ಮೈಗ್ರೇನ್ ತುಂಬಾ ಯಾತನೆ ಉಂಟು ಮಾಡುತ್ತಿದ್ದೀಯಾ?

  • by

ಇತ್ತೀಚಿನ ದಿನಗಳಲ್ಲಿ  ಮೈಗ್ರೇನ್ ಸಮಸ್ಯೆ ಎದುರಿಸುತ್ತಿರುತ್ತಾರೆ.   ತಲೆ ನೋವು , ಮೈಗ್ರೇನ್ ನಿಮ್ಮ ದಿನ ನಿತ್ಯದ ಕೆಲಸಗಳಿಗೆ ಅಡ್ಡಿಪಡಿಸಬಹುದು. ಅಲ್ಲದೇ ಆರೋಗ್ಯ ಸಮಸ್ಯೆ ಹೆಚ್ಚಿಸಬಹುದು. ನೈಸರ್ಗಿಕವಾಗಿ ತಲೆ ನೋವನ್ನು ತೊಡೆದು ಹಾಕಲು ಪರಿಣಾಮಕಾರಿ ಮನೆ ಮದ್ದುಗಳು ಇಲ್ಲಿವೆ.

ಮೈಗ್ರೇನ್ ಲಕ್ಷಣಗಳು.

ಅರೆ ತಲೆ ನೋವಿನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಮುಖ, ತೋಳು, ಭುಜಗಳಲ್ಲಿ ಮರಗಟ್ಟುವಿಕೆಯ ಅನುಭವ ವಾಗಬಹುದು.  ಕಣ್ಣಿನ ಎದುರಿನ ದೃಶ್ಯಗಳು ಮಂಜಾಗುತ್ತವೆ. ಮತ್ತೆ ಅಲಗಾಡಿಸುವಂತೆ ಭಾಸವಾಗುತ್ತದೆ. ಸಣ್ಣ ಶಬ್ದವು ನಿಮಗೆ ಕಿರಿ ಕಿರಿ ಎನ್ನಸಹುದು. ಅರೆ ತಲೆ ನೋವು ಮಹಿಳೆಯರಿಗಿಂತ ಪುರಷರಲ್ಲಿ ಭಾಧಿಸುವುದೇ ಹೆಚ್ಚು. ತಂದೆ ತಾಯಿಗೆ ಮೈಗ್ರೇನ್ ಇದ್ದರೆ , ಮಗಳಿಗೆ ಬರುವ ಸಾಧ್ಯತೆ ಹೆಚ್ಚು. 

ಕಾರಣಗಳೇನು..?

ಅರೆ ತಲೆ ನೋವು ವಂಶಪಾರಂಪರ್ಯವಾಗಿ ಬರುತ್ತದೆ. ಕೆಲವು ಸಲ ಬೇರೆ ಸಮಸ್ಯೆಗಳಿಂದ ಮೈಗ್ರೇನ್ ಬರಬಹುದು.  ಸಂಶೋಧನೆ ಪ್ರಕಾರ, ತಲೆಯಲ್ಲಿನ ನರದೊಳಗಿನ ರಕ್ತ ಪರೀಚಲನೆಯಲ್ಲಿ ವ್ಯತ್ಯಾಸ ಅಥವಾ ಮೆದುಳಿನಲ್ಲಿರುವ ರಾಸಾಯನಿಕ ಕ್ರಿಯೆಗಳ ವ್ಯತ್ಯಾಸದಿಂದಾಗಿ ತಲೆ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ನ್ಯೂರೋಟ್ರಾನ್ಸಿಮಿಟ್ಟರ್ಸ್ ಎಂದು ಕರೆಯಲಾಗುತ್ತದೆ. 

ಕೆಲವರಿಗೆ ರಕ್ತ ಪರಿಚಲನೆ ಮತ್ತು ರಕ್ತನಾಳಗಳು ಸೂಕ್ಷ್ಮವಾಗಿರುತ್ತವೆ. ಆದ್ದರಿಂದ ಅಂಥ ಜನರಲ್ಲಿ ಬೇಗನೇ ತಲೆನೋವು ಕಾಣಿಸಿಕೊಳ್ಳುತ್ತದೆ. 

ಮೈಗ್ರೇನ್ ಚಿಕಿತ್ಸೆ ಗಳೇನು!

ನಿಗದಿತ ಸಮಯದಲ್ಲಿ ಊಟ ಮಾಡಿ. ನಿದ್ದೆ ತುಂಬಾ ಮುಖ್ಯವಾಗುತ್ತದೆ. ವ್ಯಾಯಾಮ ಮಾಡುವುದು ಉತ್ತಮ. ಗರ್ಭ ನಿರೋಧಕ ಮಾತ್ರೆ ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಮತ್ತು ಅರೆತಲೆನೋವಿನ ಬಗ್ಗೆ ಮೊದವೇ ತಿಳಿಸಿ. 

ಅಲ್ಲದೇ ನಿಮ್ಮ ದಿನಚರಿ ಬಗ್ಗೆ ಗಮನವಿರಲಿ. ತಿನ್ನುವ ಹಾಗೂ ಕುಡಿಯುವ ವಸ್ತುಗಳ ಬಗ್ಗೆ. ಸಾಧ್ಯವಾದರೆ ವೈದ್ಯರ ಸಲಹೆ ಪಡೆದುಕೊಳ್ಳಿ. 

ಸಂಗೀತ ಆಲಿಸಿ, ಹೆಚ್ಚು ನಿದ್ದೆ ಮಾಡಿ. ಆದರೆ ತಲೆ ಭಾರ ಎನಿಸುವಷ್ಟು ಮಲಗಬೇಡಿ. ತಲೆ ನೋವು ಬರುತ್ತಿದೆ ಅಂತಾ ನಿಮಗೆ ಅನಿಸಿದರೆ ಶಬ್ದ ಮತ್ತು ಕತ್ತಲ ಕೋಣೆಯಲ್ಲಿ ವಿಶ್ರಾಂತಿ ಪಡೆಯಿರಿ. ಆದರೆ ಮಹಿಳೆಯರು ತಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಿದಂತೆಯೇ ಇದನ್ನು ನಿರ್ಲಕ್ಷಿಸಿ ಬೀಡುತ್ತಾರೆ. ಶೇ. ೫೦ ಜನರಲ್ಲಿ ಮೈಗ್ರೇನ್ ಪದೇ ಪದೇ ಬರತೊಡಗುತ್ತದೆ. 

ನಿದ್ರಾಹೀನತೆ , ಊಟ ತಿಂಡಿ, ಪ್ರಖರ ಬೆಳಕು, ಪರಿಮಳ,  ಅತಿಯಾದ ಕಾಫಿ ಸೇವನೆ, ಫಾಸ್ಟ್ ಫುಡ್ ಸೇವನೆ ಉಪಯೋಗಿಸುವವರಲ್ಲಿ ಮೈಗ್ರೇನ್ ಹೆಚ್ಚಾಗಿರುತ್ತದೆ.  

ಮನೆ ಮದ್ದುಗಳೇನು? 

1 ಚಮಚಾ ಧನಿಯಾ ಪುಡಿಯನ್ನು ೧ ಲೋಟ ನೀರಲ್ಲಿ ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದ್ರೆ ಮೈಗ್ರೇನ್ ಕಂಟ್ರೋಲ್ ಗೆ ಬರುತ್ತದೆ. 

2. ಹಸಿ ಶುಂಠಿ ರಸವನ್ನು ನೀರಲ್ಲಿ ಸೇರಿಸಿ ಟೀ ಮಾಡಿ ಸೇವಿಸಿದರೆ, ತಲೆ ನೋವು ಗುಣಮುಖವಾಗುತ್ತದೆ.  ೫ ಒಣದ್ರಾಕ್ಷಿ ಮತ್ತು ೫ ಬಾದಾಮಿಗಳನ್ನು ನೀರಲ್ಲಿ ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ತಲೆ ನೋವು ಕಡಿಮೆಯಾಗುತ್ತದೆ. 

3. ಪಾರಿಜಾತದ ಹೂವನ್ನು ಕೊಬ್ಬರಿ ಎಣ್ಣೆ ಜತೆ ಕಾಯಿಸಿ, ತಯಾರಿಸಿದ ಎಣ್ಣೆಯಿಂದ ತಲೆಯನ್ನು ದಿನ ನಿತ್ಯ ಮಸಾಜ್ ಮಾಡಿದರೆ ತಲೆನೋವು ಗುಣವಾಗುತ್ತದೆ. 

4. ಜಾಯಿಕಾಯಿ ಪುಡಿಯನ್ನು ನೀರಲ್ಲಿ ಕಲಸಿ ಹಣೆಗೆ ಲೇಪ ಮಾಡಿದರೆ ತಲೆನೋವು ನಿವಾರಣೆಯಾಗುತ್ತದೆ, ದಿನ ನಿತ್ಯ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಯ ಮೈಗ್ರೇನ್ ಪದೇ ಪದೇ ಬರುವುದು ಕಡಿಮೆಯಾಗುತ್ತದೆ. 

ತಲೆ ನೋವು ಹಾಗೂ ಮೈಗ್ರೇನ್ ಗೆ ಆಹಾರ ಹೇಗಿರಬೇಕು..? 

ಮೈಗ್ರೇನ್ ಹಾಗೂ ತಲೆ ನೋವಿಗೆ ಪ್ರಚೋದಿಸುವಂತಹ ಆಹಾರಗಳ ಬಗ್ಗೆ ಗಮನ ಇರಬೇಕು. ನಿಮ್ಮ ದೈನಂದಿನ ಜೀವನದಲ್ಲಿ ಈ ಆಹಾರಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ.

ಪ್ರೋಟೀನ್ ಯುಕ್ತ ಆಹಾರ ಹೆಚ್ಚಾಗಿರಲಿ

ಫೈಬರ್ ಹಾಗೂ ಪ್ರೋಟೀನ್ ಯುಕ್ತ ಆಹಾರ ಸೇವಿಸುವುದು ಒಳ್ಳೆಯದು.. ನೀವು ಸೇವಿಸುವ ಆಹಾರ ಆಮ್ಲಜನಕ ಮತ್ತು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಆ ಶಕ್ತಿಯು ಖಾಲಿಯಾದ ನಂತರ, ನಿಮ್ಮ ಮೆದುಳಿಗೆ ಆಹಾರ ಬೇಕು. ಅಗತ್ಯ ಪೋಷಕಾಂಶಗಳ ಕೊರತೆ ನೋವನ್ನು ಹೆಚ್ಚಿಸಬಹುದು. ಹಾಗಾಗಿ ಪ್ರತಿ ದಿನ ನಾಲ್ಕು ಗಂಟೆಗಳವರೆಗೆ ಸ್ವಲ್ಪ ಸ್ವಲ್ಪ ಆಹಾರ ಸೇವಿಸುತ್ತೀರಿ. 

ವಿಟಮಿನ್ ಇ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡುತ್ತೀರಿ. ಅವಧಿಗೆ ಸಂಬಂಧಿಸಿದ ಮೈಗ್ರೇನ್ ಗಳನ್ನು ನಿವಾರಿಸುತ್ತದೆ. ಎಳ್ಳನ್ನು ಸೇವಿಸಿ. ಎಳ್ಳು ಮೈಗ್ರೇನ್ ಹಾಗೂ ತಲೆ ನೋವಿನ ವಿರುದ್ಧ ಹೋರಾಡಲು ಸಹಾಯ ಸಹಾಯ ಮಾಡುತ್ತದೆ. 

ಮಾಡುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಎಳ್ಳು ಹೆಚ್ಚಾಗಿ ಸೇವಿಸಿ. ಮತ್ತು ಬಿಟ್ ರೂಟ್ ರಸ ಸಹ ಹೆಚ್ಚು ಉತ್ತಮ.  

ಮೇಗ್ನೇಶಿಯಂ ಆಹಾರಗಳು ಕೊಬ್ಬು ಹಾಗೂ ರಕ್ತದೋತ್ತಡವನ್ನ ಸ್ಥಿರವಾಗಿರಲು ಸಹಾಯ ಮಾಡುತ್ತದೆ. ಮೇಗ್ನೇಶಿಯಂ ಭರಿತ ಆಹಾರಗಳಾದ ಮೀನು, ಬೀನ್ಸ್ , ಹಸಿರು ತರಕಾರಿ, ಕುಂಬಳಕಾಯಿ ಬೀಜಗಳನ್ನು ಸೇವಿಸಿ. 

ಕೆಫೀನ್ ನಿಂದ ದೂರವಿರುವುದು ಉತ್ತಮ. ಕೆಫಿನ್ ತಲೆ ನೋವಿಗೆ ಕಾರಣವಾಗಬಲ್ಲದ್ದು ಮತ್ತು ಮದ್ದು ಆಗಬಲ್ಲದ್ದು. ಹೀಗಾಗಿ ಹೆಚ್ಚಾಗಿ ಕೆಫೀನ್ ಸೇವಿಸಬೇಡಿ.  ನಿಮ್ಮ ಆಹಾರದಲ್ಲಿ ಕೆಫೀನ್ ನ್ನು  ನಿಧಾನವಾಗಿ ತಗ್ಗಿಸುತ್ತಾ ಬನ್ನಿ. 

ಮಿಟಮಿನ್ ಕೊರತೆ ಇದ್ದರೆ ನಿಮಗೆ ತಲೆ ನೋವು ಕಾಣಿಸಿಕೊಳ್ಳಬಹುದು. ಸಾಧ್ಯವಾದಷ್ಟು ಎಳೆ ಬಿಸಿಲಿನಲ್ಲಿ ಕಳೆಯಿರಿ. 

ನಿರ್ಜಲೀಕರಣ ಸಮಸ್ಯೆ ಕೂಡಾ ತಲೆ ನೋವಿಗೆ ಕಾರಣವಾಗಬಹುದು. ಹೀಗಾಗಿ ದಿನಕ್ಕೆ 7 ರಿಂದ 8 ಗ್ಲಾಸ್ ನೀರು ಕುಡಿಯಿರಿ. ತುಂಬಾ ನೀರು ಕುಡಿಯುವುದು ಇಷ್ಟವಿಲ್ಲವೆಂದರೆ  ನೀರಿನಂಶವಿರುವ ಆಹಾರಗಳನ್ನು ಸೇವಿಸಬೇಕು. ಸವತೆಕಾಯಿ , ಕಲ್ಲಂಗಡಿ ಹಣ್ಣಿಗಳನ್ನು ಹೆಚ್ಚೆಚ್ಚು ಸೇವಿಸಿ. 

ಶುಂಠಿ ಹಲವು ಆರೋಗ್ಯಕಾರಿ ಪೋಷಕಾಂಶಗಳನ್ನು ಹೊಂದಿದ್ದು, ಮೈಗ್ರೇನ್ ನಿವಾರಿಸಲು ಸಹಾಯ ಮಾಡುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ