ಪ್ರೀತಿಯ ಭಾಷ್ಯ ಬಲ್ಲವರಾರು..?

 • by

ಪ್ರೀತಿ ಎಂಬ ಎರಡೂವರೆ ಅಕ್ಷರವನ್ನು ನಿರೂಪಿಸುವುದು ಬಹಳ ಕಷ್ಟ. ಯಾಕೆಂದರೆ ಅದನ್ನು
ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯ ಇಲ್ಲ. ಅದೇನೇ ಇದ್ದರೂ ಅದನ್ನು ಅನುಭವಿಸಿಯೇ
ತೀರಬೇಕು. ಅದರಲ್ಲೂ ನಿಜವಾದ  ಪ್ರೀತಿ  ಅಂದರೆ ಯಾವುದು? ನಿಜವಾದ ಪ್ರೀತಿ
ಅಂದರೇನು? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು
ಪ್ರೀತಿಸಿದವರ, ಮನದಲ್ಲಿ ಮೂಡುವುದು ಸಹಜ. ನಿಜವಾದ ಪ್ರೀತಿ ಅನ್ನೋದು ಹೃದಯದ
ಬಡಿತ ಅಲ್ಲ. ನನ್ನ ಹೃದಯ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ನಿಜವೂ ಅಲ್ಲ.
ನಿಜವಾದ ಪ್ರೀತಿ ಅನ್ನೋದು ಪರಿಪೂರ್ಣ ಪ್ರಣಯವದು. ಆದರೆ ಅದನ್ನು
ಗುರುತಿಸಿಕೊಳ್ಳುವುದು ಸುಲಭವಲ್ಲ. ನಿಜವಾದ ಪ್ರೀತಿಯನ್ನು ಹೃದಯ ಬಡಿತದಿಂದ
ಅನುಭವಿಸುವುದಕ್ಕೆ ಸಾಧ್ಯ ಇಲ್ಲ. ಲವ್ ಅಟ್ ಫಸ್ಟ್ ಸೈಟ್’ ಅನ್ನೋದು ವ್ಯಾಮೋಹ
ಹೊರತು ಬೇರೆ ಅಲ್ಲ. ಆದರೆ ಅಲ್ಲಿಂದಲೇ ಪ್ರೀತಿ ಶುರುವಾಗಬಹುದು. ಆದರೆ ಅದೇ ಪ್ರೀತಿ
ಪರಿಪೂರ್ಣತೆ ಪಡೆದುಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೋಡಿದ ಮಾತ್ರಕ್ಕೆ
ಪ್ರೀತಿ ಉಕ್ಕಿ ಹರಿಯಬೇಕೆಂದೇನೂ ಇಲ್ಲ. ಕಣ್ಣಿಗೆ ಸುಂದರ ಎನಿಸಿದನ್ನು ಬಯಸುವುದು
ಸಹಜ ಅಲ್ವಾ.

ನಿಜವಾದ ಪ್ರೀತಿ ಅನ್ನೋದು ಒತ್ತಾಯ ಪೂರ್ವಕವಾಗಿರುವುದಿಲ್ಲ. ಬದಲಾಗಿ
ಸ್ವಾಭಾವಿಕವಾಗಿದ್ದು, ಹೃದಯಪೂರ್ವಕವಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ
ಹೇಳುವುದಾದರೆ ನಿಜವಾದ ಪ್ರೀತಿ ಅಂದರೆ ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ
ಪ್ರೀತಿಸುತ್ತಾರೆ. ಇಬ್ಬರ ಮಧ್ಯೆ ಒಡೆದು ಹೋಗಲಾರದಂತಹ ಬಂಧವೊಂದು
ಬೆಳೆದುಬಿಟ್ಟಿರುತ್ತದೆ. ಇದುವೇ ಪರಿಶುದ್ಧ ಮತ್ತು ಸ್ವಾರ್ಥವಿಲ್ಲದ ನಿಜವಾದ ಪ್ರೀತಿ.
ಅಂತಹ ಪ್ರೀತಿಯನ್ನು ನಿರೂಪಿಸುವುದು ಕಷ್ಟವಾದರೂ ನಿಜವಾದ ಪ್ರೀತಿ ಏನು ಎಂಬುದನ್ನು
ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ.

ಹೌದು, ಪ್ರಪಂಚದಲ್ಲಿ ಮನುಶ್ಯ ಬಯಸಿದೆಲ್ಲ ದೊರಕಲು ಕಂಡಿತವಾಗ್ಲೂ ಸಾದ್ಯವಿಲ್ಲ.
ಯಾವುದೇ ಕ್ಶೇತ್ರವಿರಲಿ, ಗೆಲುವು ಎಲ್ಲರಿಗೂ ದೊರಕುವುದಿಲ್ಲ. ಆದರೆ ಹಾಗಂತ ಜೀವನ
ಪ್ರೀತಿಯನ್ನು ಯಾವುದೇ ಕ್ಶಣದಲ್ಲೂ ಕಳೆದುಕೊಳ್ಳಬಾರದು. ನಮ್ಮ ಗೆಳೆಯರನ್ನು,
ಕುಟುಂಬವನ್ನು ಪ್ರೀತಿಸುವುದು ನಮ್ಮ ಕರ‍್ತವ್ಯ. ಆದರೆ ಅವರ ಮೇಲೆ ಅದಿಕಾರ ಸ್ತಾಪಿಸಲು

ಪ್ರಯತ್ನ ಪಡುವುದು ಕಂಡಿತ ತಪ್ಪು. ಅದು ಗಂಡ-ಹೆಂಡತಿ, ಅಣ್ಣ -ತಮ್ಮ, ಅಕ್ಕ -ತಂಗಿ,
ಗೆಳೆಯ-ಗೆಳತಿ ಯಾವುದೇ ಸಂಬಂದವಿರಲಿ, ಅತಿಯಾದ ವ್ಯಾಮೋಹ ತುಂಬಾ ಅಪಾಯಕಾರಿ.
ಅದು ನಮ್ಮಲ್ಲಿ ಸಂಶಯ ಪ್ರವ್ರುತ್ತಿ ಹಾಗು ಹೊಟ್ಟೆಕಿಚ್ಚನ್ನು ಬೆಳೆಸಿಕೊಳ್ಳಲು
ಕಾರಣವಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಆಲೋಚನೆಗಳು, ಕನಸುಗಳು
ಇರುತ್ತದೆ. ಆ ಬಾವನೆಗಳಿಗೆ ಗೌರವ ಕೊಡುವುದು ನಮ್ಮ ಸಂಬಂದಗಳನ್ನು ಮತಶ್ಟು
ಗಟ್ಟಿಗೊಳಿಸುವುದರಲ್ಲಿ ಸಹಕಾರಿ.

ಅತಿರೇಕದ ವ್ಯಾಮೋಹ ಯಾವಾಗ ಹೆಚ್ಚಾಗುತ್ತದೆಯಂದ್ರೆ ನಮ್ಮ ನಿಕಟ ಸಂಬಂದಗಳ ಬಗ್ಗೆ
ಹೆದರಿಕೆ ಹಾಗು ಅಬದ್ರತೆ ನಮ್ಮನ್ನು ಕಾಡತೊಡಗಿದಾಗ! ಅವನು ತನ್ನ ಕೈ ತಪ್ಪಿ
ಹೋಗಬಹುದು, ಮಕ್ಕಳು ನಮ್ಮ ಮಾತನ್ನು ಕೇಳದೆ ಇರಬಹುದು ಅತವಾ ನಮ್ಮನ್ನು
ಬಿಟ್ಟುಹೋಗಬಹುದು – ಇಂತ ಬಾವನೆಗಳು ಮನಸಿನಲ್ಲಿ ಮೂಡತೊಡಗಿದಾಗ, ನಾವು
ನಮ್ಮವರನ್ನು ನಿಯಂತ್ರಿಸಲು, ಅವರ ಮೇಲೆ ಅದಿಕಾರ ಸ್ತಾಪಿಸಲು ಮುಂದಾಗುತ್ತೇವೆ. ಆದರೆ,
ಬೇರೆಯವರಿಗೂ ಒಂದು ಮನಸಿದೆ, ಅವರಿಗೆ ಅವರದೇ ಆದ ಬಾವನೆಗಳು ಇದೆ ಎಂದು ನಾವು
ಮರೆತುಬಿಡುತ್ತೇವೆ. ನಾವು ಅವರ ಮೇಲೆ ಅದಿಕಾರ ಸ್ತಾಪಿಸಲು ಪ್ರಯತ್ನಿಸಿದಶ್ಟು ಅವರು
ನಮ್ಮಿಂದ ದೂರ ಸರಿಯುತ್ತಾರೆ.

ಒಂದು ನೆನಪಿಡಿ ಯಾರಿಗೂ ಯಾರು ಪ್ರಪಂಚದಲ್ಲಿ ಅನಿವಾರ‍್ಯ ಅಲ್ಲ. ನಮ್ಮವರು ನಮಗೆ
ಬೇಕು ಆದರೆ ಅವರಿಲ್ಲದೆ ಜೀವನ ಇಲ್ಲ ಎನ್ನುವುದು ತಪ್ಪು. ಹಾಗಾಗಿ ಯಾರನ್ನು ತುಂಬಾ
ಅತಿಯಾಗಿ ಹಚ್ಚಿಕೊಳ್ಳಬಾರದು. ಇನ್ನೊಬ್ಬರ ಜೀವನದಲ್ಲಿ ನಾವು ಸಿಹಿ ತರಬೇಕೇ ಹೊರತು
ಕಹಿಯನ್ನಲ್ಲ. ನಮ್ಮ ಪ್ರೀತಿ ಅವರಿಗೆ ಕಿರಿಕಿರಿಯಾಗಿ ಸಾಕಪ್ಪ ಸಾಕು ಅನ್ನಿಸುವಂತಿರಬಾರದು.
ನಮ್ಮ ಪ್ರೀತಿ, ವ್ಯಾಮೋಹ ಸಂಬಂದಗಳನ್ನು ಬೆಸೆಯಬೇಕೇ ಹೊರತು ಹಾಳುಗೆಡವಬಾರದು.
ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಕೆಲವು ಗಟನೆಗಳನ್ನೇ ನೋಡಿ. ಇತ್ತೀಚೆಗೆ ಒಬ್ಬ ತಾನು
ಪ್ರೀತಿಸುತ್ತಿದ್ದ ಹುಡುಗಿಗೆ ಚೂರಿಯಿಂದ ಇರಿದು ತಾನು ಆತ್ಮಹತ್ಯೆ ಮಾಡಿಕೊಳ್ಳಲು
ಪ್ರಯತ್ನಪಟ್ಟ. ಇದೆಂತ ಪ್ರೀತಿ! ಅವನು ಅವಳನ್ನು ನಿಜವಾಗ್ಲೂ ಇಶ್ಟಪಡುತಿದ್ದವನಾದ್ರೆ
ಅವಳ ಕಣ್ಣಿನಿಂದ ಒಂದು ಹನಿ ನೀರು ಕೂಡ ಬರಲು ಬಿಡುತ್ತಿರಲಿಲ್ಲ, ಇನ್ನು ಹಾನಿ

ಮಾಡುವುದೆಂತ ಬಂತು. ಇದಕೆಲ್ಲ ಕಾರಣ ಅತಿರೇಕದ ಪ್ರೀತಿ, ನಮ್ಮ ಮನಸ್ಸನ್ನು ಕಾಡುವ
ಅತಿರೇಕದ ಬಾವ ಮತ್ತು ಬಯ.

ವಾಸ್ತವವನ್ನು ತಿಳಿದು ಜೀವಿಸುವುದರಲ್ಲೇ ನಿಜವಾದ ಜೀವನ ಸುಕ ಅಡಗಿದೆ. ಸಂಬಂದ
ಯಾವುದೇ ಇರಲಿ, ಎಲ್ಲ ಬಾವನೆಯು ಹಿತಮಿತವಾಗಿದ್ರೆನೆ ಚೆಂದ. ನಾವು ನಮ್ಮ ಮಕ್ಕಳ ಬಗ್ಗೆ
ಎಶ್ಟೊಂದು ಅತಿರೇಕದ ವ್ಯಾಮೋಹವನ್ನು ಬೆಳೆಸಿಕೊಳ್ಳುತೇವೆಯೆಂದ್ರೆ ಕೆಲವೊಮ್ಮೆ
ಜೀವನದಲ್ಲಿ ಅವರು ಹಿಂದುಳಿಯಲು ನಾವೇ ಕಾರಣರಾಗಿಬಿಡುತ್ತೆವೆ. ಮಗು ಈಜು
ಕಲಿಯಬೇಕೆಂದ್ರೆ ‘ಅಯ್ಯೋ ಬೇಡ, ನೀರು ಅಪಾಯಕಾರಿ’ ಅಂದುಬಿಡುತ್ತೇವೆ. ಕಲಿಕೆ ಒಂದನ್ನು
ಬಿಟ್ಟರೆ ಜೀವನದ ಬೇರಾವ ಪಾಟವನ್ನು ಕಲಿಯುವ ಅವಕಾಶವನ್ನೇ ಕೊಡುವುದಿಲ್ಲ.
ಎಶ್ಟೋ ಜನ ಮಕ್ಕಳು ಮನೆಯಲ್ಲಿ ತಾವು ಊಟಮಾಡಿದ ತಟ್ಟೆಯನ್ನು ಕೂಡ ಎತ್ತಲು
ಅಮ್ಮನನ್ನು ಕರೆಯುತ್ತಾರೆ. ಇದಕೆಲ್ಲ ಕಾರಣ ನಮ್ಮ ಅತಿ ವ್ಯಾಮೋಹ. ಮುಂದೆ ಇದೇ
ಮಕ್ಕಳು ತನ್ನ ಹೆತ್ತವರನ್ನು ಮನೆ ಕೆಲಸದವರನ್ನಾಗಿ ಮಾಡಿಬಿಡುತ್ತಾರೆ. ಚಿಕ್ಕವರಿದ್ದಾಗ
ಜೀವನಪಾಟ ಕಲಿಯದ ಮಕ್ಕಳು ಬಳಿಕ ಪರ ಊರಿನ ಹಾಸ್ಟೆಲ್ ನಲ್ಲಿದ್ದು ಓದುವಾಗ
ಅಂಕುಶ ಕಳೆದುಕೊಂಡವರಂತೆ ಆಡತೊಡಗತಾರೆ. ಯಾವಾಗಲು ಪ್ರತಮ ಸ್ತಾನ ಬರುತಿದ್ದ
ಹುಡುಗ ಪರೀಕ್ಶೆಯಲ್ಲಿ ತೇರ‍್ಗಡೆಯಾಗದಿದ್ದಾಗ ಪೋಶಕರಿಗೆ ಅರಿವಾಗುತ್ತದೆ ತಮ್ಮ
ತಪ್ಪೇನು ಎಂದು. ಆದರೆ ಅವಾಗ ಪರಿಸ್ತಿತಿ ಕೈ ಮೀರಿ ಹೋಗಿರುತ್ತದೆ. ಮೊದಲು ನಾವು ನಮ್ಮ
ಬಾವನೆಗಳನ್ನು ನಿಯಂತ್ರಿಸಲು ಕಲಿಯಬೇಕು. ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೆ,
ವಿಚಾರಗಳಿಗೆ ಎಶ್ಟು ಮಹತ್ವ ಕೊಡಬೇಕೋ ಅಶ್ಟೇ ಮಹತ್ವ ಕೊಡುವುದನ್ನು ಕಲಿಯಬೇಕು.
ಜೀವನ ಬಗವಂತ ಕೊಟ್ಟ ಒಂದು ಅವಕಾಶ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ನಮ್ಮ
ಕರ‍್ತವ್ಯ. ಬದುಕನ್ನು ಸರಿಯಾಗಿ ಬದುಕಲು ಕಲಿಯಬೇಕು. ಪ್ರೀತಿಯನ್ನು  ಪಡೆಯಬೇಕಾದ್ರೆ
ಅದಕ್ಕೆ ಪೂರಕವಾದ ವಾತವರಣವನ್ನು ಸ್ರುಶ್ಟಿಸಿಕೊಳ್ಳಬೇಕು. ಪೂರಕವಾದ ವಾತಾವರಣ
ಸ್ರುಶ್ಟಿಯಾಗಬೇಕಾದ್ರೆ ಮೊದಲು ಆ ಪ್ರೀತಿಯನ್ನು ಪಡೆಯಲು ಅರ‍್ಹತೆ ಹೊಂದಬೇಕು. ಆ
ಅರ‍್ಹತೆ ಹೊಂದಲು ಪ್ರಾಮಾಣಿಕವಾಗಿ ಪ್ರಯತ್ನ ಪಡಬೇಕು. ಮಿಕ್ಕಿದ್ದು ಬಗವಂತನಿಗೆ
ಬಿಡಬೇಕು. ಒಂದು ವೇಳೆ ಸೋತರೂ ಅದು ನಮ್ಮ ಸೋಲಲ್ಲ. ಏಕೆಂದ್ರೆ ನಮಗಾಗಿ
ಪ್ರಪಂಚದಲ್ಲಿ ಬೇರೇನೋ ಕಾದಿದೆ ಎಂದು ಅರ‍್ತ.

ಭೂಮಿಯ ಮೇಲೆ ನಡೆದಾಡಿದ ಕೆಲವು ಶ್ರೇಷ್ಠ ವ್ಯಕ್ತಿಗಳಿಂದ ಇದುವರೆಗೆ ಹೇಳಲ್ಪಟ್ಟ ಪ್ರೀತಿಯ
ಬಗ್ಗೆ ಕೆಲವು ಸ್ಪೂರ್ತಿದಾಯಕ ಉಲ್ಲೇಖಗಳ ಸಂಗ್ರಹವನ್ನು ಕೆಳಗೆ ನೀಡಲಾಗಿದೆ. ಅವುಗಳನ್ನು
ನಿಮ್ಮದಾಗಿಸಿ ಮತ್ತು ನಿಮ್ಮ ಹೃದಯವನ್ನು ಮುಕ್ತವಾಗಿಸಿ.

 1. “ನೀವು ಹೂವನ್ನು ಪ್ರೀತಿಸುತ್ತಿದ್ದರೆ, ಅದನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ನೀವು
  ಅದನ್ನು ತೆಗೆದುಕೊಂಡರೆ ಅದು ಸಾಯುತ್ತದೆ ಮತ್ತು ಅದು ನೀವು ಪ್ರೀತಿಸುವುದನ್ನು
  ನಿಲ್ಲಿಸುತ್ತದೆ. ಆದ್ದರಿಂದ ನೀವು ಹೂವನ್ನು ಪ್ರೀತಿಸುತ್ತಿದ್ದರೆ, ಅದು ಇರಲಿ. ಪ್ರೀತಿ
  ಸ್ವಾಧೀನದ ಬಗ್ಗೆ ಅಲ್ಲ. ಪ್ರೀತಿ ಮೆಚ್ಚುಗೆಯ ಬಗ್ಗೆ. ”- ಓಶೋ
 2. “ಅಪಕ್ವ ಪ್ರೀತಿ ಹೇಳುತ್ತದೆ:‘ ನಾನು ನಿನ್ನನ್ನು ಪ್ರೀತಿಸುತ್ತೇನೆ ಏಕೆಂದರೆ ನಾನು ನಿನ್ನನ್ನು
  ಬಯಸುತ್ತೇನೆ. ’ಪ್ರಬುದ್ಧ ಪ್ರೀತಿ ಹೇಳುತ್ತದೆ‘ ನಾನು ನಿನ್ನನ್ನು ಪ್ರೀತಿಸುತ್ತೇನೆ ಏಕೆಂದರೆ ನಾನು
  ನಿನ್ನನ್ನು ಪ್ರೀತಿಸುತ್ತೇನೆ. ’- ಎರಿಕ್ ಫ್ರೊಮ್
 3. “ಸೂರ್ಯನ ಬೆಳಕು ಇಲ್ಲದೆ ಹೂವು ಅರಳಲು ಸಾಧ್ಯವಿಲ್ಲ, ಮತ್ತು ಮನುಷ್ಯನು
  ಪ್ರೀತಿಯಿಲ್ಲದೆ ಬದುಕಲು ಸಾಧ್ಯವಿಲ್ಲ.” – ಮ್ಯಾಕ್ಸ್ ಮುಲ್ಲರ್
 4. “ನಾವು ಜೀವನವನ್ನು ಪ್ರೀತಿಸುತ್ತೇವೆ, ನಾವು ಬದುಕಲು ಬಳಸಿದ್ದರಿಂದಲ್ಲ, ಆದರೆ ನಾವು
  ಪ್ರೀತಿಸುವ ಅಭ್ಯಾಸದಿಂದಾಗಿ.” – ಫ್ರೆಡ್ರಿಕ್ ನೀತ್ಸೆ
 5. “ಪ್ರೀತಿ ಜೀವನ. ಮತ್ತು ನೀವು ಪ್ರೀತಿಯನ್ನು ಕಳೆದುಕೊಂಡರೆ, ನೀವು ಜೀವನವನ್ನು
  ಕಳೆದುಕೊಳ್ಳುತ್ತೀರಿ. ”- ಲಿಯೋ ಬುಸ್‌ಕಾಗ್ಲಿಯಾ
 6. “ಯಾರನ್ನಾದರೂ ಆಳವಾಗಿ ಪ್ರೀತಿಸುವುದು ನಿಮಗೆ ಶಕ್ತಿಯನ್ನು ನೀಡುತ್ತದೆ, ಆದರೆ
  ಯಾರನ್ನಾದರೂ ಆಳವಾಗಿ ಪ್ರೀತಿಸುವುದು ನಿಮಗೆ ಧೈರ್ಯವನ್ನು ನೀಡುತ್ತದೆ.” – ಲಾವೊ
  ತ್ಸು
 7. “ಜೀವನದ ಅತ್ಯಂತ ಸಂತೋಷವೆಂದರೆ ನಾವು ಪ್ರೀತಿಸಲ್ಪಟ್ಟಿದ್ದೇವೆ ಎಂಬ ದೃ iction
  ನಿಶ್ಚಯ; ನಮಗಾಗಿ ಪ್ರೀತಿಸುತ್ತೇವೆ, ಅಥವಾ ನಮ್ಮ ನಡುವೆಯೂ ಪ್ರೀತಿಸುತ್ತೇವೆ. ”- ವಿಕ್ಟರ್
  ಹ್ಯೂಗೋ
 8. “ಎಲ್ಲ, ನಾನು ಅರ್ಥಮಾಡಿಕೊಳ್ಳುವ ಎಲ್ಲವೂ, ನಾನು ಪ್ರೀತಿಸುವ ಕಾರಣ ಮಾತ್ರ ನನಗೆ
  ಅರ್ಥವಾಗುತ್ತದೆ.” – ಲಿಯೋ ಟಾಲ್‌ಸ್ಟಾಯ್
 9. “ಪ್ರೀತಿಯು ಎರಡು ದೇಹಗಳಲ್ಲಿ ವಾಸಿಸುವ ಒಂದೇ ಆತ್ಮದಿಂದ ಕೂಡಿದೆ.” –
  ಅರಿಸ್ಟಾಟಲ್
 10. “ಮತ್ತು ನೆನಪಿಡಿ, ಬರೆದಂತೆ, ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ದೇವರ
  ಮುಖವನ್ನು ನೋಡುವುದು.” – ಲೆಸ್ ಮಿಸರೇಬಲ್ಸ್
 11. “ಒಂದು ವಿಷಯ ಇಷ್ಟವಾದರೆ ಅದು ಅನಂತ.” – ವಿಲಿಯಂ ಬ್ಲೇಕ್
 12. “ಪ್ರೀತಿಯು ಬೆಂಕಿಯಲ್ಲಿ ಸಿಲುಕಿದ ಸ್ನೇಹದಂತಿದೆ. ಆರಂಭದಲ್ಲಿ ಜ್ವಾಲೆ, ತುಂಬಾ
  ಸುಂದರ, ಆಗಾಗ್ಗೆ ಬಿಸಿ ಮತ್ತು ಉಗ್ರ, ಆದರೆ ಇನ್ನೂ ಬೆಳಕು ಮತ್ತು ಮಿನುಗುವಿಕೆ ಮಾತ್ರ.
  ಪ್ರೀತಿ ವಯಸ್ಸಾದಂತೆ, ನಮ್ಮ ಹೃದಯಗಳು ಪ್ರಬುದ್ಧವಾಗುತ್ತವೆ ಮತ್ತು ನಮ್ಮ ಪ್ರೀತಿಯು
  ಕಲ್ಲಿದ್ದಲುಗಳು, ಆಳವಾಗಿ ಸುಡುವ ಮತ್ತು ಅನ್ವೇಷಿಸಲಾಗದಂತಾಗುತ್ತದೆ. ”- ಬ್ರೂಸ್ ಲೀ
 13. “ನೀವು ಒಬ್ಬಂಟಿಯಾಗಿ ಕನಸು ಕಾಣುವ ಕನಸು ಮಾತ್ರ ಕನಸು. ನೀವು ಒಟ್ಟಿಗೆ ಕನಸು
  ಕಾಣುವ ಕನಸು ವಾಸ್ತವ. ”- ಜಾನ್ ಲೆನ್ನನ್
 14. “ಸ್ವತಃ ಸಂತೋಷವಾಗಿರಲು ಇನ್ನೊಬ್ಬ ವ್ಯಕ್ತಿಯನ್ನಾದರೂ ಸಂತೋಷಪಡಿಸುವುದು
  ಅವಶ್ಯಕ.” – ಥಿಯೋಡರ್ ರೇಕ್
 15. “ಈ ಜಗತ್ತಿನ ಅತ್ಯುತ್ತಮ ಮತ್ತು ಸುಂದರವಾದ ವಸ್ತುಗಳನ್ನು ನೋಡಲು ಅಥವಾ
  ಕೇಳಲು ಸಾಧ್ಯವಿಲ್ಲ, ಆದರೆ ಅದನ್ನು ಹೃದಯದಿಂದ ಅನುಭವಿಸಬೇಕು.” – ಹೆಲೆನ್ ಕೆಲ್ಲರ್

16. ಎಲ್ಲಿ ಪ್ರೀತಿ ಇದೆಯೋ ಅಲ್ಲಿ ಜೀವನವಿದೆ – ಮಹಾತ್ಮಾ ಗಾಂಧಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ