ಬೆಳ್ಳನೇಯ ಮುಖ ನಿಮ್ಮದಾಗಬೇಕೇ.. ಇಲ್ಲಿದೆ ಟಿಪ್ಸ್ !

  • by

ಮೈ ಬಣ್ಣ ಬೆಳ್ಳಗಿರಬೇಕು ಎಂದು ಎಲ್ಲಾ ಹುಡುಗಿಯರು ಬಯಸುತ್ತಾರೆ.  ಬೆಳ್ಳನೇಯ, ಹಾಲಿನಂತಹ ಮುಖ ಹಾಗೂ ಚರ್ಮದ ಬಗ್ಗೆ ಹಲವು ಹುಡುಗಿಯರು ಕನಸು ಕಾಣುತ್ತಾರೆ.  ಯುವಿ ಕಿರಣಗಳ ವಿರುದ್ಧ  ಹೋರಾಡುವುದು ಸವಾಲಿನ ಸಂಗತಿ. ಪ್ರಸ್ತುತ ಜೀವನ ಶೈಲಿಯಿಂದಾಗಿ ಧೂಳು ನಮ್ಮ ಚರ್ಮದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಆರೋಗ್ಯಕರ ಚರ್ಮ, ಹಾಗೂ ಬೆಳ್ಳಗಿನ ಚರ್ಮ  ನಿಮ್ಮದಾಗಿಸಿಕೊಳ್ಳಬೇಕೇ..  ಮನೆಮದ್ದುಗಳನ್ನು ಬಳಸಿ ಅಂದವಾದ ಬೆಳ್ಳನೇಯ ಚರ್ಮ ನಿಮ್ಮದಾಗಿಸಿಕೊಳ್ಳಬಹುದು. ಇಲ್ಲಿದೆ ಮನೆ ಸಿಂಪಲ್ ಟಿಪ್ಸ್. 

ನ್ಯಾಚುರಲ್ ಸ್ಕಿನ್ ವೈಟ್ ಆಗಲು ಟಿಪ್ಸ್ ಇಲ್ಲಿದೆ. 

ಬೆಳ್ಳನೇಯ ಮುಖ, ನ್ಯಾಚುರಲ್ ಸ್ಕಿನ್,  ಟಿಪ್ಸ್ Lighten Skin Tone,

ವಿಟಮಿನ್ ಸಿ ಹೆಚ್ಚಾಗಿ ಸೇವಿಸಿ

ಚರ್ಮ ಬೆಳ್ಳಗಾಗಲು ಕಾಂತಿ ಹೆಚ್ಚಲು ವಿಟಮಿನ್ ಸಿ. ಇರುವ ಪದಾರ್ಥಗಳನ್ನು ಸೇವನೆ ಮಾಡಬೇಕು. ಹಣ್ಣು ಮತ್ತು ತರಕಾರಿಗಳು ಇದಕ್ಕೆ ನೆರವಾಗುತ್ತವೆ. ಪ್ರತಿಯೊಬ್ಬ ಚರ್ಮ ರೋಗ ತಜ್ಞರು ಕೂಡಾ ನಿಮಗೆ ವಿಟಮಿನ್ ಸಿ ಹೆಚ್ಚಾಗಿ ಸೇವಿಸಿ ಎಂದು ಸಲಹೆ ನೀಡುತ್ತಾರೆ. ಪ್ರಮುಖವಾಗಿ ಕಿವಿ ಹಣ್ಣು , ಸ್ಟ್ರಾಬೆರಿ, ಚೆರ್ರಿ, ಟೊಮೊಟೊ ಅಥವಾ ಸಿಟ್ರೆಸ್ ಹಣ್ಣುಗಳನ್ನು ತಿನ್ನಬೇಕು. 

ಸೋಯಾಬಿನ್ ಬಳಕೆ 

ಸೋಯಾಬಿನ್ ನಿಮ್ಮ ನೆಚ್ಚಿನ ಆಹಾರ ಅಲ್ಲದೇ, ಇರಬಹುದು. ಆದರೆ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಅದ್ಭುತ ಆಹಾರವಾಗಿದೆ. ಇದರಲ್ಲಿ ಇರುವಂತಹ ಐಸೋಫ್ಲಾವೋನ್ ಅಂಶವು ಫೈಟೋ ಈಸ್ಟ್ರೋಜಿನ್ ಆಗಿ ಕಾರ್ಯ ನಿರ್ವಹಿಸಿ ವಯಸ್ಸಾಗುವ ಲಕ್ಷಣ ತಡೆಯುತ್ತದೆ. 

ಕೆಂಪು ಹಣ್ಣುಗಳ ಸೇವನೆ ಅಧಿಕವಾಗಿರಲಿ

ಬೆಳ್ಳನೇಯ ಮುಖ, ನ್ಯಾಚುರಲ್ ಸ್ಕಿನ್,  ಟಿಪ್ಸ್ Lighten Skin Tone,

ಕೆಂಪು ಹಣ್ಣುಗಳಲ್ಲಿ ಪೈಥೋಕೆಮಿಕಲ್ ಹಾಗೂ ಕ್ಯಾರೋಟಿನ್ ನಿಂದ ಸಮೃದ್ಧವಾಗಿರುತ್ತವೆ. ಇದು ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು. ಇದ್ರಿಂದ ಚರ್ಮದ ಪ್ರತಿರೋಧ ಶಕ್ತಿ ಹೆಚ್ಚಾಗುತ್ತದೆ. ಇದ್ರಿಂದ ಕ್ಯಾರೆಟ್ ಮಾವು. ಕುಂಬಳಕಾಯಿ ಇತ್ಯಾದಿ. ಹಳದಿ ಮತ್ತು ಕೆಂಪು ಬಣ್ಣದ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚಾಗಿ ಸೇವಿಸಿ. 

ಬಾದಾಮಿ ಹಾಗೂ ಜೇನುತುಪ್ಪ ಫೇಸ್ ಪ್ಯಾಕ್ ನಿಂದ ಮುಖದ ಕಲೆಗಳನ್ನು ನಿವಾರಣೆ ಮಾಡಬಹುದು. ಚರ್ಮಕ್ಕೆ ಮೊಯಿಶ್ಚರೈಸ್ ಮಾಡಿ ನಯ ಮತ್ತು ಕಾಂತಿಯುತ ಚರ್ಮ ನಿಮ್ಮದಾಗಿಸಿಕೊಳ್ಳಬಹುದು. ೧ ಚಮಚ ಲಿಂಬೆ ರಸ ಹಾಕಿ, ೧ ಚಮಚ ಬಾದಾಮಿ ಎಣ್ಣೆ ಹಾಕಿ ,ಮುಖಕ್ಕೆ ಹಚ್ಚಿಕೊಂಡು ೧೫ ನಿಮಿಷಗಳ ಕಾಲ ಬಿಟ್ಟು ಮುಖ ತೊಳಿಯಿರಿ. 

ಮೈ ಬಣ್ಣ ಬಿಳಿ 

ಪಪ್ಪಾಯ 

ಪಪ್ಪಾಯ ಹಣ್ಣಿನ ಫೇಸ್ ಪ್ಯಾಕ್ ಹಲವರು ಸಲಹೆ ನೀಡುತ್ತಾರೆ. ಪಪ್ಪಾಯಿಯಲ್ಲಿ ಆಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿದ್ದು, ಮತ್ತು ಇದರಲ್ಲಿ ಇರುವಂತಹ ಪ್ಯಾಫೈನ್ ಎನ್ನುವ ಕಿಣ್ವವು ಸತ್ತ ಕೋಶವನ್ನು ತೆಗೆಯುತ್ತದೆ. ಚರ್ಮದ ಕಲ್ಮಷ ದೂರ ಮಾಡುತ್ತದೆ. 1 ಲೋಟ ಪಪ್ಪಾಯಿ ಹಾಲು ಮತ್ತು ಪಪ್ಪಾಯಿ ಹಣ್ಣು ಚರ್ಮಕ್ಕೆ ಹಚ್ಚಿಕೊಂಡರೆ ಅದು ಅದ್ಭುತವಾಗಿ ಕೆಲಸ ಮಾಡುತ್ತದೆ. 

ಓಟ್ ಮೀಲ್

ಓಟ್ ಮೀಲ್ ಹಾಗೂ ಟೊಮೋಟೋವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ೧೫ ನಿಮಿಷದ ಬಿಟ್ಟು ಮುಖ ತೊಳೆಯಿರಿ. ಓಟ್ ಮೀಲ್ ಚರ್ಮದಲ್ಲಿನ ಸತ್ತ ಕೋಶಗಳನ್ನು ಕಿತ್ತು ಹಾಕುತ್ತದೆ. ಟೊಮೆಟೋ ಚರ್ಮವನ್ನು ಮೊಶ್ಚರೈಸ್ ಮಾಡುವುದು. ಇದ್ರಿಂದ ಬಿಳಿ ಕಾಂತಿಯುತ ಸುಂದರ ಚರ್ವ ನಿಮ್ಮದಾಗುತ್ತದೆ. 

ಅಲೋವೇರಾ

ಅಲೋವೆರಾ ಮೈಬಣ್ಣ ಬೆಳ್ಳಗಾಗಿಸಲು ಸಹಾಯ ಮಾಡುತ್ತದೆ. 1 ಟೇಬಲ್ ಸ್ಪೂನ್ ಅಲೋವೆರಾ ಜೆಲ್ ಹಾಗೂ 1 ಟೇಬಲ್ ಸ್ಪೂನ್ ಬ್ರೌನ್ ಶುಗರ್. ಅಲೋವೆರಾ ಜೆಲ್ ಗೆ ಬ್ರೌನ್ ಶುಗರ್ ಮಿಕ್ಸ್ ಮಾಡಬೇಕು. ನಂತರ ನಿಮ್ಮ ಮುಖಕ್ಕೆ ಇದನ್ನು ಹಚ್ಚಿ. ಬಳಿಕ ಮುಖವನ್ನು ನೀರಿನಿಂದ ತೊಳೆಯಿರಿ. ವಾರದಲ್ಲಿ 2 ಬಾರಿ ಹೀಗೆ ಮಾಡಬೇಕು. 

ಮೊಸರು..

ಮೊಸರನ್ನು ಸೌಂದರ್ಯ ಹೆಚ್ಚಿಸಲು ಮನೆ ಮದ್ದಾಗಿ ಬಳಸಬಹುದು. ಮೊಸರು ಮುಖದ ಡಾರ್ಕ್ ನ್ನು ಹೋಗಲಾಡಿಸುತ್ತದೆ. 1/2 ಕಪ್ ಫ್ರೆಶ್ ಮೊಸರಿನಲ್ಲಿ 1/2 ಟೇಬಲ್ ಸ್ಪೂನ್ ಜೇನುತುಪ್ಪ ಬೇಕಾಗುತ್ತದೆ. ಅರ್ಧ ಕಪ್ ಮೊಸರಿಗೆ ಜೇನುತುಪ್ಪ ಸೇರಿಸಿ. ಈ ಫೇಸ್ ಪ್ಯಾಕ್ ನ್ನು ನಿಮ್ಮ ಕುತ್ತಿಗೆ ಹಾಗೂ ಮುಖಕ್ಕೆ ಹಚ್ಚಿಕೊಳ್ಳಿ. ಮೊದಲು ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಂಡಿರಬೇಕು. ನೀರಿನಿಂದ ಚೆನ್ನಾಗಿ ತೊಳೆಯುವ ಮುಖ ತೊಳೆದುಕೊಂಡಿರಬೇಕು, ನೀವು ಅದನ್ನು ಮುಖದ ಮೇಲೆ ಸುಮಾರು 20 ನಿಮಿಷಗಳ ಕಾಲ ಬಿಡಬೇಕು. 

ಅರಶಿಣ 

ವಯಸ್ಸಾಗುವಿಕೆಯನ್ನು ಅರಶಿಣ ತಡೆಗಟ್ಟುತ್ತದೆ. ಅರಶಿಣದಿಂದ ನ್ಯಾಚುರಲ್ ಸ್ಕಿನ್ ನಿಮ್ಮದಾಗಿಸಿಕೊಳ್ಳಬಹುದು.  ೧ ಟೇಬಲ್ ಸ್ಪೂನ್ ಅರಶಿಣ ಪುಡಿಯಯ ಜೇನುತುಪ್ಪ , ಫ್ರೆಶ್ ಮೊಸರು..

ಮೂರನ್ನು ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿಕೊಳ್ಳಬೇಕು. ಬಳಿಕ ಮುಖಕ್ಕೆ ಈ ಪ್ಯಾಕ್ ನ್ನು ಹಚ್ಚಿಕೊಳ್ಳಬೇಕು. ನಂತರ ಮುಖವನ್ನು ತೊಳೆಯಬೇಕು. 

ಆಲುಗಡ್ಡೆ

ಆಲುಗಡ್ಡೆ ಜ್ಯೂಸ್ ಹಾಗೂ ಲೆಮನ್ ಜ್ಯೂಸ್ ಮಿಕ್ಸ್ ಮಾಡಿ. ಈ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಬೇಕು. 10 ನಿಮಿಷದ ನಂತರ ಮುಖವನ್ನು ತೊಳೆಯಿರಿ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ