ಕಾಬುಲ ಚನಾ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಾ!

  • by

ಭಾರತೀಯ ಪಾಕ ಪದ್ಧತಿಯಲ್ಲಿ ಚೋಲೆ ಎಲ್ಲರಿಗೂ ತುಂಬಾ ಇಷ್ಟವಾಗುವ ಖಾದ್ಯ, ಭಾರತೀಯರ ಪ್ರತಿಯೊಂದು ಮನೆಯಲ್ಲಿ ಕಾಬುಲ ಕಡಲೆಗೆ,  ಚೋಲೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕಾಬುಲ ಛೋಲೆ ಮಸಾಲೆ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಖ್ಯಾತಿ ಪಡೆದಿದೆ. ಇದು ಹೆಚ್ಚು ಟೆಸ್ಟಿ ಯಾಗಿರುವುದಲ್ಲದೇ, ಜತೆಗೆ ಹೆಚ್ಚು ಪೌಷ್ಟಿಕಾಂಶ ಹೊಂದಿದೆ. ಇಂದಿನ ಕಾಲದಲ್ಲಿ ಎಲ್ಲಾ ಮನೆಗಳು ಪ್ರಮುಖ ಆಹಾರಗಳ ಪಟ್ಟಿಗೆ ಇದು ಸೇರಿಕೊಂಡಿದೆ. ಛೋಲೆಯನ್ನು ಕಾಬುಲಿ ಚನಾ ಅಂತಲೂ ಕರೆಯುತ್ತಾರೆ.  ಚೋಲೆ ಗಳಲ್ಲಿ ಸಾಕಷ್ಟು ಪೌಷ್ಟಿಕಾಂಶ ಹಾಗೂ ಪ್ರೋಟೀನ್ ಹೆಚ್ಚಾಗಿರುತ್ತದೆ. ಇದನ್ನು ಪ್ರೋಟೀನ್ ಗಳ ರಾಜ ಅಂತಲೂ ಕರೆಯುತ್ತಾರೆ. ಜನರು ಇದನ್ನು ಹೆಚ್ಚಾಗಿ ತಿನ್ನಲು ಬಯಸುತ್ತಾರೆ. ಛೋಲೆ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. 


Nutrition Benefits Chickpeas, 
ಕಾಬುಲ ಚನಾ, ಆರೋಗ್ಯ ಪ್ರಯೋಜನಗಳು,

 ಚೋಲೆಯಲ್ಲಿರುವ ಪೋಷಕಾಂಶಗಳು..!

ಚೋಲೆಗಳಲ್ಲಿ ಗಮನಾರ್ಹ ಪ್ರಮಾಣದ ಪೋಷಕಾಂಶಗಳಿವೆ. 1 ಕಪ್ ಕಾಬುಲ ಕಡಲೆಯಲ್ಲಿ ಸುಮಾರು 40 ಪ್ರತಿಶತ ದಷ್ಟು ಫೈಬರ್, 70 ಪ್ರತಿಶತದಷ್ಟು ಫೋಲೇಟ್, ಮತ್ತು 22 ಪ್ರತಿಶತ ಕಬ್ಬಿಣದ ಅಗತ್ಯವಿರುತ್ತದೆ. 

ರಕ್ತದೋತ್ತಡ ನಿಯಂತ್ರಿಸುತ್ತದೆ.!

ರಕ್ತದೋತ್ತಡ ನಿಯಂತ್ರಿಸುವಲ್ಲಿ  ಚೋಲೆ  ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದೋತ್ತಡದಿಂದ ಬಳಲುತ್ತಿರುವ ಜನರು ಇದನ್ನು ಹೆಚ್ಚಾಗಿ ಸೇವಿಸಿದರೆ ಒಳ್ಳೆಯದು, ಇದರಲ್ಲಿ ಪೋಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇರುವುದರಿಂದ ನಿಮ್ಮ ದೇಹದಲ್ಲಿನ ರಕ್ತದೋತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಕೊಲೆಸ್ರ್ಟಾಲ್ ನಿಯಂತ್ರಣ

ಕಾಬುಲ ಚನಾದಲ್ಲಿ ಕೊಲೆಸ್ರ್ಟಾಲ್ ಕಡಿಮೆ ಮಾಡುವ ಗುಣಗಳಿವೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಇರುವ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ದೇಹದಲ್ಲಿ ಕೊಲೆಸ್ರ್ಟಾಲ್ ಹೆಚ್ಚಾದರೆ , ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಚೋಲೆಯಲ್ಲಿರುವ ಫೈಟೊನ್ಯೂಟ್ರಿಯಂಟ್ ಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. 

ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿ!

ಕಾಬುಲ ಚನಾ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿ ಅಂತಲೇ ಹೇಳಬಹುದು. ಚೋಲೆಯಲ್ಲಿ ಫೈಟೊನ್ಯೂಟ್ರಿಯೆಂಟ್ ಗಳು ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾರ್ಮೋನುಗಳ ನಿಯಂತ್ರಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಇದು ಸ್ತನ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುತ್ತದೆ. 


Nutrition Benefits Chickpeas, 
ಕಾಬುಲ ಚನಾ, ಆರೋಗ್ಯ ಪ್ರಯೋಜನಗಳು,

ಜೀರ್ಣಾಂಗ ಕ್ರಿಯೆ ಹೆಚ್ಚಿಸುತ್ತದೆ

ಕಾಬುಲ ಚನಾ ಸೇವಿಸುವುದರಿಂದ ಜೀರ್ಣಾಂಗ ಕ್ರಿಯೆ ಹೆಚ್ಚುತ್ತದೆ. ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಪ್ರೋಟೀನ್, ಮತ್ತು ಹೆಚ್ಚು ಜೀವ ಸತ್ವ ಹಾಗೂ ಖನಿಜಗಳು ಹೆಚ್ಚಾಗಿದ್ದು, ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸಲು ಹೆಚ್ಚಾಗುತ್ತದೆ. 

ತಾಪಮಾನ ನಿಯಂತ್ರಣ!

ಕಾಲಕಾಲಕ್ಕೆ ತಕ್ಕಂತೆ ತಾಪಮಾನ ಬದಲಾವಣೆ ಯಾಗುತ್ತದೆ. ನೀವು ನಿಯಮಿತವಾಗಿ  ಚೋಲೆ ಸೇವಿಸುವುದರಿಂದ ತಾಪಮಾನ ದಿಂದಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ತಾಮ್ರ ಹಾಗೂ ಮ್ಯಾಂಗನೀಸ್ ಇದರಲ್ಲಿ ಹೇರಳವಾಗಿ ಕಂಡು ಬರುತ್ತದೆ. ಇದು ದೇಹದಲ್ಲಿ ರಕ್ತದ ನಿರಂತರ ಹರಿವಿಗೆ ಸಹಾಯ ಮಾಡುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. 

ಬೊಜ್ಜು, ತೂಕ ನಿವಾರಿಸುತ್ತದೆ!

ಕಾಬುಲ ಚನಾದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿರುವುದರಿಂದ ಇದು ದೇಹದ ಬೊಜ್ಜನ್ನು ಹಾಗೂ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ 10 -15 ಚೋಲೆ ತಿನ್ನುವುದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಚೋಲೆ ತಪ್ಪದೇ ಸೇವಿಸಿ. 


Nutrition Benefits Chickpeas, 
ಕಾಬುಲ ಚನಾ, ಆರೋಗ್ಯ ಪ್ರಯೋಜನಗಳು,

ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ..!

ಚೋಲೆಯಲ್ಲಿ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುವುದರಿಂದ ನಿಮ್ಮ ಮುಖದ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಗುಳ್ಳೆಗಳನ್ನು ಹಾಗೂ ಇತರ ಕಾಯಿಲೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ರಕ್ತಹೀನತೆ ತಡೆಗಟ್ಟುತ್ತದೆ..!

ಚೋಲೆಯಲ್ಲಿ ಕಬ್ಬಿಣ ಸಮೃದ್ಧವಾಗಿದ್ದು ಇದು ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸುತ್ತದೆ. ಹೀಗಾಗಿ ಕಾಬುಲ ಚನಾ ಸೇವನೆ ಮಾಡಬೇಕು. ಮುಖ್ಯವಾಗಿ ಗರ್ಭಿಣಿಯರು , ಹಾಗೂ ಮಹಿಳೆಯರು ಪೀರಿಯಡ್ಸ್ ಸಮಯದಲ್ಲಿ ಇದನ್ನು ಹೆಚ್ಚಾಗಿ ಸೇವಿಸಬೇಕು.

ಡಯಾಬಿಟೀಸ್ ನಿಯಂತ್ರಿಸುತ್ತದೆ..!

ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಧುಮೇಹ ನಿಯಂತ್ರಿಸಲು ಕಡಲೆ ಬಹಳ ಉಪಯುಕ್ತ ಎಂದು ಹೇಳಬಹುದು. 

ಚೋಲೆ ಚರ್ಮ ಹಾಗೂ ಕೂದಲಿಗೆ ಹೆಚ್ಚು ಪ್ರಯೋಜನಕಾರಿ..!

ಇನ್ನು ಚೋಲೆ ಚರ್ಮ ಹಾಗೂ ಕೂದಲಿಗೆ ಹೆಚ್ಚು ಪ್ರಯೋಜನಾಕಾರಿ ಎಂದು ಹೇಳಬಹುದು. ಚೋಲೆ ಅನ್ನು ಸಾಮಾನ್ಯವಾಗಿ ಪ್ರಯೋಜನಕಾರಿ ಆಹಾರಕ್ಕಿಂತಲೂ, ಟೆಸ್ಟಿ ಆಹಾರವಾಗಿ ನೋಡಲಾಗುತ್ತದೆ. 

ಚರ್ಮಕ್ಕಾಗಿ ಕಾಬುಲ್ ಕಡಲೆ

1. ಸುಕ್ಕುಗಳನ್ನು ನಿವಾರಣೆ ಮಾಡುತ್ತದೆ

2. ಫೇಸ್ ಪ್ಯಾಕ್ ಆಗಿ ಇದನ್ನು ಬಳಸಬಹುದು

3. ಚರ್ಮದ ಕಲೆಗಳನ್ನು ನಿವಾರಣೆ ಮಾಡುತ್ತದೆ.

4. ಚರ್ಮದ ಸೋಂಕನ್ನು ನಿವಾರಿಸುತ್ತದೆ

5. ಮುಖದ ಮೇಲಿರುವ ಕೂದಲನ್ನು ತೊಡೆದು ಹಾಕುತ್ತದೆ. 

ಕೂದಲನ್ನು ಬಲಪಡಿಸುತ್ತದೆ , ತಡೆಹೊಟ್ಟು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ