ಸಕ್ಕರೆ ಚಹಾ.. ಬೆಲ್ಲದ ಚಹಾ! ಯಾವುದು ಬೆಸ್ಟ್?

  • by

ಬೆಲ್ಲಾ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು. ನಾವು ಶತಮಾನಗಳಿಂದ ನಮ್ಮ ಅಜ್ಜಿಯರಿಂದ ಬೆಲ್ಲದ ಮಹತ್ವವನ್ನು ಕೇಳುತ್ತಿದ್ದೇವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಕ್ಕರೆಯಿಂದ ತಯಾರಿಸಿದ ಚಹಾ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಆದ್ರೆ ಸಕ್ಕರೆ ಅಥವಾ ಬೆಲ್ಲ ಇವರೆಡೂ ಸಹ ಕಬ್ಬಿನಿಂದ ತಯಾರಿಸಲ್ಪಡುತ್ತದೆ. ಬೆಲ್ಲಾ ಆರೋಗ್ಯಕ್ಕೆ ಒಳ್ಳೆಯದು ಹಲವು ಜನರು ನಂಬುವರಿದ್ದಾರೆ. ಹೆಚ್ಚು ಕ್ಯಾಲೋರಿಗಳನ್ನು ಬೆಲ್ಲಾ ಹೊಂದಿರುತ್ತವೆ ಎಂದು ಯೋಚಿಸಿದರೆ ಅದು ತಪ್ಪು.

Jaggery tea Healthier,  
ಸಕ್ಕರೆ ಚಹಾ, ಬೆಲ್ಲದ ಚಹಾ, ಆರೋಗ್ಯ ಪ್ರಯೋಜನಗಳು

ಸಕ್ಕರೆ ಹಾಗೂ ಬೆಲ್ಲಾ ಎರಡನ್ನೂ ಕಬ್ಬಿನಿಂದ ತಯಾರಿಸಿದ್ರು, ಸಕ್ಕರೆಗೆ ಬಿಳಿ ಬಣ್ಣ ಪಡೆಯಲು ಸಾಕಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬೆಲ್ಲ ತಯಾರಿಸಲು ಇದನ್ನು ಬಳಸದಿದ್ದರೂ, ಖನಿಜವು ಹೇರಳವಾಗಿ ಕಂಡು ಬರುತ್ತದೆ. ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗಿದೆ.

ಬೆಲ್ಲ ನಮ್ಮ ದೇಹವನ್ನು ವಿಷಕಾರಿ ವಸ್ತುಗಳಿಂದ ರಕ್ಷಿಸುತ್ತದೆ. ಶೀತ ಮತ್ತು ಕೆಮ್ಮಿನಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮ ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಸರಿಯಾಗಿ ಇಡುತ್ತದೆ. ಇದು ರಕ್ತದೋತ್ತಡಕ್ಕೂ ಪ್ರಯೋಜನಕಾರಿ ಎಂದು ಹೇಳಬಹುದು. ಇವೆಲ್ಲವೂ ಸಕ್ಕರೆಯಲಿಲ್ಲ.

ದೇಹದಲ್ಲಿ ನೀರನ್ನು ಹಿಡಿದಿಡುವಲ್ಲಿ ಬೆಲ್ಲ ನೆರವಾಗುತ್ತದೆ. ಜ್ವರ ಬಂದಾಗ ಈ ರೀತಿಯ ಚಹಾ ಕುಡಿಯುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಒಂದು ಕಪ್ ಚಹಾಕ್ಕೆ ಬೆಲ್ಲ ಸೇವಿಸುವುದರಿಂದ ನಮ್ಮ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತವೆ. ಹಾಗೂ ಬೆಲ್ಲ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. 

Jaggery tea Healthier,  
ಸಕ್ಕರೆ ಚಹಾ, ಬೆಲ್ಲದ ಚಹಾ, ಆರೋಗ್ಯ ಪ್ರಯೋಜನಗಳು

ರಕ್ತದ ಕೊರತೆ ಇದ್ದರೆ ಬೆಲ್ಲ ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಬೆಲ್ಲದಲ್ಲಿ ಸಾಕಷ್ಟು ಕಬ್ಬಿಣಾಂಶ ಇರುವುದರಿಂದ ಇದು ದೇಹಕ್ಕೆ ಆಮ್ಲಜನಕ ತಲುಪಿಸಲು ನೆರವಾಗುತ್ತದೆ.

ಬೆಲ್ಲ ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳು.
1. ಮಲಬದ್ಧತೆ ನಿವಾರಿಸುತ್ತದೆ
2. ಪಿತ್ತಜನಕಾಂಗವನ್ನು ಡಿಟಾಕ್ಸ್ ಮಾಡುತ್ತದೆ
3. ಜ್ವರ ದಂತಹ ರೋಗಲಕ್ಷಣಗಳನ್ನು ನಿವಾರಿಸುತ್ತದೆ.
4. ರಕ್ತ ಶುದ್ಧೀಕರಿಸುತ್ತದೆ
5. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
6. ಮುಟ್ಟಿನ ಕೊಳೆಯನ್ನು ನಿವಾರಿಸುತ್ತದೆ.
7.ರಕ್ತಹೀನತೆ ತಡೆಗಟ್ಟುತ್ತದೆ.
8. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
9 ಹೊಟ್ಟೆಯನ್ನು ತಂಪಾಗಿರಿಸುತ್ತದೆ.
10. ರಕ್ತದೋತ್ತಡ ನಿಯಂತ್ರಿಸುತ್ತದೆ.
11. ಉಸಿರಾಟದ ತೊಂದರೆಯನ್ನು ತಡೆಯುತ್ತದೆ.
12. ಕೀಲು ನೋವು ನಿವಾರಿಸುತ್ತದೆ.
13. ತೂಕ ಇಳಿಸಿಕೊಳ್ಳಲು ಸಹಾಯಕ

Jaggery tea Healthier,  
ಸಕ್ಕರೆ ಚಹಾ, ಬೆಲ್ಲದ ಚಹಾ, ಆರೋಗ್ಯ ಪ್ರಯೋಜನಗಳು

ಬೆಲ್ಲ ಚಹಾವನ್ನು ಹೇಗೆ ತಯಾರಿಸುವುದು?
ಬೆಲ್ಲಾ ಚಹಾ ತಯಾರಿಸುವುದು ತುಂಬಾ ಸುಲಭ. ಚಹಾ ತಯಾರಿಸಲು ಮೊದಲು ನೀರನ್ನು ಕುದಿಸಬೇಕು.
ನೀರು ಕುದಿಯುವಾಗ ಶುಂಠಿ, ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ. ಬೆಲ್ಲ ಸಂಪೂರ್ಣವಾಗಿ ಕರಗಿದಾಗ ಅದಕ್ಕೆ ಚಹಾ ಎಲೆಗಳನ್ನು ಸೇರಿಸಿ. ಈಗ ಈ ಮಿಶ್ರಣವನ್ನು ಕುದಿಸಿ, ನಂತರ ಅದಕ್ಕೆ ಹಾಲು ಸೇರಿಸಬೇಕು. ಇಂದಿನಿಂದ ಚೆನ್ನಾಗಿ ಕುದಿಯಲು ೫ ನಿಮಿಷಗಳ ಕಾಲ ಕುದಿಸಬೇಕು. ನಂತರ ಸ್ಟೌವ್ ಆಫ್ ಮಾಡಿದರೆ, ಬಿಸಿಯಾದ ಬೆಲ್ಲದ ಟೀ ಸವಿಯಲು ಸಿದ್ಧ.

ಎಷ್ಟು ಬೆಲ್ಲ ಸೇವಿಸಬೇಕು..?
ಬೆಲ್ಲದ ಚಹಾ ಮೇಗ್ನೇಶಿಯಂ ಗುಣಲಕ್ಷಣಗಳು ಕರುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ. ಪ್ರತಿ 10 ಗ್ರಾಂ ಬೆಲ್ಲದೊಂದಿಗೆ , ನೀವು 12 ಮಿ.ಗ್ರಾಂ ಮೆಗ್ನೇಶಿಯಂ ಪಡೆಯಬಹುದು. ಇದರಲ್ಲಿ ಖನಿಜ 4 ಪ್ರತಿಶತದಷ್ಟಿದೆ. ಆರೋಗ್ಯವಂತ ವ್ಯಕ್ತಿಯು ದಿನದಲ್ಲಿ 25 ಗ್ರಾಂ ಗಿಂತ ಹೆಚ್ಚು ಬೆಲ್ಲವನ್ನು ಸೇವಿಸಬಾರದು ಎಂದು ತಜ್ಞರು ಒಪ್ಪುತ್ತಾರೆ. ಪ್ರಮಾಣವು 10 ರಿಂದ 15 ಗ್ರಾಂ ನಡುವೆ ಇದ್ದರೆ ಉತ್ತಮ. ಆಯುರ್ವೇದದ ಪ್ರಕಾರ, ವ್ಯಕ್ತಿಯು ದಿನದಲ್ಲಿ 25 ಗ್ರಾಂ ಗಿಂತ ಹೆಚ್ಚು ಬೆಲ್ಲ ಸೇವಿಸಬಾರದು. ಇದರ ಪ್ರಮಾಣ 10 ರಿಂದ 15 ಗ್ರಾಂ ನಡುವೆ ಇದ್ದರೆ ಉತ್ತಮ. ಆದ್ರೆ ಮಧುಮೇಹಿಗಳು 5 ಗ್ರಾಂ ಬೆಲ್ಲವನ್ನು ಸೇವಿಸಬಹುದು. ಆದಾಗ್ಯೂ ಬೆಲ್ಲ ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಮಿಶ್ರಣ ಮಾಡಿರುವ ಬೆಲ್ಲ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದರ ಗುಣಮಟ್ಟವನ್ನು ಪರಿಶೀಲಿಸಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ