ಪೂಜೆ ವೇಳೆ ಮಹಿಳೆಯರು ಬೇಗ ಮೇಕಪ್ ಮಾಡಿಕೊಳ್ಳೋದು ಹೇಗೆ? ಟಿಪ್ಸ್ ಇಲ್ಲಿದೆ

  • by

ಸಾಮಾನ್ಯವಾಗಿ ಹಬ್ಬದ ಹಾಗೂ ಪೂಜೆ ಸಂದರ್ಭದಲ್ಲಿ ಎಲ್ಲಾ ಮಹಿಳೆಯರು ಬಹಳ ಬ್ಯೂಸಿಯಾಗಿರುತ್ತಾರೆ. ಮನೆ ಕೆಲಸ ಕಾರ್ಯಗಳನ್ನು ಮಾಡುವುದರಲ್ಲೇ ಮಗ್ನರಾಗಿರುತ್ತಾರೆ. ಗೃಹಿಣಿ ಮನೆಯ ಪ್ರತಿಯೊಂದು ಚಿಕ್ಕ ಚಿಕ್ಕ ವಿಷಯಗಳ ಬಗ್ಗೆಯೂ ಗಮನ ಹರಿಸುತ್ತಾಳೆ. ಮನೆಯ ಅಲಂಕಾರವೇ ಇರಲಿ, ಮಕ್ಕಳ ಬಟ್ಟೆಯಾಗಿಲಿ ಅಥವಾ ಅಡುಗೆಮನೆಯಾಗಲಿ ಎಲ್ಲವನ್ನು ಅಚ್ಚುಕಟ್ಟಾಗಿ ನೋಡಿ ಕೊಳ್ಳುತ್ತಾರೆ. ಆದರೆ ಬಿಡುವಿಲ್ಲದೇ ಇರುವುದರಿಂದ ಗೃಹಿಣಿ ತನಗಾಗಿ ಸಮಯ ಮೀಸಲಿಡುವುದಿಲ್ಲ. ಪೂಜೆ, ಹಬ್ಬ ಹರಿದಿನಗಳು ಬಂದಾಗ ಅಲಂಕಾರಕ್ಕೂ ಸಮಯವಿರುವುದಿಲ್ಲ. ಮನೆಯ ಸಂಪೂರ್ಣ ಜವಾಬ್ದಾರಿ ಮಹಿಳೆಯರ ಮೇಲಿರುತ್ತದೆ. ಕಡಿಮೆ ಸಮಯದಲ್ಲಿ ಗೃಹಿಣಿ ಮೇಕಪ್ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಟಿಪ್ಸ್ ಇಲ್ಲಿದೆ.

make up tips, ಮೇಕಪ್ ಟಿಪ್ಸ್

ಡ್ರೆಸ್, ಜ್ಯುವೆಲರಿ ಬಗ್ಗೆ ಮುಂಚಿತವಾಗಿ ಪ್ಲ್ಯಾನ್ ಮಾಡಿ

ಮನೆಯ ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿದ್ದೀರಿ ಎಂದಾದರೆ, ಮುಂಚಿತವಾಗಿಯೇ ಪ್ಲ್ಯಾನ್ ಮಾಡುವುದು ಉತ್ತಮ. ಯಾವ ಉಡುಗೆ ಧರಿಸಬೇಕು, ಯಾವ ಆಭರಣ ಸರಿ ಹೊಂದುತ್ತದೆ ಎಂದು ಖಚಿತ ಪಡಿಸಿಕೊಳ್ಳಿ. ಮುಂಚಿತವಾಗಿಯೇ ಧರಿಸುವ ಉಡುಪನ್ನು ರೆಡಿ ಮಾಡಿಟ್ಟುಕೊಳ್ಳಿ. ನಿಮ್ಮ ನೆಚ್ಚಿನ ಸೀರೆ ಧರಿಸಲು ಮುಂದಾಗಿದ್ದರೆ, ಬ್ಲೌಸ್ ಫಿಟ್ಟಿಂಗ್ ಸರಿಯಾಗಿದೆಯೇ ಎಂಬುದನ್ನು ಮುಂಚಿತವಾಗಿಯೇ ನಿರ್ಧರಿಸಿ. ಕೆಲಮೊಮ್ಮೆ ಸ್ಯಾರಿ ಬ್ಲೌಸ್ ಗಳು ಫಿಟ್ ಆಗಿರುತ್ತವೆ.ಪೂಜಾ ತಯಾರಿಕೆಗೆ ಟೈಮ್ ಹೇಗೆ ಸೇವ್ ಮಾಡ್ಬೇಕು

ಕೇಶವಿನ್ಯಾಸದ ಬಗ್ಗೆ ನಿರ್ಧರಿಸಿ

ನಿಮ್ಮ ಉಡುಪಿನ ಜತೆಗೆ ಕೇಶವಿನ್ಯಾಸದ ಬಗ್ಗೆಯೂ ಗಮನ ಹರಿಸುವುದು ಉತ್ತಮ, ಬಳೆಗಳ ಆಯ್ಕೆ, ಕಿವಿಯೋಲೆಗಳ ಬಗ್ಗೆ ಮೊದಲೇ ನಿರ್ಧರಿಸಿ. ಇದರಿಂದ ಸಮಯ ವ್ಯರ್ಥವಾಗುವುದನ್ನು ಅವೈಡ್ ಮಾಡಬಹುದು. ಕೆಲಮೊಮ್ಮೆ ಆತುರದಲ್ಲಿ ಅಲಂಕಾರಿಕ ವಸ್ತುಗಳ ಕಡೆಗೆ ಗಮನ ಹರಿಸಲಾಗುವುದಿಲ್ಲ.


make up tips, ಮೇಕಪ್ ಟಿಪ್ಸ್

ಪೂಜೆ ಹಾಗೂ ಹಬ್ಬದ ವೇಳೆ ರೆಡಿಯಾಗಲು ವಿಶೇಷವಾಗಿ ನಿಮ್ಮ ಕಣ್ಣುಗಳ ಮೇಕಪ್ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ. ಏಕೆಂದರೆ, ಕಣ್ಣುಗಳಿಗೆ ಮೇಕಪ್ ಮಾಡುವುದರಿಂದ ಸುಂದರ ಹಾಗೂ ಸರಳ ನೋಟ ನಿಮ್ಮದಾಗಬಹುದು. ಅಲ್ಲದೇ ನಿಮ್ಮ ಚರ್ಮಕ್ಕೆ ಅನುಗುಣವಾಗಿ ಮೇಕಪ್ ಮಾಡಿಕೊಳ್ಳಿ.
ಕೊನೇ ಕ್ಷಣದಲ್ಲಿ ಪಾರ್ಲರ್ ಗೆ ಹೋಗಬೇಡಿ

ಸಮಯವನ್ನು ಗಮನದಲ್ಲಿಟ್ಟುಕೊಂಡು, ಪಾರ್ಲರ್ ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮುಂಚಿತವಾಗಿಯೇ ಮಾಡಬೇಕು. ಕೊನೆಯ ಕ್ಷಣದಲ್ಲಿ ಪಾರ್ಲರ್ ಗೆ ಹೋಗಬೇಡಿ. ಇದರಿಂದ ತರಾತುರಿಯಲ್ಲಿ ರೆಡಿಯಾಗಲು ನಿಮಗೆ ಸಮಯ ಸೀಗುವುದಿಲ್ಲ. ಆದ್ದರಿಂದ ಯಾವಾಗಲೂ ಮುಂಚಿತವಾಗಿಯೇ ಪಾರ್ಲರ್ ಗೆ ಹೋಗುವುದು ಮುಖ್ಯ. ಮನೆಯಲ್ಲೇ ಸರಳವಾಗಿ ಮೇಕಪ್ ಮಾಡಿಕೊಳ್ಳಬಹುದು ಐಶ್ಯಾಡೋ, ಫೌಂಡೇಶನ್ ಕ್ರೀಮ್, ಪೌಡರ್, ಕಾಜಲ್, ಐ ಲೈನರ್ , ಹಾಗೂ ಮಸ್ಕರಾ ಬಳಸಿ ಸಿಂಪಲ್ ಮೇಕಪ್ ಮಾಡಿಕೊಳ್ಳಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ