ಕೂದಲು ಉದುರುವ ಸಮಸ್ಯೆಯೇ.. ಶಾಂಪುಗೆ ಇವುಗಳನ್ನು ಮಿಕ್ಸ್ ಮಾಡಿ.!

  • by

ಕೂದಲು ಉದುರುವ ಸಮಸ್ಯೆಯನ್ನು ಎಲ್ಲರೂ ಫೇಸ್ ಮಾಡುತ್ತಿರುತ್ತಾರೆ. ಕೂದಲು ಉದರುವುದು ತಡೆಯುವುದೆಂದರೆ ಸವಾಲಿನ ಸಂಗತಿ. ಸವಾಲಿನ ಸಂಗತಿ. ಇವತ್ತಿನ ದಿನಗಳಲ್ಲಿ ಕೂದಲಿಗಾಗಿ ಬಳಸುವ ಶಾಂಪುಗಳು ರಾಸಾಯನಿಕಗಳಿಂದ ಕೂಡಿರುತ್ತದೆ. ಇದು ದೀರ್ಘಾವಧಿವರೆಗೂ ನಿಮ್ಮ ಕೂದಲಿಗೆ ಹಾನಿ ಮಾಡಬಹುದು. ಆದ್ರೆ ನೈಸರ್ಗಿಕ ಪದಾರ್ಥಗಳನ್ನು ಬಳಸುವ ಮೂಲಕ ಸುಲಭವಾಗಿ ಪರಿಹಾರವನ್ನು ಕಂಡು ಕೊಳ್ಳಬಹುದು. ಈ ನೈಸರ್ಗಿಕ ಪದಾರ್ಥಗಳನ್ನು ನಿಮ್ಮ ಶಾಂಪುಗೆ ಸೇರಿಸಬಹುದು.

natural ingredients, shampoo ,quick hair growth, ಕೂದಲು ಉದುರುವ ಸಮಸ್ಯೆ, ಪರಿಹಾರ.

ಜೇನುತುಪ್ಪ..!
ಜೇನುತುಪ್ಪವನ್ನು ಸ್ಕಿನ್ , ಹಾಗೂ ಹೇರ್ ಗೂ ಬಳಸಬಹುದು. ಜೇನುತುಪ್ಪ ನಿಮ್ಮ ಕೂದಲಿಗೆ ಮಾಯಿಶ್ಚರೈಸರ್ ನೀಡುತ್ತದೆ. ಅಲ್ಲದೇ ಜೇನುತುಪ್ಪ ಬಳಸುವುದರಿಂದ ನಿಮ್ಮ ಕೂದಲಿನ ಬುಡ ಗಟ್ಟಿಯಾಗುತ್ತದೆ. ಹಾಗೂ ತುಂಬಾ ತ್ವರಿತವಾಗಿ ಕೂದಲು ಬೆಳವಣಿಗೆಯಾಗಲು ನೆರವಾಗುತ್ತದೆ. ಕೂದಲಿನ ಹೊಳಪು ಹೆಚ್ಚಿಸುತ್ತದೆ. 2 ಟೇಬಲ್ ಸ್ಪೂನ್ ಜೇನುತುಪ್ಪಗೆ , 2 ಟೇಬಲ್ ಸ್ಪೂನ್ ಶಾಂಪು ತೆಗೆದುಕೊಂಡು ಮಿಕ್ಸ್ ಮಾಡಿ. ನಂತರ ತಲೆಗೆ ಹಚ್ಚಿ. ನಂತರ ಕೂದಲನ್ನು ವಾಶ್ ಮಾಡಿ.

ಸಕ್ಕರೆ ಮತ್ತು ಶಾಂಪು!
ಸಕ್ಕರೆ ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಸಕ್ಕರೆ ಕೂದಲಿನ ಬುಡ ಬಲವಾಗಿಸುವುದರ ಜತೆಗೆ ಡೆಡ್ ಸ್ಕಿನ್ ತೆಗೆದುಹೊಕಲು ನೆರವಾಗುತ್ತದೆ. ನಿಮ್ಮ ಬುಡದ ಎಲ್ಲಾ ಕೊಳೆಯನ್ನು ನಿವಾರಿಸುತ್ತದೆ. ಮತ್ತು ಕೂದಲು ಬೆಳವಣಿಗೆ ಸಹಾಯ ಮಾಡುತ್ತದೆ. ಕೂದಲನ್ನು ತೊಳೆಯುವ ಮೊದಲು ನಿಮ್ಮ ಶಾಂಪುಗೆ 1 ಟೇಬಲ್ ಸ್ಪೂನ್ ಸಕ್ಕರೆ ಸೇರಿಸಿ, ತಲೆ ಸ್ನಾನ ಮಾಡಬಹುದು.

ನಿಂಬೆರಸ
ನಿಂಹೆ ಹಣ್ಣು ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುವುದಲ್ಲದೇ, ಕೂದಲಿನ ಬೆಳವಣಿಗೆ ಹೆಚ್ಚಿಸುತ್ತದೆ. ತಲೆಹೊಟ್ಟಿನ ಸಮಸ್ಯೆ ಎದುರಿಸುತ್ತಿರುವವರು ನಿಂಬೆ ರಸ ಅದ್ಭುತ ಪ್ರಯೋಜನ ಅಂತಲೇ ಹೇಳಬಹುದು. ನಿಮ್ಮ ಶಾಂಪೂಗೆ ನಿಂಬೆ ರಸ ಸೇರಿಸುವುದರಿಂದ ಎಲ್ಲಾ ಬಗೆಯ ಸೋಂಕನ್ನು ತಡೆಗಟ್ಟಲು ಸಹಾಯವಾಗುತ್ತದೆ. ತಲೆಹೊಟ್ಟು ಹಾಗೂ ಕೂದಲಿನ ಇತರ ಸಮಸ್ಯೆಗಳಿದ್ದಾಗ ನಿಮ್ಮ ಕೂದಲು ವೇಗವಾಗಿ ಬೆಳೆಯಲು ನಿಂಬೆ ರಸ ಪ್ರಯೋಜನಕಾರಿಯಾಗಿದೆ. ನಿಮ್ಮ ಕೂದಲನ್ನು ಹೆಚ್ಚು ಕಾಲ ತಾಜಾ ಇರಿಸುತ್ತದೆ. ನಿಮ್ಮ ಶಾಂಪೂಗೆ 1 ಟೇಬಲ್ ಸ್ಪೂನ್ ನಿಂಬೆ ರಸ ಸೇರಿಸಬಹುದು.

ರೋಸ್ ವಾಟರ್ ಜತೆ ಶಾಂಪು..!
ರೋಸ್ ವಾಟರ್ ನಿಮ್ಮ ಚರ್ಮಕ್ಕೆ ಮಾತ್ರವಲ್ಲದೇ, ಕೂದಲಿಗೂ ಅದ್ಭುತವಾಗಿದೆ. ರೋಸ್ ವಾಟರ್ ನಿಮ್ಮ ಕೂದಲಿನ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಯಾ ಮಾಡುತ್ತದೆ. ಇದು ಕೂದಲಿನ ಬುಡವನ್ನು ಬಲಗೊಳಿಸುತ್ತದೆ. ತಾಜಾತನ ಕಾಪಾಡುತ್ತದೆ. ತಲೆಹೊಟ್ಟು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಶಾಂಪೂಗೆ ರೋಸ್ ವಾಟರ್ ಸೇರಿಸುವುದರಿಂದ ಕೂದಲಿನ ಬೆಳವಣಿಗೆ ಸರಾಗವಾಗಿ ಆಗುತ್ತದೆ. ರೋಸ್ ವಾಟರ್, ಜತೆ ಶಾಂಪು ಸೇರಿಸಿ ತಲೆ ಸ್ನಾನ ಮಾಡಬಹುದು.

ಲ್ಯಾವೆಂಡರ್ ಆಯಿಲ್

ಕೂದಲಿನ ಬುಡ ಒಣಗಿದಾಗ ಹಲವು ಸಮಸ್ಯೆಗಳು ಉಂಟಾಗುತ್ತದೆ. ಒಣ ಸ್ಕ್ಯಾಲಪ್ ಹೊಂದಿದ್ದರೆ . ಈ ರೆಮಿಡಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಲ್ಯಾವೆಂಡರ್ ಎಣ್ಣೆ ಯನ್ನು 5 ಡ್ರಾಪ್ ಗಳನ್ನು ಶಾಂಪು ಜತೆಗೆ ಸೇರಿಸಿ ಹಚ್ಚಿಕೊಳ್ಳಬೇಕು. ಇದು ಪಾಸ್ಟ್ ಆಗಿ ಹೇರ್ ಬೆಳವಣಿಗೆ ಕಾಣಲು ಸಹಾಯ ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ