ಚರ್ಮದ ಕಾಂತಿಗೆ ಪುದೀನಾ ಫೇಸ್ ಪ್ಯಾಕ್..!

  • by

ಪುದೀನಾ ಹೆಸರು ಕೇಳಿದಾಕ್ಷಣ, ಅದರ ಪರಿಮಳ ಮನಸ್ಸಿಗೆ ಆಹ್ಲಾದ ನೀಡುತ್ತದೆ. ಮೂಡ್ ಫ್ರೆಶ್ ಮಾಡುತ್ತದೆ.  ರುಚಿ ರುಚಿಯಾದ ಪುದೀನ್ ಚಟ್ನಿ ಕಣ್ಮುಂದೆ ಬರುತ್ತದೆ. ಪುದೀನಾ ಪ್ರತಿ ಅಡುಗೆ ಮನೆಯಲ್ಲೂ ಕಾಣಬಹುದು.. ಅಲ್ಲದೇ ಪುದೀನ ಆರೋಗ್ಯಕ್ಕೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಮಿನಿರಲ್ಸ್. ವಿಟಮಿನ್ ಸಮೃದ್ಧವಾಗಿದೆ. ಇದು ನಿಮ್ಮ ತ್ವಚೆಗೆ ಆ್ಯಂಟಿ ಸೆಂಪ್ಟಿಕ್ ಹಾಗೂ ನೈಸರ್ಗಿಕ ಕ್ಲೆನ್ಸರ್ ನಂತೆ ಕೆಲಸ ಮಾಡುತ್ತದೆ. ಚರ್ಮದ ಕಲೆ ನಿವಾರಣೆಗೆ, ಮೊಡವೆಗಳಿಗೆ ಹಾಗೂ ತ್ವಚೆಯ ಅಂದ ಕಾಪಾಡಲು ಪ್ರಾಥಮಿಕ ಚಿಕಿತ್ಸೆಗಾಗಿ ಪುದೀನ್ ಫೇಸ್ ಪ್ಯಾಕ್ ನ್ನು ಬಳಸಬಹುದಾಗಿದೆ. 

Mint face pack , glowing skin, 
ಚರ್ಮದ ಕಾಂತಿ, ಪುದೀನಾ ಫೇಸ್ ಪ್ಯಾಕ್

ಮೊಡವೆಗಳಿಗೆ ಪುದೀನಾ…!

ಪುದೀನಾ ಎಲೆಗಳನ್ನು ಸರಿಯಾಗಿ ರುಬ್ಬಿಕೊಂಡು. ಬಳಿಕ ಲಿಂಬೆ ರಸ ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಮೊಡವೆಯ ಕಲೆ ಹಾಗೂ ಚರ್ಮಕ್ಕೆ ಹಚ್ಚಿ. ನಂತರ ಇತರ ಭಾಗಗಳಿಗೂ ಹಚ್ಚಿ. ೧೫ ನಿಮಿಷ ಕಾಲ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ದಿನದಲ್ಲಿ ೧ ಸಲ ಹೀಗೆ ಮಾಡಿ.

ಪುದೀನಾ ಫೇಸ್ ಪ್ಯಾಕ್ ಲಾಭಗಳೇನು?

ಪುದೀನಾ ಎಲೆಗಳನ್ನು ಸ್ಯಾಲಿಸಿಲಿಕ್ ಆಮ್ಲವಿದೆ. ಇದು ಮೊಡವೆಗಳನ್ನು ನಿವಾರಿಸುತ್ತದೆ. ಮತ್ತು ಗುಣಪಡಿಸುತ್ತದೆ. ಲಿಂಬೆರಸವನ್ನು ಮಧ್ಯಮ ಪ್ರಮಾಣದಲ್ಲಿ ಬ್ಲೀಚಿಂಗ್ ಗುಣ ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಲಿಂಬೆರಸದಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ಇದು ಚರ್ಮವನ್ನು ಗುಣಪಡಿಸುವ ಪ್ರಕ್ರಿಯೆಗೆ ಹೆಚ್ಚು ಶಕ್ತಿ ನೀಡುತ್ತದೆ. 

ಪುದೀನಾ , ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ 

ಪುದೀನಾ ಎಲೆಗಳನ್ನು ಮುಲ್ತಾನಿ ಮಿಟ್ಟಿಯಲ್ಲಿ ಸೇರಿಸಬೇಕು. ಈ ಎರಡನ್ನು ಒಟ್ಟಿಗೆ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಮುಖದ ಗುಳ್ಳೆಗಳನ್ನು ಮತ್ತು ಮುಖದ ಕಲೆಗಳನ್ನು ತೆಗೆದು ಹಾಕಲು ಈ ಪೇಸ್ಟ್ ಪರಿಣಾಮಕಾರಿ ಮಾರ್ಗವಾಗಿದೆ. ಪುದೀನಾ ಹಾಗೂ ಮುಲ್ತಾನಿ ಮಿಟ್ಟಿಯಿಂದ ಮಾಡಿದ ಈ ಪ್ಯಾಕ್ ಚರ್ಮಕ್ಕೆ ತಂಪಾದ ಭಾವನೆಯನ್ನು ಮೂಡಿಸುತ್ತದೆ. 

Mint face pack , glowing skin, 
ಚರ್ಮದ ಕಾಂತಿ, ಪುದೀನಾ ಫೇಸ್ ಪ್ಯಾಕ್

ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?

ಪುದೀನಾ ಎಲೆಗಳನ್ನು ಪುಡಿ ಮಾಡಿ, ಮುಲ್ತಾನಿ ಮಿಟ್ಟಿ ಜತೆ ಬೆರೆಸಿ ದಪ್ಪದಾಗಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಗೆ ಸ್ವಲ್ಪ ರೋಸ್ ವಾಟರ್ ಸೇರಿಸಿ. ಈ ಪೇಸ್ಟ್ ಸಿಧ್ದವಾದಾಗ, ಅದನ್ನು ನಿಮ್ಮ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ. ಇದನ್ನು 15 ನಿಮಿಷಗಳ ಕಾಲ ಬಿಟ್ಟು,  ಮುಖವನ್ನು ತಣ್ಣೀರಿನಿಂದ ತೊಳೆಯಿರಿ. 

ಪುದೀನಾ, ರೋಸ್ ವಾಟರ್ ಫೇಸ್ ಪ್ಯಾಕ್!

ಚರ್ಮದ ಸೋಂಕುಗಳನ್ನು ತೆಗೆದುಹಾಕಲು ಪುದೀನಾ ಮತ್ತು ರೋಸ್ ವಾಟರ್ ನಿಂದ ಮಾಡಿದ ಪ್ಯಾಕ್ ಅತ್ಯುತ್ತಮ ಎಂದೇ ಹೇಳಬಹುದು. ಇದು ಚರ್ಮದಲ್ಲಿ ಕಂಡು ಬರುವ ಗುಳ್ಳೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಪುದೀನಾ ಬ್ಯಾಕ್ಟೇರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಮೊಡವೆ ಕಲೆಗಳನ್ನು ತೆಗೆದುಹೊಕಲು ನೆರವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ರೋಸ್ ವಾಟರ್ ಇನ್ನು ಸಹ ಬಳಸಬಹುದು. ಚರ್ಮವನ್ನು ಹೈಡ್ರೇಟ್ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ತ್ವಚೆ ಹೊಳೆಯುವಂತೆ ಮಾಡುತ್ತದೆ. 

Mint face pack , glowing skin, 
ಚರ್ಮದ ಕಾಂತಿ, ಪುದೀನಾ ಫೇಸ್ ಪ್ಯಾಕ್

ಫೇಸ್ ಪ್ಯಾಕ್ ಮಾಡುವುದು ಹೇಗೆ..?

ಪುದೀನಾ ಎಲೆಗಳನ್ನು ಪುಡಿ ಮಾಡಿ, ಅದಕ್ಕೆ ಕೆಲವು ಹನಿ ರೋಸ್ ವಾಟರ್ ಸೇರಿಸಿ, ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ಮುಖಕ್ಕೆ ಹಚ್ಚಿದ ನಂತರ , 15 ನಿಮಿಷಗಳ ಕಾಲ ಬಿಟ್ಟು, ತಣ್ಣೀರಿನಿಂದ ಮುಖ ತೊಳೆಯಿರಿ. 

ಪುದೀನಾ ಮತ್ತು ಓಟ್ಸ್ ಫೇಸ್ ಪ್ಯಾಕ್ ..!

ತ್ವಚೆಯ ಅಂದಕ್ಕೆ ಈ ಫೇಸ್ ಪ್ಯಾಕ್ ಉತ್ತಮ ಎಂದು ಹೇಳಲಾಗುತ್ತದೆ. ಇದು ಚರ್ಮವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಓಟ್ಸ್ ನಿಮ್ಮ ಚರ್ವವನ್ನು ಶುದ್ಧಗೊಳಿಸುತ್ತದೆ. ಮತ್ತು ಹೊಳಪನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ವಸ್ತುಗಳಿಂದ ಫೇಸ್ ಪ್ಯಾಕ್ ಸಂಬಂಧಿತ ಪ್ಯಾಕ್ ಗಳನ್ನು ತಯಾರಿಸುವಲ್ಲಿ ಅತ್ಯುತ್ತಮ ಚಿಕಿತ್ಸೆ ಎಂದೇ ಇದನ್ನು ಪರಿಗಣಿಸಲಾಗಿದೆ. ಶುದ್ಧೀಕರಿಸುವ ಹಾಗೂ ಹೊಳಪು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

ಫೇಸ್ ಪ್ಯಾಕ್ ಮಾಡುವುದು ಹೇಗೆ?

ಒಂದು ಬಟ್ಟಲಿನ  ಹಾಲಿನಲ್ಲಿ ೨ ಚಮಚ ಓಟ್ಸ್, ಅರ್ಧ ಟೀ ಚಸಚಾ ಪುಡಿ ಮತ್ತು ಸೌತೆಕಾಯಿ ರಸವನ್ನು ಬೆರೆಸಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ಕೈಯಿಂದ ಮುಖದ ಮೇಲೆ ಈ ಪ್ಯಾಕ್ ನ್ನು ಮಸಾಜ್ ಮಾಡಿ.  5 ನಿಮಿಷಗಳ ಕಾಲ ಒಣಗಲು ಬಿಡಿ.  ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ. ಈ ಪ್ಯಾಕ್ ಚರ್ಮದ ಕೋಶಗಳಿಗೆ ಶಕ್ತಿಯನ್ನು ನೀಡುತ್ತದೆ. ಚರ್ಮದ ತೇವಾಂಶವನ್ನು ಕಳೆದುಕೊಳ್ಳದಂತೆ ತಡೆಗಟ್ಟುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ