ಪ್ಯಾಡ್ ಧರಿಸಿ , ಅದು ಸುರಕ್ಷಿತ ಹಾಗೂ ದೀರ್ಘಕಾಲದವರೆಗೂ ಇರುತ್ತದೆ. 

2. ಪಿರೀಯಡ್ಸ್ ಬಗ್ಗೆ ಸೀಕ್ರೆಟ್ ಕಾಯ್ದುಕೊಳ್ಳಿ. ಹಾಗೂ ನಿಮ್ಮ ನಂಬಿಕಸ್ಥರಿಗೆ ಈ ಬಗ್ಗೆ ತಿಳಿಸುವುದರಿಂದ ಆತಂಕ, ಭಯ ದೂರವಾಗುತ್ತದೆ. ಯಾವುದೇ ಗಿಲ್ಟ್ ಕಾಡುವುದಿಲ್ಲ.

3.  ನೀವು ಧರಿಸುವ ಡ್ರೆಸ್ ಗೆ ಎಕ್ಸಟ್ರಾ ಸ್ಲಿಪ್ ಧರಿಸಬಹುದು. ಇದು ಮದುವೆಯ ಉಡುಪಿಗೆ ಕಲೆಯಾಗುವುದನ್ನು ತಡೆಗಟ್ಟುತ್ತದೆ. 

4. ನಿಮ್ಮ ಮೇಕಪ್ ಕಿಟ್ ನಲ್ಲಿ  ಪ್ಯಾಡ್ಸ್ ಗಳಿರಲಿ. 

5. ಹೈ ಹೀಲ್ಡ್ ಧರಿಸುವುದರಿಂದ ಕಾಲುಗಳು ಮತ್ತಷ್ಟು ನೋವುಗಳಾಗುತ್ತದೆ. ಹೈ ಹೀಲ್ಡ್ ಬದಲು, ಕಡಿಮೆ ಹೀಲ್ಡ್ ಇರುವ ಚಪ್ಪಲಿ ಧರಿಸಿ. 

6. ಮದುವೆಯ ದಿನ ನೋವಿನ ಮಾತ್ರೆಯನ್ನು ನಿಮ್ಮ ಸಹೋದರಿಗೆ ನೀಡಿ. ಆಕೆ ನಿಮ್ಮ ಸುತ್ತ ಮುತ್ತ ಓಡಾಡುತ್ತಿರುತ್ತಾಳೆ. ನೋವಾದರೆ ತಕ್ಷಣ  ಮಾತ್ರೆ ತೆಗೆದುಕೊಳ್ಳಲು ಸುಲಭವಾಗುತ್ತದೆ. 

ಮುಟ್ಟಾಗುವ ಪ್ರಕ್ರಿಯೆ ಏನು ?

ಮುಟ್ಟಾಗುವ ಪ್ರಕ್ರಿಯೆ ಎಂದರೆ ಹೈಪೋಥಲಾಮಸ್ ಪಿಟ್ಯುಟರಿ ಗ್ರಂಥಿ ಅಂಡಾಶಯ ಅಕ್ಷೆ.  ಅಲ್ಲಿನ ಹಾರ್ಮೋನುಗಳ ಪ್ರಭಾವದಿಂದ ಅಂಡಾಶಯಗಳು ಕ್ರಿಯಾಶೀಲವಾಗಿ ಹೆಣ್ತನದ ಹಾರ್ವೋನುಗಳಾದ ಈಸ್ಟ್ರೋಜನ್ ಹಾಗೂ ಪ್ರೊಜಿಸ್ಟಿರಾನ್ ಗಳಿಂದ ತಿಂಗಳಿಗೊಂದು ಅಂಡೋತ್ಪತ್ತಿಯಾಗುವುದು. 

ಗರ್ಭಕೋಶದ ಒಳಪದರವು ಬೆಳೆದು ಸಂತಾನೋತ್ಪತ್ತಿ ಕ್ರಿಯೆ ನಡೆಯದಿದ್ದಲ್ಲಿ ಗರ್ಭಾಶಯದ ಒಳಪದರವು ಕಳಚಲ್ಪಟ್ಟು ಯೋನಿ ಮುಖಾಂತಪ ರಕ್ತಸ್ರಾವದ ರೂಪದಲ್ಲಿ ಹೊರ ಹೋಗುವುದು. ಇದನ್ನೇ ಮಾಸಿಕ ಮುಟ್ಟು ಎಂದು ಹೇಳಲಾಗುತ್ತದೆ. ಖುತುಚಕ್ರದ ಸಮಯದಲ್ಲಿ ಹೊರ ಬರುವುದು ಕೆಟ್ಟ ರಕ್ತವಲ್ಲ.  ಆರಂಭದಲ್ಲಿ ಮುಟ್ಟು ನಿಯಮಿತವಾಗಿ ಬರದೇ ಇರಬಹುದು. ಆದ್ರೆ ನಂತರದ ದಿನಗಳಲ್ಲಿ ನಿಯಮಿತವಾಗಿ ಅಂದರೆ ೨೨ ರಿಂದ ೩೫ ದಿನಗಳೊಳಗಾಗಿ ಬರುತ್ತದೆ. ೨ ರಿಂದ ೭ ದಿನಗಳವರೆಗೆ ರಕ್ತಸ್ರಾವ ವಾಗುತ್ತದೆ. ಇದಕ್ಕಿಂತ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ಚಿಕಿತ್ಸೆ ಪಡೆದುಕೊಳ್ಳಬೇಕು.  

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ