ನೇರಳೆ ಹಣ್ಣಿನ ಬಹು ಉಪಯೋಗಗಳು..!

  • by

ಭಾರತದಲ್ಲಿ ನೇರಳೆ ಹಣ್ಣು ಹೆಚ್ಚಾಗಿ ಬಳಸಲಾಗುತ್ತದೆ. ಮಧುಮೇಹ. ಹೃದಯಾಘಾತ, ಸಂಧಿವಾತ ಹೊಟ್ಟೆಯ ಕಾಯಿಲೆಗಳನ್ನು ನಿವಾರಿಸುತ್ತದೆ. ನೇರಳೆ ಹಣ್ಣಿನಲ್ಲಿ ಪೋಷಕಾಂಶಗಳು ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣನನ್ನ ನಿಯಂತ್ರಿಸುತ್ತದೆ. 

Jamun fruit, health benefits ನೇರಳೆ ಹಣ್ಣು, ಉಪಯೋಗ,

ಕಡು ನೇರಳೆ ಹಣ್ಣಿನಲ್ಲಿ ಒಂದು ಬೀಜ ಇದ್ದು, ಇದು ಸ್ವಲ್ಪ ಹಸಿರು ಹಳದಿ ಬಣ್ಣ ಹೊಂದಿದೆ. ಈ ಹಣ್ಣಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಪೋಷಕಾಂಶ ಇವೆ. 100 ಗ್ರಾಂ ನೇರಳೆ ಹಣ್ಣಿನಲ್ಲಿ ಪೋಷಕಾಂಶಗಳೆಷ್ಟೆಂದರೆ.

ಕ್ಯಾಲೋರಿ -6.2, ನಾರಿನಂಶ -1.9 %, ಕಾರ್ಬ್ಸ್- 14 %., ಖನಿಜಾಂಶ 1.4  %,  ಕಬ್ಬಿನಾಂಶ 1.2 ಮಿ.ಗ್ರಾಂ. ಕ್ಯಾಲ್ಸಿಯಂ – 15 ಮಿ.ಗ್ರಾಂ , ಮಿಟಮಿನ್ ಸಿ – 18%, ನೀರಿನಾಂಶ – 83 %, ನಷ್ಚಿದೆ. 

ನೇರಳೆ ಹಣ್ಣಿನ ಲಾಭಗಳು 

ನೇರಳೆ ಹಣ್ಣಿನಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುವುದು.  ನೇರಳೆಯ ಬೀಜಗಳನ್ನು ಒಣಗಿಸಿ, ಮತ್ತು ಅದನ್ನು ಪುಡಿ ಮಾಡಿಕೊಂಡು ಅದನ್ನು ಆರ್ಯುವೇದದಲ್ಲಿ ಬಳಸಲಾಗುತ್ತದೆ. ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಾಗಿದೆಯಾ ಎಂದು ತಿಳಿದುಕೊಳ್ಳಬಹುದು. ನೇರಳ ಬೀಜದಲ್ಲಿ ಇರುವಂತಹ ಹೈಪೋಗ್ಲೈಸೆಮಿಕ್ ಎ್ನನುವ ಗುಣ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ. ಇದರಲ್ಲಿ ಜಾಂಬೊಲಿನ್ ಮತ್ತು ಜಾಂಬೊಸೈನ್ ಎನ್ನುವ ಅಂಶಗಳಿದ್ದು, ದೇಹದಲ್ಲಿನ ಇನ್ಸುಲಿನ್ ಮಟ್ಟ ಹೆಚ್ಚಿಸಲು ನೆರವಾಗುವುದು ಮತ್ತು ರಕ್ತಕ್ಕೆ ಬಿಡುಗಡೆ ಯಾಗುವ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. 

ನೇರಳೆ ಹಣ್ಣು ರಕ್ತಹೀನತೆಯನ್ನು ನಿವಾರಿಸುತ್ತದೆ. ಇದರಲ್ಲಿ ಕಬ್ಬಿನಾಂಶ ಖುತುಚಕ್ರದ ವೇಳೆ ಮಹಿಳೆಯರಲ್ಲಿ ರಕ್ತಸ್ರಾವದಿಂದ ಆಗಿರುವ ರಕ್ತದ ಹಾನಿಯನ್ನು ಸರಿದೂಗಿಸುತ್ತದೆ.  ರಕ್ತಹೀನತೆಯಿಂದ ಬಳಲುತ್ತಿರುವ ಜನರು ನೇರಳೆಯನ್ನು ಆಹಾರ ಕ್ರಮದಲ್ಲಿ ಸೇರಿಸಬೇಕು. ಇದರಲ್ಲಿ ಇರುವಂತಹ ಕಬ್ಬಿನಾಂಶ ರಕ್ತವನ್ನು ಶುದ್ಧೀಕರಿಸುತ್ತದೆ. 

ನೇರಳೆ ಹಣ್ಣು ರಕ್ತದೋತ್ತಡವನ್ನು ನಿವಾರಿಸುತ್ತದೆ. ನಿಯಮಿತವಾಗಿ ನೇರಳೆ ಹಣ್ಣು ಸೇವನೆ ಮಾಡೋದ್ರಿಂದ ರಕ್ತದೋತ್ತಡವನ್ನು ನಿವಾರಿಸಬಹುದು. 

ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ನಿವಾರಿಸುತ್ತದೆ. ನೇರಳೆ ಹಣ್ಣು ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ನಿವಾರಿಸುತ್ತದೆ. ನೇರಳೆ ಹಣ್ಣು ಅಲ್ಸರ್ ಸಮಸ್ಯೆಯನ್ನು ನಿವಾರಿಸುತ್ತದೆ. ಜನನೇಂದ್ರಿಯದ ಸೋಂಕಿಗೂ ಇದು ಪರಿಣಾಮಕಾರಿ. ಸೋಂಕಿನಿಂದಾಗಿ ಆಗುವಂತಹ ಭೇದಿಯನ್ನು ನಿವಾರಿಸುತ್ತದೆ. 

ನೇರಳೆ ಹಣ್ಣಿನಲ್ಲಿ ಇರುವಂತಹ ಆ್ಯಂಟಿ ಆ್ಯಕ್ಸಿಡೆಂಟ್ ದೇಹದ ಇರುವಂತಹ ಫ್ರೀ ಯಾರ್ಡಿಕಲ್ ನ್ನು ಹೊರಗೆ ಹಾಕುತ್ತದೆ. ದೇಹವನ್ನು ನೈಸರ್ಗಿಕ ವಿಧಾನದಿಂದ ನಿರ್ಷಿಷಗೊಳಿಸುವುದು. ಿದು ನಿಮ್ಮ ದೇಹದಲ್ಲಿ ಪ್ರತಿರೋಧ ವ್ಯವಸ್ಥೆಗೆ ನೆರವಾಗುತ್ತದೆ. ಈ ಹಣ್ಣಿನಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್ ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ.

ನೇರಳೆಯ ಎಲೆಗಳನ್ನು ಅರೆದು ಸುಟ್ಟ ಗಾಯಗಳಿಗೆ ಹಚ್ಚುತ್ತಾ ಬಂದರೆ ಗಾಯಗಳು ಗುಣವಾಗುತ್ತವೆ. ರಕ್ತಹೀನತೆ ಕಾಯಿಲೆಗೆ ಒಳ್ಳೆಯ ಔಷಧಿ ನೇರಳೆ ಹಣ್ಣು. 

ನೇರಳೆ ಎಲೆ, ತೊಗಟೆ ಹಾಗೂ ಬ್ಯಾಕ್ಟೇರಿಯಾ ಗಳಿಂದ ಹರಡುವ ಸೋಂಕುಗಳ ನಿವಾರಣೆಗೆ ಬಳಸಲಾಗುತ್ತದೆ. 

Jamun fruit, health benefits ನೇರಳೆ ಹಣ್ಣು, ಉಪಯೋಗ,

ನೇರಳೆ ಹಣ್ಣು ಸೇವಿಸಿದರೆ ಅತಿಸಾರ ಕಾಯಿಲೆ ಕಡಿಮೆಯಾಗುತ್ತದೆ ಹಾಗೂ ನೇರಳೆ ಹಣ್ಣನ್ನು ತಿನ್ನುವುದರಿಂದ ಜೀರ್ಣ ಸಂಬಂಧಿತ ಸಮ್ಸೆಯಗಳು ನಿವಾರಣೆಯಾಗುತ್ತವೆ. ಈ ಹಣ್ಣಿನ  ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. 

ನೇರೆಳೆ ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿರ್ಮೂಲನೆ ಆಗುತ್ತದೆ. ಹಲ್ಲುಗಳು ಗಟ್ಟಿಗೊಳ್ಳುತ್ತದೆ. 

ಬೀಜಗಳು ಸರಿಯಾಗಿ ಒಣಗಿದ ನಂತರ ಇದರ ಹೊರಗಿನ ಭಾಗದ ಸಿಪ್ಪೆ ತೆಗೆಯಿರಿ. ಹಸಿರು ಬಣ್ಣವಿರುವ ಭಾಗವನ್ನು ಸಂಗ್ರಹಿಸಿ, ಮತ್ತು ಇದು ಸುಲಭವಾಗಿ ತುಂಡಾಗುತ್ತದೆ. 

ಹಸಿರು ಬೀಜಗಳನ್ನು ತುಂಡು  ಮಾಡಿಕೊಳ್ಳಿ ಮತ್ತು ಬಿಸಿಲಿನಲ್ಲಿ ಇನ್ನು ಕೆಲವು ದಿನಗಳ ಕಾಲ ಒಣಗಲು ಹಾಕಿ. 

Jamun fruit, health benefits ನೇರಳೆ ಹಣ್ಣು, ಉಪಯೋಗ,

ಬೀಜಗಳು ಸರಿಯಾಗಿ ಒಣಗಿದ ಬಳಿಕ ಅದನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ, ಪಡೆದ ಹುಡಿಯನ್ನು ಶುದ್ಧೀಕರಿಸಿ, ನಯವಾದ ಹುಡಿ ಬರುವ ತನಕ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. 

ಹೇಗೆ ಸೇವನೆ ಮಾಡಬೇಕು..

ಖಾಲಿ ಹೊಟ್ಟೆಯಲ್ಲಿ ನೇರಳೆ ಬೀಜದ ಹುಡಿಯ ಸೇವನೆ ಮಾಡಬೇಕು. ೧ ಲೋಟ ನೀರಿಗೆ ಒಂದು ಚಮಚ ನೇರಳೆ ಬೀಜದ ಹುಡಿ ಹಾಕಿಕೊಂಡು ಸರಿಯಾಗಿ, ಕಲಸಿ ಮತ್ತು ಇದನ್ನು ನಿಯಮಿತವಾಗಿ ಸೇವಿಸಿ. ನಿಮಗೆ ಆರೋಗ್ಯದಲ್ಲಿ ಅದ್ಭುತ ಪರಿಣಾಮ ಕಂಡು ಬರುತ್ತದೆ. 

ಮುಖದ ಸೌಂದರ್ಯ ಹೆಚ್ಚಿಸುತ್ತೆ ನೇರಳೆ ಹಣ್ಣು

ನೇರಳೆ ಹಣ್ಣು ತಿನ್ನಲು ಬಲುರುಚಿ. ಅಷ್ಟೇಅಲ್ಲದೇಇದನ್ನುತಿನ್ನುವುದರಿಂದಆರೋಗ್ಯಕ್ಕೆತುಂಬಾಒಳ್ಳೆಯದುಮಾತ್ರವಲ್ಲಇದರಿಂದಚರ್ಮದಸಣ್ಣಪುಟ್ಟಸಮಸ್ಯೆಗಳನ್ನುಬಗೆಹರಿಸಿಕೊಳ್ಳಬಹುದು.

ಮೊಡವೆಗಳ ಸಮಸ್ಯೆಗೆ ರಾಮಬಾಣವಿದ್ದಂತೆ. ಒಣಗಿಸಿದ ನೇರಳೆ ಬೀಜವನ್ನು ರುಬ್ಬಿ ಪುಡಿ ಮಾಡಿಕೊಂಡು ಹಸುವಿನ ಹಾಲನ್ನು ಹಾಕಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನ ಮೊಡವೆಗಳಿಗೆ ಹಚ್ಚಿ ಬೆಳಗ್ಗೆ ತೊಳೆಯಬೇಕು. ಹೀಗೆ ಪ್ರತಿದಿನ ಮಾಡಿದರೆ ಮೊಡವೆಗಳು ಮಾಯವಾಗುತ್ತದೆ.

Jamun fruit, health benefits ನೇರಳೆ ಹಣ್ಣು, ಉಪಯೋಗ,

ತ್ವಚೆಯ ಹೊಳಪಿಗೆ ನೇರಳೆ ಹಣ್ಣಿನ ಬೀಜದ ಪುಡಿ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಗೆ, ಎರಡು ಹನಿ ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ನ್ನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಂಡು 15 ನಿಮಿಷಗಳ ನಂತರ ತೊಳೆಯಬೇಕು. ಈ ರೀತಿ ಮೂರ್ನಾಲ್ಕು ದಿನಗಳಿಗೆ ಒಮ್ಮೆ ಮಾಡಿದರೆ ಒಳ್ಳೆಯ ಫಲಿತಾಂಶ ನಿಮ್ಮದಾಗುತ್ತದೆ.

ಮುಖದ ಮೇಲೆ ಕಪ್ಪು ಕಲೆ ನಿವಾರಣೆಗೆ ನೇರಳೆ ಬೀಜದ ಪುಡಿಗೆ ಕಡಲೇ ಹಿಟ್ಟು, ಕೆಲ ಬಾದಾಮಿ ಎಣ್ಣೆಯ ಹನಿಗಳು ಮತ್ತು ರೋಸ್ ವಾಟರ್ ನ್ನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, ಒಣಗಲು ಬಿಡಿ. ಯಾಗಲು ಸಂಪೂರ್ಣ ಒಣಗಿದ ನಂತರ ತಣ್ಣೀರಿನಿಂದ ತೊಳೆಯಬೇಕು. ಈ ರೀತಿ ತಿಂಗಳಿಗೆ ಒಮ್ಮೆ ಮಾಡಿದರೂ ನೀವು ಒಳ್ಳೆ ಫಲಿತಾಂಶ ಪಡೆಯುತ್ತೀರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ