ಅಣಬೆಯಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ!

  • by

ಮಾರುಕಟ್ಟೆಯಲ್ಲಿ ಅಣಬೆಗೆ ಬೇಡಿಕೆ ಹೆಚ್ಚಿದೆ. ಅಣಬೆ ಸಸ್ಯವರ್ಗಕ್ಕೆ ಸೇರಿದ್ದು, ಆಹಾರ ಪದಾರ್ಥಗಳಲ್ಲಿ ಅಣಬೆಯನ್ನು ತರಕಾರಿ ಎಂದು ಗುರುತಿಸಲಾಗುತ್ತದೆ. ಬಹುಪಾಲು ಅಣಬೆಗಳು ತಿನ್ನಲು ಯೋಗ್ಯವಾಗಿರುತ್ತವೆ.. ಪ್ರೋಟೀನ್, ಜೀವಸತ್ವಗಳು, ಖನಿಜಾಂಶಗಳು ಇದರಲ್ಲಿ ಹೇರಳವಾಗಿದ್ದು, ಸಕ್ಕರೆ ರೋಗಿಗಳಿಗೆ ಒಳ್ಳೆಯ ಆಹಾರ ಎಂದು ಹೇಳಲಾಗುತ್ತದೆ. ಹೆಚ್ಚು ಮೃದುವಾಗಿರುವುದರಿಂದ ವಿವಿಧ ಮಸಾಲೆ ಪರಿಮಳವನ್ನು ಹೀರಿಕೊಳ್ಳುವ ಗುಣ ಇದಕ್ಕಿದೆ. ಇದರಿಂದ ರುಚಿಕರ ತಿನಿಸುಗಳನ್ನು ತಯಾರಿಸಬಹುದು. 

mushrooms, Health benefits 
ಅಣಬೆಯ ಆರೋಗ್ಯ ಪ್ರಯೋಜನಗಳು,

ಅಣಬೆಯಲ್ಲಿರುವ ಪೌಷ್ಟಿಕಾಂಶಗಳು? 

ತಾಜಾ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳು ಅಣಬೆಯಲ್ಲಿಯೂ ಇವೆ. ಕೆಲವು ಜಾತಿಯ ಅಣಬೆಗಳಲ್ಲಿ ಫ್ಲೋಲಿಕ್ ಆಮ್ಲ ಹೆಚ್ಚಾಗಿರುವುದರಿಂದ ತಿಳಿದು ಬಂದಿದೆ. ಈ ಆಮ್ಲವನ್ನ ರಕ್ತ ನರಳುವ ರೋಗಿಗಳಿಗೆ ಕೊಡುತ್ತಾರೆ. 100-200 ಗ್ರಾಂ ಒಣಗಿದ ಅಣಬೆಗಳಲ್ಲಿ ಒಬ್ಬ ಆರೋಗ್ಯ ವಂತನಿಗೆ ಬೇಕಾಗುವಷ್ಟು ಪೌಷ್ಟಿಕಾಂಶವಿದೆ.

ಅಣಬೆಯಲ್ಲಿ ವಿಧಗಳು

ಅಣಬೆಗಳಲ್ಲಿ ಖಾದ್ಯ ಅಣಬೆಗಳು ಮತ್ತು ವಿಷ ಅಣಬೆಗಳು ಎಂಬ ಎರಡು ವಿಧಗಳಿವೆ. ವಿಷ ಅಣಬೆಗಳ ತಿನ್ನಲು ಯೋಗ್ಯವಿರುವುದಿಲ್ಲ. ಅನೇಕ ಜಾತಿಯ ವಿಷ ಅಣಬೆಗಳು ಜೀವಕ್ಕೆ ಮಾರಕವಾಗಿವೆ ಎಂದು ಹೇಳಲಾಗುತ್ತದೆ. ಸಿಲೋಸೈಬೆ ಮೆಕ್ಸಿಕಾನ್ ಎಂಬ ಜಾತಿಯ ಅಣಬೆ ಮಕ್ಸಿಕನರಿಗೆ ಪ್ರಿಯವೆನಿಸಿದೆ. ಈ ಜಾತಿಯಲ್ಲಿ ಹಲ್ಲೊಸಿನೊಜೆನಿಕ್ ಎಂಬ ರಾಸಾಯಮಿಕ ವಸ್ತುವಿದೆ. ಈ ವಸ್ತುವನ್ನು ಮನೋರೋಗ ಚಿಕಿತ್ಸೆಯಲ್ಲಿ ಬಳಸುತ್ತಾರೆ.ಅಮಾನಿಟ್ ಮಸ ಕೇರಿಯಾ ಎಂಬ ಅಣಬೆಗಳಲ್ಲಿ ಕೆಲವು ಔಷಧಿಗಳಿಗೆ ಬಳಸುತ್ತಾರೆ.

ವಿಟಮಿನ್ ಬಿ-2 

ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಇದೆ. ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ  ತುಂಬಾ ಮುಖ್ಯವಾಗುಕ್ಕಗೆ, ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ 2 ಹಾಗೂ ಬಿ 3 ಇರುವುದರಿಂದ ದೇಹಕ್ಕೆ ತುಂಬಾ ಉತ್ತಮವಾದದ್ದು ಎಂದು ಹೇಳಲಾಗುತ್ತದೆ. 

ಕೊಲೆಸ್ಟ್ರಾಲ್ ನಿವಾರಣೆ

mushrooms, Health benefits 
ಅಣಬೆಯ ಆರೋಗ್ಯ ಪ್ರಯೋಜನಗಳು,

ಅಣಬೆಯಲ್ಲಿ ಬೊಜ್ಜಿನ ಅಂಶವಿಲ್ಲದಿರುವುದರಿಂದ, ಇದು ಕಾರ್ಬೋಹೈಡ್ರೇಡ್ ಹೊಂದಿದೆ. ಅಷ್ಟೇ ಅಲ್ಲ. ಇದರಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಬೊಜ್ಜು ಕರಗಿಸುವಲ್ಲಿ ಸುಲಭ. ಇದರಲ್ಲಿರುವ ಎಂಜೈಮು ದೇಹದಲ್ಲಿ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ. 

ರೋಗ ನಿರೋಧಕ ಶಕ್ತಿ ಹೆಚ್ಚಳ

ಅಣಬೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬೆಚ್ಚಾಗುಕ್ಕದೆ. ಆಂಟಿಬಯೋಟಿಕ್ ಅಂಶ ದೇಹ ಇನ್ನಿತರ ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ. 

ರಕ್ತಹೀನತೆ

ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿ ಅಣಬೆಯಾಗಿದೆ. ಅವ್ವದೇ ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ  ನೀಡುತ್ತದೆ. ರಕ್ತಹೀನತೆ ನಿವಾರಣೆ ಮಾಡಿ, ರಕ್ತದೋತ್ತಡ ತಡೆೆಯಲು ಸಹಾಯ ಮಾಡುತ್ತದೆ. ಮಧುಮೇಹ ಇರುವವರು ಅಣಹೆ ತಿಂದರೆ ಸಕ್ಕರೆ ಅಂಶ ವಿವಾರಣೆಯಾಗುತ್ತದೆ ಅಧಿಕ ಸಕ್ಕರೆ ಇರುವ ಮಧುಮೇಹಿಗಳು ಇದನ್ನು ತಿಂದರೆ ಹೆಚ್ಚು ಪ್ರಯೋಜನಕಾರಿಯಾಗಿದೆ. 

mushrooms, Health benefits 
ಅಣಬೆಯ ಆರೋಗ್ಯ ಪ್ರಯೋಜನಗಳು,

ರೀಶಿ ಜಾತಿಯ ಅಣಬೆ ಉಪಯೋಗಗಳೇನು? 

ರೀಶಿ ಅಣಬೆಯನ್ನು ಏಷ್ಯಾ ಖಂಡದ ಸಮಷಿತೋಷ್ಣ ಮತ್ತು ತೇವ ವಲಯದಲ್ಲಿ ಬೆಳೆಯುವ ಸಸ್ಯವರ್ಗಲಾಗಿದೆ. 

ರೀಶಿ ಅಣಬೆಯನ್ನು ಔಷಧಿಯ ಅಣಬೆಯಾಗಿ ಬಳಕೆ ಮಾಡಲಾಗುತ್ತದೆ. ಏಷ್ಯಾ ಖಂಡದ ದೇಶಗಳಲ್ಲಿ ಇದರ ಆರೋಗ್ಯ ವರ್ಧಕ ಗುಣಗಳಿಂದಾಗಿ ನೈಸರ್ಗಿಕ ಔಷಧೀಯ ರೂಪದಲ್ಲಿ ಬಳಸಲಾಗುತ್ತದೆ. ಅಣಬೆಗಳಲ್ಲಿ ಕಾಣಬರುವ ನೆರಿಗೆಗಳಂತಹ ಭಾಗದಲ್ಲಿ ಫಲಭರಿತ ಭಾಗವನ್ನು ಹೊಂದಿದ್ದು, ಈ ಭಾವವನ್ನು ಔಷಧೀಯ ರೂಪದಲ್ಲಿ  ಬಳಸಲಾಗುತ್ತದೆ. 

ರೀಶಿ ಅಣಬೆಯನ್ನು ಸೇವಿಸುವುದರಿಂದ ಖಿನ್ನತೆ ತೀವ್ರತೆಯನ್ನು ಕಡಿಮೆ ಮಾಡಬಹುದು. ನಾಲ್ಕು ವಾರ ಈ ಅಣಬೆಯನ್ನು ಸೇವಿಸುತ್ತಾ ಬಂದರೆ ಸುಸ್ತು ದೂರವಾಗುತ್ತದೆ. 

mushrooms, Health benefits 
ಅಣಬೆಯ ಆರೋಗ್ಯ ಪ್ರಯೋಜನಗಳು,
edible raw mushrooms on a wooden table

ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ರೀಶಿ ಅಣಬೆಯಲ್ಲಿರುವ ಕೆಲವು ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುವ ಗುಣ ಹೊಂದಿದೆ. ಅಲ್ಲದೇ ಇದು ಯಕೃತದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ರೀಶಿ ಅಣಬೆ ಸೇವನೆಯ ಮೂಲಕ ದೇಹದಲ್ಲಿ ರಾಸಾಯನಿಕ ಕ್ರಿಯೆಗಳು ಸುಗಮವಾಗಿ ನಡೆಯುತ್ತವೆ. ಹಾಗೂ ವಿಶೇಷವಾಗಿ ಯಕೃತ್ ನ ಕಾಯಿಲೆಗಳಿಂದ ರಕ್ಷಿಸುತ್ತದೆ ರೀಶಿ ಅಣಬೆ ಸೇವನೆಯಿಂದ ಅಸ್ತಮಾ, ಅಲರ್ಜಿ ನಿವಾರಣೆಯಾಗುತ್ತದೆ. ಇದರಲ್ಲಿರುವ ಟ್ರೈಟಪೀರ್ನ್ಸ್ ಗಳು ದೇಹಕ್ಕೆ ಎರಗುವ ವೈರಸ್, ಅತಿಸೂಕ್ಷ್ಮ ಜೀವಿ ಮತ್ತು ಶಿಲೀಂಧ್ರನ ಸೋಂಕುಗಳಿಂದ ರಕ್ಷಿಸುತ್ತದೆ. 

ಅಣಬೆ ಹಲವು ಔಷಧೀಯ ಗುಣಗಳನ್ನು ಪಡೆದಿದ್ದು, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಮಹತ್ವ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ ಈ ಅಣಬೆಯ ರುಚಿ ಕೊಂಚ ಕಹಿಯಾಗಿದ್ರು. ಇವು ಸೇವನೆಗೆ ಯೋಗ್ಯವಾಗಿವೆ. 

ರೀಶಿ ಅಣಬೆಯಿಂದ ಏನೆಲ್ಲ ಅಪಾಯ..!

ರೀಶಿ ಅಣಬೆ ಸೇವನೆ ಯಾವ ಬಗೆಯ ಅಣಬೆ, ಯಾವ ರೂಪದಲ್ಲಿ ಬೆಳೆಯಲಾಗುತ್ತದೆ. ವ್ಯಕ್ತಿಯ ವಯಸ್ಸು ಹಾಗೂ ಆರೋಗ್ಯವನ್ನು ಇವಲಂಬಿಸಿರುತ್ತದೆ. ಒಂದು ವೇಳೆ ಸತತವಾಗಿ ಮೂರರಿಂದ ಆರು ತಿಂಗಳ ಕಾಲ ಸೇವಿಸಿದರೆ ಇವುಗಳ ಸೇವನೆಯಿಂದ ಅಲರ್ಜಿಕಾರಕ ಪರಿಣಾಮ ಕಂಡು ಬರಬಹುದು. ಇವುಗಳ ಚರ್ಮದಲ್ಲಿ ಸೂಕ್ಷ್ಮ ಗೆರೆಗಳು, ತಲೆನೋವು, ತಲೆ ಸುತ್ತುವುದು , ತುರಿಕೆ , ರಕ್ತ ಸೋರುವುದು ಅಜೀರ್ಣತೆ, ಹಾಗೂ ಮಲವಿಸರ್ಜನೆ ವೇಳೆಯಲ್ಲಿ ರಕ್ತ ಕಾಣಿಸಿಕೊಳ್ಳುವುದು ಎದುರಾಗಬಹುದು. ಹಾಗಾಗಿ ಎಚ್ಚರವಹಿಸಿ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ