ಶಾರೀರಿಕ ಆರೋಗ್ಯಕ್ಕೆ ಜಪ ಮತ್ತು ಧ್ಯಾನ..!

  • by

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದಾಗಿ ಖಿನ್ನತೆಯಂತಹ ಸಮಸ್ಯೆಗಳ ಹೆಚ್ಚಾಗುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ ಧ್ಯಾನವು ಆತಂಕದಂತಹ ಸಮಸ್ಯೆಗಳನ್ನು ನಿವಾರಿಸಬಲ್ಲದ್ದು. ಮನಸ್ಸಿಗೆ ನೆಮ್ಮದಿ ಹಾಗೂ ಆತಂಕ ಮತ್ತು ಖಿನ್ನತೆಯಂದಹ ಸಮಸ್ಯೆ ನಿವಾರಿಸಲು ಧಾನ್ಯವು ಪ್ರಬಲ ಅಸ್ತ್ರವಾಗಿದೆ ಎಂದು ಹೇಳಬಹುದು.

ಅನೇಕ ಜನರು ಒತ್ತಡ ನಿವಾರಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ವ್ಯಾಯಾಮ, ಮನಸ್ಥಿತಿಯನ್ನು ರಿಫ್ರೆಶ್ ಮಾಡಲು, ಚಲನಚಿತ್ರ ನೋಡುವುದು, ವಾಕಿಂಗ್ ಮಾಡುವುದು ಇತ್ಯಾದಿ. ಆದ್ರೆ ಎಲ್ಲಾ ಚಟುವಟಿಕೆಗಳನ್ನು ಕೆಲವು ಕ್ಷಣಗಳು ಮಾತ್ರ ನಿಮ್ಮ ಜತೆಗಿರುತ್ತವೆ. ವ್ಯಾಯಾಮ ಆರೋಗ್ಯ ವನ್ನು ಕಾಪಾಡಲು ಖಂಡಿತವಾಗಿ ನೆರವಾಗುತ್ತದೆ. ಆದ್ರೆ ಕೆಲವು ಜನರಿಗೆ ಇದ್ರಿಂದ ಹೆಚ್ಚಿನ ಫಲಿತಾಂಶ ದೊರೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಗೆ ಸಹಾಯ ಮಾಡುತ್ತೆ ಧ್ಯಾನ. ಧ್ಯಾನದಲ್ಲಿ ಹಲವು ವಿಧಗಳಿವೆ.ಮಕ್ಕಳಿಂದ ಹಿಡಿದು ವೃದ್ಧರವರೆಗೂ ಧಾನ್ಯ ಮಾಡಬಹುದಾಗಿದ್ದು, ಅನೇಕ ರೀತಿಯ ಧಾನ್ಯಗಳನ್ನು ಮಾಡಬಹುದು. ಅದರಲ್ಲೂ ಜಪ ಧ್ಯಾನ ಅತ್ಯಂತ ಪ್ರಾಮುಖ್ಯ ಪಡೆದಿದೆ.
ಜಪ ಧ್ಯಾನ ಇದನ್ನು ಮಂತ್ರ ಧ್ಯಾನ ಎಂದು ಹೇಳುತ್ತಾರೆ. ಮಂತ್ರಗಳ ಶಕ್ತಿಯ ಸಹಾಯದಿಂದ ನಿಮ್ಮ ಆಲೋಚನೆಗಳನ್ನು ನಿವಾರಿಸಿ ಶಾಂತ ಮನಸ್ಸನ್ನು ಪಡೆಯಲು ಸಹಾಯವಾಗುತ್ತದೆ. ಈ ಜಪ ಧಾನ್ಯವು ಯಾವುದೇ ಧರ್ಮ ಹಾಗೂ ಜನರಿಗೆ ಸೀಮಿತವಾಗಿಲ್ಲ. ಯಾರೂ ಬೇಕಾದರೂ ಇದನ್ನು ಮಾಡಬಹುದು.

ಬೆಳಿಗ್ಗೆ ಸೂಕ್ತ ಸಮಯವೆಂದು ಪರಿಗಣಿಸಲಾಗಿದ್ದರೂ, ಇದನ್ನು ದಿನದ ಯಾವುದೇ ಸಮಯದಲ್ಲಾದರೂ ಈ ಜಪ ಧ್ಯಾನವನ್ನು ಮಾಡಬಹುದಾಗಿದೆ. ಜಪ ಧ್ಯಾನಗಳಲ್ಲಿ ಎರಡು ರೀತಿಯಲ್ಲಿ ಕಾಣಬಹುದಾಗಿದೆ. ಶ್ರವ್ಯ ಪಠಣ ಧ್ಯಾನ ಹಾಗೂ ಮೌನ ಧ್ಯಾನ.ಶ್ರವಣೇಂದ್ರಿಯ ಜಪ ಧ್ಯಾನವನ್ನು ವೈಖರಿ ಪಠಣ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ಧ್ಯಾನವಾಗಿದ್ದು, ಲಯ ಹಾಗೂ ಮಂತ್ರ, ಅಥವಾ ಸ್ತೋತ್ರ ಪಠಿಸುವುದನ್ನು ಒಳಗೊಂಡಿರುತ್ತದೆ. ಕೆಲವು ಜನರು ಈ ಧ್ಯಾನ ಜಪವನ್ನು ಮಾಡುತ್ತಾರೆ.

ಏಕಾಗ್ರತೆ ಹಾಗೂ ಗಮನ

ನಿಯಮಿತವಾಗಿ ಧ್ಯಾನವನ್ನು ಜಪಿಸುವುದರಿಂದ ಉತ್ತಮ ಗಮನ ಹಾಗೂ ಏಕಾಗ್ರತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಈ ಧ್ಯಾಗ ಗಮನವನ್ನನ ಕೇಂದ್ರಿಕರಿಸಲು ಸಹಾಯ ಮಾಡುತ್ತದೆ. ನಿಮ್ಮ ಮನಸ್ಸು ಬಹಳಷ್ಟು ವಿಷಯಗಳಿಂದ ವಿಚಲಿತರಾಗದಂತೆ ತಡೆಯುತ್ತದೆ.

ಮನಸ್ಸನ್ನು ಶಾಂತಗೊಳಿಸುತ್ತದೆ.

ನೀವು ಪ್ರತಿದಿನ ಪಠಣ ಧ್ಯಾನ ಮಾಡಿದರೆ ಅದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಧ್ಯಾನವನ್ನು ಪಠಿಸುವುದರಿಂದ ಜಾಗೃತಿ ಹೆಚ್ಚುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಲು ಈ ಧ್ಯಾನ ನೆರವಾಗುತ್ತದೆ. ಪಠಣದಿಂದ ಬರುವ ಶಕ್ತಿಯು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇದು ಆತಂಕ ತಗ್ಗಿಸಲು ಸಹಾಯ ಮಾಡುತ್ತದೆ. ಪ್ರತಿಯೊಂದು ಸಮಸ್ಯೆಗೂ ಮುಖ್ಯ ಕಾರಣ ಒತ್ತಡ. ಹಾಗಾಗಿ ಒತ್ತಡವನ್ನು ನಿವಾರಿಸಲು ಈ ಧ್ಯಾನ ನೆರವಾಗುತ್ತದೆ. ಇದ್ರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ,ಇದನ್ನು ಅಭ್ಯಾಸ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಆತಂಕ ಹಾಗೂ ದುಃಖವನ್ನು ನಿವಾರಿಸಬಹುದು. ಈ ಧ್ಯಾನ ಮಾಡುವ ಜನರು ಭವಿಷ್ಯದ ಚಿಂತೆ ಹೊರೆತುಪಡಿಸಿ ವರ್ತಮಾನದ ಬಗ್ಗೆ ಯೋಚಿಸಿರುತ್ತಾರೆ.

ಈ ಧ್ಯಾನ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ ಅಂತಲೇ ಹೇಳಬಹುದು. ಸಂಧಿವಾತ ರೋಗಿಗಳು ಈ ಧ್ಯಾನ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸ್ನಾಯು ನೋವನ್ನು ನಿವಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ

ಧ್ಯಾನದ ವೇಳೆ ಆಗುವ ತೊಂದರೆಗಳು..

ಧ್ಯಾನ ಮಾಡುವಾಗ ಕೆಲವು ತೊಂದರೆಗಳಾಗುತ್ತವೆ. ಧ್ಯಾನದ ಸಮಯದಲ್ಲಿ ಕೆಲವು ಆಲೋಚನೆಗಳು, ನಿಮ್ಮ ಮನಸ್ಸಿನಲ್ಲಿ ವೇಗವಾಗಿ ಚಲಿಸಲು ಪ್ರಾರಂಭಿಸುತ್ತವೆ. ಈ ಪ್ರಕ್ರಿಯೆಯಿಂದ ಭಯಪಡಬೇಡಿ. ಅಥವಾ ನೀವು ತಲ್ಲಣವಾಗಬೇಡಿ. ಆ ಆಲೋಚನೆಗಳನ್ನು ನಗು ಮುಖದಿಂದಲೇ ನೋಡುತ್ತಲೇ ಇರಿ. ಮತ್ತು ನಿಮ್ಮ ದೇಹದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆ ಸೂಕ್ಷ್ಮವಾಗಿ ಗಮನಿಸಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ