ಬೇವಿನ ನೀರಿನಿಂದ ಸ್ನಾನ ಮಾಡಿದ್ರೆ ಪ್ರಯೋಜನಗೇನು? (Health Benefits of Bathing with Neem Water )

  • by

ಬೇವಿನ ನೀರಿನಿಂದ ಸ್ನಾನ ಮಾಡುವುದರಿಂದ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು. ಬೇವಿನಲ್ಲಿ ಔಷಧೀಯ ಗುಣಗಳು ಹೆಚ್ಚಾಗಿರುವುದರಿಂದ ವಿವಿಧ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತವೆ. ಬೇವಿನಲ್ಲಿರುವ ಬ್ಯಾಕ್ಟೇರಿಯಾ ವಿರೋಧಿ ಗುಣಗಳು ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಬೇವಿನ ನೀರಿನಿಂದ ಸ್ನಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನವಿದೆ ತಿಳಿಯೋಣ.

neem water bath, benefits, ಬೇವಿನ  ನೀರು, ಸ್ನಾನ , ಪ್ರಯೋಜನಗಳು

ಬೇವಿನ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ಅನೇಕ ತೊಂದರೆಗಳು ನಿವಾರಣೆಯಾಗುತ್ತದೆ. ಆಂಟಿ ಮೈಕ್ರೊಬಿಯಲ್ ಗುಣಗಳು ಇರುವುದರಿಂದ ಇದು ಸೋಂಕನ್ನು ನಿವಾರಿಸುತ್ತದೆ. ಸೋರಿಯಾಸಿಸ್ ಅಥವಾ ಎಸ್ಜಿಮಾದಿಂದ ತೊಂದರೆಗೀಡಾಗಿದ್ದರೆ, ಬೇವಿನ ನೀರಿನಿಂದ ಸ್ನಾನ ಮಾಡಿ.

ದೇಹದ ದುರ್ವಾಸನೆಯನ್ನು ಬೇವು ನಿವಾರಿಸುತ್ತದೆ. ಆಗಾಗ್ಗೆ ದೇಹ ಬಿಸಿ ಮತ್ತು ತೇವಾಂಶವುಳ್ಳ ಭಾಗಗಳಾದ ಜನನಾಂಗದ ಪ್ರದೇಶದಲ್ಲಿ ಬ್ಯಾಕ್ಟೇರಿಯಾಗಳು ಇರುವುದರಿಂದ ದೇಹವು ದುರ್ವಾಸನೆ ಬೀರಲು ಪ್ರಾರಂಭಿಸುತ್ತೆದ. ಬೇವಿನ ನೀರು ಬ್ಯಾಕ್ಚೇರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬ್ಯಾಕ್ಟೇರಿಯಾವನ್ನು ನಾಶ ಮಾಡಲು ನೆರವಾಗುತ್ತದೆ.

ಬೇವಿನ ನೀರನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯದ ಪ್ರಯೋಜನಗಳು ಅನೇಕ. ಕೂದಲು ಸಮಸ್ಯೆಯಿಂದ ತೊಂದರೆಗೀಡಾದವರು, ಬೇವಿನ ನೀರನ್ನು ಬಳಸಬಹುದು. ತಲೆಹೊಟ್ಟು ಮುಕ್ತವಾಗಿರಿಸುತ್ತದೆ. ಕೂದಲಿನ ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ.
ಕಣ್ಣಿನ ತುರಿಕೆ, ಸ್ನಾನದ ಸಮಯದಲ್ಲಿ ಬೇವಿನ ನೀರು ನಿಮ್ಮ ಕಣ್ಣುಗಳಲ್ಲಿ ಬ್ಯಾಕ್ಟೇರಿಯಾವನ್ನು ನಾಶ ಮಾಡಲು ಸಹಾಯ ಮಾಡುತ್ತದೆ. ಇದು ಉತ್ತಮ ಬ್ಯಾಕ್ಟೇರಿಯಾ ವಿರೋಧಿ ಗುಣಗಳನ್ನು ಹೊಂದಿದೆ.ಸ್ನಾಯು ನೋವನ್ನು ನಿವಾರಿಸುತ್ತದೆ. ಬೆಚ್ಚಗಿನ ನೀರು ಸ್ನಾಯು ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಬೇವಿನ ಎಲೆಗಳನ್ನು ಕುದಿಸಿ ಸ್ಥಾನಕ್ಕೆ ಈ ನೀರನ್ನು ಬಳಸಬಹುದಾಗಿದೆ.

neem water bath, benefits, ಬೇವಿನ  ನೀರು, ಸ್ನಾನ , ಪ್ರಯೋಜನಗಳುಬೇವಿನ ನೀರು ಪ್ರಯೋಜನಕಾರಿ ಅಂತಲೇ ಹೇಳಬಹುದು. ಚರ್ಮದ ಸಮಸ್ಯೆಗಳಿಗೆ ಬೇವಿನ ನೀರು ಪ್ರಯೋಜನಕಾರಿ, ಬೇವಿನಲ್ಲಿ 140ಕ್ಕೂ ಅಧಿಕ ಸಂಯುಕ್ತಗಳಿವೆ. ಇವು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸೋರಿಯಾಸಿಸ್ ನಂತಹ ಸಮಸ್ಯೆಗಳಿದ್ದ ಬಳಲುತ್ತಿದ್ದರೆ, ಬೇವಿನ ನೀರಿನಿಂದ ಸ್ನಾನ ಮಾಡಬಹುದು.

ದೇಹದ ವಾಸನೆಯನ್ನು ನಿವಾರಿಸಲು ಬೇವು ನೆರವಾಗುತ್ತದೆ. ದೇಹದ ಬಿಸಿ ಮತ್ತು ತೇವಾಂಶದಿಂದ ಆಗಾಗ ದೇಹ ದುರ್ವಾಸನೆ ಬೀರಲು ಪ್ರಾರಂಭಿಸುತ್ತದೆ. ಬೇವಿನ ನೀರಿನಲ್ಲಿರುವ ಬ್ಯಾಕ್ಟೇರಿಯಾ ವಿರೋಧಿ ಗುಣಗಳು ಸೋಂಕನ್ನು ನಿವಾರಿಸುತ್ತದೆ. ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೇವಿನ ನೀರನ್ನು ಬಳಸುವುದರಿಂದ ಕೆಟ್ಟ ವಾಸನೆಯನ್ನು ನಿವಾರಿಸಬಹುದು.

ಬೇವಿನ ನೀರಿನ ಸ್ನಾನದಿಂದ ತಲೆಹೊಟ್ಟು ನಿವಾರಿಸಬಹುದಾಗಿದೆ. ತಲೆಹೊಟ್ಟು ನಿವಾರಣೆಯಲ್ಲಿ ಬೇವಿನ ನೀರು ಅದ್ಭುತದಂತೆ ಕೆಲಸ ಮಾಡುತ್ತದೆ. ಕೂದಲು ಸಮಸ್ಯೆಯಿಂದ ತೊಂದರೆ ಗೀಡಾದವರು ಬೇವಿನ ನೀರನ್ನು ಬಳಸಬಹುದು. ಇದರಿಂದ ತಲೆ ಹೊಟ್ಟು ನಿವಾರಣೆಯಾಗುವುದಲ್ಲದೇ, ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.

ಕಣ್ಣಿನ ಸೋಂಕನ್ನು ನಿವಾರಿಸಲು ಬೇವಿನ ಎಲೆಗಳ ನೀರನ್ನು ಬಳಸಬಹುದಾಗಿದೆ. ಕಣ್ಣಿನ ತುರಿಕೆ, ಕಣ್ಣಿನ ತೊಂದರೆ ಹೀಗೆ ನಾನಾ ರೀತಿಯ ಕಣ್ಣಿನ ಸಮಸ್ಯೆಗಳಿಗೆ ಬೇವಿನ ನೀರಿನಿಂದ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ದೊರೆಯುತ್ತದೆ. ಏಕೆಂದರೆ ಬೇವಿನ ನೀರು ಉತ್ತಮ ಬ್ಯಾಕ್ಟೇರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ವಯಸ್ಸಾಗುವಿಕೆಯನ್ನು ನಿವಾರಿಸಲು ಬೇವಿನ ನೀರನ್ನು ಬಳಸಬಹುದಾಗಿದೆ. ವಯಸ್ಸಾಗುವಿಕೆಯ ವಿರೋಧಿ ಗುಣಗಳು ಬೇವಿನಲ್ಲಿದ್ದು, ನಿಯಮಿತವಾಗಿ ಸ್ನಾನ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಕಾಣಬಹುದಾಗಿದೆ. ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

ಕೂದಲು ಪೋಷಣೆಗೆ ಮಾರುಕಟ್ಟೆಯಲ್ಲಿ ಸೀಗುವ ಉತ್ಪನಗಳಿಗಿಂತ ಬೇವಿನ ನೀರು ಉತ್ತಮ ಎಂದು ಹೇಳಬಹುದು. ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಬೇವಿನ ನೀರು ನೆರವಾಗುತ್ತದೆ. ಬೇವಿನಲ್ಲಿರುವ ಔಷಧೀಯ ಗುಣಗಳು ರಂಧ್ರಗಳನ್ನು ಶುದ್ಧೀಕರಿಸಲು ಹಾಗೂ ಹೊಸ ಕೂದಲನ್ನು ಬೆಳೆಸಲು ನೆರವಾಗುತ್ತವೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ನೀರನ್ನು ತಂಪಾಗಿಸಿ ನಿಮ್ಮ ಕೂದಲನ್ನು ತೊಳೆಯಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ