ಆಂಜನೇಯ ಶಿವನ 11ನೇ ಅವತಾರ ತಳೆದಿದ್ದು ಹೇಗೆ..?

  • by

ಶಿವನು ಭಕ್ತರ ಆರಾಧನೆಯಿಂದ ಸಂತಸಗೊಂಡು ಪ್ರತಿ ಯುಗದಲ್ಲೂ ತನ್ನ ಭಕ್ತರನ್ನು ರಕ್ಷಿಸಲು ಅವತರಿಸಿದ ದೇವರು. ಶಿವನು 12 ರುದ್ರ ಅವತಾರಗಳನ್ನು ಹೊಂದಿದ್ದಾನೆ. ಅದರಲ್ಲಿ ಆಂಜನೇಯ ಸ್ವಾಮಿ ಶಿವನ 11ನೇ ರುದ್ರ ಅವತಾರವೆಂದು ಹೇಳಲಾಗುತ್ತದೆ. ಶಿವನ 19 ಅವತಾರಗಳಲ್ಲಿ ಹನುಮಾನ್ ನ ಅವತಾರ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಹನುಮಾನ್ ಶಿವನ ಅವತಾರ ತಳೆದಿದ್ದು ಹೇಗೆ..?

ಧರ್ಮ ಗ್ರಂಥಗಳ ಪ್ರಕಾರ, ಹನುಮಾನ್ ಹುಟ್ಟಿದ ಎರಡು ದಿನಾಂಕಗಳು ಕಂಡು ಬರುತ್ತವೆ. ಮೊದಲನೆಯದು, ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಏಕೆಂದರೆ ರಾಮ ಭಕ್ತನಾಗಿದ್ದ ಹನುಮಾನ್ ತಾಯಿ ಅಂಜನಿ ಶಿವನನ್ನು ತಪ್ಪಸ್ಸು ಮಾಡಿ, ಆತನನ್ನು ಮಗನನ್ನಾಗಿ ಪಡೆಯಲು ಇಚ್ಛಿಸುತ್ತಾಳೆ. ನಂತರ ಶಿವನು ತನ್ನ ಶಕ್ತಿಯೆ ಒಂದು ಭಾಗವನ್ನು ಯಜ್ಞ ಕುಂಡದಲ್ಲಿ ಪವನ್ ದೇವ ರೂಪದಲ್ಲಿ ಅರ್ಪಿಸುತ್ತಾನೆ. ಅದೇ ಶಕ್ತಿ ಅಂಜನಿ ದೇವಿಯ ಗರ್ಭಕ್ಕೆ ಪ್ರವೇಶಿಸಿತು. ಆಗ ಹನುಮ ಚೈತ್ರ ಶುಕ್ಲ ಪಕ್ಷದ ಹುಣ್ಣಿಮೆಯಂದು ಜನಿಸಿದನು ಎಂದು ಉಲ್ಲೇಖವಿದೆ.

ಪೌರಾಣಿಕ ಕಥೆಗಳ ಪ್ರಕಾರ. ರಾವಣನನ್ನು ಅಂತ್ಯ ಮಾಡಲು ‘ವಿಷ್ಣು’ ರಾಮನ ಅವತಾರ ಪಡೆದನು. ಆ ಸಮಯದಲ್ಲಿ ಎಲ್ಲಾ ದೇವತೆಗಳು ರಾಮನಲ್ಲಿ ಸೇವೆ ಸಲ್ಲಿಸಲು ವಿವಿಧ ರೂಪದಲ್ಲಿ ಅವತರಿಸಿದ್ದರು ಎಂದು ಹೇಳಲಾಗುತ್ತದೆ. ಆಗ ಶಿವನು ರುದ್ರ ಅವತಾರವನ್ನು ತಳೆದನು ಎಂದು ಹೇಳಲಾಗುತ್ತದೆ. ಆಂಜನೇಯ ಶಿವನ ಹನ್ನೊಂದನೇ ರುದ್ರ ಅವತಾರ ಎಂದು ಹೇಳಲಾಗುತ್ತದೆ. ಈ ರೂಪದಲ್ಲೇ ಶಿವನು ರಾಮನ ಸೇವೆ ಮಾಡಿದ್ದನಂತೆ. ಆಗ ರಾವಣನನ್ನು ವಧೆ ಮಾಡಲು ರಾಮ ಯಶಸ್ವಿಯಾದನು ಎಂದು ಹೇಳಲಾಗುತ್ತದೆ.

ಲಂಕೆಯಲ್ಲಿ ಹನುಮಂತ..!

ಹನುಮಾನ್ ಅಂಜನಿಯ ಪುತ್ರ. ಬಾಲ್ಯದಲ್ಲಿ ಹನುಮಂತ ತುಂಬಾ ಚೇಷ್ಠೆಯಾಗಿದ್ದ. ಸೂರ್ಯನನ್ನು ನೋಡಿ ಹಣ್ಣೆಂದು ಭ್ರಮಿಸಿ ಹಿಡಿಯುವುದಕ್ಕೆಂದು ಹಾರಿದನು. ಸೂರ್ಯ ಓಡಿ ಹೋಗುತ್ತಿದ್ದಾಗ ಹನುಮಾನ್ ಬೆನ್ನಟ್ಟುತ್ತಲೇ ಇದ್ದನು, ಆಂಜನೇಯ ತನ್ನ ತುಂಟತನ ಹಾಗೂ ಚೇಷ್ಟೆಯ ಹೊರತಾಗಿಯೂ ನಿಷ್ಠಾವಂತ ಹಾಗೂ ಧೈರ್ಯಶಾಲಿ ಎಂದು ಹೇಳಬಹುದು.

ಸೀತೆ ಅಪಹರಣಕ್ಕೊಳಗಾದಾಗ ರಾಮ, ಲಕ್ಷ್ಮಣ ಕಿಷ್ಕೆಂದೆಯ ವಾನರ ರಾಜನಾದ ಸುಗ್ರೀವ ಹಾಗೂ ಹನುಮಂತನನ್ನು ಭೇಟಿಯಾಗುತ್ತಾರೆ. ಹನುಮಂತ ಸುಗ್ರೀವನ ಸೈನ್ಯಕ್ಕೆ ಸೇನಾಧಿಪತಿ. ಸೀತೆ ರಾವಣನ ರಥದಿಂದ ಎಸೆದ ಆಭರಣಗಳು ವಾನರಿಗೆ ದೊರೆಯುತ್ತಿತ್ತು. ಅನ್ನ ಅಣ್ಣ ವಾಲಿಯಿಂದ ಸಾಮಾಜ್ರ್ಯ ದಿಂದ ಹೊರಗಟ್ಟಲ್ಪಟ್ಟ. ಸುಗ್ರೀವ ರಾಮನ ಸಹಾಯ ಪಡೆಯುತ್ತಾನೆ. ಪರಸ್ಪರ ಕಾಳಗದಲ್ಲಿ ಸಹಾಯ ಪಡೆದ ಸುಗ್ರೀವನಿಂದ ವಾಲಿ ಸಾಯುತ್ತಾನೆ. ಸಹಾಯ ಮಾಡಿದ ರಾಮನೊಂದಿಗೆ ಸುಗ್ರೀವ ತನ್ನ ಸೈನ್ಯವನ್ನು ಕೂಡಿ ಲಂಕೆಯೆಡೆಗೆ ಹೊರಡುತ್ತಾನೆ.

ಹನುಮಾನ್ ಶಿವನ ಅವತಾರವೆಂದು ಎಲ್ಲರೂ ಒಪ್ಪುವುದಿಲ್ಲ. ಆದರೆ ಇದನ್ನು ನಂಬುವ ಹಲವಾರು ಜನರಿದ್ದಾರೆ. ಈ ಬಗ್ಗೆ ಶಿವ ಪುರಾಣದ ಸತರುದ್ರೀಯ ಸಂಹಿತೆಯಲ್ಲಿಯೂ ಉಲ್ಲೇಖಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ