ದೇಹಕ್ಕೆ ಆಕ್ಸಿಜನ್ ನೀಡುವ ಆಹಾರಗಳು..! -(Here are the oxygen boosting foods)

  • by

ಇತ್ತೀಚೆಗೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ದೇಹಕ್ಕೆ ಆಮ್ಲಜನಕ ಅಥವಾ ತಾಜಾ ಗಾಳಿ ಸೀಗಬೇಕು. ಇದ್ರಿಂದ ಕಲುಷಿತ ಗಾಳಿಯನ್ನು ಹೋಗಲಾಡಿಸಿ ತಾಜಾ ಗಾಳಿಯನ್ನು ಪಡೆಯುದೆಂದರೆ ಸುಲಭದ ಮಾತಲ್ಲ. ಹೀಗಾಗಿ ಈ ಆಹಾರಗಳು ನಿಮಗೆ ಆಮ್ಲಜನಕವನ್ನು ಸಹ ನೀಡಬಲ್ಲವು.


oxygen-boosting-food ಆಕ್ಸಿಜನ್ ಭರಿತ ಆಹಾರಗಳು

ಆಕ್ಸಿಜನ್ ಸಮೃದ್ಧ ಆಹಾರ ಎಂದರೇನು..?

ಜರ್ಮನ್ ತಜ್ಞರೊಬ್ಬರು ನಡೆಸಿದ ಸಂಶೋಧನೆ ಪ್ರಕಾರ, ದೇಹಕ್ಕೆ ಆಮ್ಲಜನಕ ದೊರೆಯಬೇಕು. ಆಮ್ಲಜನಕ ಹೊಂದಿರುವ ಆಹಾರಗಳನ್ನು ಆಮ್ಲಜನಕ ಭರಿತ ಆಹಾರಗಳೆಂದು ಕರೆಯುತ್ತಾರೆ. ಆಮ್ಲಜನಕಯುಕ್ತ ಆಹಾರಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಪ್ರತಿ ದಿನ ಆಮ್ವು ಜನಕ ಭರಿತ ಆಹಾರ ಸೇವಿಸಬೇಕು

1.ಹಣ್ಣುಗಳಲ್ಲಿ ಸಮೃದ್ಧವಾದ ಜೀವಸತ್ವಗಳು ಹಾಗೂ ಖನಿಜಗಳ ಜತೆಗೆ ಅವು ಕ್ಷಾರೀಯಾ ಪದಾರ್ಥಗಳನ್ನು ಹೊಂದಿರುತ್ತದೆ. ಇದರಿಂದಾಗಿ ಕೆಲವು ಹಣ್ಣುಗಳು ನಿಮ್ಮ ದೇಹಕ್ಕೆ ಆಮ್ಲಜನಕ ನೀಡುತ್ತವೆ.ಮಾಗಿದ ಅಥವಾ ಕಚ್ಚಾ ಬಾಳೆಹಣ್ಣುಗಳಲ್ಲಿ ಕ್ಷಾರವು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಈ ಹಣ್ಣು ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
2. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿರುವದರಿಂದ ರಕ್ತ ಕಣಗಳಿಗೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತವೆ.
3. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಹೆಚ್ಚಾಗಿದ್ದು, ಇದು ದೇಹಕ್ಕೆ ಶಕ್ತಿ ನೀಡುವುದಲ್ಲದೇ ಮತ್ತು ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ಅದೇ ರೀತಿ 4.ನಿಂಬೆಯಂತಹ ಆಹಾರವು ದೇಹದಲ್ಲಿ ಆಮ್ಲಜನಕದ ಪೂರೈಕೆಯ ಮಟ್ಟವನ್ನು ಹೆಚ್ಚಿಸುತ್ತದೆ.
5.ದ್ರಾಕ್ಷಿ ಹಣ್ಣಿನಲ್ಲಿ ಉತ್ತಮವಾದ ಉತ್ಕರ್ಷಣಾ ನಿರೋಧಕಗಳು ಇದ್ದು, ಇದು ದೇಹದ ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
6.ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ಬಹುತೇಕ ಎಲ್ಲಾ ರೋಗಿಗಳಿಗೆ ಪಪ್ಪಾಯಿ ಹಣ್ಣು ತಿನ್ನುವಂತೆ 7.ಸೂಚಿಸಲಾಗುತ್ತದೆ. ಇದಕ್ಕೆ ಒಂದು ಕಾರಣವೆಂದರೆ, ಈ ಹಣ್ಣಿನ ಪಿಹೆಚ್ ಮೌಲ್ಯವು 8.5ಕ್ಕಿಂತ ಹೆಚ್ಚಿದೆ. ಈ ಕಾರಣಕ್ಕಾಗಿ. ಇದು ರಕ್ತ ಕಣಗಳಲ್ಲಿನ ಆಮ್ಲಜನಕವನ್ನು ಹೆಚ್ಚಿಸುವ ಮೂಲಕ ಆರೋಗ್ಯಕರಾವಿಗಿಸುತ್ತದೆ
8.ಕಲ್ಲಂಗಡಿ ಹಣ್ಣು ಉತ್ತಮ ಪ್ರಮಾಣದ ಕ್ಷಾರವನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ ದೇಹಕ್ಕೆ ಇದು ಪಿಹೆಚ್ ಮಟ್ಟವು 8ಕ್ಕಿಂತ ಹೆಚ್ಚಿರುತ್ತದೆ.


oxygen-boosting-food ಆಕ್ಸಿಜನ್ ಭರಿತ ಆಹಾರಗಳು

ಆಮ್ಲಜನಕ ಹೆಚ್ಚಿಸುವ ತರಕಾರಿಗಳು..!

ಕ್ಷಾರವು ಹಣ್ಣುಗಳಲ್ಲಿ ಮಾತ್ರವಲ್ಲ , ತಾಜಾ ತರಕಾರಿಗಳಲ್ಲಿಯೂ ಇದೆ. ಈ ತರಕಾರಿಗಳನ್ನು ಪ್ರತಿ ದಿನ ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಆಮ್ಲಜನಕದ ಕೊರತೆ ಉಂಟಾಗುವುದಿಲ್ಲ.ಬೆಳ್ಳುಳ್ಳಿಯಲ್ಲಿ ಉತ್ತಮ ಪ್ರಮಾಣದ ಕ್ಷಾರವಿದ್ದು, ಏಕೆಂದರೆ ಅದರ ಪಿಹೆಚ್ ಮೌಲ್ಯವು 8ಕ್ಕಿಂತ ಹೆಚ್ಚಿದೆ. ಈ ಕಾರಣಕ್ಕಾಗಿ, ಪ್ರತಿ ದಿನ ಬೆಳಿಗ್ಗೆ ಬೆಳ್ಳುಳ್ಳಿ ಮೊಗ್ಗು ತಿನ್ನಲು ಸಲಹೆ ನೀಡಲಾಗುತ್ತದೆ. ಸೌತೆಕಾಯಿಯಲ್ಲಿ ಉತ್ತಮ ಪ್ರಮಾಣದ ನೀರಿನ ಅಂಶವಿದೆ. ಈ ಕಾರಣದಿಂದಾಗಿ ಇದು ದೇಹದಲ್ಲಿ ಉತ್ತಮ ಪ್ರಮಾಣದ ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಎಲೆಕೋಸು ಅನೇಕ ಜೀವಸತ್ವ ಹಾಗೂ ಉತ್ಕರ್ಷಣಾ ನಿರೋಧಕಗಳನ್ನು ಹೊಂದಿರುತ್ತದೆ. ದೇಹಕ್ಕೆ ಆಮ್ಲಜನಕ ಅಂಶವನ್ನು ಒದಗಿಸುತ್ತದೆ.
ಸಿಹಿ ಆಲುಗಡ್ಡೆ ಸಾಕಷ್ಟು ಖನಿಜಗಳ ಜತೆಗೆ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಅನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಆಮ್ಲಜನಕ ಮಟ್ಟವು ಹೆಚ್ಚಾಗುತ್ತದೆ. ಕ್ಯಾರೆಟ್ ತರಕಾರಿಯೂ ಸಹ ದೇಹಕ್ಕೆ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪು ಆಮ್ಲಜನಕ ಹೆಚ್ಚಿಸಲು ನೆರವಾಗುತ್ತದೆ. ಪಾಲಕ್ ಸೊಪ್ಪಿನಲ್ಲಿ 5.1 ಮತ್ತು 5.7 ರ ನಡುವೆ ಪಿಹೆಚ್ ಮಟ್ಟವನ್ನು ಹೊಂದಿದೆ.


oxygen-boosting-food ಆಕ್ಸಿಜನ್ ಭರಿತ ಆಹಾರಗಳು

ಆಮ್ಲಜನಕ ಸಮೃದ್ಧವಿರುವ ಇತರ ಮೂಲಗಳು

ಹಣ್ಣುಗಳು ಹಾಗೂ ತರಕಾರಿಗಳನ್ನು ಹೊರತುಪಡಿಸಿ ನೀವು ಇತರ ಅನೇಕ ಆಹಾರಗಳಿಂದ ಆಮ್ಲಜನಕವನ್ನು ಪಡೆಯಬಹುದು. ಆದ್ದರಿಂದ ನಿಯಮಿತವಾಗಿ ಇವುಗಳನ್ನು ಸಹ ಸೇವಿಸುವುದು ಉತ್ತಮ.

ಗ್ರೀನ್ ಟೀ

ಕಾಫಿಯಲ್ಲಿ ಪಿಹೆಚ್ ಮಟ್ಟ 5ರಷ್ಟಿದ್ದರೆ, ಗ್ರೀನ್ ಟೀ ಯಲ್ಲಿ ಪಿಹೆಚ್ ಮಟ್ಟ 7ಕ್ಕಿಂತ ಹೆಚ್ಚಿದೆ. ಆದ್ದರಿಂದ ಇದು ಉತ್ತಮ ಪ್ರಮಾಣದ ಕ್ಷಾರವನ್ನು ಹೊಂದಿರುತ್ತದೆ.

ಮೊಳಕೆಯೊಡದ ಬೀಜಗಳು

ಮೊಳಕೆಯೊಡದ ಬೀಜಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಅಂತಲೇ ಹೇಳಬಹುದು. ಇದನ್ನು ದಿನ ನಿತ್ಯ ಸೇವಿಸುವುದರಿಂದ ಆಮ್ಲಜಕನವು ಹೆಚ್ಚಾಗುತ್ತದೆ. ಏಕೆಂದರೆ ಮೊಳಕೆ ಕಾಳುಗಳಲ್ಲಿ ಉತ್ತಮ ಪ್ರಮಾಣದ ಕ್ಲೋರೋಫಿಲ್ ಹೊಂದಿರುತ್ತದೆ. ಇದು ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸಲು ಉತ್ತಮ ಮೂಲವಾಗಿದೆ.

ಅಗಸೆ ಬೀಜಗಳು

ಅಗಸೆ ಬೀಜಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಮತ್ತು ಕೊಬ್ಬಿನಾಮ್ಲಗಳಿವೆ. ಇದರ ಜೊತೆಗೆ ಸಾಕಷ್ಟು ಫೈಬರ್ ಕೂಡಾ ಇದ್ದು, ಇದು ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆಮ್ಲಜನಕ ಹೆಚ್ಚಿಸುವ ಆಹಾರಗಳ ಪ್ರಯೋಜನಗಳು..!

ಆಮ್ಲಜನಕ ಹೆಚ್ಚಿಸುವ ಆಹಾರಗಳನ್ನು ಸೇವಿಸಿದರೆ, ನಿಮ್ಮ ದೇಹದ ಆಮ್ಲಜನಕ ಮಟ್ಟ ಹೆಚ್ಚುತ್ತದೆ. ಇದಲ್ಲದೇ ಆಮ್ಲಜನಕ ಸಮೃದ್ಧ ಆಹಾರದಿಂದ ದೇಹದ ಕೊಬ್ಬು ಹೆಚ್ಚಾಗುವುದಿಲ್ಲ. ಆಮ್ಲಜನಕ ಯುಕ್ತ ಆಹಾರ ದೇಹವನ್ನು ರಕ್ಷಿಸುತ್ತದೆ. ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮುಖದಲ್ಲಿ ಮೊಡವೆಗಳು ಹಾಗೂ ಗುಳ್ಳೆಗಳು ಹಾಗೇ ಉಳಿಯುತ್ತವೆ. ಆದರೆ ಆಮ್ಲಜನಕ ಸಮೃದ್ದವಿರುವ ಆಹಾರ ವನ್ನು ಸೇವಿಸಿದರೆ ನಿಮ್ಮ ಮುಖದ ಸಮಸ್ಯೆಯನ್ನು ಹೋಗಲಾಡಿಸಬಹುದು.

ಆಮ್ಲಜನಕ ಭರಿತ ಆಹಾರ ಸೇವಿಸುವ ಮೂಲಕ ದೇಹದಲ್ಲಿನ ಶಕ್ತಿಯನ್ನು ಕಾಪಾಡಿಕೊಳ್ಳಬಹುದು. ಯಾವುದೇ ಆಯಾಸ ನಿಮ್ಮನ್ನು ಕಾಡುವುದಿಲ್ಲ. ಸ್ನಾಯುಗಳಲ್ಲಿ ನೋವು ಕಡಿಮೆಯಾಗುತ್ತದೆ. ಆಗಾಗ್ಗೆ ವಾಯು ಸಮಸ್ಯೆ ಉಂಟಾಗುವುದಿಲ್ಲ. ಅಂದರೆ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಂದ ದೂರವಿರಬಹುದು. ಹೀಗೆ ಆಹಾರದಲ್ಲಿ ಆಮ್ಲಜನಕ ಹೆಚ್ಚಿಸುವ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ಸೇವಿಸಬಹುದಾಗಿದೆ. ಸಲಾಡ್, ಪಲ್ಯಾ ರೂಪದಲ್ಲಿ ತರಕಾರಿಗಳನ್ನು ಸೇವಿಸಬಹುದು. ಜಂಕ್ ಫುಡ್ಸ್ ತಿನ್ನುವುದಕ್ಕಿಂತಲೂ, ಆರೋಗ್ಯ ಹೆಚ್ಚಿಸುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ