ಮ್ಯೂಸಿಕ್ ಥೆರಪಿ ಎಂದರೇನು? ಖಿನ್ನತೆ ನಿವಾರಣೆಯಲ್ಲಿ ಇದರ ಪಾತ್ರವೇನು!

  • by

ಆರೋಗ್ಯಕರ ದೇಹ ಎಷ್ಟು ಮುಖ್ಯನೋ, ಅಷ್ಟೇ ಆರೋಗ್ಯಕರ ಮನಸ್ಸು ಕೂಡಾ ಮುಖ್ಯವಾಗುತ್ತದೆ. ನಮ್ಮ ಮೆದುಳು ಚಲಿಸುವ ಯಂತ್ರದಂತೆ ಕಾರ್ಯ ನಿರ್ವಹಿಸುತ್ತದೆ. ಮಿದುಳಿನ ಬದಲಾವಣೆಗೆ ಅನುಗುಣವಾಗಿ ನಮ್ಮ ಭಾವನೆಗಳು ಹಾಗೂ ನಡುವಳಿ ಕಾರ್ಯನಿರ್ವಹಿಸುತ್ತವೆ. ನಮ್ಮ ಮನಸ್ಸು ವಿಭಿನ್ನ ಸಂದರ್ಭಗಳಿಗೆ, ಪರಿಸರಕ್ಕೆ ಹೊಂದಿಕೊಳ್ಳುವುದನ್ನು ಕಲಿಸುತ್ತದೆ. ಆದರೆ ಕೆಲವು ಕಾರಣಗಳಿಂದ ನಮ್ಮ ಮೆದಳು ಆಘಾತವಾದಾಗ, ಅದು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಈ ಕಾರಣಗಳು ಸಾಮಾಜಿಕ, ಆರ್ಥಿಕ, ಕುಟುಂಬ ಅಥವಾ ತುಂಬಾ ಖಾಸಗಿಯಾಗಿರಬಹುದು. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಂತರ ಖಿನ್ನತೆ ಹೆಚ್ಚಾಗಬಹುದು. ಹೀಗಾಗಿ ಅನೇಕ ಬಾರಿ ಖಿನ್ನತೆ ನಿವಾರಿಸುವ ಬಗ್ಗೆ ತುಂಬಾ ಜನರು ಯೋಚಿಸುತ್ತಾರೆ.  ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು? ಖಿನ್ನತೆ ನಿವಾರಿಸುವುದು ಹೇಗೆ.. ಈ ಎಲ್ಲಾ ಉತ್ತರಗಳಿಗೆ ಸಂಗೀತ ಚಿಕಿತ್ಸೆ ಮಾತ್ರ ಸಹಾಯ ಮಾಡಬಲ್ಲದ್ದು. ಮ್ಯೂಸಿಕ್ ಚಿಕಿತ್ಸೆಯಿಂದ ಖಿನ್ನತೆಯನ್ನು ಹತೋಟಿಗೆ ತರಬಹುದು. ಮ್ಯೂಸಿಕ್ ಚಿಕಿತ್ಸೆ ನಿಮ್ಮ ಜೀವನವನ್ನು ಬದಲಾಯಿಸಬಹುದು. ಸಂಗೀತ ಚಿಕಿತ್ಸೆ ಸಮಸ್ಯೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಸಮಸ್ಯೆ ಹೇಗೆ ನಿವಾರಿಸುತ್ತದೆ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. 


music Therapy,  depression reduce, 
ಮ್ಯೂಸಿಕ್ ಥೆರಪಿ,  ಖಿನ್ನತೆ ನಿವಾರಣೆಗೆ , ಆರೋಗ್ಯ ಪ್ರಯೋಜನ

ಮ್ಯೂಸಿಕ್ ಥೆರಪಿ ಎಂದರೇನು..? 

ಸಂಗೀತವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರಕೃತಿಯ ಪ್ರತಿಯೊಂದು ಕಣದಲ್ಲೂ ಸಂಗೀತ ತುಂಬಿದೆ. ಇತಿಹಾಸದ ಹಿನ್ನೆಲೆಯಾಗಿ ನೋಡುವುದಾದರೆ, ಬಹುತೇಕ ಎಲ್ಲಾ ದೇವರು-ದೇವತೆಗಳ ಕೈಯಲ್ಲಿ  ವಾದ್ಯಗಳಿದ್ದವು. ಪ್ರಪಂಚದ ಇತರ ಸಂಸ್ಕೃತಿಯಲ್ಲೂ ಇದೇ ರೀತಿಯ ಚಿತ್ರಗಳನ್ನು ಕಾಣಬಹುದು. ಮೊಘಲ ಚಕ್ರವರ್ತಿ ಅಕ್ಬರನ ಆಸ್ಥಾನದ ಪ್ರಸಿದ್ಧ ಸಂಗೀತಗಾರ ತಾನ ಸೇನ್ ತನ್ನ ಸುಮಧುರ ಗಾಯನದಿಂದ ಕಾಡಿನ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಕರೆಯುತ್ತಿದ್ದನು ಎಂಬ ಕಥೆ ನೀಮಗೆ ಗೊತ್ತಿರಬಹುದು. ಸಂಗೀತ ಚಿಕಿತ್ಸೆಯಲ್ಲಿ ಮಧುರ ಸ್ವರಗಳು, ರಾಗಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿಸುವ ಶಕ್ತಿ ಪಡೆದಿವೆ. ಇವು ಮನಸ್ಸಿನ ನಕಾರಾತ್ಮಕ ಆಲೋಚನೆಗಳನ್ನು ತೆಗೆದು ಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.  

ಸಂಗೀತ ಚಿಕಿತ್ಸಕ ಅಥವಾ ಪ್ರವೃತ್ತಿ ಸಂಗೀತಗಾರ, ಇಲ್ಲವೇ ತರಬೇತಿ ಪಡೆದ ವೈದ್ಯ, ರೋಗಿಗಳಿಗೆ ಅನಾರೋಗ್ಯ ಅರಿತು, ಅವರ ಅಗತ್ಯಕ್ಕೆ ಅನುಗುಣವಾಗಿ 1 ಗಂಟೆ ಅಥವಾ ಹೆಚ್ಚಿನ ಸಮಯದವರೆಗೆ ಈ ಚಿಕಿತ್ಸೆ ನೀಡುತ್ತಾರೆ. ಈ ಚಿಕಿತ್ಸೆ ವೇಳೆ ರೋಗಿಗೆ ವಿಭಿನ್ನ ರಾಗಗಳನ್ನು ಕೇಳಿಸಲಾಗುತ್ತದೆ. 

ಇನ್ನು ಅನೇಕ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ. ಸಂಗೀತ ಚಿಕಿತ್ಸೆಯ ಪರಿಣಾಮದ ಬಗ್ಗೆ ಈ ಹಿಂದೆ ಅನೇಕ ಸಂಶೋಧನೆ ನಡೆದಿದೆ. ಆದ್ರೆ ಸ್ಕಿಜೋಫ್ರೇನಿಯಾ ಮತ್ತು ಖಿನ್ನತೆಯ ಸಮಸ್ಯೆಯನ್ನು ಸಂಗೀತ ಚಿಕಿತ್ಸೆ ಗುಣಪಡಿಸಬಹುದು ಎಂದು ಈಗಾಗ್ಲೇ ವೈಜ್ಞಾನಿಕ ಪುರಾವೆಗಳಿಂದ ಸಾಬೀತಾಗಿದೆ. 


music Therapy,  depression reduce, 
ಮ್ಯೂಸಿಕ್ ಥೆರಪಿ,  ಖಿನ್ನತೆ ನಿವಾರಣೆಗೆ , ಆರೋಗ್ಯ ಪ್ರಯೋಜನ

ಚಿಕಿತ್ಸಕರು ಹೇಗೆ ಕೆಲಸ ಮಾಡುತ್ತಾರೆ? 

ಚಿಕಿತ್ಸಕರು ಮುಖ್ಯವಾಗಿ ವ್ಯಕ್ತಿಯ ಭಾವನಾತ್ಮಕತೆ , ಮಾತನಾಡುವ ಕೌಶಲ್ಯ, ಸಾಮಾಜಿಕ ಸಂಬಂಧ ಹೀಗೆ ವ್ಯಕ್ತಿಯ ಜತೆ ಮಾತನಾಡುವ ಮೂಲಕ ಪರೀಕ್ಷಿಸು್ತತಾರೆ. ನಂತರ ರೋಗಿಗಳ ತಾತ್ಕಾಲಿಕ ಅವಶ್ಯಕತೆಗೆ ಅನುಗುಣವಾಗಿ ರಾಗಗಳು ಹಾಗೂ ಸ್ವರಗಳನ್ನು ಆಯ್ಕೆ ಮಾಡುತ್ತಾರೆ. ಈ ವೇಳೆ ರೋಗಿಗಳಿಗೆ 30 ನಿಮಿಷಗಳ ಮ್ಯೂಸಿಕ್ ಸೆಷನ್ ದೊರೆಯುತ್ತದೆ. ಈ ವೇಳೆ ಕೇವಲ ರೋಗಿಗೆ ಮ್ಯೂಸಿಕ್ ಕೇಳಿಸಲಾಗುತ್ತದೆ. ಸಂಗೀತ ಕೇಳಿಸುವುದು ಅಷ್ಟೇ ಅಲ್ಲ, ವಾದ್ಯಗಳನ್ನು ನುಡಿಸುವಂತೆ ಹಾಗೂ ಹಾಡುಗಳನ್ನು ಬರೆಯುವಂತೆ ಸಹ ಹೇಳಲಾಗುತ್ತದೆ. ಈ ಸಮಯವನ್ನು ಕ್ರಮೇಣ ಹೆಚ್ಚಿಸಲಾಗುತ್ತದೆ. ಆರಂಭದಲ್ಲಿ ಯಾವುದೇ ಪರಿಣಾಮ ಬೀರದಂತೆ ಕಂಡು ಬಂದರೂ, ನಿಧಾನವಾಗಿ ಇದು ಕಾರ್ಯನಿರ್ವಹಿಸುತ್ತದೆ. ಸರಳವಾಗಿ ಹೇಳುವುದಾದರೆ, ಸಂಗೀತವು ನಿಮಗೆ ಚಿಕಿತ್ಸೆ ನೀಡುತ್ತದೆ.

ಮ್ಯೂಸಿಕ್ ಚಿಕಿತ್ಸೆಯ ಪ್ರಯೋಜನಗಳು

ಸಂಗೀತ ಚಿಕಿತ್ಸೆಯು ಸಂಗೀತ ರಾಗಗಳನ್ನು ರೆಡಿ ಮಾಡುವುದು ಹಾಗೂ ಕೇಳುವುದನ್ನು ಒಳಗೊಂಡಿರುತ್ತದೆ. ನೀವು ಇತರ ರೋಗಿಗಳೊಂದಿಗೆ ಅಥವಾ ನಿಮ್ಮ ಚಿಕಿತ್ಸೆಕರು ರೋಗಿಗಳ ಜತೆಗೆ ಸಂಗೀತ ಚರ್ಚೆಯಲ್ಲಿ ಭಾಗಿಯಾಗುತ್ತಾರೆ.  ಮ್ಯೂಸಿಕ್ ಅಂದ್ರೆ ಎಲ್ಲರಿಗೂ ಇಷ್ಟ. ಅದು ಪ್ರಾಣಿಗಳಾಗಲಿ, ಅಥವಾ ಮನುಷ್ಯರಾಗಲಿ, ಮಾನಸಿಕ ಆರೋಗ್ಯ ಚಿಕಿತ್ಸೆ ನೀಡುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. 


music Therapy,  depression reduce, 
ಮ್ಯೂಸಿಕ್ ಥೆರಪಿ,  ಖಿನ್ನತೆ ನಿವಾರಣೆಗೆ , ಆರೋಗ್ಯ ಪ್ರಯೋಜನ

ಸಂಗೀತ ಚಿಕಿತ್ಸೆ ಯಾವ ಸಮಸ್ಯೆಗಳಿಗೆ ಪರಿಣಾಮಕಾರಿ!

ಸಂಗೀತ ಚಿಕಿತ್ಸೆ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದರಲ್ಲಿ ಮುಖ್ಯವಾಗಿ ಮಸಲ್ಸ್ ಬಗ್ಗೆ ಟೆನ್ಶನ್, ಬ್ರೇಕ್ ಅಪ್ ನಂತರ ಮಾನಸಿಕವಾಗಿ ಕುಗ್ಗುವುದು, ಕೀಳರಿಮೆ ಭಾವನೆಗಳನ್ನು ತೊಡೆದು ಹಾಕುವುದು. ಗಿಲ್ಟಿ ಫೀಲಿಂಗ್, ಆತಂಕ, ರಿಲೇಷನ್ ಶಿಪ್ ನಲ್ಲಿ ಸಮಸ್ಯೆಗಳು, ಅಭಿಪ್ರಾಯ ತಿಳಿಸುವಲ್ಲಿ ಹಿಂಜರಿಕೆ, ಸಂಬಂಧಗಳಲ್ಲಿ ಉಂಟಾಗುವ ಘರ್ಷಣೆ, ಜಗಳ, ಇತ್ಯಾದಿಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಸಂಗೀತ ಚಿಕಿತ್ಸಕರು ಮತ್ತು ಸಂಗೀತ ಚಿಕಿತ್ಸೆ ಕೇಂದ್ರಗಳು ಇತ್ತೀಚಿನ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ಕಾಣಬಹುದು. ದೊಡ್ಡ ಕಾಲೇಜುಗಳು, ಶಾಲೆಗಳು, ಕಾರ್ಪೋರೇಟ್ ಸಂಸ್ಥೆಗಳು ಮ್ಯೂಸಿಕ್ ಥೆರೆಪಿಸ್ಟ್ ಸಹಾಯ ಪಡೆದುಕೊಳ್ಳುತ್ತವೆ. ಕೆಲಸಗಾರರ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ, ಕಮ್ಯೂನಿಕೇಷನ್ ಸ್ಕಿಲ್ಸ್ ಸುಧಾರಿಸಲು ಮ್ಯೂಸಿಕ್ ಥೆರೆಪಿಸ್ಟ್ ಸಹಾಯ ಪಡೆದುಕೊಳ್ಳಲಾಗುತ್ತದೆ. ಅವರು ನಿಮ್ಮ ದೈನಂದಿನ ದಿನಚರಿಯನ್ನು ಸುಧಾರಿಸುತ್ತಾರೆ. ಅಲ್ಲದೇ ಮ್ಯೂಸಿಕ್ ಚಿಕಿತ್ಸಕರು ಜೈಲಿನಲ್ಲಿ, ಆಸ್ಪತ್ರೆಗಳಲ್ಲಿ, ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ, ಹಿರಿಯ ನಾಗರೀಕರ ಯೋಗಕ್ಷೇಮ ಕೇಂದ್ರಗಳಲ್ಲಿ ತಮ್ಮ ಸೇವೆ ನೀಡುತ್ತಾರೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ