ನಕಾರಾತ್ಮಕ ಶಕ್ತಿ ನಿಯಂತ್ರಿಸುತ್ತೆ ನವಿಲು ಗರಿ!

  • by

ನವಿಲುಗರಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಚಿಕ್ಕವರಿದ್ದಾಗ ಎಲ್ಲರೂ ಮೃದುವಾದ ನವಿಲು ಗರಿಯನ್ನು ಪುಸ್ತಕದಲ್ಲಿ ಇಡುತ್ತಿದ್ದರು. ನವಿಲುಗರಿ ಅಲಂಕಾರ ಹಾಗೂ ಸೌಂದರ್ಯ ಸಾಧನ ರೂಪದಲ್ಲಿ ಬಳಕೆಯಾಗುತ್ತದೆ. ಪೌರಣಿಕ ಕಾಲದಲ್ಲಿ  ದೊಡ್ಡ ಗ್ರಂಥಗಳನ್ನು ಮಹರ್ಷಿ, ನವಿಲು ಗರಿಗಳ ಮೂಲಕ ಗ್ರಂಥ ಬರೆಯುತ್ತಿದ್ದರು. ಶ್ರೀಕೃಷ್ಣನ ಹಣೆಯ ನವಿಲು ಗರಿ ಇರುವುದನ್ನು ನೀವು ಕಾಣಬಹುದು. ನವಿಲು ಗರಿ ತುಂಬಾ ಪವಿತ್ರವಾದದ್ದು, ಇದರಿಂದ ಮನೆಯ ಹಲವು ದೋಷಗಳನ್ನು ನಿವಾರಿಸಬಹುದು. ನವಿಲು ಗರಿಯಿಂದಾಗುವ ಪ್ರಯೋಜನಗಳೇನು.. ? 

ನವಿಲುಗರಿ,  ಪ್ರಯೋಜನಗಳು ,Peacock Feather

ದುಷ್ಟಶಕ್ತಿಗಳಿಂದ ರಕ್ಷಿಸುತ್ತದೆ.!

ನವಿಲು ಗರಿ ಯಾವುದೇ ಸ್ಥಳದಲ್ಲಿ ಇಟ್ಟರೆ, ಇದು ದುಷ್ಟ ಶಕ್ತಿಗಳ ಮೇಲೆ ನಿಯಂತ್ರಣ ಹೇರಿ, ಪ್ರತಿಕೂಲ ಪರಿಸ್ಥಿತಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಸುಂದರವಾದ ನವಿಲು ಗರಿಗಳನ್ನು ಇಡುತ್ತಾರೆ. 

ನಕಾರಾತ್ಮಕ ಶಕ್ತಿ ನಿಯಂತ್ರಣ!

ನವಿಲುಗರಿಯ ವಿಶೇಷತೆ ಎಂದರೆ, ನಿಮ್ಮ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಯಿಂದ ತೆಗೆದುಹಾಕುವಲ್ಲಿ ನವಿಲು ಹೆಚ್ಚು ಪ್ರಯೋಜನಕಾರಿಯಾಗಿದೆ. ನಕಾರಾತ್ಮಕ ಶಕ್ತಿಯಿಂದ ನಿಮ್ಮನ್ನು ದೂರವಿರಿಸುತ್ತದೆ. ಸಕಾರಾತ್ಮಕ ವಾತಾವರಣ ನಿರ್ಮಿಸುತ್ತದೆ. 

ನವಿಲು ಶುಭದ ಸಂಕೇತವಾಗಿದೆ.. 

ಶ್ರೀಕೃಷ್ಣ ಹಣೆಯ ಮೇಲೆ ಅಲಂಕರಿಸಲ್ಪಟ್ಟ ನವಿಲು ಗರಿ, ಹಿಂದೂ ಧರ್ಮದಲ್ಲಿ ಶುಭದ ಸೂಚಕವಾಗಿದೆ. ಈ ಕಾರಣಕ್ಕಾಗಿಯೇ ಇದನ್ನು ಶುಭದ ಸಂಕೇತ ಎಂದು ಹೇಳಲಾಗುತ್ತದೆ. ನವಿಲುಗರಿಗಳನ್ನು ಮನೆಯಲ್ಲಿ ಕೊಳಲಿನೊಂದಿಗೆ ಇಟ್ಟುಕೊಂಡರೆ, ಕುಟುಂಬ ಸದಸ್ಯರ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. 

ಸಂಪತ್ತು ಒದಗಿಸುತ್ತದೆ..!

ಸನಾತನ ಧರ್ಮದಲ್ಲಿ ನವಿಲು ಸಂಪತ್ತಿನ ಅಧಿದೇವತೆ ಲಕ್ಷ್ಮೀ ಹಾಗೂ ಸರಸ್ವತಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದ್ದರಿಂದ ನವಿಲು ಗರಿಗಳನ್ನು ಸಂಪತ್ತು ಹಾಗೂ ಬುದ್ಧಿವಂತಿಕೆ ಎರಡನ್ನು ಏಕಕಾಲದಲ್ಲಿ ಪಡೆಯಲಾಗುತ್ತದೆ. ಲಕ್ಷ್ಮೀ ಸ್ವತಃ ಅದೃಷ್ಟ , ಸಮೃದ್ಧಿ ಮತ್ತು ಸಂಪತ್ತು ಪ್ರತಿನಿಧಿಸುತ್ತದೆ. ಆದ್ದರಿಂದ ಮಾತೆ ಲಕ್ಷ್ಮೀಯ ಒಲಿಸಿಕೊಳ್ಳುವ ದೃಷ್ಟಿಯಿಂದ ನವಿಲು ಗರಿಗಳನ್ನು  ಬಳಸಲಾಗುತ್ತದೆ. 

ನವಿಲುಗರಿ ಪ್ರೀತಿಯ ಪ್ರತೀಕ..!

ನವಿಲು ಗರಿ ಪ್ರೀತಿಯ ಪ್ರತೀಕವಾಗಿದೆ. ಇಬ್ಬರ ಜನರ ನಡುವಿನ ಅಂತರವನ್ನು ಕೊನೆಗೊಳಿಸಲು ಇದು ಕಾರ್ಯನಿರ್ವಹಿಸುತ್ತದೆ. ನವಿಲು ಗರಿ ಕುಟುಂಬದ ನಡುವಿನ ಅಂತರವನ್ನು ನಿವಾರಿಸುತ್ತದೆ. ಮತ್ತು ಸಾಮೀಪ್ಯವನ್ನು ಹೆಚ್ಚಿಸುತ್ತದೆ. 

ವಾಸ್ತು ದೋಷಕ್ಕೆ ನವಿಲು ಗರಿ..!

ಮನೆ ಹಾಗೂ ಕಚೇರಿಗಳಲ್ಲಿ ವಾಸ್ತು ಅತ್ಯುತ್ತಮ ವಾದ ಪಾತ್ರವನ್ನು ವಹಿಸುತ್ತದೆ. ಮನೆಯ ವಾಸ್ತು ಸೂಕ್ತ ರೀತಿಯಲ್ಲಿ ಇಲ್ಲ ಎಂದಾದರೆ, ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ. ಮನೆಯಲ್ಲಿ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತದೆ. ಘರ್ಷಣೆಯಾದಾಗ ಸದಾ ತುಂಬಿರುತ್ತದೆ. ಇಂತಹ ಸಮಸ್ಯೆಗಳಿಂದ ದೂರ ಇರಬೇಕು ಎಂದರೆ ಮನೆಯಲ್ಲಿ ನೆಮ್ಮದಿ ಹಾಗೂ ಪ್ರೀತಿ, ವಿಶ್ವಾಸ ಇರಬೇಕು. ವಾಸ್ತು ದೋಷಗಳಿದ್ದರೆ ತೆಗೆದು ಹಾಕುವುದು. ಜತೆಗೆ ಸುತ್ತಲಿನ ಖುಣಾತ್ಮಕ ಸಕ್ತಿಯನ್ನು ನಿವಾರಿಸುತ್ತದೆ. 

ನವಿಲುಸಹಒಂದುಪವಿತ್ರವಾದಹಾಗೂದೈವಸಂಭೂತವಾದಪಕ್ಷಿ..!

ನವಿಲು ಗರಿ ಪವಿತ್ರವಾದ ಹಾಗೂ ದೈವ ಸಂಭೀತವಾದ ಪಕ್ಷಿ.  ನವಿಲು ಗರಿಯನ್ನು ಪವಿತ್ರ ಮತ್ತು ಆಧ್ಯಾತ್ಮಿಕ ವಸ್ತು ಎಂದು ಪರಿಗಣಿಸಲಾಗಿದೆ. ಇದರ ಕುರಿತು ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು.  ನವಿಲುಗರಿಯಿಂದ ಮನುಷ್ಯ ತನ್ನ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಯನ್ನು ಬಗೆಹರಿಸಬಹುದು. ನಿಜ. ಕೆಲವು ನಂಬಿಕೆ ಹಾಗೂ ಆಚರಣೆಗಳು ನವಿಲು ಗರಿಯಿಂದ ಕುಟುಂಬದಲ್ಲಿನ ಸದಸ್ಯರ ನಡುವೆ ಸಾಮರಸ್ಯ ಇಲ್ಲವಾದರೆ, ಮಗುವಿಗೆ ಅಷ್ಟು  ಉತ್ತಮವಾದ ಕೇಂದ್ರಿಕರಿಸುವ ಸ್ವಭಾವ ಇಲ್ಲದಿದ್ದರೆ, ಅಥವಾ ನೀವು ಅಂದು ಕೊಂಡ ಯಾವುದೇ ಕೆಲಸ ಅಥವಾ ಯೋಜನೆ ಸೂಕ್ತ ಸಮಯದಲ್ಲಿ ನೆರವೇರದೇ ಇದ್ದರೆ, ನವಿಲು ಗರಿ ಸುಲಭವಾಗಿ ಬಗೆಹರಿಸುತ್ತದೆ.

ತಡವಾದ ಯೋಜನೆಗಳಿಗೆ ಪರಿಹಾರ

ನಮ್ಮ ಜೀವನದಲ್ಲಿ ಅಂದು ಕೊಂಡಿರುವುದು ನೆರವೇರಬೇಕೆಂದರೆ ಎಂದರೆ ನಮ್ಮ ಕೆಲಸ ಕಾರ್ಯಗಳು ಅಥವಾ ಯೋಜನೆಗಳು ಸೂಕ್ತ ರೀತಿಯಲ್ಲಿ ನಡೆಯಬೇಕು. ಅಂದುಕೊಂಡ ಕೆಲಸ ಕಾರ್ಯಗಳು ನಡೆಯದೇ ಹೋದರೆ, ಆರ್ಥಿಕ ತೊಂದರೆಗಳಿಗೆ ಸಾಕಷ್ಟು ತೊಂದರೆ ಉಂಟಾಗಬಹುದು. ನವಿಲು ಗರಿಯಿಂದ ಗ್ರಹ ದೋಷಗಳಿದ್ದರೆ ಸುಲಭವಾಗಿ ನಿವಾರಣೆಯಾಗುತ್ತದೆ. ಮಲಗುವ ಕೋಣೆಯಲ್ಲಿ ಪೂರ್ವ ಹಾಗೂ ಈಶಾನ್ಯ ದಿಕ್ಕಿಗೆ ನವಿಲು ಗರಿಯನ್ನು ಇಟ್ಟು ಮಲಗಿ, ಹೀಗೆ ಮಾಡುವುದರಿಂದ ಸಮಸ್ಯೆಗಳು ಪರಿಹಾರ ಕಾಣುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ