ಈ ಮಾತನ್ನು ನಿಮ್ಮ ಮಗುವಿನ ಬಳಿ ಎಂದಿಗೂ ಹೇಳಬಾರದು!

  • by

ಪೋಷಕರು ಮಕ್ಕಳಿಗೆ ಮೊದಲ ಶಿಕ್ಷಕರಿದ್ದಂತೆ.  ಪೇರೆಂಟಿಂಗ್ ಎನ್ನುವುದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಿರ್ವಹಿಸಬಹುದಾದ ಕಠಿಣ ಜವಾಬ್ದಾರಿಗಳಲ್ಲಿ ಒಂದು. ಬಹಳಷ್ಟು ಜನರಿಗೆ ತಮ್ಮ ಮಕ್ಕಳ ಜತೆಗೆ ಹೇಗೆ ವರ್ತಿಸಬೇಕು ಎಂದು ತಿಳಿದಿರುವುದಿಲ್ಲ. ಮಕ್ಕಳು ತಮ್ಮ ಹೆತ್ತವರಿಂದ ಸಾಕಷ್ಚು ಗುಣಗಳನ್ನು ಕಲಿಯುತ್ತಾರೆ. ಒಳ್ಳೆಯದೋ, ಕೆಟ್ಟದ್ದೋ ಮಕ್ಕಳು ಅದನ್ನೇ ಅಳವಡಿಸಿಕೊಳ್ಳುತ್ತಾರೆ. ಪೋಷಕರಾಗುವುದು ಜವಾಬ್ದಾರಿ ನಿರ್ವಹಿಸುವುದು ಸುಲಭವದ ಮಾತಲ್ಲ. ತಮಾಷೆನೂ ಅಲ್ಲ. ಪೇರೆಟಿಂಗ್ ಕಷ್ಟಕರವಾದದ್ದೇ, ಆದ್ರೆ ಇದನ್ನು ನಿರ್ವಹಿಸುವುದು ಸುಲಭವೇ ಸರಿ. ಯಾವ ಟಿಪ್ಸ್ ಫಾಲೋ ಮಾಡಿದ್ರೆ ಮಕ್ಕಳ ಜತೆಗೆ ನೀವು ಅನೋನ್ಯವಾಗಿರುಬಹುದು..  ಮಕ್ಕಳ ಜತೆಗೆ ಪೋಷಕರು ಹೇಗೆಲ್ಲ ವರ್ತಿಸಬೇಕು… ಬನ್ನಿ ತಿಳಿಯೋಣ.

[gd_post_badge id=” key=” condition=’is_equal’ search=” icon_class=” badge=” link=” new_window=’false’ bg_color=’#0073aa’ txt_color=’#ffffff’ size=” alignment=” list_hide=” list_hide_secondary=” css_class=” ]
ಪೋಷಕರ ಟಿಪ್್ಸ,Parents tips, children, ಮಕ್ಕಳ ಸಂಬಂಧ , ಆರೋಗ್ಯ

ನಿಮ್ಮ ಮಗುವಿಗೆ ಎಂದಿಗೂ ಹೇಳಬಾರದ  ವಿಷಯಗಳು..

ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ಮತ್ತು ಅದರಿಂದ ಪಾಠಗಳನ್ನು ಕಲಿಯುತ್ತೇವೆ. ಇದೇ ಜೀವನ. ಹೀಗಾಗಿ ನಿಮ್ಮ ಮಗುವಿಗೆ ಶಿಕ್ಷೆ ವಿಧಿಸಬೇಡಿ. ಪ್ರತಿಯೊಬ್ಬರು ತಪ್ಪುಗಳನ್ನು ಮಾಡಲು ಅವಕಾಶವಿದೆ. ಮತ್ತು ಕಲಿಕೆಯ  ಪ್ರಕ್ರಿಯೆಯ ಒಂದು ಭಾಗವಾಗಿದೆ. ಪೋಷಕರ ಮೊದಲ ಕೆಲಸವೆಂದರೆ, ನಿಮ್ಮ ಮಗುವಿಗೆ ಮಾರ್ಗದರ್ಶನ ನೀಡುವುದು. ನಿಮ್ಮ ಅಭಿಪ್ರಾಯಗಳನ್ನು ಪಾಲಿಸುವಂತೆ ಅವನಅಥವಾ ಅವಳನ್ನು ಒತ್ತಾಯಿಸಬೇಡಿ. ಅಲ್ಲಿ ಸ್ವಂತಃ ಅಭಿಪ್ರಾಯವನ್ನು ಹೊಂದಲು ಅವರಿಗೆ ಅವಕಾಶ ಮಾಡಿಕೊಡಿ. 

1. ನಿಮ್ಮ ಮಗುವಿಗೆ ನೀವೇ ಮೊದಲ ಶಿಕ್ಷರಿದದ್ದಂತೆ.ಹಾಗಾಗಿ ಮಕ್ಕಳ ಜತೆ ನಿಮ್ಮ ವರ್ತನೆ ನಯವಾಗಿರಲಿ, ಕೋಪದಿಂದ ಮಕ್ಕಳನ್ನು ಮಾತನಾಡಿಸುವುದಾಗಲಿ, ಅವರನ್ನು ಚಿಕ್ಕ ಚಿಕ್ಕ ವಿಷಯಕ್ಕೆ ಬೈಯುವುದಾಗಲಿ ಮಾಡಬೇಡಿ. ನಿಮ್ಮ ಮಗುವಿಗೆ ಏನಾದರೂ ಹೇಳುವುದಕ್ಕೂ ಮುನ್ನ. ಎರಡು ಬಾರಿ ಯೋಚಿಸಿ. ಅವು ನಿಮ್ಮ ಜವಾಬ್ದಾರಿ ಹಾಗೂ ನಿಮ್ಮ ಮೇಲೆ ಪರಿಣಾಮ ಬೀರುತ್ತವೆ. ನಿಮ್ಮ ಮಗುವಿಗೆ ಹೆದರಿಸುವಂತಹ ಪದಗಳನ್ನು  ಬಳಕೆ ಮಾಡಬೇಡಿ. 

[gd_post_badge id=” key=” condition=’is_equal’ search=” icon_class=” badge=” link=” new_window=’false’ bg_color=’#0073aa’ txt_color=’#ffffff’ size=” alignment=” list_hide=” list_hide_secondary=” css_class=” ]
ಪೋಷಕರ ಟಿಪ್್ಸ,Parents tips, children, ಮಕ್ಕಳ ಸಂಬಂಧ , ಆರೋಗ್ಯ
Father talking to Daughter While Working

2. ನೀನು ತುಂಬಾ ದಪ್ಪಗಿದ್ದೀಯಾ ಎಂದು ನಿಮ್ಮ ಮಗುವನ್ನು ಹಿಯಾಳಿಸಬೇಡಿ. ಇದರಿಂದ ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹದು. ಮಕ್ಕಳ ಬಾಲ್ಯದಲ್ಲಿ ಸ್ಥೂಲಕಾಯತೆ ಹೆಚ್ಚಾಗಿ ಕಂಡು ಬರುತ್ತದೆ. ನೀನು ತುಂಬಾ ದಪ್ಪ ಎಂದು ಹಿಯಾಳಿಸದರೆ. ನಿಮ್ಮ ಮಗು ಎಂದಿಗೂ ನಿಮ್ಮನ್ನು  ಕ್ಷಮಿಸುವುದಿಲ್ಲ. ಬದಲಾಗಿ ನಿಮ್ಮ ಮಗುವಿನ ತೂಕ ಎಷ್ಟು ಇಳಿಸಬೇಕು ಎಂದು ಗಮನವಿರಲಿ. ತೂಕ ಇಳಿಸಿಕೊಳ್ಳುವುದಕ್ಕೆ ಅವರನ್ನು ಪ್ರೇರೆಪಿಸಬೇಕು. 

3. ಮಕ್ಕಳಲ್ಲಿ ಬಾವನಾತ್ಮಕ ಪರಿಪಕ್ವತೆ, ಕೌಶಲ್ಯ ಮತ್ತು ವಯಸ್ಸಿಗೆ ತಕ್ಕಂತೆ ಬೆಳೆಯುತ್ತದೆ. ಇದಕ್ಕೆ ಮಕ್ಕಳು ಸಿದ್ಧವಾಗುವ ವೇಳೆ ಪೋಷಕರು ಮಕ್ಕಳಿಂದ ದೂರ ಉಳಿಯಬೇಡಿ. ದುರಾದೃಷ್ಟಕರ ಎಂದರೆ, ನೀವು ದೊಡ್ಡವನು ಅಥವಾ ದೊಡ್ಡವಳು ಎಂದು ಹೇಳುವುದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು ಹಾಗಾಗಿ ಆರೋಗ್ಯಕರವಾಗಿ ಮಕ್ಕಳ್ನನು ಪೋಷಕರು ಬೆಳೆಸಬೇಕಾಗುತ್ತದೆ. 

4. ನನ್ನ ಮನೆ, ನನ್ನದೇ ರೂಲ್ಸ್ ಎಂಬ ಭಾವನೆಯಿಂದ ಪೋಷಕರು ಹೊರಬರಬೇಕು.  ನಿಮ್ಮ ಮನೆಯಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನಿಮ್ಮ ಮೇಲೆ ನಿಮಗೆ ಸಾಕಷ್ಟು ನಿಯಂತ್ರಣವಿರಬೇಕು.  ಮುಖ್ಯವಾಗಿ ನನ್ನ ಮನೆ, ನನ್ನ ನಿಯಮಗಳು ಎಂದು ಹೇಳುವುದು ನಿಮ್ಮ ಮಕ್ಕಳ ಹಾಗೂ ನಿಮ್ಮ ಮಧ್ಯೆ ಸಂವಹನ ಸ್ಥಗಿತಕೊಳ್ಳುವಂತೆ ಮಾಡುತ್ತದೆ. ನಿಮ್ಮ ರೂಲ್ಸ್ ಬಗ್ಗೆ ಮಕ್ಕಳಿಗೆ ತಿಳಿಯಬೇಕಾದರೆ ಮೊದಲು ನಿಮ್ಮ ಮಗುವಿನ ಮಾತನ್ನು ಆಲಿಸಬೇಕಾಗುತ್ತದೆ. 

5. ನಿಮ್ಮ ಮಗು ಯಾವುದೇ ವಿಷಯಕ್ಕೆ ಹಠ ಮಾಡುತ್ತಿದ್ದರೆ ಅಳುವನ್ನು ನಿಲ್ಲಿಸು ಎಂದು ಗದರಿಸಬೇಡಿ. ಇದ್ರಿಂದ ಮಕ್ಕಳು ಮತ್ತಷ್ಟು ಅಳುತ್ತವೆ. ಇದರ ಬದಲು ಮಗು ಯಾವುದಕ್ಕೆ ಹಠ ಮಾಡುತ್ತಿದೆ ಎಂದು ತಿಳಿದು, ಇದನ್ನು ಈಡೇರಿಸಿ. 

6. ಮಕ್ಕಳು ಸ್ವಾರ್ಥಿಗಳಂತೆ ಕಾಣುವ ಹಲವು ನಡುವಳಿಕೆಗಳ್ನನು ಪ್ರದರ್ಶಿಸಬಹುದು. ಇದು ದೀರ್ಘಕಾಲದವರಗೊ ಮಕ್ಕಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಬಹುದು.  ಮಕ್ಕಳಲ್ಲಿ ಹೆಚ್ಚು ಸ್ಲಾರ್ಥ ನಡೆ ಕಂಡು ಬಂದರೆ ಪೋಷಕರು ಮಕ್ಕಳ ಕೌಶಲ್ಯದ ಕಡೆ ಗಮನಹರಿಸಬೇಕಾಗುತ್ತದೆ. ನಿಮ್ಮ ಮಕ್ಕಳ ಸ್ವಾರ್ಥ ನಡೆಯಿಂದ ಇತರ ಜನರು ಯಾವ ರೀತಿ ಭಾವಿಸಬಹುದು.. ಎಂಬ ಬಗ್ಗೆ ಚರ್ಚಿಸಿ. 

7. ನಿಮ್ಮ ಪೋಷಕರು ನಿಮ್ಮ ಒಡಹುಟ್ಟಿದವರೊಂದಿಗೆ, ಅಥವಾ ನೆರೆಹೊರೆಯ ಮಕ್ಕಳೊಂದಿಗೆ ನಿಮ್ಮನ್ನು ಹೋಲಿಸಿದಾಗ ನಿಮಗೆ ಇಷ್ಟವಾಯಿತೇ.. ಹಾಗಾಗಿ ಇದನ್ನು ನಿಮ್ಮ ಮಗುವಿಗೆ ಏಕೆ ಮಾಡುತ್ತೀರಿ. ವಾಸ್ತವವಾಗಿ ಒಂದು ಮಗುವನ್ನು ಇನ್ನೊಂದು ಮಗುವಿಗೆ ಹೋಲಿಸಿದರೆ ಅವರು ಕುಗ್ಗುತ್ತಾರೆ. ನಿಮ್ಮ ಮಕ್ಕಳ ಸಾಮರ್ಥ್ಯವನ್ನು ಹೋಲಿಸುವ ಮೂಲಕ ಅವರ ನಡುವೆ ದ್ವೇಷ ಸಾಧಿಸುವುದನ್ನು ತಪ್ಪಿಸಿ. 

8. ಪ್ರತಿಯೊಂದು ಮಗು ತಪ್ಪುಗಳನ್ನು  ಮಾಡಲು ಬದ್ಧನಾಗಿರುತ್ತಾನೆ. ಅದಕ್ಕಾಗಿ ಅವರನ್ನು ಕ್ಷಮಿಸಿ, ಮತ್ತು ಎಂದಿಗೂ ಅವರ ವಿರುದ್ಧ ದ್ವೇಷ ಸಾಧಿಸಬೇಡಿ. ನೀವು ಕೋಪದಲ್ಲಿ ಹೆಚ್ಚು ಅರ್ಥವಿಲ್ಲದ ವಿಷಯಗಳನ್ನು ಹೇಳಿದಂತೆ, ಅದೇ ರೀತಿ ಮಕ್ಕಳು ಕೋಪದಿಂದ ಹೇಳುವ ವಿಷಯಗಳನ್ನು ನಿರ್ಲಕ್ಷಿಸಿ. ಹೆಚ್ಚಿನ ಬಾರಿ ಇದು ಉದ್ದೇಶಪೂರ್ವಕವಾಗಿ ಅಲ್ಲದಿ್ದದರೂ, ಇದನ್ನು ಮರೆತು ಮುಂದುವರೆಯಿರಿ. 

8. ಕುಟುಂಬಗಳಲ್ಲಿ ಮಕ್ಕಳ ಹಾಗೂ ಪೋಷಕರ ಸಂಬಂಧ, ಉತ್ತಮ ಸಂವಹನ ಇರಬೇಕು.  ಈ ಘಟದಲ್ಲಿ ಪೋಷಕರು ಅನೇಕ ಘಟ್ಟಗಳಲ್ಲಿ ಸವಾಲುಗಳನ್ನು ತಾಳ್ಮೆಯಿಂದ ಎದುರಿಸಲು ಸಿಧ್ಧವಿರಬೇಕು.

9. ಸಂಬಂಧದ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಪೋಷಕರು   ಸಮಂಜಸವಾಗ ಮಿತಿಗಳನ್ನು ಗೊತ್ತುಪಡಿಸಿ, ಪ್ರಾಯದ ಮಕ್ಕಳು ತಮ್ಮ ಮಿತಿಯನ್ನು ಅರಿಯಲು ಅವಕಾಶ ಮಾಡಿಕೊಡಿ. 

10. ಆಗಾಗ ನಿಮ್ಮ ಮಕ್ಕಳಿಗೆ ಹೇಳಿ,  ನಾವು ನಿನ್ನ ಸ್ನೇಹಿತರಂತೆ, ಆತ್ಮವಿಶ್ವಾಸದಲ್ಲಿ ನಂಬಿಕೆ ಇಡು.  ನಿನ್ನೊಂದಿಗೆ ನಾವು ಇರುತ್ತೇವೆ. ನಾನು ನಿನ್ನನ್ನು ನಂಬುತ್ತೇವೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ