ಮೇಕಪ್ ಅಳಿಸಿಹಾಕಲು ಇಲ್ಲಿದೆ ಸಿಂಪಲ್ ಟಿಪ್ಸ್

  • by

ಮೇಕಪ್ ಮಹಿಳೆಯರು ಚೆಲುವು ಮಾತ್ರ ಹೆಚ್ಚಿಸಲ್ಲ… ಆಕೆಯ ಆತ್ಮವಿಶ್ವಾಸ ಕೂಡಾ ಹೆಚ್ಚಿಸುತ್ತದೆ…. ಚೆಂದವಾಗಿ ಕಾಣಲು ಹಲವರು ಮೇಕಪ್ ಮಾಡಿಕೊಳ್ಳುತ್ತಾರೆ.. ಆದ್ರೆ ನಿಮ್ಗೆ ಗೊತ್ತಾ ಮೇಕಪ್ ನಿಂದಾಗಿ ನಿಮ್ಮ ತ್ವಚೆ ಹಾಳಾಗುವ ಸಾಧ್ಯತೆ ಇದೆ. ಮೇಕಪ್ ಪ್ರಿಯಯರು ಈ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.. ಎಣ್ಣೆ ತ್ವಜೆ ಇರುವವರು ಆಯಿಲ್ ಬೇಸಡ್ ಕ್ರೀಮ್ ಬಳಸಿದರೆ, ಮತ್ತಷ್ಟು ತ್ವಚೆ ಹಾಳಾಗಬಹುದು..  ಜನರಿಗೆ ಮೇಕಪ್ ಆಕರ್ಷಕವಾಗಿ ಕಾಣಲು ಹಚ್ಚಿದ ತುಟಿಯ ಲಿಪ್ ಸ್ಟಿಕ್ ನಿಂದ ಹಿಡಿದು, ವಿಚಿತ್ರವಾಗಿ ಕಾಣುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೆಲ ಟಿಪ್ಸ್ ಗಳನ್ನು ಫಾಲೋ ಮಾಡಿದ್ರೆ ಒಳಿತು.

1. ಮೇಕಪ್ ತೆಗೆಯುವಾಗ ಎಣ್ಣೆ ಬಳಸುವುದು ಉತ್ತಮ… ಕಣ್ಣಿಗೆ ಹಚ್ಚಿದ ಕಾಡಿಗೆ ತೆಗೆಯುವಾಗ ನೀರಿನಲ್ಲಿ ತೊಳೆಯುವಾಗ ಅದು ಹರಡಿ ಮುಖ ಪೂರ್ತಿಯಾಗುತ್ತದೆ. ಹಾಗಾಗಿ ಕಣ್ಣಿನಿಂದ ಕಾಡಿಗೆ ಸರಿಯಾಗಿ ಹೋಗಲ್ಲ. ಆದ್ದರಿಂದ ಕಾಡಿಗೆಯನ್ನು ಸುಲಭವಾಗಿ ತೆಗೆಯಲು ಕೊಬ್ಬರಿ ಎಣ್ಣೆಯಲ್ಲಿ ಹತ್ತಿ ಅದ್ದಿ ಸುಲುಭವಾಗಿ ತೆಗೆಯಿರಿ. ಶ್ಯಾಡೋ , ಮಸ್ಕರಾ ಇವುಗಳನ್ನು ಕೂಡಾ ಇದೇ ವಿಧಾನ ಬಳಸಿ ತೆಗೆಯಿರಿ.

2. ಬೇಗನೇ ಮೇಕಪ್ ತೆಗೆಯಿರಿ, ಇದರಿಂದ ಕಣ್ಣಿಗೆ ಯಾವುದೇ ಹಾನಿಯಾಗುವುದಿಲ್ಲ. ಕಾಡಿಗೆ ಮುಖದ ಮೇಲೆ ಹರಡುವುದಿಲ್ಲ. ಇದರಿಂದ ಮುಖ ಸ್ಚಚ್ಛವಾಗಿ ಕಾಣುತ್ತದೆ. 

3. ವೈಪ್ಸ್ ಮುನ್ನ  ಕ್ಲೆನ್ಸರ್ ಬಳಸಿ. ಮೇಕಪ್ ತೆಗೆಯಲು ಮೊದಲು ಕ್ಲೆನ್ಸರ್ ಬಳಸುವುದು ಉತ್ತಮ. ಮುಖದ ಮೇಲೆ ಕಲೆ, ಮೊಡವೆ ಗಳಾಗಿ ಮುಖ ಹಾನಿಯಾಗುವ ಸಂಭವ ಹೆಚ್ಚು. ಹಾಗಾಗಿ ಮೇಕಪ್ ಸಂಪೂರ್ಣವಾಗಿ ತೊಳಯಲು ವೈಪ್ಸ್ ಸಾಕಾಗಲ್ಲ. ವೈಪ್ಸ್ ಜತೆಗೆ ಮುಖದ ರಂಧ್ರಗಳಲ್ಲಿ ಮೇಕಪ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. 

4. ಮೇಕಪ್ ಸಾಧನಗಳ ಜತೆಗೆ ನೀವು ಕ್ಲೆನ್ಸರ್ ಕೊಂಡುಕೊಂಡರೆ ಅದು ನಿಮ್ಮ ಮೇಕಪ್ ನಿಂದಾಗಿ ನಿಮ್ಮ ತ್ವಚೆ ಹಾಳಾಗದಂತೆ ಆರೈಕೆ ಮಾಡುತ್ತದೆ. ತ್ವಚೆಗೆ ಸರಿಹೊಂದುವ ಕ್ಲೆನ್ಸರ್ ಖರೀದಿ ಮಾಡಿ, ಹತ್ತಿಯಿಂದ ಕ್ಲೆನ್ಸರ್ ಅದ್ದಿಕೊಂಡು ಒರೆಸಿ. ಸುಲಭವಾಗಿ ಮೇಕಪ್ ತೆಗೆಯಬಹುದು. ಕ್ಲೆನ್ಸರ್ ಬಳಸಿ ಮೇಕಪ್ ತೆಗೆದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. 

5. ಮೇಕಪ್ ತೊಳೆಯುವಾಗ ವಿಧಾನ ಸರಿಯಾಗಿದೆಯಾ ಎಂಬುಹರ ಬಗ್ಗೆ ಗಮನಹರಿಸಿ, ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡು. ಗಾಢವಾದ ಮೇಕಪ್ ತೆಗೆಯಲು ೨ ಬಾರಿ ಕ್ಲೆನ್ಸರ್ ಮಾಡಿದರೂ ತೊಂದರೆಯಿಲ್ಲ. ಇದರಿಂದ ತ್ವಚೆಯಲ್ಲಿ  ಮೇಕಪ್ ಉಳಿಯುವುದಿಲ್ಲ.  ಮೊದಲು ಮೇಕಪ್ ಅನ್ನು ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಂಡು. ನಂತರ  ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ವಿಧಾನವನ್ನು ಅನುಸರಿಸುವುದರಿಂದ ಮುಖದಲ್ಲಿ ರಂಧ್ರಗಳು ಬೀಳದಂತೆ ಆರೈಕೆ ಮಾಡುತ್ತದೆ. 

6. ಮೇಕಪ್ ನೊಂದಿಗೆ ಮಲಗುವುದು ಸುಲಭವಲ್ಲ. ಪಾರ್ಟಿಗೆ ಹೋಗಿ ಬರುವಾಗ, ರಾತ್ರಿಯಾಯಿತು, ನಿದ್ದೆ ಬಂತು ಅಂತ ಹಾಗೇ ಮಲಗಬೇಡಿ. ಮೇಕಪ್ ನಲ್ಲಿ ಮಲಗುವುದರಿಂದ ನಿಮ್ಮ ತ್ವಚೆ ಸೌಂದರ್ಯ ಹಾಳಾಗಬಹುದು. ಮಲಗುವ ಮುನ್ನ ತ್ವಚೆ ಸ್ವಚ್ಛವಾಗಿರಲಿ. . 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ