ಬೇವಿನೆಲೆ ಬಳಸಿ ರೋಗದಿಂದ ದೂರವಿರಲು ಇಲ್ಲಿದೆ ಟಿಪ್ಸ್..!

  • by

ಆಯುರ್ವೇದದಲ್ಲಿ ಬೇವು ಜನಪ್ರಿಯ ಮೆಡಿಸಿನ್ ಇದ್ದಂತೆ.. ಸುಮಾರು ೫೦೦ ವರ್ಷಗಳ ಹಿಂದಿನ ಸಾಂಪ್ರದಾಯಿಕ ಪರಿಹಾರಗಳಲ್ಲಿ ಬೇವು ಕೂಡಾ ಒಂದಾಗಿದೆ. ಬೇವಿನ ಎಲೆ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ.  ವ್ಯಕ್ತಿಯ ದೈಹಿಕ, ಮಾನಸಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇವಿನ ಗುಣ, ಇದರಿಂದಾಗುವ ಪ್ರಯೋಜನಗಳನ್ನು ಅರಿತರೆ ಅಚ್ಚರಿ ಪಡುತ್ತೀರಾ.  ಬೇವಿನ ಎಲೆ, ಬೇವಿನ ಹೂ, ಬೇವಿನ ಎಣ್ಣೆಯಲ್ಲಿ ಹಲವು ರೋಗ ನಿರೋಧಕ ಅಂಶಗಳಿವೆ. 

ಬೇವಿನ ಎಲೆ, ಹೆಲ್ತ್ ಬೆನಿಫಿಟ್, neem leaf, health benefits,

ಕಲ್ಪವೃಕ್ಷದಂತಿದೆ ಬೇವು… 

ಬೇವಿನ ಎಲೆಗಳ ರಸಗಳನ್ನು ಸಕ್ಕರೆ ಜತೆಗೆ ಸೇವಿಸುವುದರಿಂದ ಅತಿಸಾರ ಗುಣಮುಖವಾಗುತ್ತದೆ.. ಪ್ರತಿ ದಿನ ಬೆಳಿಗ್ಗೆ ೧೦- ೧೨ ರಿಂದ ಎಳೆ ಬೇವಿನ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗೆದು, ನೀರು ಕುಡಿದರೆ ಕ್ಯಾನ್ಸರ್ ಸಂಬಂಧಿ ರೋಗಗಳು ದೂರವಾಗುತ್ತದೆ. 

ಗಾಯಗಳನ್ನು ಗುಣಪಡಿಸುವಲ್ಲಿ ಬೇವು ಪ್ರಮುಖ ಪಾತ್ರವಹಿಸುತ್ತದೆ. ಬೇವಿನ ಎಲೆಗಳಿಂದ ಪೇಸ್ಟ್ ತಯಾರಿಸಿ, ಅದನ್ನು ನಿಮ್ಮ ಗಾಯದ ಮೇಲೆ ಹಚ್ಚಿದರೆ ನಿಧಾನವಾಗಿ ಗುಣಮುಖವಾಗುತ್ತದೆ. 

ತಲೆಹೋಟ್ಟು , ಕೂದಲಿನ ಸಮಸ್ಯೆಗಳಿದ್ದರೆ ಬೇವು ಉಪಯೋಗಿಸಿ, ಬೇವಿನ ಎಲೆಗಳನ್ನು ಕುದಿಸಿ, ನೀರು ಹಸಿರು ಬಣ್ಣ ಬರುವರೆಗೆ ಕುದಿಸಬೇಕು. ನಿಮ್ಮ ಕೂದಲನ್ನು ಶಾಂಪು ಬಳಸಿ ತೊಳೆದ ನಂತರ ಅದನ್ನು ಬೇವಿನ ನೀರಿನಿಂದ ಸ್ವಚ್ಛಗೊಳಿಸಕೊಳ್ಳಬೇಕು.  ಅಲ್ಲದೇ ಬೇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲವು ಬೇವಿನ ಎಲೆಗಳನ್ನು ಪುಡಿ ಮಾಡಿ, ಒಂದು ಲೋಟ ನೀರಿನ ಜತೆಗೆ ಸೇವಿಸಿ. 

ಬೇವಿನ ಎಲೆ, ಹೆಲ್ತ್ ಬೆನಿಫಿಟ್, neem leaf, health benefits,

1.  ಬೇವಿನ ಹೂಗಳನ್ನು ಅನೋರೆಕ್ಸಿಯಾ ನರ್ವೋಸಾ (ಹಸಿವಿನ ಕೊರತೆ)  ಹಾಗೂ ಕರುಳಿನಲ್ಲಾಗುವ ಹುಳುಗಳನ್ನು ನಿವಾರಿಸಲು ಬೇವಿನ ಹೂಗಳನ್ನು ಬಳಸಲಾಗುತ್ತದೆ. ಬೇವಿನ ಗಳಿಗೂ ಉತ್ತಮವಾದದ್ದು, ಬೇವಿನ ಹೂಗಳನ್ನು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ. 

2. ಭಾರತದಲ್ಲಿ ಹೆಚ್ಚಿನ ಜನರು ಬೇವಿನ ಕಡ್ಡಿಯನ್ನು ಟೂತ್ ಬ್ರಷ್ ಆಗಿ ಬಳಸುತ್ತಾರೆ. ಇದು ಸೂಕ್ಷ್ಮಜೀವಿಗಳಿಂದ ಹೋರಾಡುತ್ತದೆ. ನಿಮ್ಮ ಲಾಲಾರಸದಲ್ಲಿ ಕ್ಷಾರೀಯ ಮಟ್ಟವನ್ನು ಕಾಪಾಡುತ್ತದೆ. ಬ್ಯಾಕ್ಟೇರಿಯಾಗಳಿಂದ ನಿಮ್ಮನ್ನು ದೂರವಿರಿಸಿ. ರೆಂಬೆ ಎಳೆಗಳನ್ನು ದೂರವಿರಿಸುತ್ತದೆ. 

ಬೇವಿನ ಎಲೆಯಲ್ಲಿ ಆ್ಯಂಟಿ ಬ್ಯಾಕ್ಚೇರಿಯಾ ಗುಣ ಇರುತ್ತದೆ. ಇದ್ರಿಂದಾಗಿ ಸೋಂಕುಗಳನ್ನು ಹಾಗೂ ಯಾವುದೇ ರೀತಿಯ ತೊಂದರೆಗಳಿಗೆ ಬೇವಿನ ಎಲೆ ಉತ್ತಮ ಪರಿಹಾರ ಒದಿಗಸುತ್ತದೆ. ಬೇವಿನ ಎಲೆಗಳನ್ನು ಅಗೆದು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಮೊಡವೆಗಳ ಸಮಸ್ಯೆ ಇದ್ದರೆ ಬಿಸಿ ನೀರಿನಲ್ಲಿ ಜೇನುತುಪ್ಪ ಬೇರಿಸಿ ಬೇವಿನ ಎಲೆಗಳನ್ನು ಹಾಕಿ ಸೇವಿಸಿದರೆ. ಮೊಡವೆ ಮತ್ತು ಕಪ್ಪು ಚುಕ್ಕೆಗಳು ಕೂಡ ಮಾಯವಾಗುತ್ತವೆ. 

  1. ಕೂದಲು ಪೋಷಣೆಗೆ ಬೇವು

ಸಾಮಾನ್ಯವಾಗಿ ಕೂದಲು ಪೋಷಣೆಗೆ ಬೇವು ಎಲೆ ತಿನ್ನುವುದರಿಂದ ಉಪಕಾರಿ ಎಂದು ಹೇಳಲಾಗುತ್ತದೆ. ತಲೆ ಹೊಟ್ಟೆ ನೀವಾರಿಸುವುದಲ್ಲದೇ, ಶಿಲೀಂದ್ರಗಳ ವಿರುದ್ಧ ಬೇವಿನ ಎಲೆಗಳು ಹೋರಾಡುವಲ್ಲಿ ಸಹಕಾರಿಯಾಗಿದೆ. 

ಬೇವಿನ ಎಲೆ, ಹೆಲ್ತ್ ಬೆನಿಫಿಟ್, neem leaf, health benefits,

2. ಮೊಡವೆ ಸಮಸ್ಯೆ 

ಮೊಡವೆ ಸಮಸ್ಯೆ ಇರುವವರು ದಿನವು ಒಂದು ಚಮಚಾದಷ್ಟು ಬೇವಿನ ರಸ ಸೇವಿಸುವುದರಿಂದ ಮೊಡವೆ ಮತ್ತು ಕಲೆಗಳು ನಿವಾರಣೆಯಾಗಿ, ತ್ವಚೆ ಕಾಂತಿ ಹೆಚ್ಚುವುದು. 

3. ಹಬ್ಬದ ಸಂದರ್ಭದಲ್ಲಿ ಬೇವಿನ ಎಲೆ ಹಾಕಿದ ನೀರಿನಿಂದ ಸ್ನಾನ ಮಾಡಿದರೆ. ಬ್ಯಾಕ್ಟೇರಿಯಾಗಳನ್ನು ವಿರುದ್ಧ ಹೋರಾಡುತ್ತವೆ. ಇದ್ರಿಂದ ತ್ವಚೆ ಸಂರಕ್ಷಣೆಗೆ ಸಹಕಾರಿಯಾಗಿದೆ. 

4. ಹೊಟ್ಟೆಯಲ್ಲಿರುವ ಜಂತು ಹುಳುಗಳನ್ನು ನಿವಾರಿಸಲು ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸಲು ಮಲಬದ್ದತೆ ಸಮಸ್ಯೆ ನಿವಾರಿಸಲು ರಕ್ತದ ಶುದ್ಧೀಕರಣಕ್ಕೆ , ಗ್ಯಾಸ್ಟ್ರಿಕ್ ನಿವಾರಣೆಗೆ ತುಂಬಾ ಪರಿಣಾಮಕಾರಿಯಾಗಿದೆ. 

5 .ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸುವಲ್ಲಿ ಹಾಗೂ ರಕ್ತನಾಳಗಳು ಸೆಟೆದುಕೊಂಡು ಒಳಭಾಗ ಕಿರಿದಾಗಿದ್ದರೆ, ಅವನ್ನು ಸಡಿಲಗೊಳಿಸುವ ಮೂಲಕ ರಕ್ತಸಂಚಾರವನ್ನು ಸುಗುಮಗೊಳಿಸುವ ಮೂಲಕ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. 

6 ಬೇವು ಕ್ಯಾನ್ಸರ್ ಅನ್ನು ನಿಯಂತ್ರಣದಲ್ಲಿಡುತ್ತದೆ. ನಿಯಮಿತವಾಗಿ ಬೇವಿನ ಎಲೆಗಳನ್ನು ಹಸಿಯಾಗಿ ಸೇವಿಸುತ್ತಾ ಬಂದಿರುವವರಲ್ಲಿ ಕ್ಯಾನ್ಸರ್ ಅಪಾಯ ಕಡಿಮೆ. ಬೇವಿನ ಮರದ ತೊಗಟೆಯಲ್ಲಿ ಕಂಡು ಬರುವ limonoids and polysecchadides ಎಂಬ ರಾಸಾಯನಿಕಗಳು ಕ್ಯಾನ್ಸರ್ ಮತ್ತು ಗಡ್ಡೆಗಳು ಉಂಟಾಗುವುದನ್ನು ತಡೆಯುತ್ತವೆ. 

7. ಚರ್ಮದ ಕಾಂತಿಗೆ ಬೇವಿನ ಎಲೆ ಹೆಚ್ಚು ಸಹಕಾರಿಯಾಗಲಿದೆ.  ಚರ್ಮ ಕಾಂತಿಯುತವಾಗಲು ಮತ್ತು ಸೌಮ್ಯವಾಗಿರಲು ಇದು ಸಹಕಾರಿಯಾಗಿದೆ. 

8 ಸಂಧಿವಾತಕ್ಕೆ ಬೇವಿನ ಎಲೆ ಮತ್ತು ಬೇವಿನ ತೊಗಟೆಗಳನ್ನು  ಅರೆದು ತಯಾರಿಸಿದ ಲೇಪನ ಮಾಡುವುದರಿಂದ ಉತ್ತಮ ಪರಿಹಾರ ಒದಗಿಸುತ್ತದೆ. ಊತ ನೋವು ಸಹ ಕಡಿಮಾಯಾಗುತ್ತದೆ. 

9. ಮಲೇರಿಯಾ ಎದುರಿಸುತ್ತಿದ್ದರೆ ಬೇವಿನಲ್ಲಿರುವ ಜೆಡ್ಯುನಿನ್ ಎಂಬ ರಾಸಾಯನಿಕ ನೆರವಾಗುತ್ತದೆ. ಹೇಗೆಂದರೆ ಬೇವಿನ ಎಲೆಗಳನ್ನು ಜಜ್ಜಿ ಮನೆಯ ಸುತ್ತ ಮುತ್ತ ಹರಡುವುದರಿಂದ ಬೇವಿನ ವಾಸನೆಗೆ ಸೊಳ್ಳೆಗಳು ಮೊಟ್ಟೆ ಇಡುವುದಿಲ್ಲ.

ಸಾಮಾನ್ಯವಾಗಿ ಬೇವು ಫೆಬ್ರುವರಿ ಹಾಗೂ ಏಪ್ರಿಲ್ ತಿಂಗಳಲ್ಲಿ ಹೂ ಬೀಡುತ್ತದೆ.  ಎಲೆಗಳ ಹಸಿರು ಬಣ್ಣದಿಂದ ಕೂಡಿದ್ದು, ಬೇವಿನ ಹೂಗಳು ಚಿಕ್ಕ, ಬೆಳ್ಳಗಿನ ಬಣ್ದದಿಂದ ಕೂಡಿರುತ್ತದೆ. ಕಾಯಿಗಳು ಹಸಿರಾಗಿದ್ದು, ಹಣ್ಣಾದಾಗ ಹಳದಿ ಬಣ್ಣದಿಂದ ಕೂಡಿರುತ್ತವೆ.  ಬೇವಿನ ಹಣ್ಣನ್ನು ಹಿಚುಕಿದಾಗ ಬಿಳಿ ಅಂಟಾದ ದ್ರವ ಹೊರ ಬರುತ್ತದೆ.  ಸಂಕ್ರಾತಿ ಸಮಯದಲ್ಲಿ ಬೇವು ಬೆಲ್ಲ ಸೇವನೆ, ಜೀವನದ ಸಿಹಿ ಕಹಿಗಳ ಸಂಗಮ ಎಂದು ಹೇಳಲಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ