ದೇಶದಲ್ಲಿ ಲಾಕ್ ಡೌನ್ ಮೇ 3ರವರೆಗೆ ವಿಸ್ತರಣೆ- ಮೋದಿ ಭಾಷಣದ ಹೈಲೈಟ್ಸ್..! -( extension of lockdown period till May 3 , PM Narendra Modi speech highlights)

  • by

ಇಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ರು. ಮತ್ತೆ ದೇಶದ್ಯಾಂತ ಲಾಕ್ ಡೌನ್ ವಿಸ್ತರಿಸಲಾಗಿದೆ. ಅಂದರೆ ಮೇ 3ರವರೆಗೂ ದೇಶಾದ್ಯಂತ ಲಾಕ್ ಡೌನ್ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ. ನಾನು ಲಾಕ್ ಡೌನ್ ಗಳ ಬಗ್ಗೆ ಎಲ್ಲಾ ರಾಜ್ಯಗಳ ಸಿಎಂ ಜತೆ ಮಾತನಾಡಿದ್ದೇನೆ. ಈ ವೇಳೆ ಅವರು ಲಾಕ್ ಡೌನ್ ಮುಂದುವರಿಸಬೇಕು ಎಂದು ಕೋರಿದ್ದರು. ಜನ ಸಾಮಾನ್ಯರು ಕೂಡಾ ಇದೇ ಅಭಿಪ್ರಾಯ ಹೊರಹಾಕಿದ್ದಾರೆ. ಲಾಕ್ ಡೌನ್ ಆದೇಶ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಪಿಎಂ ಮೋದಿ ಸ್ಪಷ್ಟಪಡಿಸಿದ್ರು.

ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ..!

ರಾಜ್ಯ ಸರ್ಕಾರಗಳು , ಸ್ಥಳೀಯಾಡಳಿತಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮೂಹಿಕ ಶಕ್ತಿಯ ಪ್ರದರ್ಶನ ಸಂಕಲ್ಪವೇ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಅರ್ಪಿಸುವ ಶ್ರದ್ಧಾಂಜಲಿ. ಉತ್ಸವದಿಂದ ಭಾರತ ತುಂಬಿದೆ. ಸದಾ ಹಸಿರಾಗಿದೆ. ಇಂದು ಆರೋಗ್ಯಕ್ಕಾಗಿ ಪ್ರಾರ್ಥಿಸಿ ನಿಮಗೆಲ್ಲರಿಗೂ ಮಂಗಳ ಕಾಮನೆಗಳು ಎಂದರು.

ಸಪ್ತ ಸೂತ್ರಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

1. ವೃದ್ಧರ ಮೇಲೆ ಹೆಚ್ಚು ನಿಗಾ ಇರಿಸಿ, ವಿಶೇಷವಾಗಿ ಅನಾರೋಗ್ಯ ಇರುವವರು ಮೇಲೆ ಕಾಳಜಿ ವಹಿಸಿ
2.ಲಾಕಾ ಡೌನ್ , ಸೋಷಿಯಲ್ ಡಿಸ್ಟೆನ್ಸಿಂಗ್ ಲಕ್ಷ್ಮಣ ರೇಖೆ ಮೀರದಿರಿ
3.ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಸಚಿವಾಲಯ ನೀಡಿರುವ ಸಲಹೆಗಳನ್ನು ಪಾಲಿಸಿ
4.ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸೇತು ಮೊಬೈಲ್ ಆ್ಯಪ್ ಬಳಕೆ ಡೌನ್ ಲೋಡ್ ಮಾಡಿಕೊಳ್ಳಿ.
5.ಬಡವ ಬಂಧುಗಳಿಗೆ ಊಟ ಸಹಿತ ಸಾಧ್ಯವಾದಷ್ಟು ನೆರವು ನೀಡಿ.
6.ಉದ್ಯೋಗದಲ್ಲಿ ಸಹವರ್ತಿಗಳ ಸ್ಥಿತಿ ಬಗ್ಗೆ ಕರುಣೆಯಿರಲಿ.
7.ಉದ್ಯೋಗಕ್ಕೆ ಕತ್ತರಿ ಹಾಕಬೇಡಿ, ಯಾರನ್ನೂ ಕೆಲಸದಿಂದ ತೆಗೆಯಬೇಡಿ. ವೈದ್ಯರು, ನರ್ಸ್ , ಪೊಲೀಸರು , ಸ್ವಚ್ಛತಾ ಕಾರ್ಮಿಕರು ಬಗ್ಗೆ ಗೌರವ ಆದರ ತೋರಿಸಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ