ನಿಮ್ಮ ಪೀರಿಯಡ್ಸ್ ಗೊಂದಲಗೊಳಿಸುವ ತಪ್ಪುಗಳು..! -(mistakes that are probably messing up your menstrual cycle )

  • by

ಅನಿಯಮಿತ ಮುಟ್ಟು, ನೋವು, ಮುಂಗೋಪ, ಕಿರಿಕಿರಿ ಇವೆಲ್ಲ ಪೀರಿಯಡ್ಸ್ ಸಮಯದಲ್ಲಿ ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೆಲವರು ಅನಿಯಮಿತ ಪೀರಿಯಡ್ಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಏಕೆಂದರೆ ಜೀವನಶೈಲಿಯಲ್ಲಿ ನಿಮಗೆ ಗೊತ್ತಿಲದಂತೆ ಈ ತಪ್ಪುಗಳನ್ನು ನೀವು ಮಾಡುತ್ತಿರಬಹುದು. ಹಾಗಾಗಿ ಎಚ್ಚರವಹಿಸುವುದು ತುಂಬಾ ಮುಖ್ಯವಾಗುತ್ತದೆ.


ಸಾಕಷ್ಟು ನಿದ್ರೆ ಮಾಡದಿರುವುದು

ಅಸಮರ್ಪಕ ನಿದ್ರೆ ಪೀರಿಯಡ್ಸ್ ವಿಳಂಬ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸಾಕಷ್ಟು ನಿದ್ರೆ ನಿಮ್ಮ ದೇಹದಲ್ಲಿನ ಹಾರ್ಮೋನುಗಳನ್ನು ಸಮತೋಲವನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಅನಿಯಮಿತ ಪೀರಿಯಡ್ಸ್ ಅವಧಿಯನ್ನು ಎದುರಿಸಬೇಕಾಗುತ್ತದೆ. ಮಹಿಳೆಯರು ಮತ್ತು ಯುವತಿಯವರು ಪ್ರತಿ ತಿಂಗಳ ಪೀರಿಯಡ್ಸ್ ಹೊಂದುವುದು ನೈಸರ್ಗಿಕ ಪ್ರಕ್ರಿಯೆ. ಈ ಅವಧಿಯಲ್ಲಿ ಹಾರ್ಮೋನುಗಳ ಬದಲಾವಣೆ ಸಂಭವಿಸುತ್ತದೆ. ಬಹಳಷ್ಟು ಜನರು, ಚಡಪಡಿಕೆ, ಕಿರಿಕಿರಿ ಸಮಸ್ಯೆ ಅನುಭವಿಸುತ್ತಾರೆ. ಪ್ರತಿ ತಿಂಗಳು ನಡೆಯುವ ಪ್ರಕ್ರಿಯೆಯಲ್ಲಿ ಕೆಲವರು ಅಜಾಗರೂಕತೆಯಿಂದ ಕೆಲವು ತಪ್ಪುಗಳನ್ನು ಮಾಡುತ್ತಾರೆ.

ಈ ಅವಧಿಯಲ್ಲಿ ನೈರ್ಮಲ್ಯವನ್ನು ವಿಶೇಶ ಕಾಳಜಿ ವಹಿಸಬೇಕಾಗುತ್ತದೆ. ಅನೇಕ ಬಾರಿ ಮಹಿಳೆಯರು ನೈರ್ಮಲ್ಯ ಕರವಸ್ತ್ರಗಳನ್ನು ಗಂಟೆಯವರೆಗೆ ಬದಲಾಯಿಸುವಿದಿಲ್ಲ. ಪ್ರತಿ 3 ಹಾಗೂ 4 ಗಂಟೆಗೊಮ್ಮೆ ಪ್ಯಾಡ್ ಬದಲಾಯಿಸುವುದು ಉತ್ತಮ.ಅನಿಯಮಿತ ಅಭ್ಯಾಸಗಳನ್ನು ಹೊಂದಿರುವುದರಿಂದ ತಿಂಗಳ ಮುಟ್ಟಾಗುವಿಕೆಯ ಮೇಲೆ ಪರಿಣಾಮ ಬೀರಬಹುದು.

ಸಾಕಷ್ಟು ನಿದ್ರೆ ಮಾಡದಿರುವುದು

ಅಸಮರ್ಪಕ ನಿದ್ರೆ ನಿಮ್ಮ ಅವಧಿಯ ಅಂತಿಮ ವೈರಿ. ಸಾಕಷ್ಟು ನಿದ್ರೆ ನಿಮ್ಮ ದೇಹದಲ್ಲಿನ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಮತ್ತು ಅನಿಯಮಿತ ಅವಧಿಯನ್ನು ಎದುರಿಸಬೇಕಾಗುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವ ಮಹಿಳೆಯರು ಅನಿಯಮಿತವಾಗಿ ಪೀರಿಯಡ್ಸ್ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು.

ಹೆಚ್ಚು ವ್ಯಾಯಾಮ ಮಾಡದಿರುವುದು

ಜೋಶ್ ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರೆ, ಇದ್ದಕ್ಕಿಂದತ್ತೆ ಕಠಿಣವಾದ ತಾಲೀಮು ಆರಂಭಿಸಿದರೆ, ಇದು ನಿಮ್ಮ ಮುಟ್ಟಿನ ಚಕ್ರಕ್ಕೆ ಮಾರಕವಾಗಬಹುದು. ನೀವು ತಾಲೀಮು ಕಡಿಮೆಯಿಂದ ಆರಂಭಿಸಬೇಕು. ಇದನ್ನು ಕ್ರಮೇಣ ಹೆಚ್ಚಿಸಬೇಕು.ಇದ್ದಕ್ಕಿದಂತೆ ಹೆಚ್ಚು ವ್ಯಾಯಾಮ ಮಾಡುವುದರಿಂದ ನಿಮ್ಮ ಖುತುಚಕ್ರವನ್ನು ಗೊಂದಲಗೊಳಿಸಬಹುದು.ನಿಮ್ಮ ದೇಹವು ಬದಲಾವಣೆಯಾಗುವುದು ನಿಮಗೆ ಗೊತ್ತಿರುತ್ತದೆ. ವ್ಯಾಯಾಮವು ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಗಾಗಿ ವೈದ್ಯಕೀ. ಸಹಾಯ ಪಡೆಯಬೇಕಾಗುತ್ತದೆ.


ಒತ್ತಡ ಕಾರಣ

ವೈದ್ಯರ ಪ್ರಕಾರ, ಸರಿಯಾದ ಸಮಯಕ್ಕೆ ಪೀರಿಯಡ್ಸ್ ಆಗದಿರುವುದು ಒತ್ತಡ ಒಂದು ಮುಖ್ಯ ಕಾರಣವಾಗಿದೆ ಎಂದು ಹೇಳಬಹುದು. ಕೆಲಸದ ಒತ್ತಡದಿಂದಾಗಿ ನಿಮ್ಮ ಮಾನಸಿಕ ಆರೋಗ್ಯವು ಅಡ್ಡಿಪಡಿಸುತ್ತದೆ. ನಿಮ್ಮ ಹಾರ್ಮೋನುಗಳ ಮೇಲೆ ಪರಿಣಾಮ ಬೀರಬಹುದು. ಅಂತಿಮವಾಗಿ ಖುತುಚಕ್ರದ ಬಗ್ಗೆ ಗೊಂದಲಕ್ಕೀಡಾಗಬಹುದು.

ಅತಿಯಾಗಿ ತಿನ್ನುವುದು

ಕೆಲವು ಮಹಿಳೆಯರು ಅತಿಯಾಗಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇದು ಕೂಡಾ ಅನಿಯಮಿತ ಪೀರಿಯಡ್ಸ್ ಮೇಲೆ ಪರಿಣಾಮ ಬೀರಬಹುದು.

ಧೂಮಪಾನ ಹಾಗೂ ಮಧ್ಯಪಾನ

ಅತಿಯಾಗಿ ಅಲ್ಕೋಹಾಲ್ ಸೇವಿಸುವುದು, ಹಾಗೂ ಧೂಮಪಾನ ಮಾಡುವುದರಿಂದ ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಸರಿಯಾದ ಆಹಾರ ಸೇವನೆ ಮಾಡದಿರುವುದು. ಜಂಕ್ ಫುಡ್ ಹೆಚ್ಚಾಗಿ ಸೇವಿಸುವುದರಿಂದ ಹಾಗೂ ಸಕ್ಕರೆಯನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಖುತುಚಕ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಅಲ್ಲದೇ ಇದು ಹಾರ್ಮೋನುಗಳ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಪ್ರೋಟೀನ್, ಕಾರ್ಬ್ಸ್ , ಫೈಬರ್ ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು. ಅಲ್ಲದೇ ಅತಿಯಾಗಿ ತಿನ್ನುವುದು ಸ್ವಲ್ಪ ಮಟ್ಟಿಗೆ ಅವೈಡ್ ಮಾಡಬೇಕಾಗುತ್ತದೆ.

ನಿಮ್ಮ ಸೌಂದರ್ಯವರ್ಧಕ ಉತ್ಪನ್ನಗಳು

ಉತ್ಪನ್ನಗಳಾದ ಶಾಂಪು, ಹೇರ್ ಡೈ, ಮಾಯಿಶ್ಚರೈಸರ್ ಗಳು ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನಿಮ್ಮ ಖುತುಚಕ್ರದ ಮೇಲೆ ಇವೆರೆಡು ಪರಿಣಾಮ ಬೀರಬಹುದು. ರಾಸಾಯನಿಕಯುಕ್ತ ಶಾಂಪುಗಳನ್ನು ಬಳಸುವುದರಿಂದ ತಿಂಗಳ ಖುತುಚಕ್ರದ ಮೇಲೆ ಪರಿಣಾಮ ಬೀರಬಹುದು.

ಕೆಲಸದ ಸಮಯದಲ್ಲಿ ಬದಲಾವಣೆ

ಸಾಕಷ್ಟು ಮಹಿಳೆಯರು ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಒಂದೇ ಶಿಫ್ಟ್ ಅನುಸರಿಸಿದರೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಇವರು ಕೆಲಸದ ಶಿಫ್ಟ್ ಬದಲಾವಣೆಯಿಂದಾಗಿ ತೊಂದರೆ ಎದುರಿಸುವ ಸಾಧ್ಯತೆ ಹೆಚ್ಚು. ಅಂದರೆ ಇದು ಅನಿಯಮಿತ ಖುತುಚಕ್ರದ ಮೇಲೆ ಪರಿಣಾಮ ಬೀರಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ