ಉಗುರಿನ ಸೌಂದರ್ಯ ಹೆಚ್ಚಿಸುತ್ತೆ ನೈಲ್ ಪಾಲಿಶ್

  • by

ಎಲ್ಲರಿಗೂ ನೈಲ್ ಪಾಲಿಶ್ ಹಚ್ಚುವುದು ಇಷ್ಟ. ನೈಲ್ ಪಾಲೀಶ್ ಉಗುರಗಳ ಅಂದ ಹೆಚ್ಚಿಸುತ್ತೆದೆ. ಸಭೆ ಸಮಾರಂಭಗಳಿಗೆ ಹೋಗುವಾಗ ಉಗುರುಗಳಿಗೆ ಎಲ್ಲಾ ಮಹಿಳೆಯರು ನೈಲ್ ಪಾಲಿಶ್ ಹಚ್ಚುತ್ತಾರೆ. ನೈಲ್ ಪಾಲಿಶ್ ಹಚ್ಚಿದಾಗ ಅದು ಬೇಗ ಒಣಗಲು  ಸಮಯ ತೆಗದುಕೊಳ್ಳುತ್ತದೆ. ಹಾಗಾಗಿ ಅದು ಬೇಗ ಒಣಗ ಬೇಕಾದರೆ ಏನು ಮಾಡಬೇಕು. ನೈಲ್ ಪಾಲೀಶ್ ಹಚ್ಚುವುದು ಹೇಗೆ.. ? ಡಿಟೇಲ್ಸ್ ಇಲ್ಲಿದೆ. 

ಉಗುರುಗಳಿಗೆ ನೈಲ್ ಪಾಲೀಶ್ ಹಚ್ಚುವುದು ಹೇಗೆ

ಎಡಗೈ ಕಿರುಬೆರಳಿಗಳಿಗೆ ಬಣ್ಣ ಹಚ್ಚುವುದು ಗೊತ್ತೇ. ಸಾಮಾನ್ಯವಾಗಿ ಬಣ್ಣ ಹಚ್ಚಲು ಆರಂಭಿಸಿದ ನಂತರ ಮುಗಿದ ಮೇಲೆ ಬೇರೆ ಬೆರಳಿಗೆ ನೈಲ್ ಪಾಲೀಶ್ ಹಚ್ಚಬೇಕು. 

ಪ್ರತಿಯೊಂದು ಉಗುರಿಗೆ ನೀವು ಅದರ ಮೊದಲ ಮಧ್ಯಭಾಗಕ್ಕೆ ಬಣ್ಣ ಹಚ್ಚಿ ನಂತರ ಅಕ್ಕ ಪಕ್ಕದ ಬೆರಳುಗಳಿಗೆ ಬಣ್ಣ ಹಚ್ಚಬೇಕು. ಯಾವಾಗಲು ಬಣ್ಣವನ್ನು ಹಚ್ಚುವುದು ಎಂದು ಮೊದಲೇ ಪೂರ್ತಿ ನಿರ್ಧರಿಸಿರಬೇಕು. 

ಉಗುರುಗಳು ಆರೋಗ್ಯಕರ ಕಳೆಯನ್ನು ಹೊರ ಸೊಸುವಂತಾಗಲು ಬೇಸ್ ಕೋಟ್ ಪಾಲಿಷ್ ತುಂಬಾ ಮುಖ್ಯ ಪಾತ್ರವಹಿಸುತ್ತದೆ. ಇದು ಉಗುರು ಬಣ್ಣದ ಕಲೆಗಳು ಉಳಿಯದಂತೆ ಅಥವಾ ಉಗುರು ಹಾಳಾಗದಂತೆ ತಡೆಯುತ್ತದೆ. ಜತೆಗೆ ನೈಲ್ ಪಾಲಿಶ್ ಮಾಡುವುದಕ್ಕೆ ಮುನ್ನ ಹಚ್ಚಲು ಅತ್ಯುತ್ತಮ ತಳಪಾಯ ಅಥವಾ ಬೇಸ್ ಕೋಟ್ ಆಗಿದೆ. 

ಆಲಿವ್ ಎಣ್ಣೆಯನ್ನು ಪ್ರತಿ ದಿನ ಉಗುರಗಳಿಗೆ ಹಚ್ಚಿ ಅಥವಾ ಬೆಚ್ಚಗೆ ಮಾಡಿದ ಆಲಿವ್ ಎಣ್ಣೆಯಲ್ಲಿ ಆದು ನಿಮಿಷ ಕಾಲ ಅದ್ದಿರಿ. ಮಲಗುವ ಮುನ್ನ ನಿಮ್ಮ ಉಗುರುಗಳಿಗ ಸಮೃದ್ಧ ಕ್ರೀಮ್ ಗಳನ್ನು ಹಚ್ಚಿರಿ.

ಒಂದು ಬೌಲ್ ನಲ್ಲಿ ಹಾಲು ತುಂಬಿ ಅದರಲ್ಲಿ ೧೦ ನಿಮಿಷಗಳ ಕಾಲ ನಿಮ್ಮ ಬೆರಳುಗಳನ್ನು ಮುಳುಗಿಸಿಟ್ಟುಕೊಳ್ಳಿ. ನಂತರ ಒತ್ತಿ ಒರೆಸಿ. 

೩ ೩ಟೇಬಲ್ ಚಮಚ ಲೆನಿಲಿನ್ ಗೆ ೧ ಟೀ ಚಮಚ ಎಳ್ಳೆಣ್ಣೆ ಬೆರೆಸಿದ ಕ್ರೀಮನ್ನು ನಿಮ್ಮ ಬೆರಳುಗಳಿಗೆ ಲೇಪಿಸಿ. ಹತ್ತಿಯಲ್ಲಿ ವಸ್ತುಗಳನ್ನು  ಬಳಸಿ. 

ಉಗುರು ಬೆಚ್ಚಗಿನ ಸೋಪಿನ ನೀರಲ್ಲಿ ಕೈಗಳನ್ನು ಪಾದಗಳನ್ನು ಇಟ್ಟು ಬಿಡಿ . ನಿಧಾನವಾಗಿ ನಿಮ್ಮ ಉಗುರಿನಲ್ಲಿ ಕೊಳೆ ಬಿಟ್ಟುಕೊಳ್ಳುತ್ತದೆ. ಬೇಕಾದರೆ ನೈಲ್ ಬ್ರಶ್ ನಿಂದ ಉಗುರನ್ನು  ಸ್ವಚ್ಛಗೊಳಿಸಿ. ನಂತರ ಸ್ವಲ್ಪ ಬಾಡಿನ ಲೋಷನ್ ಹಚ್ಚಿ ಬಿಡಿ. 

ನೈಲ್ ಪಾಲಿಶ್ ಹಚ್ಚುವ ಮುನ್ನ ಬೇಸ್ ಕೋಟ್ ಹಾಕುವುದನ್ನು ಮಾತ್ರ ಮರೆಯಬಾರದು. ಕೆಮಿಕಲ್ ಉಪಯೋಗಿಸಿಯೇ ನೈಲ್ ಪಾಲಿಶ್ ಗಳನ್ನು ತಯಾರಿಸುತ್ತಾರೆ. ಕೆಮಿಕಲ್ ನಮ್ಮ ಉಗುರಿಗೆ ನೈಸರ್ಕಿಕ ಬಣ್ಣವನ್ನು ನುಂಗಿ ಹಾಕುತ್ತದೆ. ಹಾಗಿರುವಾಗ ಬೇಸ್ ಕೋಟ್ ಹಚ್ಚಲೇಬೇಕು. 

ನೈಲ್ ಪಾಲಿಶ್ ಹಚ್ಚುವುದು, ತೀರಾ ಕಷ್ಟ ಅಂದ್ರೆ ಉಗುರಿಗೆ ಬಣ್ಣ ಹಚ್ಚುವ ಮೊದಲೇ , ಉಗುರಿನ ಸುತ್ತ ಸ್ವಲ್ಪ ವ್ಯಾಸ್ಲೀನ್ ಅಥವಾ ಇನ್ನಾವುದೇ ಬಾಡಿಲೋಶನ್ ಗಳಂತಹ ಲೋಶನ್ ಬಳಸಿ. 

ಯಾವುದೇ ನೈಲ್ ಪಾಲಿಶ್ ಹಚ್ಚುವಾಗಲೂ ಕೋಟ್ ಗಳ ಬಗ್ಗೆ ಗಮನವಿರಲಿ. ಒಂದು ಸಲ ನೈಲ್ ಪಾಲಿಶ್ ಹಚ್ಚುವಾಗ ಇಡೀ ಉಗುರಿಗೆ ತಾಗಲಿ, ಅರ್ಧ ಬಿಟ್ಟು ಅರ್ಧ ಹಚ್ಚುವುದರಿಂದ ಪರ್ಫೆಕ್ಷನ್ ಹೋಗಿ ಬಿಡುತ್ತದೆ. 

ಹೆಚ್ಚಿನವರು ನೈಲ್ ಪಾಲಿಶ್ ಹಚ್ಚೋದು ಸುಲಭ ಎಂದು ಫಂಕ್ಷನ್ ಗೆ ಹೊರಡುವ ವೇಳೆ ಕೊನೆ ಘಳಿಗೆಯಲ್ಲಿ ನೈಲ್ ಪಾಲಿಶ್ ಹಚ್ಚುತ್ತಾರೆ. ಅದು ಸರಿಯಾಗಿ ಒಣಗುತ್ತದೆ. ಉಗುರಿಗೆ ಹೊರಗೆಲ್ಲಾ ತಾಗಿ ನಿಮ್ಮ ಉಗುರಿನ ಸೊಂದರ್ಯವನ್ನು ಕೆಡಿಸಿಬಿಡುತ್ತದೆ. ಹಾಗಾಗಿ ತರಾತುರಿಯಲ್ಲಿ ನೈಲ್ ಪಾಲೀಶ್ ಹಚ್ಚುವುದರ ಬದಲು, ನಿಧಾನವಾಗಿ ನೈಲ್ ಪಾಲೀಶ್ ಹಚ್ಚಿ, ಒಣಗಲು ಬಿಡಿ. 

ಉಗುರಿನ ಸುತ್ತಲಿನ ಚರ್ಮಕ್ಕೆ ಜೆಲ್ಲಿ ಹಚ್ಚಿಕೊಳ್ಳಬೇಕು. ಉಗುರಿನ ಸುತ್ತ ಮುತ್ತಲಿನ  ಚರ್ಮಕ್ಕೆ ಕ್ಯೂ ಟಿಪ್ ನೆರವಿನಿಂದ ಪೊಟ್ರೋಲಿಯಂ ಜೆಲ್ಲಿ ಹಚ್ಚಿ. ನೆರವಿನಿಂದ ಉಳಿದ ಪಾಲಿಶ್ ಅನ್ನು ತೆಗೆಯಿರಿ. ಪೆಟ್ರೋಲಿಯಂ ಜೆಲ್ಲಿ ಹಚ್ಚಿರುವ ಕಾರಣ, ಹೆಚ್ಚುವರಿ ನೈಲ್ ಪಾಲಿಶ್ ಸುಲಭವಾಗಿ ಕ್ಲೀನ್ ಆಗುತ್ತದೆ. 

ನೈಲ್ ಪಾಲಿಶ್ ಬಳಕೆ ಮಾಡಿದ ಬಳಿಕ ಅದರ ಬಾಟಲ್ ಕ್ಯಾಪ್ ಅನ್ನು ಸಮರ್ಪಕವಾಗಿ ಹಾಕಿಡಿ. ಗಾಳಿ ಬಾಟಲ್ ಒಳಗೆ ಸೇರಿದರೆ ನೈಲ್ ಪಾಲಿಶ್ ಗಟ್ಟಿಯಾಗಿ ಮತ್ತೆ ಬಳಕೆಗೆ ಯೋಗ್ಯವಾಗಿರುವುದಿಲ್ಲ. ನೈಲ್ ಪಾಲಿಶ್ ಹಚ್ಚುವ ಮುನ್ನ ಬಾಟಲಿಯಲ್ಲಿ ಚೆನ್ನಾಗಿ ಅಲುಗಾಡಿಸಬೇಕು. ಬಳಿಕವೇ ಬಳಸಬೇಕು. ಇದರಿಂದ ನೈಲ್ ಪಾಲಿಶ್ ಹಳೆಯದಾಗಿದ್ದರು ಹೊಚ್ಚ ಹೊಸದಂತೆ ಲುಕ್ ನೀಡುತ್ತದೆ. ನೈಲ್ ಪಾಲಿಶ್ ಬಾಟಲ್ ಗಳನ್ನು ಫ್ರಿಜ್ ನಲ್ಲಿಟ್ಟರೆ ದೀರ್ಘಕಾಲ ಬಾಳಿಕೆ ಬರುತ್ತವೆ. 

ಕೆಲವು ಕಲರ್ ಗಳು ಉಗುರಿನ ಮೇಲೆ ಡಲ್ ಆಗಿ ಕಾಣಿಸುತ್ತವೆ. ಹೀಗಾಗಿ ಇವುಗಳನ್ನು ಬಳಸುವ ಮುನ್ನ ಉಗರಿಗೆ ತಿಳಿ ಅಥವಾ ಮೆಟಾಲಿಕ್ ಬಣ್ಣದ ಒಂದು ಕೋಟ್ ಹಚ್ಚಬೇಕು. ಬಳಿಕ ನಿಮಿಷದ ನಂತರ ಬಣ್ಣ ಹಚ್ಚಿದ ನಂತರ ಒಂದು ಕೋಟ್ ಹಚ್ಚಬೇಕು.  ಯಾವದೇ ಬಣ್ಣದ ನೈಲ್ ಪಾಲಿಶ್ ಬಳಸುವ ಮುನ್ನ ಈ ವಿಧಾನವನ್ನು ಅನುಸರಿಸಿ. 

ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚಲು ಹೆಚ್ಚು ಸಮಯ ಬೇಡ. ಆದರೆ ಅದು ಒಣಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ಅದು ಒಣಗಲು ಬಿಡದಿದ್ದರೆ ಹಚ್ಚಿದ ಪಾಲಿಶ್ ಹಾಳಾಗುತ್ತದೆ. ಇದರಿಂದ ನಿಮಗೆ ಬೇಸರವಾಗಬಹುದು. ಆದ್ದರಿಂದ ನೀವು ಹಚ್ಚಿದ ನೈಲ್ ಪಾಲಿಶ್ ಬೇಗ ಒಣಬೇಕೆಂದರೆ ಈ ಟ್ರಿಕ್ಸ್ ಬಳಸಿ.

ನೈಲ್ ಪಾಲಿಶ್ ಹಚ್ಚಿದ ಬಳಿಕ ಒಂದು ಬೌಲ್ ಅಲ್ಲಿ ನೀರು ಮತ್ತು ಐಸ್ ಕ್ಯೂಬ್ಸ್ ಅನ್ನು ಹಾಕಿ. ನಂತರ ನಿಮ್ಮ ಬೆರಳುಗಳನ್ನು ಅವುಗಳಲ್ಲಿ ಅದ್ದಿ. ತಣ್ಣೀರು ನಿಮ್ಮ ಉಗುರುಗಳ ಮೇಲಿನ ನೈಲ್ ಪಾಲಿಶ್ ಬೇಗ ಒಣಗುವಂತೆ ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ