ನಿಮಗೆ ಹೆಚ್ಚು ಕೋಪ ಬರುತ್ತಾ..? ಹಾಗಾದ್ರೆ ನೀವಿದನ್ನ ಮಾಡಿ..!

  • by

ಸಮಸ್ಯೆಗಳು ಎಂದರೆ ಎಲ್ಲರೂ ಆಕಾಶನೇ ತಲೆ ಮೇಲೆ ಬಿದ್ದಂತೆ ಕೆಲವರು ಭಾವಿಸುತ್ತಾರೆ. ಜೀವನದಲ್ಲಿ ಸಂತೋಷ ಬಯಸುವುದು ಸಹಜ. ನಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಬಯಸುವುದಿಲ್ಲ. ಯಾವಾಗಲೂ ಖುಷಿಯನ್ನೇ ನಿರೀಕ್ಷಿಸುತ್ತೇವೆ. ಹೀಗಾಗಿಯೇ ಕೆಲವೊಮ್ಮೆ ನಾವು ಅಸಮಾಧಾನ ಹಾಗೂ ದುಃಖಕ್ಕೆ ಒಳಗಾಗುತ್ತೇವೆ. ಧಿಡೀರ್ ಅಂತಾ ತೊಂದರೆಗಳು ಎದುರಾದಾಗ ನಮ್ಮ ಕೆಲಸದಿಂದ ನಿರಾಶೆಗೊಳ್ಳುತ್ತೇವೆ. ನಮ್ಮ ಸಾಮಾಜಿಕ ಸ್ಥಿತಿ, ನಮ್ಮ ಜೀವನ ಹಾಗೂ ನಮ್ಮ ಕುಟುಂಬದ ಸಂದರ್ಭಗಳನ್ನು ನೋಡಿ ನಿರಾಶೆಗೊಳ್ಳುತ್ತೇವೆ.

ನಮಗೆ ಬೇಕಾದ ವಸ್ತು ಪಡೆಯಲು ಸಾಧ್ಯವಾಗದೇ ಇರುವುದು ಬೇಸರ ತರುತ್ತದೆ. ಪ್ರತಿ ಬಾರಿಯೂ ನಾವು ಯಶಶ್ವಿಯಾಗಲು ಬಯಸುತ್ತೇವೆ. ಆದ್ರೆ ಸಮಸ್ಯೆಗಳು ಏಕಾಏಕಿ ಎದುರಾದಾಗ, ದುಃಖಕ್ಕೆ ಒಳಗಾಗುತ್ತೇವೆ. ಇದ್ರಿಂದ ಅನಾರೋಗ್ಯಕ್ಕೆ ಒಳಗಾಗಿ, ದೇಹ ದುರ್ಬಲವಾಗುತ್ತದೆ.

mind-anger-management, ಕೋಪ ನಿಯಂತ್ರಣ, ಟಿಪ್ಸ್,

ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆ..!

ಇವೆಲ್ಲದರ ಹೊರತಾಗಿ ಕೆಲಮೊಮ್ಮೆ ಮಾನಸಿಕ ಹಾಗೂ ಅನೇಕ ರೀತಿಯ ಭಾವನಾತ್ಮಕ ಸಮಸ್ಯೆ ಎದುರಿಸಬೇಕಾಗುತ್ತದೆ. ಚಿಂತೆಗಳು, ನಿರೀಕ್ಷೆಗಳು, ಭಯಗಳಂತಹ ಅನೇಕ ವಿಷಯಗಳು ನಿಮ್ಮನ್ನು ಕಾಡಬಹುದು. ಇವುಗಳಿಂದ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತೀರಿ.

ಕೋಪ ನಿಯಂತ್ರಣ ಮಾಡುವುದು ಹೇಗೆ..?

ಕನಿಷ್ಠ ನಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಬುದ್ಧನ ಬೋಧನೆಗಳಲ್ಲಿ ಒಂದು ದೊಡ್ಡ ಸಂದೇಶವೆಂದರೆ, ನಾವು ನಮ್ಮ ಜೀವನವನ್ನು ಸುಧಾರಿಸಬಹುದು. ನಮ್ಮ ಇಡೀ ಜೀವನವನ್ನು ದುಃಖದಲ್ಲಿ ಬದಕಲು ನಾವು ಶಾಪಗ್ರಸ್ತರಲ್ಲ. ಹಾಗಾಗಿ ನಾವು ಪರಿಸ್ಥಿತಿಯನ್ನು ಸರಿಪಡಿಸಬಹುದು.

‘ನಾವು ನಮ್ಮನ್ನು ಪ್ರೋತ್ಸಾಹಿಸುವುದು..’

ಕೋಪ, ಆತಂಕ ನಿಯಂತ್ರಿಸಲು ಮತ್ತೊಂದು ಮಾರ್ಗವೆಂದರೆ, ಮೊದಲು ನಮ್ಮನ್ನು ನಾವು ಪ್ರೋತ್ಸಾಹಿಸುವುದು. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ನಿಮ್ಮೊಳಗಿನ ಕೋಪ, ಅಸಮಾಧಾನ ನಿಯಂತ್ರಣಕ್ಕೆ ಬರುತ್ತದೆ. ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತೇವ ಎಂಬ ಧೃಡ ಸಂಕಲ್ಪ ನಮ್ಮಲ್ಲಿರಬೇಕು.

mind-anger-management, ಕೋಪ ನಿಯಂತ್ರಣ, ಟಿಪ್ಸ್,

‘ಸಮಸ್ಯೆಯನ್ನ ಪ್ರಾಮಾಣಿಕ, ಧೈರ್ಯದಿಂದ ಎದುರಿಸಿ’
ಸಮಸ್ಯೆಗಳು ಬಂದಾಕ್ಷಣ ಎಲ್ಲವನ್ನು ತ್ಯಜಿಸಿ ಗುಹೆಯಲ್ಲಿ ಕುಳಿತುಕೊಳ್ಳಬೇಕು ಎಂದರ್ಥವಲ್ಲ. ಆದ್ರೆ ನಿಮ್ಮ ಸಮಸ್ಯೆಗಳನ್ನು ನೀವು ಪ್ರಾಮಾಣಿಕವಾಗಿ ಹಾಗೂ ಧೈರ್ಯದಿಂದ ಎದುರಿಸಿ. ಈ ಸಮಸ್ಯೆಗಳೊಂದಿಗೆ ಬದುಕುವುದು ಎಷ್ಟು ಹಾಸ್ಯಾಸ್ಪದವೆಂದು ನೀವೇ ಪ್ರಶ್ನೆ ಮಾಡಿಕೊಳ್ಳುವುದು ಉತ್ತಮ, ಇಂತಹ ಪರಿಸ್ಥಿತಿಯನ್ನು ಮುಂದುವರಿಸಲು ನನಗೆ ಇಷ್ಟವಿಲ್ಲ. ನಾನು ಈ ಸಮಸ್ಯೆಗಳಿಂದ ಬೇಸತ್ತಿದ್ದೇನೆ. ಇದ್ರಿಂದ ಹೊರಬರಬೇಕು ಎಂದು ಧೃಡ ನಿಶ್ಚಯ ನಿಮ್ಮದಾಗಿರಲಿ.

‘ಧ್ಯಾನ ಮಾಡಿ’

ಧಾನ್ಯದಂತಹ ಅಭ್ಯಾಸಗಳು ನಿಮ್ಮ ಭಯ ಹಾಗೂ ಆತಂಕ, ಕೋಪವನ್ನು ಕಡಿಮೆ ಮಾಡುತ್ತವೆ. ದೈನಂದಿನ ಜೀವನದಲ್ಲಿ ಧ್ಯಾನವು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಮನಸ್ಸಿಗೆ ಶಾಂತಿ ದೊರೆಯುತ್ತದೆ. ಪ್ರತಿ ದಿನ ಕೆಲವು ನಿಮಿಷಗಳ ಕಾಲ ಧ್ಯಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.

ಸತ್ಸಂಗದಲ್ಲಿ ಪಾಲ್ಗೊಳ್ಳುವುದು..

ಸತ್ಸಂಗ ಚಟುವಟಿಕೆಗಳ ಮೂಲಕ ಕೋಪವನ್ನು ನಿಂಯತ್ರಣಕ್ಕೆ ತರಬಹುದು, ಆಧ್ಯಾತ್ಮವು ನಿಮ್ಮನ್ನು ಶಾಂತಿಯ ಮಾರ್ಗದೆಡೆಗೆ ಕೊಂಡೊಯ್ಯುತ್ತದೆ. ನೀವು ಆಫೀಸ್ ನಲ್ಲಿರಲಿ, ಅಥವಾ ಪ್ರಮಾಣ ಮಾಡುತ್ತಿರಲಿ, ಯೋಗ ಕೇಂದ್ರದಲ್ಲಿರಲಿ, ಸ್ನೇಹಿತರೊಡನೆ ಆಳವಾದ ಸಂಭಾಷಣೆ ನಡೆಸುತ್ತಿರಲಿ, ಅಥವಾ ಗುರುವಿನ ಸ್ಮರಣೆಯಲ್ಲಿರಲಿ, ಆಧ್ಯಾತ್ಮವು ಮನಸ್ಸನ್ನು ಶಾಂತಗೊಳಿಸಲು ನೆರವಾಗುತ್ತದೆ.


mind-anger-management, ಕೋಪ ನಿಯಂತ್ರಣ, ಟಿಪ್ಸ್,

ಕೀರ್ತನೆಯಲ್ಲಿ ಪಾಲ್ಗೊಳ್ಳಿ

ಕೀರ್ತನೆ, ಭಜನೆಯಂದತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಉತ್ತಮ ಎಂದು ಭಾವಿಸಲಾಗುತ್ತದೆ. ಕೀರ್ತನೆ ಮಾಡುವ ಸಮುದಾಯದ ಜತೆ ಸೇರಿ ಮಂತ್ರಗಳನ್ನು ಜಪಿಸುವುದರಿಂದ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ