ಲವ್ ಸಾಂಗ್ಸ್: ಪ್ರೀತಿಗೆ ಹೊಸಾ ಭಾಷ್ಯ ..

  • by

ಪ್ರೀತಿಯನ್ನು ಅರುಹುವ ಲವ್ ಸಾಂಗ್ಸ್
ಪ್ರೀತಿ ಎಂಬುದು ಅತ್ಯಂತ ಮಧುರವಾದ ಸುಂದರ ಅನುಭೂತಿಯಾಗಿದೆ. ತಾವು ಪ್ರೀತಿಸಿದವರು ನಮ್ಮ ಜೀವನ ಸಂಗಾತಿಯಾಗಬೇಕು
ನಮ್ಮೊಂದಿಗೆ ಉಸಿರು ಇರುವವರೆಗೆ ಇರಬೇಕು ಎಂದು ನಾವು ಭಾವಿಸಿ ಪ್ರೀತಿಯನ್ನು ಅರುಹುತ್ತೇವೆ. ಈ ಪ್ರೀತಿಯನ್ನು ಅರುಹಲು
ಮೊದಲೆಲ್ಲಾ ಸಾಕಷ್ಟು ಕಷ್ಟಪಡುತ್ತಿದ್ದ ಪ್ರೇಮಿಗಳ ಸಂಖ್ಯೆಗೇನು ಬರವಿಲ್ಲ. ಇದನ್ನು ನಾವು ಚಲನ ಚಿತ್ರಗಳಲ್ಲಿ ಕೂಡ ನೋಡಿದ್ದೇವೆ.
ಪ್ರೇಮ ಪತ್ರ ರವಾನೆ, ಪುಸ್ತಕಗಳ ರವಾನೆ, ಫೋನ್ ಸಂದೇಶ, ಹಕ್ಕಿಗಳ ಮೂಲಕ ಸಂದೇಶ ಕಳುಹಿಸುವುದು, ಗೆಳಯ/ಗೆಳತಿಯರ ಮೂಲಕ
ಪ್ರೇಮ ನಿವೇದನೆ ಹೀಗೆ ಸಾಕಷ್ಟು ಉದಾಹರಣೆಗಳಿವೆ.

ಆದರೆ ಲವ್ನಿ ಸಾಂಗ್ಸ್ ಮೂಲಕ ಪ್ರೀತಿಯನ್ನು ಮನದನ್ನೆಗೆ ಅರುಹುವುದು ಒಂದು ಸುಂದರ ಕ್ಷಣವಾಗಿದೆ. ನಿಮ್ಮ ಪ್ರೀತಿಯ ಪರಿಯನ್ನು
ಒಂದು ಸುಮಧುರ ಹಾಡು ವರ್ಣಿಸುತ್ತದೆ ಮತ್ತು ಇದರಿಂದ ನಿಮ್ಮಾಕೆ ಪ್ರಸನ್ನಳಾಗುತ್ತಾರೆ ಎಂದರೆ ಸ್ವರ್ಗಕ್ಕೆ ಮೂರೇ ಗೇಣು ತಾನೇ?
ಇಂದಿನ ನಮ್ಮ ಲೇಖನದಲ್ಲಿ ಹಳೆಯ ಮತ್ತು ಹೊಸ ಹಾಡುಗಳ ಮಾಧುರ್ಯಭರಿತ ಸವಿಗಾನದ ದೃಷ್ಟಾಂತಗಳನ್ನು ನಿಮ್ಮ ಮುಂದೆ
ಇಡುತ್ತಿದ್ದು ಇದರಿಂದ ನಿಮ್ಮ ಪ್ರೀತಿಯನ್ನು ನಿಮ್ಮ ಮನದರಸಿಗೆ ನೀವು ಅರುಹಬಹುದು. ಇನ್ನೇಕೆ ತಡ ಆಸ್ವಾದಿಸಿ.

ದೂರ ಸ್ವಲ್ಪ ದೂರ
ಶ್ರೇಯಾ ಘೋಷಲ್ ಹಾಡಿರುವ ಈ ಹಾಡು ನಿಮ್ಮ ಮನವನ್ನು ಕರಗುವಂತೆ ಮಾಡುತ್ತದೆ ಮತ್ತು ನಿಮ್ಮ ಪ್ರೀತಿಯ ಹುಡುಗಿಯನ್ನು
ಕೂಡ. ನಿಮ್ಮ ಪ್ರೀತಿಯ ಆಳವನ್ನು ಅವರು ಈ ಹಾಡಿನಿಂದಲೇ ತಿಳಿದುಕೊಳ್ಳುವುದು ಖಂಡಿತ.

ನೀರ ಬಿಟ್ಟು ನೆಲದ ಮೇಲೆ
ನಿಮ್ಮ ಪ್ರಿಯತಮೆ ನಿಮ್ಮಿಂದ ಮುನಿಸುಗೊಂಡಿದ್ದಾರೆಯೇ? ಹಾಗಿದ್ದರೆ ಚಿಂತಿಸಬೇಡಿ. ಈ ಹಾಡನ್ನು ಅವರಿಗೆ ಒಮ್ಮೆ ಕೇಳಿಸಿ ಖಂಡಿತ
ಅವರು ನಿಮ್ಮ ಬಳಿಗೆ ಓಡೋಡಿ ಬರುತ್ತಾರೆ. ಬರೇ 5 ನಿಮಿಷಗಳಲ್ಲಿ ನಿಮ್ಮ ಮನದೊಳಗಿರುವ ಎಲ್ಲಾ ಭಾವನೆಗಳನ್ನು ಈ ಹಾಡು
ನಿಮ್ಮಾಕೆಗೆ ಉಣಬಡಿಸುತ್ತದೆ.

ಅನಿಸುತಿದೆ ಯಾಕೋ ಇಂದು
ನಿಜಕ್ಕೂ ಯುವ ಜನರ ಮನಸ್ಸಿನಲ್ಲಿ ಈ ಹಾಡು ಹುಟ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ಸೋನು ನಿಗಮ್‌ನ ಅಭಿಮಾನಿಗಳಿಗೆ
ರಸದೌತಣವನ್ನು ಉಣಬಡಿಸಿದ ಈ ಹಾಡು ಪ್ರೇಮಿಗಳ ತಾಜ್‌ಮಹಲ್ ಎಂದೆನಿಸಿದೆ. ಈ ಹಾಡಿನ ಸಾಹಿತ್ಯ, ಸಂಗೀತ ಅಬ್ಬಾ ಅದನ್ನು
ಕೇಳಿದವರಿಗೆ ಗೊತ್ತು! ನಿಮ್ಮ ಪ್ರೇಮವನ್ನು ನಿಮ್ಮ ಪ್ರಿಯತಮೆಗೆ ಅರುಹಲು ಈ ಹಾಡು ದಿ ಬೆಸ್ಟ್

ಜೊತೆಯಲಿ ಜೊತೆಯಲಿ
ಯಶಸ್ವಿ ಚಿತ್ರವಾದ ಗೀತ ಸಿನಿಮಾದ ಈ ಹಾಡು ಇಳಯರಾಜ್ ಸರ್ ಅವರ ಹಿಟ್ ಲವ್ ಸಾಂಗ್ ಗಳಲ್ಲಿ ಒಂದೆನಿಸಿದೆ. ಈ ಹಾಡಿನಿಂದ ನಿಮ್ಮ
ಹುಡುಗಿ ಖಂಡಿತ ನಿಮ್ಮ ಮನದರಸಿಯಾಗುವುದು ನಿಜ.

ಕಣ್ಣ ಕಣ್ಣ ಸಲಿಗೆ

ನವಗ್ರಹ ಚಿತ್ರದ ಹಾಡು ಇದಾಗಿದ್ದು ನಿಮ್ಮ ಮನದರಸಿಗೆ ರಸದೌತಣವನ್ನೇ ಉಣಬಡಿಸುತ್ತದೆ. ನಿಮ್ಮ ಪ್ರೀತಿಯನ್ನು ಬರಿಯ
ಹಾಡಿನಿಂದಲೇ ತಿಳಿಸಿ. ಖಂಡಿತ ಅವರ ಕೆನ್ನೆ ಕೆಂಪಾಗುತ್ತದೆ ಮತ್ತು ನಿಮ್ಮೆಡೆಗೆ ಅವರು ಓಡೋಡಿ ಬರುತ್ತಾರೆ.

ಪರವಶನಾದೆನು
ಪುನೀತ್ ರಾಜ್‌ಕುಮಾರ್ ದೀಪಾ ಸನ್ನಿಧಿ ಅಭಿನಯಿಸಿರುವ ಈ ಹಾಡಿನಲ್ಲಿ ಪ್ರೇಮಿಗಳ ತುಂಟತನ, ಕಿತ್ತಾಟ, ಬ್ರೇಕಪ್ ಎಲ್ಲವೂ
ಅಡಗಿದೆ.ಏಕಾಂತದ ಸಮಯದಲ್ಲಿ ಗುನುಗುನಿಸಲು ಈ ಹಾಡು ಬೆಸ್ಟ್ ಆಗಿದೆ. ನಿಮ್ಮ ಹುಡುಗಿ ಕೂಡ ಈ ಹಾಡಿಗೆ ಫಿದಾ ಆಗುವುದು
ಖಂಡಿತ.

ನೀನಂದರೆ ನನ್ನೊಳಗೆ
ಸೋನು ನಿಗಮ್ ಹಾಡಿರುವ ಈ ಹಾಡಿನಲ್ಲಿ ದುನಿಯಾ ವಿಜಯ್ ಮತ್ತು ಐಂದ್ರಿತಾ ರೇ ಅಭಿನಯಿಸಿದ್ದು, ನಿಮ್ಮ ಹುಡುಗಿ ನಿಮಗೆ ಏನು
ಎಂಬುದನ್ನು ವಿವರವಾಗಿ ತಿಳಿಸುವ ಹಾಡಾಗಿದೆ. ನಿಜಕ್ಕೂ ಈ ಹಾಡಿನಲ್ಲಿ ಆಲಿಸುವವರು ಮೈಮರೆಯುವುದು ಖಂಡಿತ.

ಪ್ರೇಮ ಬರಹ
ಈ ಹಾಡು ಕೇಳಿದರೆ ನಿಮ್ಮ ಹುಡುಗಿ ಖಂಡಿತ ನಿಮಗೆ ಮನಸ್ಸು ನೀಡುತ್ತಾಳೆ. ಇದರ ಸಾಹಿತ್ಯ, ಸಂಗೀತ ನಿಜಕ್ಕೂ ಮನಸ್ಸನ್ನು
ಸೆರೆಹಿಡಿಯುವಂತಿದೆ. ನಿಮ್ಮ ಹುಡುಗಿಗೆ ಪ್ರೇಮ ನಿವೇದನೆಗೆ ಈ ಹಾಡು ಸೂಕ್ತವಾಗಿದೆ.

ಪ್ರೀತ್ಸೆ ಅಂತ ಪ್ರಾಣ ತಿನ್ನೊ
ರಮ್ಯಾ ಅವರು ಅಭಿನಯಿಸಿರುವ ಈ ಹಾಡಿನಲ್ಲಿ ನಿಜಕ್ಕೂ ಮನಮುಟ್ಟುವ ಸಂದೇಶವಿದೆ. ಈ ಹಾಡು ಒಮ್ಮೆ ಕೇಳಿದರೆ ಪದೇ ಪದೇ
ಕೇಳುತ್ತಲೇ ಇರಬೇಕೆಂಬ ಚಪಲ ಮನದಲ್ಲಿ ಮೂಡುತ್ತದೆ. ಎಕ್ಸ್‌ಕ್ಯೂಸ್‌ಮಿ ಚಿತ್ರದ ಸೂಪರ್ ಡೂಪರ್ ಹಿಟ್ ಆಗಿರುವ ಈ ಹಾಡು
ನಿಮ್ಮ ಹುಡುಗಿಯ ಮನಸ್ಸನ್ನು ಸೆರೆಹಿಡಿಯುತ್ತದೆ.

ನೀ ಸನಿಹಕೆ ಬಂದರೆ
ಮಳೆಯಲಿ ಜೊತೆಯಲಿ ಚಿತ್ರದ ಹಾಡಾಗಿರುವ ಇದು ನಿಮ್ಮ ಹುಡುಗಿಗೆ ಪ್ರೀತಿಯ ಮಳೆಯನ್ನೇ ಸುರಿಸುತ್ತದೆ.

ಬರಿಯ ಹಾಡಿನ ಮೂಲಕ ನಿಮ್ಮ ಪ್ರೀತಿಯನ್ನು ಅರುಹುವುದು ಮಾತ್ರವಲ್ಲದೆ ಅವರಿಗೆ ಇಷ್ಟವಾಗುವ ರೀತಿಯಲ್ಲಿ
ನಡೆದುಕೊಳ್ಳುವುದು ಮುಖ್ಯವಾಗಿದೆ. ನೀವು ನೀವಾಗಿರುವಾಗ ಮಾತ್ರವೇ ನಿಮ್ಮಾಕೆ ನಿಮ್ಮನ್ನು ಇಷ್ಟಪಡುವುದು. ಆದಷ್ಟು
ಸರಳವಾಗಿರಿ. ನಿಮ್ಮ ಮಂಡಿಯನ್ನು ಮಡಚಿ ನಾಟಕೀಯ ಶೈಲಿಯಲ್ಲಿ ಅವರಿಗೆ ಪ್ರಪೋಸ್ ಮಾಡಿ. ತಮ್ಮ ಹುಡುಗ ತಮ್ಮ ಜೊತೆ
ಸರಳವಾಗಿ ರೊಮ್ಯಾಂಟಿಕ್ ಆಗಿರಬೇಕೆಂದೇ ಹೆಚ್ಚಿನ ಹುಡುಗಿಯರು ಬಯಸುತ್ತಾರೆ

ಅಕೆಯನ್ನು ರಾತ್ರಿಯೂಟಕ್ಕೆ ರೊಮ್ಯಾಂಟಿಕ್ ಸ್ಥಳಕ್ಕೆ ಕರೆದೊಯ್ಯಿರಿ ಇದರಿಂದ ನೀವು ಅವರಿಗೆ ವಿಶೇಷ ಸ್ಥಾನವನ್ನು ನೀಡುತ್ತಿದ್ದೀರಿ
ಎಂಬ ಅನುಭವ ಉಂಟಾಗುತ್ತದೆ. ಇನ್ನು ಆಕೆಯ ಮನೆಯ ಮುಂದೆ ಅಥವಾ ಕಚೇರಿಯಲ್ಲಿ ನೀವು ಅವರನ್ನು ಕರೆಯುವ ಹೆಸರಿನ
ಬ್ಯಾನರ್ ಅನ್ನು ಇರಿಸಿ. ಇದಕ್ಕೂ ಮೊದಲು ಅವರ ಒಪ್ಪಿಗೆಯನ್ನು ಪಡೆದುಕೊಳ್ಳಿ. ಇನ್ನು ನಿಮ್ಮಲ್ಲಿ ಸಾಕಷ್ಟು ದುಡ್ಡಿದೆ

ಎಂದಾದಲ್ಲಿ ಆಗಸದಲ್ಲಿ ಅವರ ಹೆಸರನ್ನು ಮುದ್ರಿಸಿ ಬೀಚ್‌ಗೆ ಕರೆದುಕೊಂಡು ಹೋಗಿ ಸೂರ್ಯಾಸ್ತಮಾನದಿಂದ ಅವರನ್ನು
ಪುಳಕಿತಗೊಳಿಸಿ. ಇನ್ನು ಸಾಹಸ ಮಯ ಪ್ರವೃತ್ತಿಯಿಂದ ಕೂಡ ಅವರ ಮನಸ್ಸನ್ನು ನೀವು ಸೆಳೆಯಬಹುದು.

ಎಲ್ಲದಕ್ಕೂ ಮುಂಚೆ ಹೀಗೆಲ್ಲಾ ಮಾಡುವುದು ಅವರ ಪೂರ್ಣ ಒಪ್ಪಿಗೆಯ ನಂತರವೇ. ಅಂದರೆ ಅವರು ನಿಮ್ಮ ಪ್ರೀತಿಯನ್ನು
ಸಂಪೂರ್ಣವಾಗಿ ಅಂಗೀಕರಿಸಿದ ನಂತರವೇ ಇಂತಹ ಕೆಲಸಗಳಿಗೆ ಕೈ ಹಾಕಿ. ನಿಮ್ಮ ಪ್ರೀತಿ ನಿಮ್ಮಾಕೆಗೆ ಮನಮುಟ್ಟುವಂತಿರಬೇಕು ಅಂತೆಯೇ
ನಿಮ್ಮಲ್ಲಿ ಪೂರ್ತಿ ನಂಬಿಕೆ ಬರಿಸುವಂತಿರಬೇಕು. ಒಮ್ಮೆ ನಿಮ್ಮ ಪ್ರೀತಿಯನ್ನು ಅವರಲ್ಲಿ ಅರುಹಿದ ನಂತರ ಏನಾದರೂ ಅವರ
ಕೈಬಿಡಬೇಡಿ. ಜೀವನ ಪೂರ್ತಿ ಜೊತೆಯಾಗಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ