ಸಾವಯವ ಆಹಾರ ಸೇವಿಸಿ, ಆರೋಗ್ಯಕರ ಜೀವನ ಪಡೆಯಿರಿ..!

  • by

ಸಮಯದ ಜತೆ ಜನರ ಜೀವನಶೈಲಿಯೂ ಬದಲಾಗುತ್ತಿದೆ. ಕೆಲಸದ ಒತ್ತಡ, ಸಮಯದ ಅಭಾವದ ಮಧ್ಯೆ ಅನೇಕ ಜನರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಆದರೆ ಕೆಲಸದ ಒತ್ತಡದ ಮಧ್ಯ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದೆಂದರೆ ಅಸಾಧ್ಯವಾದುದೇನಲ್ಲ. ನಿಮ್ಮ ದೇಹವನ್ನು ಆರೋಗ್ಯವಾಗಿಡಲು ನೀವು ಬಯಸುವಿರಾದರೆ, ಸಾವಯುವ ಆಹಾರ ಪದ್ಧತಿಯ ಕಡೆಗೆ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ಸಾವಯುವ ಆಹಾರ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಆರ್ಗನಿಕ್ ಆಹಾರ ಪದ್ಧತಿಯನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸುವುದರಿಂದ ಅಸಂಖ್ಯಾತ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಪೌಷ್ಟಿಕ ತಜ್ಞರು ಕೂಡಾ ಸಾವಯವ ಆಹಾರ ಕ್ರಮ ಅನುಸರಿಸುವಂತೆ ಸಲಹೆ ನೀಡುತ್ತಾರೆ. ಹಾಗಾದ್ರೆ ಆರ್ಗನಿಕ್ ಆಹಾರ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ. ಇಲ್ಲಿದೆ ಡೀಟೆಲ್ಸ್


ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು

ಗದ್ದೆಗಳಲ್ಲಿ ಬೆಳೆದ ಹಣ್ಣುಗಳು ಹಾಗೂ ತರಕಾರಿಗಳ ಇಳುವರಿಗಳಲ್ಲಿ ಯಾವುದೇ ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಈ ಹಣ್ಣುಗಳು ಮತ್ತು ತರಕಾರಿಗಳು ಕೊಯ್ಲು ಮಾಡುವ ಸಮಯದಲ್ಲಿ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸುವುದಿಲ್ಲ. ಹಾಗಾಗಿ ಸಾವಯವ ಆಹಾರಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಗರ್ಭಿಣಿ ಮಹಿಳೆಯರಿಗೆ ಹಾಗೂ ವಯಸ್ಸಾದವರಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

ನೀವು ಆರ್ಗನಿಕ್ ಫುಡ್ ನ್ನು ಸೇವಿಸಲು ಪ್ರಾರಂಭ ಮಾಡಿದಾಗ, ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ ಹೆಚ್ಚಾಗುತ್ತದೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ವೈರಸ್ ಹಾಗೂ ಬ್ಯಾಕ್ಟೇರಿಯಾ ಸೋಂಕನ್ನು ಕೊಲ್ಲುತ್ತದೆ. ಇದರ ಮೂಲಕ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

ನಮ್ಮ ಪರಿಸರಕ್ಕೆ ಸಹಾಯ

ಸಾವಯವ ಉತ್ಪನ್ನಗಳು ಪರಿಸರಕ್ಕೆ ಸ್ನೇಹಿಯಾಗಿವೆ. ಸಾವಯವ ಕೃಷಿ ನಮ್ಮ ಪರಿಸರ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ವನ್ನು ಉಂಟು ಮಾಡುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ನಾವು ತಿನ್ನುವ ಆಹಾರವು ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮಣ್ಣಿನ ಫಲವತ್ತತೆ ಕಾಪಾಡಲು ನೆರವಾಗುತ್ತದೆ.

ರೈತರಿಗೂ ಸಹಕಾರಿ

ನೀವು ಸಾವಯವ ಆಹಾರವನ್ನು ನೇರವಾಗಿ ರೈತರಿಂದ ತೆಗೆದುಕೊಂಡರೆ, ಸಾಕಷ್ಟು ಲಾಭಗಳನ್ನು ಪಡೆಯಬಹುದಾಗಿದೆ. ನೀವು ಮಾರುಕಟ್ಟೆಯಿಂದ ಪಡೆಯುವ ಬೆಲೆಗಿಂತ ಕಡಿಮೆ ಬೆಲೆಗೆ ತಾಜಾ ಉತ್ಪನ್ನಗಳನ್ನು ಪಡೆಯಬಹುದು. ಎರಡನೇಯದಾಗಿ, ಇದು ರೈತರಿಗೂ ನೇರವಾಗಿ ಪ್ರಯೋಜನ ದೊರೆಯುತ್ತದೆ. ನೇರವಾಗಿ ರೈತರಿಂದ ಹಣ್ಣು ಹಾಗೂ ತರಕಾರಿ ಖರೀದಿ ಮಾಡುವುದರಿಂದ ರೈತನ ಲಾಭಾಂಶ ಹೆಚ್ಚಾಗುತ್ತದೆ. ನೇರ ಮಾರಾಟದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿರುವುದಿಲ್ಲ.


ಸಾವಯವ ಆಹಾರಗಳು ರುಚಿಯಲ್ಲಿ ಉತ್ತಮವಾಗಿವೆ

ನೀವು ಸೇವಿಸುವ ಆಹಾರದ ಗುಣಮಟ್ಟ ಹಾಗೂ ರುಚಿಯಲ್ಲಿ ಕಡಿಮೆಯಾಗಿರುತ್ತದೆ. ಏಕೆಂದರೆ ಎಲ್ಲಾ ಕೀಟನಾಶಗಳನ್ನು ಬಳಸಿ ಇದನ್ನು ಬೆಳೆಯಲಾಗುತ್ತದೆ. ಆದರೆ ಸಾವಯವ ಆಹಾರದಲ್ಲಿ ಯಾವುದೇ ಕೀಟನಾಶಕವನ್ನು ಬಳಸದೇ ಬೆಳೆಯಲಾಗುತ್ತದೆ. ಸಾಂಪ್ರದಾಯಿಕ ವಿಧಾನದ ಪ್ರಕಾರ ಉತ್ಪಾದಿಸಲಾಗುತ್ತದೆ. ಹೀಗಾಗಿ ಆರ್ಗನಿಕ್ ಆಹಾರಗಳು ಆರೋಗ್ಯಕರ ಫಲಿತಾಂಶದ ಜತೆಗೆ ರುಚಿ ಹೆಚ್ಚಿಸುತ್ತವೆ.

ನೈಸರ್ಗಿಕವಾಗಿ ತಾಜಾವಾಗಿವೆ

ಸಾವಯವ ಆಹಾರಗಳು ನಮ್ಮ ದೇಹಕ್ಕೆ ಒಳ್ಳೆಯದು. ಏಕೆಂದರೆ ಅವುಗಳಲ್ಲಿ ರಾಸಾಯನಿಕ ಮತ್ತು ಕೃತಕ ಸುವಾಸನೆಗಳು ಇಲ್ಲದೇ ಇರುವುದರಿಂದ ನೈಸರ್ಗಿಕವಾಗಿ ತಾಜಾತನದಿಂದ ಕೂಡಿರುತ್ತವೆ. ಇವು ಬಹಳ ದಿನಗಳವರೆಗೆ ಉಪಯೋಗಿಸಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ.

ಸಂಸ್ಕರಿಸಿದ ಆಹಾರ ಹಾಗೂ ಸಾವಯವ ಆಹಾರದ ಮಧ್ಯದ ವ್ಯತ್ಯಾಸವೆಂದರೆ ಸಾವಯವ ಆಹಾರವು ನೈಸರ್ಗಿಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪ್ರತಿರಕ್ಷೆಯನ್ನು ಹೆಚ್ಚಿಸುತ್ತದೆ. ದೇಹದ ಕೊಬ್ಬು ಹೆಚ್ಚಾಗುವುದಿಲ್ಲ. ನಾವು ಅನೇಕ ರೋಗಗಳಿಂದ ಮುಕ್ತರಾಗುತ್ತೇವೆ. ಈ ಆಹಾರ ಪದಾರ್ಥಗಳು ದೀರ್ಘಕಾಲ ಸುರಕ್ಷಿತವಾಗಿರುತ್ತವೆ. ಮತ್ತು ಸುವಾಸನೆ ಜತೆಗೆ ತಾಜಾ ಕಾಪಾಡಿಕೊಂಡಿರುತ್ತವೆ.

ಸಾವಯವ ಆಹಾರ ಎಲ್ಲಿಂದ ಪಡೆಯಬಹುದು?

ನಿಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಆರ್ಗನಿಕ್ ಆಹಾರದ ಬಗ್ಗೆ ಪರಿಶೀಲಿಸಿ. Organicfacts.net.in ಹಾಗೂ organicshop.in ಇತ್ಯಾದಿಗಳಲ್ಲಿ ನೀವು ದೇಶದ ಎಲ್ಲಾ ಸಾವಯವ ಆಹಾರ ಮಳಿಗೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಅಲ್ಲದೇ, ಬಿಗ್ ಬಜಾರ್, ಸ್ಪೆನ್ಸರ್, ರಿಲಯನ್ಸ್ , ಹೈಪರ್ ಸಿಟಿ ಮುಂತಾದ ಅಂಗಡಿಗಳಲ್ಲಿ ಸಾವಯವ ಆಹಾರ ಲಭ್ಯವಿರುತ್ತದೆ.

ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನಿಮಗೆ ಬೇಕಾದಷ್ಟು ವಸ್ತುಗಳನ್ನು ಖರೀದಿಸಿ ಅದನ್ನು ಸಂಗ್ರಹಿಸಬೇಡಿ. ಸಾವಯವ ಆಹಾರಗಳನ್ನು ಬೆಳೆಯುವ ರೈತರಿಂದ ನೇರವಾಗಿ ಖರೀದಿಸಲು ಪ್ರಯತ್ನಿಸಿ. ನೀವು ಅಂತರ್ಜಾಲದಲ್ಲೂ ಕಡಿಮೆ ಬೆಲೆಯ ಸಾವಯವ ಆಹಾರಗಳನ್ನು ಖರೀದಿಸಬಹುದು.
ನಿಮ್ಮ ಮನೆಯ ಹಿತ್ತಲಿನಲ್ಲಿ ತೋಟಗಾರಿಕೆ ಮಾಡಬಹುದು.ನಿಮ್ಮ ಮನೆಯಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಬಹುದು. ಇದು ಪರಿಸರಕ್ಕೆ ಸ್ನೇಹಿಯಾಗಿದ್ದು, ದುಬಾರಿ ರಸಗೊಬ್ಬರ ಹಾಗೂ ಕೀಟನಾಶಗಳ ಅಗತ್ಯವಿರುವುದಿಲ್ಲ. ನಿಮ್ಮ ಮನೆಯ ಉದ್ಯಾನದ ಸ್ವಲ್ಪ ಜಾಗದಲ್ಲಿ ಸಾವಯವ ಕೃಷಿ ಮಾಡಬಹುದು.

ಆರ್ಗನಿಕ್ ಫುಡ್ ಗಳ ಬ್ರ್ಯಾಂಡ್ ಗಳು
ಸಾವಯವ ಭಾರತ
ಶುದ್ಧ ಮತ್ತು ಖಚಿತ
ಫ್ಯಾಬ್ ಇಂಡಿಯಾ
ನವದನ್ಯ
24 ಮಂತ್ರ
ಗ್ರೀನ್ ಸೆನ್ಸ್
ಸನ್ ಆರ್ಗನೊಫುಡ್ಸ್
ಸೂರ್ಯೋದಯ
ಸಾವಯವ ತತ್ವ
ವಿಷನ್ ಫ್ರೆಶ್
ನಿಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡುವುದರ ಮೂಲಕ ಸಾವಯವ ಆಹಾರ ಅಳವಡಿಸಿಕೊಳ್ಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ