ಮಹಿಳೆಯರಿಗೆ 45ರ ನಂತರ ಮುಟ್ಟು ನಿಲ್ಲುವುದು ಸಹಜ ಪ್ರಕ್ರಿಯೆ.. ಚಿಂತೆ ಬೇಡ!

  • by

ಮೆನೊಪಾಸ್ (ತಿಂಗಳ ಮುಟ್ಟು ನಿಲ್ಲುವುದು) ಖುತು ಸ್ರಾವದ ಚಕ್ರ ನಿಲ್ಲುವುದು ಎಂದು ಹೇಳಲಾಗುತ್ತದೆ. 1 ವರ್ಷ ಕಾಲ ಖುತುಸ್ರಾವ ನಿಂತಿರುವರಲ್ಲಿ ಖುತು ಚಕ್ರ ನಿಂತಿದೆ ಎಂದು ಪರಿಗಣಿಸಲಾಗುತ್ತದೆ. ಮುಟ್ಟು ನಿಲ್ಲುವುದು ನೈಸರ್ಗಿಕ ಬದಲಾವಣೆ.. ಇದಕ್ಕಾಗಿ ಆತಂಕ ನಿಮ್ಮನ್ನು ಕಾಡದೇ ಇರಲಿ. ಮೆನೋಪಾಸ್ ಸಮಸ್ಯೆಯನ್ನು ಎದುರಿಸುವುದು ಹೇಗೆ… ? ಇಲ್ಲಿದೆ ಡಿಟೇಲ್ಸ್.

ಮಹಿಳೆಯರು ತಮ್ಮ ಬದುಕಿನ ಮೂರನೇ 1 ಭಾಗದಷ್ಟು ಮುಟ್ಟು ನಿಂತ ಬಳಿಕವೇ ಕಳೆಯುತ್ತಾರೆ. ನೈಸರ್ಕಿಕ ಪ್ರಕ್ರಿಯೆ ಸಾಮಾನ್ಯವಾಗಿ 45 ರಿಂದ 55ರ ಪ್ರಾಯದಲ್ಲಿ ಕಾಣಿಸುತ್ತದೆ. ಭಾರತದಲ್ಲಿ ಸರಾಸರಿ 47ನೇ ಪ್ರಾಯದಲ್ಲಿ ಸಂಭವಿಸುತ್ತದೆ. ಅಂಡಾಂಶಗಳ ಚಟುವಟಿಕೆ ಕುಂದುತ್ತಾ ಬಂದು ಕ್ರಮೇಣ ನಿಲ್ಲುವುದೇ ಈ ಬದಲಾವಣೆಗೆ ಕಾರಣ. ಈ ಹಂತದಲ್ಲಿ ಈಸ್ಟ್ರೋಜನ್ ಸ್ತ್ರೀ ಹಾರ್ಮೋನುಗಳನ್ನು ಅಗತ್ಯ ಪ್ರಮಾಣದಲ್ಲಿ ಉತ್ಪತ್ತಿ ಮಾಡಲು ಅಸಮರ್ಥ ವಾಗಿರುತ್ತದೆ. 45ನೇ  ಪ್ರಾಯ ದಾಟಿದ ಮೇಲೆ ನಿದಾನವಾಗಿ ಈ ಪ್ರಕ್ರಿಯೆ ಆರಂಭವಾಗುತ್ತದೆ. 1 ವರೆಯಿಂದ 3 ತಿಂಗಳವರೆಗೆ ಖತುಸ್ರಾವ ಸಂಭವಿಸುತ್ತದೆ. ಖುತುಸ್ರಾವದ ಅವಧಿಯಲ್ಲಿ ರಕ್ತಸ್ರಾವ ನಿಧಾನವಾಗಿ ಕಡಿಮೆಯಾಗುತ್ತಾ ಬಂದುಸ ಕೊನೆಗೊಮ್ಮೆ ನಿಂತು ಬಿಡುತ್ತದೆ. ಕೆಲವರಿಗೆ 15 ದಿನಕ್ಕೊಮ್ಮೆ ಮುಟ್ಟಾದರೆ, ಮತ್ತೆ ಕೆಲವರಿಗೆ 2-3 ತಿಂಗಳು ಮುಟ್ಟಾಗುವುದೇ ಇಲ್ಲ. ಈ ರೀತಿ ಆಗುತ್ತಾ ಕೆಲವು ತಿಂಗಳಿನಲ್ಲಿ ಮುಟ್ಟಿನ ಪ್ರಕ್ರಿಯೆ ಸಂಪೂರ್ಣ ನಿಂತು ಹೋಗಿರುತ್ತದೆ. 

menopause solutions , ಮೆನೋಪಾಸ್ ಪರಿಹಾರಗಳು

ಬದಲಾವಣೆಯ ಅವಧಿಯನ್ನು ಮುಟ್ಟು ನಿಲ್ಲುವ ಪೂರ್ವ ಸ್ಥಿತಿ ಎನ್ನುತ್ತಾರೆ. ಈ ಅವಧಿ 2 ರಿಂದ 7 ವರ್ಷಗಳವರೆಗೆ ಕಾಣಿಸಿಕೊಳ್ಳಬಹುದು. ಹಲವರಲ್ಲಿ ಇದು ಹೆಚ್ಚಿನ ಸೂಚನೆಗಳಿಲ್ಲದೇ ದಾಟಿ ಹೋಗುತ್ತದೆ. 

ಮನೋಪಾಸ್ 45 ವರ್ಷ ಕಳೆದ ಮೇಲೆ ಉಂಟಾದರೆ ಅದು ಸಹಜ ಪ್ರಕ್ರಿಯೆ. ಆದ್ರೆ ಕೆಲವರಿಗೆ ವಯಸ್ಸು 30 ದಾಟುತ್ತಿದ್ದಂತೆ ಈ ಸಮಸ್ಯೆ ಕಂಡು ಬರುತ್ತದೆ. ಇದು ಸಹಜವಲ್ಲ. ಅಕಾಲಿಕ ಮೆನೋಪಾಸ್ ಗೆ ಜೀವನ ಶೈಲಿ ಪ್ರಮುಖ ಕಾರಣ ಎಂದು ಹೇಳಬಹುದು. 

ಮುಟ್ಟು ನಿಲ್ಲುವಿಕೆಯ ಲಕ್ಷಣಗಳೇನು.. ? 

ಅನಿಯಮಿತ ಮುಟ್ಟಾಗುವುದು. ಅಧಿಕ ರಕ್ತಸ್ರಾವ. ವಯಸ್ಸು 30 ದಾಟಿದ ಬಳಿಕ ಗರ್ಭದಾರಣೆಗೆ ಪ್ರಯತ್ನಿಸಿದರೂ ಗರ್ಭಿಣಿಯಾಗದಿದ್ದರೆ ರಕ್ತ ಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ ಮಾಡಿಸಿಕೊಂಡರೆ ಮೆನೋಪಾಸ್ ಉಂಟಾಗಿದೆ ಎಂದು ತಿಳಿಯುತ್ತದೆ. 

  1. ಸಾಮಾನ್ಯವಾಗಿ ಹಾಟ್ ಫ್ಲ್ಯಾಶ್ ಅಂದರೆ ತುಂಬಾ ಸೆಕೆಯಾಗುವ ಸಮಸ್ಯೆ ಕಂಡು ಬರುತ್ತದೆ. ಮೈ ಬೆವರಿ ಉದ್ವೇಗ ಹೆಚ್ಚಾಗುವುದು. ವಿನಾಕಾರಣ ಬೇಸರ ಅನಿಸುವುದು. ಪದೇ ಪದೇ ಮೂತ್ರ ವಿಸರ್ಜನೆ , ವಿಪರೀತ ತಲೆನೋವು , ನಿದ್ರೆ ಬಾರದಿರುವುದು, ಮಾನಸಿಕ ಕಿರಿ ಕಿರಿ ಅನ್ನಿಸುವದು, ಖಿನ್ನತೆ ಕಾಡುವುದು. 

2. ಹೊಟ್ಟೆಯ ಭಾಗದಲ್ಲಿ ಚರ್ಮ ಸುಕ್ಕಾಗಬಹುದು

3. ಲೈಂಗಿಕಕ್ರಿಯೆಯ ಸಂದರ್ಭದಲ್ಲಿ ನೋವು ಉಂಟಾಗಬಹುದು. 

4. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ

5. ಕೆಲವರು ಈ ಸಮಯದಲ್ಲಿ ತುಂಬಾ ಖಿನ್ನತೆಗೆ ಒಳಗಾಗುತ್ತಾರೆ. ಹೀಗೆ ಉಂಟಾದರೆ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ.  

6. ಮುಟ್ಟುನಿಂತ ಮೇಲೆ ಲವಲವಿಕೆಯಿಂದ ಇರಬಹುದು..

ಮನೋಪಾಸ್ ನಂತರ ಮೊದಲಿನಂತೆಯೇ ಇರಬಹುದು.!

ಮನೋಪಾಸ್ ಸಮಸ್ಯೆಯಿಂದ ಹೊರಬರಲು ಲೈಫ್ ಸ್ಟ್ರೈಲ್ ಚೇಂಜ್ ಮಾಡಿಕೊಳ್ಳಿ. ಯೋಗಾ ಮಾಡುವುದು ಉತ್ತಮ, ಶವಾಸನ, ವಜ್ರಾಸನ ಕ್ರಿಯೆ ಗಳಲ್ಲಿ ಮುಖ್ಯವಾಗಿ ಜಲನೇತಿ, ಸೂತ್ರನೇತಿ, ಪ್ರಾಣಾಯಾಮ ಮಾಡುವುದು ಉತ್ತಮ. ಎಣ್ಣೆಯುಕ್ತ ಪದಾರ್ಥ ಸೇವನೆ ಬೇಡಮೆನೋಪಾಸ್ ನಂತರ ಶೆಕೆ ಅನಿಸಲು ಪ್ರಾರಂಭವಾಗುತ್ತದೆ.  

menopause solutions , ಮೆನೋಪಾಸ್ ಪರಿಹಾರಗಳು

ಆಹಾರ ಹೇಗಿರಬೇಕು.. 

ಮೆನೋಪಾಸ್ ಸಮಯದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದರಿಂದ ಆಹಾರ ಕಡೆ ಗಮನ ಹರಿಸಬೇಕಾಗುತ್ತದೆ. ಹಾಲು, ಮೊಸರು, ಮಜ್ಜಿಗೆ ಬಳಕೆ ಮಾಡಬೇಕು. ನುಗ್ಗೆ ಸೊಪ್ಪನ್ನು ಸೇವಿಸಿ. ನಿಮ್ಮ ಅಡುಗೆಯಲ್ಲಿ ಕರಿಬೇವು ಹೆಚ್ಚಾಗಿ ಬಳಸಿ. ಇದು ಕೊಲೆಸ್ಚ್ರಾಲ್ ನಿಯಂತ್ರಣಕ್ಕೆ ಕಾರಣವಾಗುತ್ತದೆ.  ಗಂಜಿ, ಸೂಪ್ ಆಹಾರದಲ್ಲಿರಲಿ.

ಮುಟ್ಟು ನಿಂತ ಮಹಿಳೆಯರಲ್ಲಿ ದೇಹದಲ್ಲಾಗುವ ಬದಲಾವಣೆ ಏನು?

ಮೆನೋಪಾಸ್ ನಂತರ ಅಂಡಾಶಯದ ಗಾತ್ರ ಕಡಿಮೆಯಾಗುತ್ತದೆ. ಅಂಡಾಣು ಉತ್ಪತ್ತಿಯಾಗುವುದಿಲ್ಲ. ಗರ್ಭನಾಳ ನಿಶಕ್ತವಾಗುತ್ತದೆ. ಗರ್ಭಕೋಶ ಗಾತ್ರ ಕಡಿಮೆಯಾಗುತ್ತದೆ. ಯೋನಿಯಲ್ಲಿ ಪಿಎಚ್ ಪ್ರಮಾಣ ಕಮ್ಮಿ ಯಾಗುತ್ತದೆ. ಈ ಸಂದರ್ಭದಲ್ಲಿ ಆರೋಗ್ಯಕರ ಜೀವನ ಶೈಲಿ ಪಾಲಿಸಬೇಕು. 

menopause solutions , ಮೆನೋಪಾಸ್ ಪರಿಹಾರಗಳು

ಕುಟುಂಬದವರ ಸಹಕಾರ ಇರಲಿ.!

ನೈಸರ್ಗಿಕವಾಗಿ ಮುಟ್ಟು ನಿಂತಾಗ, ಮಹಿಳೆಯರಿಗೆ ಮನೆಯಲ್ಲಿ ಪತಿಯ ಸಹಕಾರ ತುಂಬಾ ಮುಖ್ಯವಾಗುತ್ತದೆ. ಹಾಗೂ ಮಕ್ಕಳು ಆರೈಕೆ ಮಾಡಬೇಕಾಗುತ್ತದೆ. ಈ ವೇಳೆ ಮಹಿಳೆಯರಿಗೆ ಪ್ರೀತಿಸುವವವರು ಯಾರು ಇಲ್ಲ ಅಂತ ಅನ್ನಿಸಬಹುದು. ಹಾಗಾಗಿ ಮನೆಯವರು ಅಸಡ್ಡೆ ಮಾಡಬೇಡಿ.ಇದೆಲ್ಲಾ ಸಹಜ ಅಂತಾ ಮನೆಯವರು ತಿಳಿದುಕೊಳ್ಳಬೇಕು.

ಈ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಸಿ. ಥೈರಾಯ್ಡ್ ಗರ್ಭಕೋಶದ ಸಮಸ್ಯೆಯಿದ್ದರೆ ಪತ್ತೆ ಹಚ್ಚಲು ಸಹಾಯವಾಗುತ್ತದೆ. ಪ್ರತಿ ನಿತ್ಯ ವ್ಯಾಯಾಮ ಮಾಡಬೇಕು. ಸ್ವಲ್ಪ ಹೊತ್ತು ಸೂರ್ಯನ ಬಿಸಿಲಿನಲ್ಲಿ ನಿಲ್ಲುವುದರಿಂದ ವಿಟಮಿನ್ ಡಿ ದೊರೆಯುತ್ತದೆ. ಇದರಿಂದ ಮೂಳೆಗಳು ಬಲವಾಗುತ್ತವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ