ಮುಖದ ಹೊಳಪು ಹೆಚ್ಚಿಸಲು ಆಕ್ಸಿಜನ್ ಫೇಶಿಯಲ್..!

  • by

ಆಕ್ಸಿಜನ್ ಇಲ್ಲದೇ ನಮ್ಮ ದೇಹ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಪ್ರಕೃತಿಯಲ್ಲಿನ ಧೂಳು ನಿಮ್ಮ ತ್ವಚೆಯನ್ನು ಹಾಳು ಮಾಡಬಲ್ಲದ್ದು, ಧೂಳು, ಕಲುಷಿತ ವಾತಾವರಣದಿಂದ ಚರ್ಮಕ್ಕೆ ಪರಿಣಾಮ ಉಂಟು ಮಾಡುತ್ತದೆ. ಅಲ್ಲದೇ  ಮುಖದ ಅಂದವನ್ನು ಕೆಡಿಸುವುದಲ್ಲದೇ, ವಯಸ್ಸಾಗುವಿಕೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಬಹುದು. ತ್ವಚೆಗೆ ಆಕ್ಸಿಜನ್ ಕಡಿಮೆಯಾದಾಗ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ರೆ ಇದಲ್ಲದಕ್ಕೂ ಮುಕ್ತಿ ನೀಡಬಲ್ಲದ್ದು, ಆಕ್ಸಿಜನ್ ಫೇಶಿಯಲ್, ಇತ್ತೀಚಿನ ದಿನಗಳಲ್ಲಿ ಆಕ್ಸಿಜನ್ ಫೇಶಿಯಲ್ ಹೆಚ್ಚು ಟ್ರೆಂಡ್ ಆಗುತ್ತಿದೆ. 


ಆಕ್ಸಿಜನ್ ಫೇಶಿಯಲ್ , ಆರೋಗ್ಯ ಪ್ರಯೋಜನಗಳು,

Oxygen Facial, benefits

ಆಕ್ಸಿಜನ್ ಫೇಶಿಯಲ್ ಎಂದರೇನು..?
ಸೂಕ್ಷ್ಮ ತ್ವಚೆ ಬಹು ಬೇಗ ಹಾನಿಗೊಳಗಾಗುತ್ತದೆ. ಕೆಲವು ಚಿಕ್ಕ ಪುಟ್ಟ ಕಾರಣಗಳಿಗೂ ತ್ವಚೆ ಕೆಂಪಗಾಗುವುದು ಅಥವಾ ಅಲರ್ಜಿ ಯಂತಹ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.ಇಂತಹ ತ್ವಚೆಗೆ ಆಕ್ಸಿಜನ್ ಫೇಶಿಯಲ್ ಪರಿಹಾರ  ನೀಡಬಲ್ಲದ್ದು. ಆಕ್ಸಿಜನ್ ಫೇಶಿಯಲ್ ತುಂಬಾ ತೇವಾಂಶದಿಂದ ಕೂಡಿದ್ದು. ಚರ್ಮದ ಡೆಡ್ ಕೋಶಗಳನ್ನು ತೆಗೆದುಹಾಕುತ್ತದೆ.

ಈ ಫೇಶಿಯಲ್ ತ್ವಚೆಗೆ ಪೋಷಣೆ ನೀಡುವುದಲ್ಲದೇ, ಕೋಲೇಜನ್ ಹೆಚ್ಚಿಸುತ್ತದೆ. ಇದ್ರಿಂದ ಮುಖ ಹೊಳಪಾಗಿ ಹಾಗೂ ಫ್ರೆಶ್ ಆಗಿ ಕಾಣಿಸುತ್ತದೆ. 

ಆಕ್ಸಿಜನ್ ಫೇಶಿಯಲ್ ನಿಂದಾಗುವ ಪ್ರಯೋಜನಗಳು.!

ತ್ವಚೆಗೆ ಹೈಡ್ರೇಡ್ ಮಾಡುತ್ತದೆ.!

ಈ ಫೇಶಿಯಲ್ ಮುಖ್ಯವಾಗಿ ತ್ವಚೆಗೆ ಹೈಡ್ರೇಡ್ ಮಾಡುತ್ತದೆ. ವಯಸ್ಸಾಗುವಿಕೆಯನ್ನು ಇದು ತಡೆಗಟ್ಟುತ್ತದೆ. 

ಮಾಯಿಶ್ಚೈರಸರ್ ಒದಗಿಸುತ್ತದೆ. ಆಕ್ಸಿಜನ್ ಫೇಶಿಯಲ್ ಚರ್ಮದ ತೇವಾಂಶವನ್ನು ಹಾಗೂ ಪಿಎಚ್ ಮಟ್ಟವನ್ನು ಹೆಚ್ಚಿಸುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. 


ಆಕ್ಸಿಜನ್ ಫೇಶಿಯಲ್ , ಆರೋಗ್ಯ ಪ್ರಯೋಜನಗಳು,

Oxygen Facial, benefits

ಆಕ್ಸಿಜನ್ ಫೇಶಿಯಲ್  ಹೊಳಪು ಹೆಚ್ಚಿಸುತ್ತದೆ.  

ಚರ್ಮದ ಕೊಳೆಯನ್ನು ತೆಗೆದುಹಾಕಲು ಆಕ್ಸಿಜನ್ ಫೇಶಿಯಲ್ ನೆರವಾಗುತ್ತದೆ. ಚರ್ಮದ ಮೇಲಿನ ಕೊಳೆ ತೆಗೆದು ಹಾಕಿ , ಹೊಳೆಯುವಂತೆ ಮಾಡುತ್ತದೆ. ಚರ್ಮದ ಡೆಡ್ ಕೋಶಗಳನ್ನು ತೆಗೆದುಹಾಕುತ್ತದೆ. ಚರ್ಮದ ಶುಷ್ಕತೆಯನ್ನು ನಿವಾರಿಸುವುದಲ್ಲದೇ,  ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಚರ್ಮದ ಬಿಗಿತ ಕಡಿಮೆಗೊಳಿಸುತ್ತದೆ.

ಮೊಡವೆಗಳನ್ನು ತೆಗೆದುಹಾಕುತ್ತದೆ: 

ಆಕ್ಸಿಜನ್ ಫೇಶಿಯಲ್ ಅದ್ಫೂತ ಪ್ರಯೋಜನಗಳನ್ನು ನೋಡಬಹುದು. ರಂಧ್ರಗಳಲ್ಲಿ ಕೊಳೆಯಿಂದ ಇದು ಮೊಡವೆ ಸಮಸ್ಯೆಯನ್ನು ತಡೆಗಟ್ಟುತ್ತದೆ. ಆಮ್ಲಜನಕ ಮುಖದ ರಂಧ್ರಗಳನ್ನು ತೆರೆಯುತ್ತದೆ. ಆಕ್ಸಿಜನ್ ಫೇಶಿಯಲ್, ನಿಮ್ಮ ಮುಖಕ್ಕೆ ರಿಲ್ಯಾಕ್ಸ್ ನೀಡುತ್ತದೆ. 

ಆಕ್ಸಿಜನ್ ಫೇಶಿಯಲ್ ಹೇಗೆ ಕೆಲಸ ಮಾಡುತ್ತದೆ?

1.ಲಘು ಚಿಕಿತ್ಸೆ 

ಚರ್ಮಕ್ಕೆ ಆಮ್ಲಜನಕ ಹೋಗುವಂತೆ ಮಾಡಲು ಲಘು ಚಿಕಿತ್ಸೆ ನೀಡಲಾಗುತ್ತದೆ. ಲೈಟ್ ಬಳಕೆ ಮಾಡಿ, ಯಂತ್ರವನ್ನು ತ್ವಚೆಯ ಸುತ್ತ ತಿರುಗಿಸಲಾಗುತ್ತದೆ. ಇದು ಚರ್ಮವನ್ನು ಮೃದು ಗೊಳಿಸುವುದಲ್ಲದೇ, ರಿಲ್ಸಾಕ್ಸ್  ನೀಡುತ್ತದೆ. 

2 ಸೀರಮ್ ಚಿಕಿತ್ಸೆ 

ಇದು ಅತ್ಯಂತ ಮುಖ್ಯವಾದ ಚಿಕಿತ್ಸೆಯಾಗಿದೆ. ಸೀರಮ್ ಚಿಕಿತ್ಸೆಯಿಂದ ಜೀವಸತ್ವಗಳು. ಖನಿಜಗಳು ಹಾಗೂ ಉತ್ಮರ್ಷಣ ನಿರೋಧಕಗಳು ದೊರೆಯುತ್ತವೆ. ಇದು ಚರ್ಮದ ಹೊಳಪು ಹೆಚ್ಚಿಸುತ್ತದೆ. ಮತ್ತು ಸುಕ್ಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. 

3. ಮಸಾಜ್ 

ಮೂರನೇ ವಿಧಾನವೇ ಮಸಾಜ್… ಚರ್ಮವನ್ನು ಪೋಷಿಸಲು ಈ ಪೇಶಿಯಲ್ ದೀರ್ಘಕಾಲದವರೆಗೆ ಉಳಿಯುವಂತೆ ಮಾಡಲು ಲೋಷನ್ . ಕ್ರೀಮ್ ಇತ್ಯಾದಿಗಳಿಂದ ಚರ್ಮವನ್ನು ಮಸಾಜ್ ಮಾಡಲಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ