ಈ ಕಾರಣಗಳಿಂದ ಪುರುಷರು ಸ್ರ್ಟಾಂಗ್ ಮಹಿಳೆಯರನ್ನು ನಿಭಾಯಿಸಲು ಸಾಧ್ಯವಾಗುವುದಿಲ್ವಂತೆ..!

  • by

ಇತ್ತೀಚಿನ ದಿನಗಳಲ್ಲಿ ಪುರುಷರಂತೆ, ಮಹಿಳೆಯರು ಹೆಚ್ಚು ಸ್ವಾವಲಂಬಿಗಳಾಗಿದ್ದಾರೆ. ತಮ್ಮದೇ ಆದ ನಿರ್ಧಾರಗಳ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದಾರೆ. ಸ್ರ್ಟಾಂಗ್ ಆಗಿರುವ ಮಹಿಳೆಯರಲ್ಲಿ ವಿಶ್ವಾಸವು ಸಾಕಷ್ಟು ಪ್ರಬಲವಾಗಿರುತ್ತದೆ. ಅಂತಹವರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುತ್ತಾರೆ. ತಮ್ಮ ಆಸೆ, ಆಕಾಂಕ್ಷೆಗಳ ಬಗ್ಗೆ ಅರಿತಿದ್ದಾರೆ. ಯಾವುದೇ ಸಂದರ್ಭದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ. ಸ್ರ್ಟಾಂಗ್ ಆಗಿರುವ ಮಹಿಳೆ ತನ್ನದೇ ಆದ ಪ್ರಾಮುಖ್ಯತೆ ಅರಿತುಕೊಂಡಿದ್ದಾಳೆ. ಸಂಘರ್ಷ ಹಾಗೂ ನೋವನ್ನು ತಡೆದುಕೊಳ್ಳುವ ಸಾಮರ್ಥ್ಯ ಪಡೆದಿದ್ದಾಳೆ.  ಪ್ರತಿಕೂಲ ಸಂದರ್ಭಗಳಲ್ಲಿ ಭಯ ಪಡದೇ, ಮುನ್ನಗುವ ಗುಣ ಆಕೆಗಿದೆ. ದುರಾದೃಷ್ಟವೆಂದರೆ ಬಲಿಷ್ಠವಾಗಿರುವ ಮಹಿಳೆಯರನ್ನು ನಿಭಾಯಿಸುವಲ್ಲಿ ಪುರುಷರುಎಡವುತ್ತಾರೆ. 

Men cannot handle, strong-woman, relationship tips, 
ರಿಲೇಷನ್ ಶಿಪ್ ಟಿಪ್ಸ್, ಪುರುಷ, ಸ್ರ್ಟಾಂಗ್ ಮಹಿಳೆ,

ಪ್ರಾಮಾಣಿಕತೆ

ಸ್ಟ್ರಾಂಗ್ ವ್ಯಕ್ತಿತ್ವ ಹೊಂದಿರುವ ಮಹಿಳೆ ಯಾರೊ್ಬಬರ ಜತೆಯೂ ಗೇಮ್ ಆಡಲು ಆಕೆ ಇಷ್ಟಪಡುವುದಿಲ್ಲ. ಆಕೆಯನ್ನು ನೀವು ಬೇಟಿಯಾಗಲು ಪ್ರಯತ್ನಿಸುತ್ತಿದ್ದರೆ, ಆಕೆ ನೇರವಾಗಿ ತನ್ನ ಅಭಿಪ್ರಾಯವನ್ನು ತಿಳಿಸಬಲ್ಲಳು. ಇಂಥ ಗುಣವಿರುವ ಮಹಿಳೆಯರ ಜತೆ ಪುರುಷರಿಗೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಸಮಯವು ಅಮೂಲ್ಯವಾದದ್ದು ಎಂದು ಆಕೆಗೆ ತಿಳಿದಿರುತ್ತದೆ. ಕೆಲಸದ ಸ್ಥಳದಲ್ಲಿ ಅವರು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕತೆ ಹೊಂದಿರುವ ಮಹಿಳೆಯರು ಸಾಕಷ್ಠಿದ್ದಾರೆ. ಈ ಅಭ್ಯಾಸಗಳಿಂದಾಗಿ ಕೆಲ ಪುರುಷರು ಇಂಥ ಮಹಿಳೆಯರನ್ನು ಹ್ಯಾಂಡಲ್ ಮಾಡಲು ಕಷ್ಟವಾಗಬಹುದು.  

‘Passion’ ಆಕೆಯ ಎರಡನೇಯ ಹೆಸರು..!  

ಸ್ರ್ಟಾಂಗ್ ಆಗಿರುವ ಮಹಿಳೆಯರು ತಮ್ಮ ಜೀವನದಲ್ಲಿ ಯಾರನ್ನು ಹೊಂದಿದ್ದಾರೆ ಎಂಬುದು ಮುಖ್ಯವಲ್ಲ. ಸಂತೋಷದಿಂದ ಯಾವಾಗಲೂ ತನ್ನ ಗುರಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾಳೆ. ಆಕೆ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಯಾವುದೇ ಕೆಲಸ ಮಾಡಿದರೂ, ಉತ್ಸಾಹ ಹಾಗೂ ಆಸಕ್ತಿಯಿಂದ ಮಾಡುತ್ತಾರೆ. ಪ್ರೀತಿ ಮಾಡುವಾಗ ಆಕೆ ಪೂರ್ಣ ಹೃದಯದಿಂದ ಪ್ರೀತಿಸುತ್ತಾಳೆ. ತಾನು ಪ್ರೀತಿ ಮಾಡುವ ಸಂಗಾತಿಯನ್ನು ಬೆಂಬಲಿಸುತ್ತಾಳೆ. ಆತನ ಪರವಾಗಿ ಹೋರಾಡುತ್ತಾಳೆ. ಆಕೆಗೆ ಸಾಕಷ್ಟು ಹವ್ಯಾಸಗಳು, ಆಸಕ್ತಿಗಳು ಸಹ ಇರುತ್ತವೆ. ಎಲ್ಲಾ ವಿಚಾರಗಳಲ್ಲೂ ಇಂಥ ಮಹಿಳೆಯರು ಸ್ಪಷ್ಟತೆ ಯನ್ನು ಹೊಂದಿರುತ್ತಾರೆ. 

Men cannot handle, strong-woman, relationship tips, 
ರಿಲೇಷನ್ ಶಿಪ್ ಟಿಪ್ಸ್, ಪುರುಷ, ಸ್ರ್ಟಾಂಗ್ ಮಹಿಳೆ,

ತಮ್ಮ ಮಹತ್ವವನ್ನು ಅರಿತಿದ್ದಾರೆ..!

ಎರಡನೇಯದಾಗಿ, ಸ್ರ್ಟಾಂಗ್ ಆಗಿರುವ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿತಿದ್ದಾರೆ. ಸ್ವಾಭಿಮಾನದ ಪ್ರಶ್ನೆ ಬಂದಾಗ ಆಕೆ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳುವುದಿಲ್ಲ. ಇಂತಹ ಗುಣವಿರುವ ಮಹಿಳೆಯರು ತಮ್ಮ ನಂಬಿಕೆ, ಮೌಲ್ಯಗಳ ಬಗ್ಗೆ ತಿಳಿದಿದ್ದಾರೆ. ಮತ್ತೊಂದು ಪ್ರಮುಖ ಗುಣವೆಂದರೆ, ಆಕೆ ಬೇರೆಯವರನ್ನು ಗಮನ ಸೆಳೆಯಲು ಅಥವಾ ಅವರನ್ನು ಆಕರ್ಷಿಸಲು ಎಂದಿಗೂ ಪ್ರಯತ್ನ ಪಡುವುದಿಲ್ಲ. ಇವರು ತಮ್ಮ ಮೌಲ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ಜನರು ಗೌರವದಿಂದ ಕಾಣುತ್ತಾರೋ, ಅಥವಾ ಇಲ್ಲವೋ? ಎಂಬ ಬಗ್ಗೆ ಆಕೆ ಕಿಂಚಿತ್ತೂ ಯೋಚಿಸುವುದಿಲ್ಲ.

ಬಲವಾದ ಸಂಬಂಧ!

ಹೆಚ್ಚಿನ ಪುರುಷರು ದೈಹಿಕ , ಕಾಮ ಪ್ರಚೋದಕ ಅನೋನ್ಯತೆ ಬಯಸುತ್ತಾರೆ. ಆದ್ರೆ ಸ್ಟ್ರಾಂಗ್ ಆಗಿರುವ ಮಹಿಳೆ ದೈಹಿಕ ಅನ್ಯೋನ್ಯತೆ ಜತೆಗೆ ಭಾವನಾತ್ಮಕ ಅನೋನ್ಯತೆಯ ಗುಣಗಳನ್ನು ಬಯಸುತ್ತಾಳೆ. ಅವಳು ಪ್ರೀತಿಯಿಂದ ಹಿಡಿದು, ಮಾತನಾಡುವುದು, ಹೀಗೆ ಅನೇಕ ವಿಷಯಗಳಲ್ಲಿ ಪುರುಷರನ್ನು ಪ್ರಶ್ನೆ ಮಾಡಬಲ್ಲಳು. ಇಂತಹ ಮಹಿಳೆಯ ಜತೆ ಇರಲು ಪುರುಷರಿಗೆ ಕಷ್ಟವಾಗಬಹುದು. ‘

Men cannot handle, strong-woman, relationship tips, 
ರಿಲೇಷನ್ ಶಿಪ್ ಟಿಪ್ಸ್, ಪುರುಷ, ಸ್ರ್ಟಾಂಗ್ ಮಹಿಳೆ,

ಬಲಿಷ್ಠ ಮಹಿಳೆ ಮೌಲ್ಯಗಳ ಬಗ್ಗೆ ತಿಳಿದಿದ್ದಾಳೆ!

ಬಲಿಷ್ಠ ಮಹಿಳೆ ತನ್ನ ಪ್ರಾಥಮಿಕ ಅವಶ್ಯಕತೆ ಗಳು ಏನು ಎಂಬುದನ್ನು ಅರಿತಿದ್ದಾಳೆ. ಬೇರೆಯವರ ಸಲಹೆ ಆಕೆಗೆ ಅಗತ್ಯವಿರುವುದಿಲ್ಲ. ಈ ಕಾರಣಗಳಿಂದಾಗಿ ಕೆಲವರು ಆಕೆಯನ್ನು ದ್ವೇಷಿಸಿದರೆ, ಮತ್ತೆ ಕೆಲವರು ಆಕೆಯನ್ನು ಪ್ರೀತಿಸುತ್ತಾರೆ. ಆದ್ರೆ ಅವಳು ಮಾತ್ರ ಇವೆರಡನ್ನು ಒಂದೇ ರೀತಿಯಲ್ಲಿ ಪರಿಗಣಿಸುತ್ತಾಳೆ. 

ಸುಳ್ಳನ್ನು ಪತ್ತೆ ಮಾಡುವ ಶಕ್ತಿ!

ಕೆಟ್ಟ ಉದ್ದೇಶ ಹೊಂದಿರುವ ವ್ಯಕ್ತಿಗಳ, ಹಾಗೂ ಅವರ ನಡುವಳಿಕೆ ಗಳು ಇಂಥ ಮಹಿಳೆಯರು ತೀಕ್ಷ್ಣವಾಗಿ ಗುರುತಿಸುವ ಶಕ್ತಿ ಇದೆ. ಅಪ್ರಾಣಾಣಿಕ ವ್ಯಕ್ತಿಗಳ ನಡತೆಯನ್ನು ಆಕೆ ತಕ್ಷಣದಲ್ಲೇ ಗುರುತಿಸುವ ಸಾಮರ್ಥ್ಯ ಹೊಂದಿದ್ದಾಳೆ. ಹಾಗೇ ಸಮಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಪಡೆದಿದ್ದಾಳೆ.

ಬೇರೆಯವರಿಗಾಗಿ ಕಾಯುವುದಿಲ್ಲ..! 

ಬಲಿಷ್ಠ ಮಹಿಳೆಯನ್ನು ನೀವು ಪ್ರೀತಿಸಿದರೆ , ಕಠಿಣ ಪರಿಸ್ಥಿತಿಯಲ್ಲೂ ಆಕೆ ನಿಮಗೆ ಸಹಾಯಕ್ಕೆ ನೆರವಾಗುತ್ತಾಳೆ. ಆದರೆ ಆಕೆಗೆ ನೀವು ಮೋಸ ಮಾಡಿದರೆ, ಆಕೆ ಎಂದಿಗೂ ನಿಮಗಾಗಿ ಕಾಯುವುದಿಲ್ಲ. ಯಾಕಂದೆರೆ ನಿಮಗಿಂತ ಹೆಚ್ಚು, ಜೀವನದಲ್ಲಿ ಮುಂದೆ ಸಾಗಲು ಬಯಸುತ್ತಾಳೆ. ಎಲ್ಲರಂತೆ ಆಕೆಗೂ ಸಹ ವಿಶೇಷ ಪ್ರೀತಿಯ ಅಗತ್ಯವಿದ್ದರೂ, ಅವರ ಅಗತ್ಯತೆ ಗಳನ್ನು ಪೂರೈಸಲು ನಿಮಗೆ ಸಾಧ್ಯವಾಗದಿದ್ದರೆ. ಆಕೆ ಜೀವನಪೂರ್ತಿ ಒಂಟಿಯಾಗಿರಲು ಬಯಸುತ್ತಾಳೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ