ಮನೆಯಲ್ಲೇ ಮಾಡಿ ನೋಡಿ ‘ಪನ್ನೀರ್ ನೂಡಲ್ಸ್’..!

  • by

ಲಾಕ್ ಡೌನ್ ನಿಂದಾಗಿ ಎಲ್ಲರೂ ಮನೆಯಲ್ಲಿರೋದು ಅನಿರ್ವಾಯವಾಗಿದೆ. ಇಂಥ ಸಮಯದಲ್ಲಿ ಮನೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಸವಿಯಬಹುದು. ಅಂತಹ ಪಾಕ ವಿಧಾನದಲ್ಲಿ, ಫ್ರೈಡ್ ಪನೀರ್ ನೂಡಲ್ಸ್ ಕೂಡಾ ಒಂದು. ನಿಮಗಾಗಿ ಫ್ರೈಡ್ ಪನೀರ್ ನೂಡಲ್ಸ್ ತಯಾರಿಸುವ ವಿಧಾನದ ಬಗ್ಗೆ ನಾವು ನಿಮಗೆ ತಿಳಿಸಿದ್ದೇವೆ.


ತಯಾರಿಸಲು ಸಾಮಾಗ್ರಿಗಳು

ಬೇಯಿಸಿದ ನೂಡಲ್ಸ್ 1 ಕಪ್
1 ಈರುಳ್ಳಿ (ಕತ್ತರಿಸಿದ್ದು)
ಫ್ರೆಂಚ್ ಬೀನ್ಸ್ (8ರಿಂದ 10)
ಎಲೆಕೋಸುವ ಕತ್ತರಿಸಿದ್ದು ( 50 ಗ್ರಾಂ)
ಕ್ಯಾಪ್ಸಿಕಪಂ ಕಟ್ ಮಾಡಿದ್ದು ( 1 ರಿಂದ 2 ಕಪ್)
ಅರ್ಧ ಕಪ್ ಕ್ಯಾರೇಟ್
ಶುಂಠಿ ಪೇಸ್ಟ್ ಹಾಗೂ ಕೊತ್ತಂಬರಿ ಸೊಪ್ಪು
ಎಣ್ಣೆ, ಹಾಗೂ ನಿಂಬೆ ರಸ (ರುಚಿಗೆ ಅನುಗುಣವಾಗಿ)
1 ಲವಂಗ ಹಾಗೂ ಬೆಳ್ಳುಳ್ಳಿ
ಪನೀರ್ 50 ಗ್ರಾಂ
ಉಪ್ಪು, ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ. ಹಸಿ ಮೆಣಸಿನಕಾಯಿ ಮತ್ತು ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ನಂತರ ಕ್ಯಾರೆಟ್, ಕೋಸುಗಡ್ಡೆ, ಉಪ್ಪು ಹಾಕಿ ಟೊಮೊಟೋ ಹಾಕಿ 1 ನಿಮಿಷ ಬೇಯಿಸಬೇಕು. ಇದಕ್ಕೆ ನೂಡಲ್ಸ್ ಮತ್ತು ಚೀಸ್ ಸೇರಿಸಿ. ಕ್ಯಾರೆಟ್ , ಕೋಸುಗಡ್ಡೆ ಮತ್ತು ಕತ್ತರಿಸಿದ ಬೀನ್ಸ್ ಕೂಡಾ ಸೇರಿಸಬೇಕು. 1 ಟೀ ಸ್ಪೂನ್ ಲಿಂಬೆ ರಸ ಸೇರಿಸಿ ಸರ್ವ್ ಮಾಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ