ಪಪ್ಪಾಯಿ ಎಲೆಯ ಜ್ಯೂಸ್ ಆರೋಗ್ಯ ಸಮಸ್ಯೆಗೆ ಪವಾಡದ ಗಿಡಮೂಲಿಕೆ

  • by

ಪಪ್ಪಾಯಿ ಎಲೆ ಜ್ಯೂಸ್ ಅಥವಾ ರಸವನ್ನು ಪ್ರಾಚೀನ ಕಾಲದಿಂದಲೂ ಸಾಂಪ್ರದಾಯಿಕ ಔಷಧಿಯಾಗಿ ಬಳಸಲಾಗುತ್ತಿದೆ. ಪಪ್ಪಾಯಿ ಎಲೆ ರಸದಿಂದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಬೆನ್ನು ನೋವು, ಅಲೋವೆರಾ , ತುಳಸಿ, ಪುದೀನಾ ಎಲೆಗಳನ್ನು ಬಳಸುತ್ತೇವೆ. ಅದೇ ರೀತಿ ಪಪ್ಪಾಯಿ ಎಲೆಯ ರಸವೂ ಉಪಯುಕ್ತವಾಗಿದೆ. ಜ್ವರವನ್ನು ಗುಣಪಡಿಸುವಲ್ಲಿ , ಉರಿಯೂತಕ್ಕೆ ಚಿಕಿತ್ಸೆ ನೀಡುವುದು. ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಕೂದಲನ್ನು ಆರೋಗ್ಯಕರವಾಗಿರಿಸಲು ಪಪ್ಪಾಯಿ ಎಲೆಯ ಜ್ಯೂಸ್ ಪ್ರಯೋಜನಕಾರಿ ಅಂತಲೇ ಹೇಳಬಹುದು.

Papaya leaves-, health benefits,ಪಪ್ಪಾಯ ಎಲೆ, ಆರೋಗ್ಯ ಪ್ರಯೋಜನ

ಕೂದಲನ್ನು ಮೃದುವಾಗಿಸಲು , ಸುಕ್ಕುಗಳನ್ನು ತಡೆಗಟ್ಟಲು , ಆರೋಗ್ಯ ಸಂಬಂಧಿತ ಕಾಯಿಲೆಗಳಲ್ಲಿ ಪಪ್ಪಾಯಿ ಬಹಳಷ್ಟು ಸಹಾಯ ಮಾಡುತ್ತದೆ. ಆದರೆ ಪಪ್ಪಾಯಿ ಎಲೆ ಕಾಯಿಲೆಗಳನ್ನು ದೂರವಿರಿಸುತ್ತೆದ. ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ರಕ್ತದಲ್ಲಿನ ಪ್ರೇಟ್ ಲೆಟ್ ಗಳ ಹೆಚ್ಚಾಗುವಲ್ಲಿ ನೆರವಾಗುತ್ತದೆ. ಪಪ್ಪಾಯಿ ಎಲೆಗಳು ಡೆಂಗ್ಯೂ , ಮಲೇರಿಯಾ, ಡಯಾಬಿಟಿಸ್ ನಂತಹ ಅನೇಕ ಪ್ರಮುಖ , ಅಪಾಯಕಾರಿ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಔಷಧಿ ಎಂದು ಸಾಬೀತಾಗಿದೆ.

ಪಪ್ಪಾಯಿ ಸೇವಿಸುವುದರಿಂದ ಹೊಟ್ಟೆಯ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಪಪ್ಪಾಯಿ ಎಲೆಗಳಲ್ಲಿ ಪಪೈನ್, ಕಿಮೊಪಾಪೆನ್, ಪ್ರೋಟಿಯೇಸ್, ಮತ್ತು ಅಮೈಲೇಸ್ ಮುಂತಾದ ಅನೇಕ ಕಿಣ್ವಗಳಿವೆ. 1 ಕಪ್ ಪಪ್ಪಾಯಿ ಎಲೆ ಜ್ಯೂಸ್ ಸೇವಿಸುವುದರಿಂದ ಜೀರ್ಣ ಕ್ರಿಯೆ ಮತ್ತು ಹೊಟ್ಟೆಯ ಗ್ಯಾಸ ಸಮಸ್ಯೆಯನ್ನು ನಿವಾರಿಸುತ್ತದೆ.

ಆಯುರ್ವೇದದ ಪ್ರಕಾರ, ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಅನೇಕ ಪ್ರಯೋಜನಗಳು ಪಡೆದುಕೊಳ್ಳಬಹುದು.
ಪಪ್ಪಾಯಿ ಎಲೆಯ ಜ್ಯೂಸ್ ಪೋಷಕಾಂಶಗಳುಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪಪ್ಪಾಯಿ ಎಲೆ ನೆರವಾಗುತ್ತದೆ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದ್ದು, ಖನಿಜ, ಟ್ಯಾನಿನ್ ಗಳು. ಅಲ್ಕಲಾಯ್ಡ್ ಗಳು ಫ್ಲೇವನಾಯ್ಡ್ ಗಳು ಉತ್ತಮ ಪ್ರಮಾಣದ ಫೈಟೊಕೆಮಿಕಲ್ ಗಳನ್ನು ಹೊಂದಿರುತ್ತದೆ. ಈ ಎಲ್ಲಾ ಅಂಶಗಳು ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಅಜೀರ್ಣ ಸಮಸ್ಯೆಯನ್ನು ಪಪ್ಪಾಯಿ ಎಲೆಗಳು ನಿವಾರಿಸುತ್ತವೆ. ಪಪ್ಪಾಯಿಯ ಮೃದುವಾಗಿರುವ ಎಲೆಗಳಿಂದ ಜ್ಯೂಸ್ ತಯಾರಿಸಿ ಸೇವಿಸಬಹುದು. ಮಲಬದ್ಧತೆ, ಹೊಟ್ಟೆ ನೋವು ಹೀಗೆ ಅನೇಕ ಕಾಯಿಲೆಗಳನ್ನು ಈ ಜ್ಯೂಸ್ ದೂರವಿರಿಸುತ್ತದೆ. ಹಸಿವನ್ನು ಹೆಚ್ಚಿಸಲು ಜೀರ್ಣಕ್ರಿಯೆ ಸರಿಯಾಗಿಡಲು ನೆರವಾಗುತ್ತದೆ.

ಹೃದ್ರೋಗ , ಪಿತ್ತಜನಕಾಂಗ, ಬೊಜ್ಜಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದರೆ ದೇಹದಲ್ಲಿರುವ ಹೆಚ್ಚುವರಿ ಕೊಲೆಸ್ಟ್ರಾಲ್ ಮಟ್ಟವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಇನ್ನು ಪಪ್ಪಾಯಿ ಎಲೆಯ ಜ್ಯೂಸ್ ಸೇವಿಸುವುದರಿಂದ ಎನರ್ಜಿ ಹೆಚ್ಚುತ್ತದೆ. ಪ್ರಾಚೀನ ಕಾಲದಿಂದಲೂ ಇದನ್ನು ಮೆಡಿಸಿನ್ ಆಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಳಕೆ ಮಾಡಲಾಗುತ್ತಿತ್ತು.

Papaya leaves-, health benefits,ಪಪ್ಪಾಯ ಎಲೆ, ಆರೋಗ್ಯ ಪ್ರಯೋಜನ

ಪಪ್ಪಾಯಿ ಎಲೆಯ ಜ್ಯೂಸ್ ಮುಖ್ಯವಾಗಿ ಡೆಂಗ್ಯೂ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ಡೆಂಗ್ಯೂ ವಿರುದ್ಧ ಹೋರಾಡಲು ಪರಿಣಾಮಕಾರಿ ಔಷಧಿ ಎಂದು ಸಾಬೀತಾಗಿದೆ. ದೇಹದಲ್ಲಿನ ದೌರ್ಬಲ್ಯ ಹೆಚ್ಚಾದಾಗ, ಅನೇಕ ತಜ್ಞರು ಪಪ್ಪಾಯಿ ಎಲೆಯ ರಸವನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ. ಈ ಮಾರಕ ರೋಗವು ಸೊಳ್ಳೆಗಳಿಂದ ಹರಡುತ್ತದೆ. ಹೆಚ್ಚಿನ ಜ್ವರ, ಚರ್ಮದಲ್ಲಿ ದದ್ದುಗಳು, ಪ್ಲೇಟ್ ಲೆಟ್ ಕಡಿಮೆಯಾಗುವುದು ನಾನಾ ರೋಗದ ಲಕ್ಷಣಗಳು ಕಂಡು ಬರುತ್ತವೆ. ಹೀಗಾಗಿ ಡೆಂಗ್ಯೂ ರೋಗಕ್ಕೆ ಇದನ್ನು ಔಷಧಿಯನ್ನಾಗಿ ಉಪಯೋಗಿಸಲಾಗುತ್ತದೆ.

ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿ
ನಿಮ್ಮ ಚರ್ಮವನ್ನು ಸುಂದರವಾಗಿರಿಸಲು ಹಾಗೂ ಆರೋಗ್ಯವಾಗಿಡಲು ನೀವು ಬಯಸಿದರೆ, ಪಪ್ಪಾಯಿ ಎಲೆಯ ರಸ ಕುಡಿಯಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ