ಮಕ್ಕಳಿಗೆ ಜ್ವರ ಬಂದಾಗ ಪ್ರಥಮ ಚಿಕಿತ್ಸೆ ಹೇಗಿರಬೇಕು..?

  • by

ಮನೆ ತುಂಬಾ ಮಕ್ಕಳು ಓಡಾಡುತ್ತಿದ್ದರೆ  ಅದರ ಅಂದವೇ ಬೇರೆ. ಆದ್ರೆ ಕೆಲಮೊಮ್ಮೆ ನಮಗರಿಯದಂತೆ ಮಕ್ಕಳು ಕಾಯಿಲೆಗೆ ಒಳಗಾಗುವ ಸಂಭವ ಹೆಚ್ಚು. ಮಕ್ಕಳಿಗೆ ಜ್ವರ ಬಂದರೆ. ಇಡೀ ಮನೆಯೇ ಆತಂಕಕ್ಕೆ ಒಳಗಾಗುತ್ತಾರೆ. ಕಾಳಜಿ ತೋರುತ್ತಾರೆ. ನಿಮ್ಮ ಮಗುವಿಗೆ ಜ್ವರ, ವೈರಲ್ ಸೋಂಕು ಬರುವ ಸಾಧ್ಯತೆ ಹೆಚ್ಚಿರುತ್ತದ.ೆ ವೈದ್ಯರ ಸಲಹೆ ಮೇರೆಗೆ ಮಕ್ಕಳ ಜ್ವರ, ಶೀತ ಹಾಗೂ ಕೆಮ್ಮುಗೆ ಔಷಧಿ ನೀಡಬೇಕಾಗುತ್ತದೆ. ಅಲ್ಲದೇ ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡಾಗ, ತಜ್ಞಣ ವೈದ್ಯರನ್ನು ಭೇಟಿ ಮಾಡಬೇಕು. ಇದಲ್ಲದೇ ಮಕ್ಕಳ ಜ್ವರವನ್ನು ಕಡಿಮೆ ಮಾಡಲು ಪ್ರಾಥಮಿಕ ಚಿಕಿತ್ಸೆಗಳನ್ನು ಹೇಗೆ ಮಾಡುವುದು ಇಲ್ಲಿದೆ ಮಾಹಿತಿ.    

ಮಕ್ಕಳಿಗೆ ಜ್ವರ ಬಂದಾಗ, ವೈದ್ಯರ ನೆರವು ಪಡೆಯುವುದು ಸೂಕ್ತ. ಮನುಷ್ಯನ ದೇಹದಲ್ಲಿ ವೈರಸ್ ಮತ್ತು ಬ್ಯಾಕ್ಟೇರಿಯಾಗಳು ದಾಳಿ ನಡೆಸಿದಾಗ, ನಾವು ಅದರೊಂದಿಗೆ ಹೋರಾಟ ನಡೆಸುವುದು ಸಾಮಾನ್ಯ, ಈ ವೇಳೆ ಉಂಟಾಗುವ ಉಷ್ಣಾಂಶವೇ ಜ್ವರವೆಂದು ಪರಿಗಣಿಸುತ್ತೇವೆ. ನಮ್ಮ ದೇಹದಲ್ಲಿ ಬ್ಯಾಕ್ಟೇರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಇದೆ ಬುದನ್ನು ಈ ಜ್ವರ ಸೂಚಿಸುತ್ತದೆ. ಸಣ್ಣ ರೀತಿಯಲ್ಲಿ ಬರುವ ಜ್ವರಕ್ಕೆ ಔಷಧಿಗಳನ್ನು ತೆಗೆದುಕೊಂಡು ದೇಹದಲ್ಲಿರುವ ಹೋರಾಟದ ಶಕ್ತಿಯನ್ನು ಕುಗ್ಗಿಸಬಾರದು. 

ಸಾಮಾನ್ಯವಾಗಿ ಮಕ್ಕಳನ್ನು ಮುಟ್ಟಿದಾಗ ಜ್ವರ ಕಾಣಿಸಿಕೊಳ್ಳುತ್ತದೆ. ನಿಖರವಾಗಿ ಜ್ವರ ಇದೆ ಎಂದು ಕಂಡು ಹಿಡಿಯಲು ಥರ್ಮೋಮೀಟರ್ ಬಳಸುವುದು ಸೂಕ್ತ. ಮಕ್ಕಳಿರುವ ಮನೆಗಳಲ್ಲಿ ಈ ಥರ್ಮೋಮೀಟರ್ ಅತ್ಯವಶ್ಯಕ ವಾಗಿರುತ್ತದೆ. ಇದನ್ನು ಬಳಸುವ ಮುನ್ನ ಮತ್ತು ಬಳಿಸಿದ ಬಳಿಕ ಸ್ವಚ್ಛ ಮಾಡಿ.

ಜ್ವರದ ನಿಖರತೆ ತಿಳಿಯುವುದು ಹೇಗೆ ?

ಮಕ್ಕಳಲ್ಲಿ ಸಾಮಾನ್ಯವಾಗಿ ಬಟ್ಟೆಯಲ್ಲಿ ಸು್ತತಿ ಬೆಚ್ಚಗಿಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೂಡಲೇ ಜ್ವರ ಪರೀಕ್ಷೆ ಮಾಡಿದಾಗ ಸಾಮಾನ್ಯವಾಗಿಯೇ ಉಷ್ಣಾಂಶ ಹೆಚ್ಚಾಗಿ ತೋರಿಸುತ್ತದೆ. ಬಿಸಿ ಪದಾರ್ಥಗಳನ್ನು ತಿಂದಾಗ ತಣ್ಣಗಿನ ಪದಾರ್ಥಗಳನ್ನು ಸೇವಿಸಿದಾಗಲೂ ಉಷ್ಣಾಂಶವನ್ನು ನಿಖರವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಈ ವೇಳೆ ೩೦ ನಿಮಿಷಗಳ ಕಾಲ ಬಳಿಕ ಹಾಗೂ ಸ್ನಾನ ಮಾಡಿದ ೧೫ ನಿಮಿಷಗಳ ಬಿಟ್ಟು ಬಳಿಕ ಜ್ವರವನ್ನು ಪರಿಶೀಲಿಸಬೇಕು. 

ವೈದ್ಯರಬಳಿಯಾವಾಗಹೋಗಬೇಕು…? 
ಪದೇ ಪದೇ ಔಷಧಿಗಳನ್ನು ನೀಡುವುದರಿಂದ ಮಗುವಿನ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಬಾರದು. ಜ್ವರ ನಿಖರತೆಯನ್ನು ತಿಳಿದು ವೈದ್ಯರ ಬಳಿ ಹೋಗಿ ಔಷಧಿಯನ್ನು ಪಡೆಯಬೇಕುತ್ತದೆ. 3 ತಿಂಗಳಿನ ಒಳಗಿನ ಮಕ್ಕಳು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಇಂತಹ ಮಕ್ಕಳ ದೇಹದ ಉಷ್ಣಾಂಶತೆ 98,99 ಇದ್ದರೆ ಅದು ಸಾಮಾನ್ಯ ಎಂದು ತಿಳಿಯಬೇಕು. 100.2ಗಿಂತಲೂ ಹೆಚ್ಚು ಉಷ್ಣಾಂಶತೆ ಇದ್ದರೆ ವೈದ್ಯರ ಬಳಿ ಹೋಗಬೇಕು. 3 ತಿಂಗಳಿಗಿಂತಲೂ ಮೇಲ್ಪಟ್ಟ ಮಕ್ಕಳಿಗೆ 101ಗಿಂತಲೂ ಹೆಚ್ಚಾಗಿದ್ದರೆ ಹೋಗಬೇಕು. 1 ವರ್ಷಕ್ಕಿಂತಲೂ ಮೇಲ್ಪಟ್ಟ ಮಕ್ಕಳಿಗೆ ಜ್ವರ ಇದ್ದರೂ ಆರಾಮವಾಗಿದ್ದರೆ, ಆಟವಾಡಿಕೊಂಡಿದ್ದರೆ ವೈದ್ಯರ ಬಳಿ ಹೋಗುವುದೂ ಬೇಡ. ಮಕ್ಕಳು ಎಂದಿನಂತೆ ಇಲ್ಲದೆ, ವಾಂತಿ ಮಾಡಿಕೊಳ್ಳುವುದು, ನಿಶ್ಯಕ್ತಿಯಿಂದಿದ್ದರೆ ವೈದ್ಯರ ಬಳಿ ಹೋಗಬೇಕು. 

ಪ್ರಥಮ ಚಿಕಿತ್ಸೆಗಳನ್ನು ಮಾಡುವುದು ಹೇಗೆ?

ಜ್ವರ ಬಂದಾಗ ಫ್ಯಾನ್ ಹಾಕುವುದು ಉತ್ತಮ. ಚಳಿ ಇಲ್ಲದಿದ್ದರೆ ಅಗತ್ಯ ಎನಿಸಿದರೆ ಫ್ಯಾನ್ ಹಾಗೂ ಎಸಿಗಳನ್ನು ಮಾತ್ರ ಬಳಸಿ. ಜ್ವರ ಬಂದ ಕೂಡಲೇ ಮಕ್ಕಳಿಗೆ ಸ್ವೆಟರ್ ಹಾಗೂ ಟೋಪಿಗಳನ್ನು ಹಾಕುತ್ತಾರೆ. ಸಾಮಾನ್ಯವಾಗಿ ವಿದ್ಯಾವಂತರೇ ಇಂತಹ ಕೆಲಸಗಳನ್ನು ಮಾಡುವುದು ಹೆಚ್ಚು. ಇದು ಸರಿಯಾದ ರೀತಿಯಲ್ಲ. ಮಕ್ಕಳಿಗೆ ಫಿಟ್ಟಿಂಗ್ ಬಟ್ಟೆಗಳನ್ನು ಹಾಕಹಾರದು. ಕಾಟನ್ ಬಟ್ಟೆಗಳನ್ನು ಹಾಕುವುದು ಉತ್ತಮ. ಜ್ವರ ಬಂದಾಗ ಮಕ್ಕಳಿಗೆ ಗಾಳಿಯ ಅಗತ್ಯವಿರುತ್ತದೆ. ಇಂತಹ ಸಂದರ್ಭದಲ್ಲಿ ಬೆಚ್ಚಗಿಡುವುದರಿಂದ ಮಕ್ಕಳಿಗೆ ಫಿಟ್ಸ್ ಬರುವ ಸಾಧ್ಯತೆ ಹೆಚ್ಚು. 

ಹಾಲು ಕುಡಿಯುವ ಮಕ್ಕಳಿದ್ದರೆ ಜ್ವರ ಬಂದಾಗ ಆಗಾಗ ಹಾಲನ್ನು ಕುಡಿಸಬೇಕು. ದೊಡ್ಡ ಮಕ್ಕಳಾದರೆ ನೀರನ್ನು ಕುಡಿಸಬೇಕು. ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಬೇಕು. ದ್ರವ ಪದಾರ್ಥ ಹೆಚ್ಚೆಗಾ ನೀಡಬೇಕು.  

ಮಕ್ಕಳಿಗೆ ವಿಶ್ರಾಂತಿ ನೀಡಬೇಕು. ಹೊರಗೆ ಕಳುಹಿಸುವುವುದನ್ನು ನಿಯಂತ್ರಿಸುವುದು ಒಳ್ಳೆಯದು. ಇಂತಹ ಸಂದರ್ಭದಲ್ಲಿ ಮನೆಯಲ್ಲಿಯೇ ಪೋಷಕರು ಮಕ್ಕಳೊಂದಿಗೆ ಆಟ ವಾಡಬೇಕು. ಇದರಿಂದ ಮಕ್ಕಳು ಹೊರ ಹೋಗುವುದು ನಿಯಂತ್ರಣದಲ್ಲಿರುತ್ತದೆ. ಮನೆಯಲ್ಲಿಯೇ ಪೋಷಕರು ಮಕ್ಕಳ ಜತೆ ಆಟವಾಡಬೇಕು. ಹೆಚ್ಚು ಕಾಲ ಅವರೊಂದಿಗೆ ಕಾಲ ಕಳೆಯಬೇಕು. ಮಕ್ಕಳಿಗೆ ಸಾಧ್ಯವಾದಷ್ಟು ಔಷಧಿ ನೀಡುವುದನ್ನು  ನಿಯಂತ್ರಿಸಿ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ