ಲಿಂಬೆ ಸಿಪ್ಪೆಯ ಆರೋಗ್ಯ ಪ್ರಯೋಜನಗಳು..!

  • by

ನಿಂಬೆ ಹಣ್ಣಿನ ಸಿಪ್ಪೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇವುಗಳ ಸಿಪ್ಪೆ ಬಿಸಾಕೋ ಬದಲು, ಹಲವು ರೀತಿಯಲ್ಲಿ ಬಳಸಬಹುದು. ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಲಿಮೊನಿಂ , ಬೈ ಪ್ಲಾವಿನೋಯ್ಡ್, ವಿಟಮಿನ್ ಸಿ, ಮತ್ತು ಪೊಟ್ಯಾಶಿಯಂ ಮೊದಲಾದ ಫೈಟೋಕೆಮಿಕಲ್ಸ್ ಅಂಶಗಳಿದ್ದು, ಇವು ಹಣ್ಣುಗಳಿಗಿಂದ ಹೆಚ್ಚಾಗಿ ನಿಮ್ಮ ಆರೋಗ್ಯ ಕಾಪಾಡುತ್ತದೆಯ
ನಿಂಬೆಯಲ್ಲಿರುವ ವಿಟಮಿನ್ ಗಳು, ಖನಿಜಗಳು. ಕರಗದ ನಾರು ಮತ್ತು ಕ್ಯಾಲ್ಸಿಯಂ , ಪೋಟ್ಯಾಶಿಯಂ ಮತ್ತು ವಿಟಮಿನ್ ಸಿ ಉತ್ತಮವಾಗಿದ್ದುಸ ಇವು ಆರೋಗ್ಯವನ್ನು ಹಲವು ರೀತಿಯಲ್ಲಿ ವೃದ್ಧಿಸುತ್ತವೆ. ಲಿಂಬೆಯ ಸಿಪ್ಪೆಯಲ್ಲಿ ಕೆಲವು ಆರೋಗ್ಯಕರ ಕಿಣ್ವಗಳಿದ್ದು, ಇವು ಆರೋಗ್ಯಕ್ಕೂ ಹೆಚ್ಚು ಉಪಯುಕ್ತ ಎಂದು ಹೇಳಲಾಗುತ್ತದೆ. ನಿಂಬೆ ಸಿಪ್ಪೆಯಿಂದಾಗುವ ಪ್ರಯೋಜನಗಳು ಇಲ್ಲಿವೆ.

ಮೂಳೆಗಳ ಆರೋಗ್ಯಕ್ಕಾಗಿ

ದೇಹದಲ್ಲಿ ವಿಟಮಿನ್ ಸಿ ಕೊರತೆಯಾದರೆ ಒಸಡುಗಳಲ್ಲಿ ರಕ್ತ ಒರಸುವುದು ಮತ್ತು ಒಸಡುಗಳಲ್ಲಿ ಊತ ಕಂಡು ಬರುತ್ತದೆ. ಜಿಂಜಿವೈಟಿಸ್, ಮೊದಲಾದ ಕಾಯಿಲೆಗಳು ಎದುರಾಗುತ್ತದೆ. ಲಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಸಿಟ್ರಿಕ್ ಆಮ್ಲವು ಹೆಚ್ಚಿನ ಪ್ರಮಾಣದಲ್ಲಿದೆ. ಲಿಂಬೆ ಸಿಪ್ಪಯ ಸೇವನೆಯಿಂದ ದೇಹದಲ್ಲಿ ವಿಟಮಿನ್ ಸಿ ಕೊರತೆ ನೀಗಿಸುತ್ತದೆ. ಸಾಮಾನ್ಯವಾದ ಹಲ್ಲು ಮತ್ತು ಒಸಡುಗಳು ತೊಂದರೆಗಳು ಶಮನಗೊಳ್ಳುತ್ತವೆ.

ತೂಕ ಇಳಿಕೆಗೆ ಸಹಾಯಕಾರಿ
ಲಿಂಬೆ ಸಿಪ್ಪೆಯ ಸೇವನೆಯಿಂದ ತೂಕ ಇಳಿಕೆಯಾಗುತ್ತದೆ. ಪೆಕ್ಟಿನ್ ಎಂಬ ಪೋಷಕಾಂಶ ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ಕೊಬ್ಬನ್ನು ಕರಗಿಸುತ್ತದೆ.

ಉತ್ಕರ್ಷಣ ಶೀಲ ಒತ್ತಡದ ಚಿಕಿತ್ಸೆ

ಲಿಂಬೆಯ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಟ್ರಸ್ ಬಯೋಫ್ಲೇವನಾಯ್ಡ್ ಗಳಿದ್ದು, ದೇಹಕ್ಕೆ ಎದುರಾಗುವ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಲಿಂಬೆ ಸಿಪ್ಪೆಯಲ್ಲಿರುವ ಪೊಟ್ಯಾಶಿಯಂ ರಕ್ತದ ಒತ್ತಡವನ್ನು ಸೂಕ್ತ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಲಿಂಬೆ ಸಿಪ್ಪೆಯ ಸೇವನೆಯಿಂದ ಹೃದಯ ಸ್ವಂಭನ ಮತ್ತು ಇತರ ಸಮಸ್ಯೆಗಳನ್ನು ತಡೆಗಟ್ಟಲು ನೆರವಾಗುತ್ತದೆ.

ನಿಂಬೆಯ ಸಿಪ್ಪೆ ಜೀರ್ಣಕ್ರಿಯೆ ಹೆಚ್ಚಿಸುತ್ತದೆ.
ಇನ್ನು ನಿಂಬೆ ಸಿಪ್ಪೆ ಜೀರ್ಣಕ್ರಿಯೆಯನ್ನು ಮಹತ್ವದ ಪಾತ್ರ ವಹಿಸುತ್ತದೆ. ಲಿಂಬೆ ಸಿಪ್ಪೆಯಲ್ಲಿ ಕರಗದ ನಾರು ಉತ್ತಮ ಪ್ರಮಾಣದಲ್ಲಿದ್ದು, ಕರುಳುಗಳಲ್ಲಿ ಆಹಾರದ ಚಲನೆಯನ್ನು ಸುಲಭವಾಗಿಸುತ್ತದೆ. ಅಲ್ಲದೇ ವಿಟಮಿನ್ ಸಿ ದೇಹದಲ್ಲಿ ಎದುರಾಗುವ ಸೋಂಕುಗಲಿಗೆ ರಕ್ಷಣೆ ಒದಿಗಿಸುತ್ತದೆ.

ಕ್ಯಾನ್ಸರ್ ತಡೆಗಟ್ಟಲು ಸಹಾಯ
ಲಿಂಬೆಸಿಪ್ಪೆ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಲಿಮೋನಿನ್ ಎಂಬ ಪೋಷಕಾಂಶ ಗಳಿಗೆ ಕ್ಯಾನ್ಸರ್ ಪೀಡಿತ ಜೀವಕೋಶಗಳ ವಿರುದ್ಧ ಹೋರಾಡುವ ಶಕ್ತಿ ಪಡೆದುಕೊಂಡಿದೆ. ಕ್ಯಾನ್ಸರ್ ಜೀವಕೋಶಗಳಿಗಿರುವ ವ್ಯಕ್ತಿಗಳು ಲಿಂಬೆಸಿಪ್ಪೆಯನ್ನು ಸೇವಿಸುವ ಮೂಲಕ ಇವುಗಳನ್ನು ಅಭಿವಡದ್ಧಿಯಾಗುವುದನ್ನು ತಡೆಗಟ್ಟುತ್ತವೆ. ಕ್ಯಾನ್ಸರ್ ಪೀಡಿತ ಜೀವಕೋಶಗಳು ಆಮ್ಲೀಯ ವಾತಾವರಣದಲ್ಲಿ ಶೀರ್ಘವಾಗಿ ಅಭಿವೃದ್ಧಿ ಹೊಂದುತ್ತದೆ. ಬ್ಯಾಕ್ಟೇರಿಯಾ, ಶಿಲೀಂದ್ರಗಳ ಸೋಂಕನ್ನು ನಿವಾರಿಸುತ್ತದೆ. ಲಿಂಬೆ ಸಿಪ್ಪೆ ಕಡಿಮೆ ಪಿಎಚ್ ಮಟ್ಟವನ್ನು ಹೊಂದಿದೆ.

ರಕ್ತನಾಳ ಬಲಗೊಳಿಸಲು
ವಿಟಮಿನ್ ಸಿ ಲಿಂಬೆ ಸಿಪ್ಪೆಯಲ್ಲಿ ಹೆಚ್ಚಾಗಿದ್ದು, ಇದು ರಕ್ತನಾಳಗಳನ್ನು ಬಲಪಡಿಸಲು ನೆರವಾಗುತ್ತದೆ. ಈ ಮೂಲಕ ರಕ್ತನಾಳಗಳಿಗೆ ರಕ್ಷಣೆ ನೀಡುತ್ತದೆ. ಇದು ಅಧಿಕ ರಕ್ತದೋತ್ತಡದಿಂದಲೂ ರಕ್ಷಣೆ ಒದಗಿಸುತ್ತದೆ.

ಲಿಂಬೆಸಿಪ್ಪೆ ಸೇವನೆ ಹೇಗೆ ಮಾಡುವುದು..?
ಲಿಂಬೆ ರಸವನ್ನು ಹಿಂಡುವ ಮುನ್ನ ಸಿಪ್ಪೆಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಬಳಿಕ ಕತ್ತರಿಸಿ ಹಿಂಡಿದ ಸಿಪ್ಪೆಯನ್ನು ಪ್ರತ್ಯೇಕಿಸಿಟ್ಟುಕೊಳ್ಳಿ. ಬಲಿಕ ಇವನ್ನು ಅತಿಯಾದ ಚಿಕ್ಕದಾದ ಚೂರುಗಳನ್ನಾಗಿಸಿ, ಇನ್ನೊಂದು ವಿಧಾನವೆಂದರೆ, ಕೊಂಚ ನೀರಿನಲ್ಲಿ ಲಿಂಬೆಯ ಸಿಪ್ಪೆಗಳನ್ನು ಬೇಯಿಸಿ ಸ್ವಲ್ಪ ಸಕ್ಕರೆ ಬೆರೆಸಿ ಪಾಕವನ್ನಾಗಿಸಿ. ಇದು ತಣ್ಣಗಾದ ಬಳಿಕ ನೇರವಾಗಿ ಸೇವಿಸಬಹುದುಯ ಮಸಾಲೆ ಅರೆಯುವಾಗ ಹುಳಿಯ ಬದಲು ನಿಂಬೆ ಸಿಪ್ಪೆಯನ್ನು ಸೇರಿಸಿ ಅರೆಯಬಹುದು. ಇದು ಅಡುಗೆಗೆ ರುಚಿ ಹೆಚ್ಚಿಸುತ್ತದೆ. ಆರೋಗ್ಯವನ್ನು ಕಾಪಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ