ನಿಮ್ಮ ಮಗುವಿನ ಮೂಳೆಗಳು ಬಲವಾಗಿರಲು.. ಈ ಎಣ್ಣೆಗಳು ಉಪಯೋಗಿಸಿ

  • by

ಪ್ರತಿಯೊಬ್ಬ ತಾಯಿ ತನ್ನ ಮಗುವಿನ ಆರೋಗ್ಯದ ಕಾಳಜಿ ವಹಿಸುತ್ತಾರೆ. ಮಗು ಜನನವಾದಾಗ ಅದಕ್ಕೆ ಏನು ತಿನ್ನಿಸಬೇಕು. ಯಾವ ಎಣ್ಣೆ ಯಿಂದ ಮಸಾಜ್ ಮಾಡಬೇಕು ಎಂಬ ಯೋಚನೆ ಆಕೆಯನ್ನು ಕಾಡುತ್ತಿರುತ್ತದೆ. ನೀವು ಸಹ ನಿಮ್ಮ ಅಕ್ಕರೆಯ , ಪ್ರೀತಿಯ ಮಗುವಿನ ತ್ವಚೆಯ ಬಗ್ಗೆ ಯೋಚನೆ ಮಾಡುತ್ತಿದ್ದೀರಾ. ಹಾಗಾದ್ರೆ ಯಾವ ಯಾವ ಎಣ್ಣೆಗಳಿಂದ ನಿಮ್ಮ ಮಗುವನ್ನು ಮಸಾಜ್ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. 

massage oil, baby bones, 
ಮಗು, ಮಸಾಜ್ ಎಣ್ಣೆ, ಆರೋಗ್ಯ ಟಿಪ್ಸ್

ಹಸುವಿನ ತುಪ್ಪದಿಂದ ಮಸಾಜ್ ಮಾಡಿ

ನಿಮ್ಮ ಮಗುವಿಗೆ ಹಸುವಿನ ತುಪ್ಪದಿಂದ ಮಸಾಜ್ ಮಾಡಿ.  ಹಸುವಿನ ತುಪ್ಪದಿಂದ ಮಸಾಜ್ ಮಾಡುವುದರಿಂದ ನಿಮ್ಮ ಮಗುವಿನ ಶಕ್ತಿ ಹೆಚ್ಚುತ್ತದೆ. ಈ ಹಾಲಿನ ಉತ್ಪನ್ನವನ್ನು ಮಸಾಜ್ ಮಾಡಲು ಸಹ ಬಳಸಲಾಗುತ್ತದೆ. ಮತ್ತು ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ತುಪ್ಪ ದೇಹವನ್ನು ಚಳಿಯಿಂದ ರಕ್ಷಿಸುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ತುಪ್ಪವನ್ನು ಬಳಸಲಾಗುತ್ತದೆ. ಎದೆ ಹಾಗೂ ಬೆನ್ನಿನ ಮೇಲೆ ತುಪ್ಪದಿಂದ ಮಸಾಜ್ ಮಾಡುವುದರಿಂದ ಕಫದ ಸಮಸ್ಯೆ ದೂರ ಮಾಡುತ್ತದೆ. ಇದು ಮಕ್ಕಳಿಗೆ ಹೆಚ್ಚು ಸಹಕಾರಿಯಾಗಿದೆ. 

ಎಳ್ಳು ಎಣ್ಣೆ

ಈ ಎಣ್ಣೆಯನ್ನು ಮಸಾಜ್ ಮಾಡಲು ಸಾಕಷ್ಟು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಿಮ್ಮ ಮಗುವಿನ ಚರ್ಮವಿನ ಚರ್ಮವನ್ನು ಎಳ್ಳು ಎಣ್ಣೆಯಿಂದ ಮಸಾಜ್ ಮಾಡಿ. ಆದ್ರೆ ಇದು ನಕಲಿ ಎಣ್ಣೆಯಾಗಿರಕೂಡದು. ಇಲ್ಲದಿದ್ದರೆ ಹಾನಿಯಾಗುವ ಸಂಭವ ಹೆಚ್ಚು. ಆದ್ದರಿಂದ ಮಕ್ಕಳನ್ನು ಚಳಿಗಾಲದಲ್ಲಿ ಮಾತ್ರ ಎಳ್ಳು ಎಣ್ಣೆಯಿಂದ ಮಸಾಜ್ ಮಾಡಲು ಪ್ರಯತ್ನಿಸಿ. 

massage oil, baby bones,  
ಮಗು, ಮಸಾಜ್ ಎಣ್ಣೆ, ಆರೋಗ್ಯ ಟಿಪ್ಸ್

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ ಮಕ್ಕಳಿಗೆ ಮಾತ್ರವಲ್ಲದೇ, ಎಲ್ಲಾ ವಯಸ್ಸಿನವರಿಗೂ ಒಳ್ಳೆಯದು. ಬಾದಾಮಿ ಎಣ್ಣೆ ಇತರ ಎಣ್ಣೆಗಿಂತ ಹೆಚ್ಚು ವಿಟಮಿನ್ ಇ ಹೊಂದಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಚಳಿಗಾಲದಲ್ಲಿ ನಿಮ್ಮ ಮಗುವಿಗೆ ಬಾದಾಮಿ ಎಣ್ಣೆ ಯಿದಂ ಮಸಾಜ್ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಚರ್ಮ ಮೃದುವಾಗಿ ಮತ್ತು ಹೊಳೆಯುತ್ತದೆ. ಇದು ಮಗುವಿನ ಮೆದುಳಿಗೂ ಒಳ್ಳೆಯದು. 

ಆಲಿವ್ ಎಣ್ಣೆ 

ಆಲಿವ್ ಎಣ್ಣೆಯಿಂದ ಅಂದರೆ ಆಲಿವ್ ಎಣ್ಣೆ ಸಾಮಾನ್ಯವಾದ ಎಣ್ಣೆಯಾಗಿದೆ. ಇದನ್ನು ಮಕ್ಕಳಿಗೆ ವಿಶ್ವದಾಂದ್ಯತ ಬಳಸಲಾಗುತ್ತದೆ. ಮಕ್ಕಳಿಗೆ ಮಸಾಜ್ ಮಾಡಲು ಇದನ್ನು ವಿಶೇಷವಾಗಿ ಬಳಕೆ ಮಾಡುತ್ತಾರೆ. ಆಲಿವ್ ಎಣ್ಣೆಯಿಂದ ಕೂದಲು ಬೆಳೆಯುತ್ತದೆ. ಮಗುವಿನ ತಲೆಯಲ್ಲಿ ಕಡಿಮೆ ಕೂದಲು ಇದ್ದರೆ ಈ ಎಣ್ಣೆಯಿಂದ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ಸ್ನಾನ ಮಾಡಿಸಿ. 

ಸಾಸಿವೆ ಎಣ್ಣೆ  

ಹಿಂದಿನ ಕಾಲದಿಂದಲೂ ಮಕ್ಕಳಿಗೆ ಮಸಾಜ್ ಮಾಡುವುದಕ್ಕೆ ಬಳಸಲಾಗುತ್ತಿದೆ. ಈ ತೈಲವನ್ನು ವಿಶೇಷವಾಗಿ ಚಳಿಗಾಲದಲ್ಲಿ ಅತ್ಯುತ್ತಮ ವೆಂದೇ ಪರಿಗಣಿಸಲಾಗುತ್ತದೆ. ಈ ಎಣ್ಣೆ ಕೂದಲಿಗೆ ಒಳ್ಳೆಯದು. ಜತೆಗೆ ಇದರ ಮಸಾಜ್ ನಿಮ್ಮ  ಮಗುವನ್ನು ಚರ್ಮದ ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಸಾಸಿವೆ ಎಣ್ಣೆಯೂ ದೇಹವನ್ನು ಬೆಚ್ಚಗಿಡುತ್ತದೆ. ಮೂಳೆಗಳು ಗಟ್ಟಿಗೊಳ್ಳುತ್ತವೆ. ಮತ್ತು ಶೀತವನ್ನು ನಿವಾರಿಸುತ್ತದೆ. 

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯಿಂದ ಮಗುವಿಗೆ ಮಸಾಜ್ ಮಾಡುವುದರಿಂದ ಆರೋಗ್ಯ ಪ್ರಯೋಜನಗಳಿವೆ. ಕೊಬ್ಬರಿ ಎಣ್ಣೆ ಮಸಾಜ್ ಮಾಡಲು ಅತ್ಯುತ್ತಮ ಎಂದೇ ಹೇಳಬಹುದು. ಇನ್ಫೆಕ್ಷನ್ ನನ್ನು ಕೊಬ್ಬರಿ ಎಣ್ಣೆ ತಡೆಗಟ್ಟುತ್ತದೆ. ಮಕ್ಕಳು ಹಾಗೂ ದೊಡ್ಡವರು ಸಹ ಈ ಎಣ್ಣೆಯಿಂದ ಮಸಾಜ್ ಮಾಡಬಹುದು. ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಬಾಡಿ ಮಸಾಜ್ ಮಾಡುವುದರಿಂದ ಸ್ಕಿನ್ , ಚರ್ಮ ಹಾಗೂ ಮೂಳೆಗಳು ಆರೋಗ್ಯವಾಗಿರುತ್ತವೆ. 

massage oil, baby bones,  
ಮಗು, ಮಸಾಜ್ ಎಣ್ಣೆ, ಆರೋಗ್ಯ ಟಿಪ್ಸ್

ಮಸಾಜ್ ಮಾಡುವಾಗ ಮಸಾಜ್ ಮಾಡುವವರು ಯಾವುದೇ ಉಗುರು , ಬಳೆ ಧರಿಸಬೇಡಿ. ಅವುಗಳು ಮಗುವಿನ ದೇಹಕ್ಕೆ ತಾಗಿದರೆ ಮಗುವಿಗೆ ನೋವಾಗುತ್ತದೆ. ಅಲ್ಲದೇ ಮಗುವಿಗೆ ಮಸಾಜ್ ಮಾಡುವುದಕ್ಕೆ ಸರಿಯಾದ ಒಳ್ಳೆಯ ಮಸಾಜ್ ತೈಲವನ್ನು ಆರಿಸುವುದು ಸೂಕ್ತ .

ಮಗುವಿಗೆ ಮಸಾಜ್ ಮಾಡುವುದು ಹೇಗೆ?

ಮಗುವನ್ನು ಮೈ ಒರೆಸುವ ಬಟ್ಟೆಯ ಮೇಲೆ ಅಥವಾ ನಿಮ್ಮ ತೊಡೆಯ ಮೇಲೆ ಮಲಗಿಸಿಕೊಂಡು ಬೆರಳುಗಳಿಂದ ದೀರ್ಘ ಮತ್ತು ಸೌಮ್ಯವಾಗಿ ಮಸಾಜ್ ಮಾಡಿ. ಮೃದುವಾಗಿ ಮಗುವಿನ ತಲೆ ಮಸಾಜ್ ಮಾಡಿದ ನಂತರ ದೇಹದ ಇತರ ಬಾಗಗಳಿಗೆ ಮಸಾಜ್ ಮಾಡಬೇಕು. ಕೈ ತೋಳು, ಭುಜಗಳಿಗೆ ಮಾಲೀಶು ಮಾಡಿ. ಮಗುವಿನ ಅಂಗವರ್ಧನ ತೋಳು ತದನಂತರ ಸೊಂಟದಿಂದ ತೊಡೆಯವರೆಗೆ ತೊಡೆಯಿಂದ ಪಾದದವರೆಗೆ ಮಸಾಜ್ ಮಾಡಿ. ಹೊಟ್ಟೆಯ ಸುತ್ತಲೂ ವೃತ್ತಕಾರದ ಚಲನೆಯಿಂದ ಮಸಾಜ್ ಮಾಡಿ. 

ಮಸಾಜ್ ಮಾಡಲು ಸಮಯ ಯಾವುದು..?

ಮಗು ಶಾಂತವಾಗಿರುವಾಗ ಹಾಗೂ ವಿಶ್ರಾಂತಿ ಪಡೆದಾಗ ಮಸಾಜ್ ಮಾಡಬೇಕು.. ತಾಯಿಗೂ ಆರಾಮದಾಯಕವಾಗಿರುವ ಸಮಯ ಆಯ್ಕೆ ಮಾಡಬೇಕು. ಮಸಾಜ್ ಮಾಡುವ ಸ್ಥಳ ಬೆಚ್ಚಗಿರಬೇಕು. ಬೆಳಕಿರಬೇಕು. 

ಮಸಾಜ್ ಮಾಡುವುದರಿಂದ ಮಕ್ಕಳನ್ನು ಶಾಂತಗೊಳಿಸಬಹುದು. ಮಕ್ಕಳು ಅಳು ಕಡಿಮೆ ಮಾಡಬಹುದು. ಮಸಾಜ್ ಮಾಡುವುದರಿಂದ ತಾಯಿ ಹಾಗೂ ಶಿಶುಗಳಲ್ಲಿ ಆಕ್ಸಿಟೋಸಿನ್ ಹಾರ್ಮೋನ್ ಉತ್ಪತ್ತಿ ಹೆಚ್ಚುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ