ಒಸಿಡಿ ಕಂಪಲ್ಸಿವ್ ಅಸ್ವಸ್ಥತೆ ಎಂದರೇನು, ಲಕ್ಷಣಗಳು, ಕಾರಣ ಮತ್ತು ಚಿಕಿತ್ಸೆ – (Obsessive-compulsive disorder symptoms, treatment and causes..!)

  • by

ಇತ್ತೀಚಿನ ದಿನಗಳಲ್ಲಿ ಒಬ್ಬೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಒಬ್ಬ ವ್ಯಕ್ತಿ ತನ್ನ ನಿಯಂತ್ರಣದಲ್ಲಿ ಇರದೇ ಇದ್ದಾಗ ಮತ್ತು ಬಯಸದಿದ್ದರೂ ಕೆಲವೊಂದು ಬಾರಿ ಒಂದೇ ಕೆಲಸವನ್ನು ಪದೇ ಪದೇ ಮಾಡುತ್ತಲೇ ಇರುತ್ತಾನೆ. ಇದೊಂದು ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿದ್ದು, ಒಸಿಡಿ ಎಂದು ಕರೆಯಲಾಗುತ್ತದೆ. ಒಸಿಡಿ ಎಂದರೇನು.. ಸಮಸ್ಯೆಯ ಲಕ್ಷಣಗಳೇನು. ಹಾಗೂ ಚಿಕಿತ್ಸೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Obsessive-compulsive disorder, symptoms, treatmen, ಒಸಿಡಿ ಡಿಸಾರ್ಡರ್, ಚಿಕಿತ್ಸೆ

ಒಸಿಡಿ ಎಂದರೇನು…?

ಮಾನಸಿಕ ಅನಾರೋಗ್ಯ ಹಲವು ವಿಧದಿಂದ ಬರಬಹುದು. ಹೀಗಾಗಿ ಮಾನಸಿಕ ಆನಾರೋಗ್ಯವನ್ನು ಕಡೆಗಣಿಸಬಾರದು. ಭಾವನೆಗಳು, ಆಲೋಚನೆಗಳು ಮತ್ತು ನಡುವಳಿಕೆಗಳಲ್ಲಿ ಬದಲಾವಣೆಗಳು ಬರುವುದನ್ನು ನಾವು ಮಾನಸಿಕ ಅನಾರೋಗ್ಯವೆಂದು ಹೇಳುತ್ತೇವೆ. ಕೌಟುಂಬಿಕ , ಸಾಮಾಜಿಕ, ಹಾಗೂ ವೃತ್ತಿ ಬದುಕಿನ ಒತ್ತಡದಿಂದಾಗಿ ಇಂತಹ ಮಾನಸಿಕ ಅನಾರೋಗ್ಯ ಕಾಡಬಹುದು. ಇವು ವ್ಯಕ್ತಿಯ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರಬಲ್ಲವು. ಅಂಥ ಮಾನಸಿಕ ಅನಾರೋಗ್ಯಗಳಲ್ಲಿ ಒಸಿಡಿ ( ಒಬೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್) ಕೂಡಾ ಒಂದು. ಈ ಕಾಯಿಲೆ ಇರುವ ಜನರಲ್ಲಿ ಅತಿ ಭೀತಿ, ಆತಂಕ ಕಾಣಬಹುದು. ಉದಾಹರಣೆ ಕೀಟಾಣುಗಳ ಬಗ್ಗೆ ಅತಿಯಾದ ಭೀತಿ ಹೊಂದಿರುವುದುದು. ಇದರಿಂದ ಪದೇ ಪದೇ ಸ್ನಾನ ಮಾಡುವುದು, ಕೈ ತೊಳೆದುಕೊಳುವುದು ಮುಂತಾದ ಬದಲಾವಣೆಗಳನ್ನು ಕಾಣಬಹುದಾಗಿದೆ.

ಒಸಿಡಿ ಎಂಬುದು ಒಂದು ಮಾನಸಿಕ ಅಸ್ವಸ್ಥತೆ. ಒಸಿಡಿ ಸಮಸ್ಯೆಗೆ ಒಳಗಾದ ಜನರು ಸಾಮಾನ್ಯವಾಗಿ ಮಾಡುವ ಚಟುವಟಿಕೆಗಳೆಂದರೆ, ವಸ್ತುಗಳನ್ನು ಎಣಿಸುವುದು , ಆಗಾಗ್ಗೆ ಕೈ ತೊಳೆದುಕೊಳ್ಳುವುದು. ಹೆಚ್ಚು ಕ್ಲಿನ್ ಆಗಿರುವುದು , ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಲಾಗಿದೆಯೇ ಎಂಬುದನ್ನು ಪದೇ ಪದೇ ನೋಡುವುದು ಇತ್ಯಾದಿ. ಒಸಿಡಿ ಸಮಸ್ಯೆ ಹೊಂದಿರುವ ಜನರಲ್ಲಿ ಈ ಚಟುವಟಿಕೆಗಳು ದೀರ್ಘಕಾಲದವರೆಗೆ ಮುಂದುವರಿಯುವುದರಿಂದ. ಇವು ಸಾಮಾನ್ಯ ಜೀವನಕ್ಕೆ ಅಪಾಯವನ್ನುಂಟು ಮಾಡುತ್ತವೆ. ದೈನಂದಿನ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಬಹುದು. ಒಸಿಡಿ ಎದುರಿಸುತ್ತಿರುವವರು ವಿಚಿತ್ರ ನಡುವಳಿಕೆಗಳನ್ನು ಹೊಂದಿರುತ್ತಾರೆ.

ಒಸಿಡಿಯ ಲಕ್ಷಣಗಳು?

ವ್ಯಕ್ತಿಯ ನಡುವಳಿಕೆ ಆಧಾರದ ಮೇಲೆ ಒಸಿಡಿ ಲಕ್ಷಣಗನ್ನು ಗುರುತಿಸಬಹುದಾಗಿದೆ. ಕೆಲವು ಜನರಿಗೆ ಸೋಂಕಿನ ಬಗ್ಗೆ ನಿರಂತರ ಭಯವಿರುತ್ತದೆ. ಇದಕ್ಕಾಗಿ ಅವರು ಕೈ ತೊಳೆದು, ಮನೆಯನ್ನು ಸ್ವಚ್ಛಗೊಳಿಸುತ್ತಿರುತ್ತಾರೆ.ಸರಿಯಾದ ಸ್ಥಳದಲ್ಲಿ ಎಲ್ಲಾ ವಸ್ತುಗಳನ್ನು ಇಡುವುದು, ಎಲ್ಲವನ್ನೂ ಸರಿಯಾಗಿ ಜೋಡಿಸುವ ಗೀಳನ್ನು ಹೊಂದಿರುತ್ತಾರೆ. ಆತಂಕದಿಂದ ಪಾತ್ರೆಗಳನ್ನು ಸರಿಯಾಗಿ ಇಡುತ್ತಾರೆ. ಕಾರ್ಪೆಟ್ ಸರಿಯಾಗಿ ಜೋಡಿಸುತ್ತಾರೆ. ದಿಂಬುಗಳನ್ನು ಸರಿಪಡಿಸುವುದು ಇತ್ಯಾದಿ ಸೇರಿರುತ್ತದೆ. ನಿಮಗೆ ಪರಿಚಯವಿರುವ ವ್ಯಕ್ತಿಯಲ್ಲಿ ಇಂತಹ ನಡುವಳಿಕೆ ಕಂಡು ಬಂದರೆ , ನೀವು ಅವರ ಜತೆ ಮಾತನಾಡಲು ಪ್ರಯತ್ನಿಸಬೇಕು. ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯಬೇಕು. ಮತ್ತು ಅವರನ್ನು ಪ್ರೋತ್ಸಾಹಿಸಬೇಕು.

ಚಿಕಿತ್ಸೆಗಳೇನು?

ಒಸಿಡಿಯಿಂದ ಹಲವು ಜನರು ಚೇತರಿಸಿಕೊಂಡಿರುವ ಅನೇಕ ಉದಾರಹಣೆಗಳಿವೆ. ಒಸಿಡಿಯ ತೀವ್ರತೆಯ ಅನುಗುಣವಾಗಿ ಔಷಧಿಯಿಂದ ಚಿಕಿತ್ಸೆ ನೀಡಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಬಿಹೇವಿಯರಲ್ ಥೆರಪ (ಸಿಬಿಟಿ) ಯಂತಹ ಚಿಕಿತ್ಸೆ ನೀಡಲಾಗುತ್ತದೆ. ಕಾಯಿಲೆ ಹೆಚ್ಚು ತೀವ್ರವಾದಾಗ , ಅನೇಕ ಸಂದರ್ಭಗಳಲ್ಲಿ ಔಷಧಿಗಳನ್ನು ನೀಡಲಾಗುತ್ತದೆ. ಖಿನ್ನತೆ, ಆತಂಕದ ಮಟ್ಟವನ್ನು ಕಡಿಮೆ ಮಾಡಲು ಮೆಡಿಸಿನ್ ನೀಡಲಾಗುತ್ತದೆ.

ನಮ್ಮ Spark.Live ಎಕ್ಸ್ ಪರ್ಟ್, ಖ್ಯಾತ ಕೌನ್ಸಲರ್ ಹಾಗೂ ಮನಃಶಾಸ್ತ್ರಜ್ಞೆ ಡಾ. ಮಾಲಾ ಮುರಳಿಧರ್ ಅವರೊಂದಿಗೆ ಸಮಗ್ರ ಆರೋಗ್ಯದ ಬಗ್ಗೆ ಮಾಹಿತಿ, ಸಲಹೆ ಪಡೆಯಿರಿ. ಪ್ರತಿದಿನ: ವಾರದ ದಿನಗಳು ಮಾತ್ರ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ, ಸಂಜೆ 6ರವರೆಗೆ ವೈದ್ಯರನ್ನು ಸಂಪರ್ಕಿಸಬಹುದು. Spark.Live.ನಲ್ಲಿ ಸೆಷನ್ ಬುಕ್ ಮಾಡಿ, ಡಾ. ಮಾಲಾ ಮುರಳಿಧರ್ ಅವರ ಜತೆ ಮಾತನಾಡಬಹುದು.

ವೈದ್ಯರ ಬಗ್ಗೆ ಪರಿಚಯ
ಡಾ.ಮಾಲಾ ಮುರಳಿಧರ್
ಖ್ಯಾತ ಕೌನ್ಸಲರ್ ಹಾಗೂ ಮನಃಶಾಸ್ತ್ರಜ್ಞೆ,

ಡಾ. ಮಾಲಾ ಮುರಳಿಧರ್ ಅವರು ಕೌನ್ಸಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮನೋವಿಜ್ಞಾನದಲ್ಲಿ ಪಿಎಚ್ ಡಿ ಮಾಡಿದ್ದಾರೆ. ಅವರು ಈ ಕ್ಷೇತ್ರದಲ್ಲಿ 14 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ಬೆಂಗಳೂರಿನ ಡಾ.ಮಾಲತಿ ಮಣಿಪಾಲ್ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ವಿಶೇಷವಾಗಿ ಅರಿವಿನ ಹಾಗೂ ವರ್ತನೆಯ ಚಿಕಿತ್ಸೆ ನೀಡುತ್ತಾರೆ. ಖಿನ್ನತೆ, ಆತಂಕ ಮತ್ತು ಅಸ್ವಸ್ಥತೆಯಂತಹ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ, ಪರಿಹಾರ ನೀಡುತ್ತಾರೆ. ಹದಿಹರೆಯದವರ ಹಾಗೂ ವಯಸ್ಕರ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿಗಾಗಿ, ಡಾ. ಮಾಲಾ ಅವರ ಜತೆ ಮಾತನಾಡಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ