ಈ ವಸ್ತುಗಳನ್ನು ವಿವಾಹಿತ ಮಹಿಳೆಯರು ಬೇರೆಯವರ ಜತೆ ಹಂಚಿಕೊಳ್ಳಬಾರದು! ಏಕೆ..?

  • by

ಸಾಮಾನ್ಯವಾಗಿ ವಿವಾಹಿತ ಮಹಿಳೆಯರು ತಮ್ಮ ಸ್ನೇಹಿತರು ಅಥವಾ ಕುಟುಬಂದ ಸದಸ್ಯರ ಜತೆ ತಮ್ಮ ವಸ್ತುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅನೇಕ ಬಾರಿ ಇದನ್ನು ನಾವು ಕಾಣಬಹುದು. ಆದ್ರೆ ಇಂತಹ ಅಭ್ಯಾಸ ನಿಮಗಿದ್ದರೆ ನಿಮ್ಮ ಜೀವನದಲ್ಲಿ ಒಂದು ದಿನ ಇದು ನಿಮಗೆ ವಿಷಾದವನ್ನುಂಟು ಮಾಡುತ್ತದೆ. ಆದರೆ ಹಂಚಿಕೆ ನಿಮ್ಮ ಮತ್ತು ನಿಮ್ಮ ಪತಿಯ ನಡುವಿನ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಯಾರೊಂದಿಗೂ ಹಂಚಿಕೊಳ್ಳುವುದನ್ನು ತಪ್ಪಿಸಬೇಕಾದ ವಿಷಯಗಳು ಯಾವವು..? ಇದ್ರಿಂದ ಮಹಿಳೆಯರಿಗೆ ಆಗುವ ಪರಿಣಾಮಗಳೇನು.. ಪರಿಹಾರಗಳೇನು ಇಲ್ಲಿದೆ ಸರಳ ಉಪಾಯಗಳು.

married-women tips , ಮದುವೆಯಾ ಮಹಿಳೆಯರು. ಟಿಪ್ಸ್

ಸಿಂಧೂರ/ ಕುಂಕುಮ

ಭಾರತೀಯ ಸಂಪ್ರದಾಯದಲ್ಲಿ ಸಿಂಧೂರ್, ಹಣೆ ಬೊಟ್ಟುಗೆ ವಿಶೇಷ ಸ್ಥಾನವಿದೆ. ಮುತ್ಡೈದೆ ಮಹಿಳೆಗೆ ಸಿಂಧೂರ ಪ್ರಮುಖ ಪಾತ್ರ ವಹಿಸುತ್ತದೆ. ಮದುವೆಯಾದ ಮಹಿಳೆಯರು ತಮಗೆ ಬೇಕಾದ ಹಾಗೇ ಸಿಂಧೂರವನ್ನು  ಉಪಯೋಗಿಸುವಂತಿಲ್ಲ. ಸಿಂಧೂರ ಡಬ್ಬಾವನ್ನು ಇತರ ಮಹಿಳೆಯರಿಗೆ ನೀಡುವ ಅಭ್ಯಾಸವಿದ್ದರೆ ನಿಲ್ಲಿಸಿ.  ಈ ಅಭ್ಯಾಸವನ್ನು ಬದಲಾಯಿಸುವುದು ಉತ್ತಮ. ಯಾಕೆಂದರೆ ನೀವೇ ಬಳಸಿದ ಸಿಂಧೂರವನ್ನು ನೀಡುವುದು ನಿಮ್ಮ ಅದೃಷ್ಟದ ಮೇಲೆ ಪರಿಣಾಮ ಬೀರಬಹುದು.

married-women tips , ಮದುವೆಯಾ ಮಹಿಳೆಯರು. ಟಿಪ್ಸ್

ಬಿಂದಿ, ಹಣೆ ಬೊಟ್ಟು ಶೇರ್ ಮಾಡಬಾರದು..!

ಭಾರತೀಯ ಸಂಸ್ಕೃತಿಯಲ್ಲಿ ಬಿಂದಿಗೆ ಪ್ರಮುಖ ಸ್ಥಾನವಿದೆ. ನಿಮ್ಮ ಸಂಬಂಧಿಕರಿಗೆ , ಸ್ನೇಹಿತರಿಗೆ ಹಣೆಬೊಟ್ಟು ಅವಶ್ಯಕತೆ ಇರುತ್ತದೆ. ಅಂದು ಕೊಳ್ಳೋಣ. ಆಗ ನೀವು ನಿಮ್ಮ ಹಣೆ ಮೇಲಿನ ಬೊಟ್ಟು ನೀಡಬಾರದು. ಬೇರೆ ಬಾಕ್ಸ್ ನಲ್ಲಿರುವ ಬೇರೆ ಖರೀದಿ ಮಾಡಿರುವ ಹಣೆ ಬೊಟ್ಟು ನೀಡಿ. ಕೆಲವು ಮಹಿಳೆ ತಾವು ಹಚ್ಚಿರುವ ಬಿಂದಿಯನ್ನೇ ಮತ್ತೊಬ್ಬರಿಗೆ ನೀಡುತ್ತಿರುತ್ತಾರೆ. ಆದ್ರೆ ಇದು ಒಳ್ಳೆಯ ಅಭ್ಯಾಸವಲ್ಲ. ಇದರ ಅರ್ಥವೆನೆಂದರೆ ಪತಿಯ ಪ್ರೀತಿ ನಿಮಗೆ ಮಾತ್ರ ಸೀಮಿತವಾಗಿರುತ್ತದೆ.  ಹಣೆ ಮೇಲಿನ ಬೊಟ್ಟು ಬೇರೆಯವರಿಗೆ ಕೊಡುವುದರಿಂದ ಪ್ರೀತಿ ಹಂಚಿದಂತಾಗುತ್ತದೆ. ಆದ್ದರಿಂದ ತಪ್ಪಿಯೂ ಇಂಥ ಕೆಲಸ ಮಾಡಬೇಡಿ. 

ಮೆಹಂದಿ..!

ಪತಿಯ ದೀರ್ಘಾಯುಷ್ಯದ ಸಂಕೇತವಾಗಿ ಮೆಹಂದಿಯನ್ನು ಮದುವೆಯಾದ ಮಹಿಳೆಯರು ಕೈಗಳಿಗೆ ಹಚ್ಚಿಕೊಳ್ಳುತ್ತಾರೆ. ಕೈಗಳಿಗೆ ಮೆಹಂದಿ ಹೆಚ್ಚು ಕೆಂಪಾಗಿ ಮೂಡಿ ಬಂದರೆ ,  ಗಂಡ ಹೆಂಡತಿ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ನೀವು ಮೆಹಂದಿ ಹಚ್ಚಿ ಕೊಂಡ ನಂತರ ಉಳಿದ ಮೆಹಂದಿಯನ್ನು ಬೇರೆಯವರಿಗೆ ನೀಡಬಾರದು. ಇದರಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಹೆಚ್ಚು. 

married-women tips , ಮದುವೆಯಾ ಮಹಿಳೆಯರು. ಟಿಪ್ಸ್

ಬಳೆ, ಕಾಲ್ಗೆಜ್ಜೆ ಗಳನ್ನು ಶೇರ್ ಮಾಡಬೇಡಿ.!

ಮದುವೆಯಾದ ಮಹಿಳೆಯರು ಬಳೆಗಳನ್ನು ಇನೊಬ್ಬರಿಗೆ ಶೇರ್ ಮಾಡಬಾರದು. ತುಂಬಾ ಮಹಿಳೆಯರು ಸ್ಯಾರಿಗೆ , ಡ್ರೆಸ್ ಮ್ಯಾಚಿಂಗ್ ಬಳೆಗಳನ್ನು ಹಾಕಿಕೊಳ್ಳುವ ಉತ್ಸಾಹದಿಂದ ಬೇರೆಯವರ ಜತೆ ಬಳೆಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ಮಾಡುವುದು ತಪ್ಪು. ಬಳೆಗಳು ಮದುವೆಯಾದ ಮಹಿಳೆಯರ ಅದೃಷ್ಟವನ್ನು ಹೆಚ್ಚಿಸುತ್ತವೆ.  ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಬಳೆಗಳನ್ನು ನೀವು ಬೇರೆಯವರಿಗೆ ನೀಡಿದರೆ, ಇದು ನಿಮಗೆ ನಷ್ಟವನ್ನುಂಟು ಮಾಡಬಹುದು. 

ಕಾಜಲ್ ಅಥವಾ ಕಾಡಿಗೆ..!

ಮದುವೆಯಾದ ಮಹಿಳೆಯರು ಕಾಜಲ್, ಮಸ್ಕರಾವನ್ನು ಯಾರೊಂದಿಗೂ ತಪ್ಪಾಗಿಯೂ ಹಚ್ಚಿಕೊಳ್ಳಬಾರದು. ಹೀಗೆ ಮಾಡುವುದರಿಂದ ನಿಮ್ಮ ಗಂಡನ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ. ಇದಲ್ಲದೇ, ನೀವಿಬ್ಬರ ನಡುವೆ ಕಲಹ, ಜಗಳಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ