ಹಲಸಿನ ಹಣ್ಣು ಏಕೆ ಒಳ್ಳೆಯದು?

  • by

ಹಲಸಿನ ಹಣ್ಣು ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯುವ ಹಣ್ಣು , ಹಳದಿ ಹಾಗೂ ಹಸಿರು ಬಣ್ಣದಲ್ಲಿರುವ ಈ ಹಣ್ಣು, ಅತಿ ದೊಡ್ಡ ಗಾತ್ರದ ಹಣ್ಣುಗಳಲ್ಲಿ ಇದು ಒಂದು. ಸುಮಾರು 80 ಪೌಂಡ್ (35 ಕೆ.ಜಿ ) ತೂಕವನ್ನು ಇದು ಹೊಂದಿರುತ್ತದೆ. ಜಾಕ್ ಫ್ರೂಟ್ ಹಣ್ಣಿನ ಪರಿಮಳ ಸುವಾಸನೆ ಭರಿತವಾದದ್ದು, ಸೇಬು, ಅನಾನಸ್, ಮಾವಿನ ಹಣ್ಣು, ಮತ್ತು ಬಾಳೆಹಣ್ಣುಗಳಿಗಿಂತಲೂ ಇದು, ತಿನ್ನಲು ಭಿನ್ನವಾಗಿದೆ. ಹಲಸಿನ ಹಣ್ಣಿನಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹಲಸಿನ ಪಾಯಸ , ಹಲಸಿನ ಚಿಪ್ಸ್, ಹಲಸಿನ ಬನ್ನು, ಹಲಸಿನ ಜ್ಯೂಸ್ , ಹಲಸಿನ ಜಾಮ್ , ಹೀಗೆ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. 

\

Jackfruit good,  health benefits, 
ಹಲಸಿನ ಹಣ್ಣು, ಆರೋಗ್ಯ ಲಾಭ

ಹಲಸಿನ ಹಣ್ಣುನ್ನು ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಕೇರಳ, ಕರ್ನಾಟಕ, ಮತ್ತು ತಮಿಳುನಾಡು, ಈ ಭಾಗಗಳಲ್ಲಿ ಹಲಸನ್ನು ಹೆಚ್ಚಾಗಿ ಬಳಸುತ್ತಾರೆ. ಹಾಗೂ ಸೇವಿಸುತ್ತಾರೆ. ದೇಶದ ಇತರ ರಾಜ್ಯಗಳಿಗೂ ಕಳಿಸಲಾಗುತ್ತದೆ. ಇದನ್ನು ಹೊರ ದೇಶಕ್ಕೂ ರಫ್ತು ಮಾಡಲಾಗುತ್ತದೆ. ಹಲಸಿನ ಹಣ್ಣಿನಲ್ಲಿ ಹೆಚ್ಚು ಪೋಷಕಾಂಶ ಹಾಗೂ ಖನಿಜಗಳು ಹೆಚ್ಚಾಗಿರುವುದರಿಂದ ದೇಹಕ್ಕೆ ಇದು ಹೆಚ್ಚು ಉಪಯುಕ್ತ. 

ಹಲಸಿನ ಹಣ್ಣು ತೂಕ ಇಳಿಸಿಕೊಳ್ಳುವುದಕ್ಕೂ ಹೆಚ್ಚು ಪ್ರಯೋಜನಕಾರಿಯಾಗಿದೆ.  ಕಡಿಮೆ ಕೊಬ್ಬಿನ ಅಂಶ ಇರುವುದರಿಂದ ತೂಕ ಹೆಚ್ಚಾಗುವುದಿಲ್ಲ. ಇದ್ರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ನಮ್ಮ ದೇಹದಲ್ಲಿ ಬೇಡರಿಯದ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ದೇಹವನ್ನು ಉತ್ತಮ ಆಕಾರಕ್ಕೆ ತಂದು ಹೃದಯ ಸಂಬಂಧಿ ಸಮಸ್ಯೆ ದೂರ ಮಾಡುತ್ತದೆ. 

ಸೋಡಿಯಂ ಅಂಶ ಇದರಲ್ಲಿ ಕಡಿಮೆ ಇದ್ದು, ಬಿಪಿ , ಹೃದಯಾಘಾತ ದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಲವರು ಡಯಟ್ ನ್ನು ಯಾವುದೇ ಚಿಂತೆ ಇಲ್ಲದೇ ಈ ಹಣ್ಣನ್ನು ಸೇವಿಸಬಹುದು.  ಅಲ್ಲದೇ ಈ ಹಣ್ಣಿನಲ್ಲಿ  ಅಧಿಕ ಫೈಬರ್ ಅಂಶ ಇದ್ದು, ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ನಮಗೆ ಅದರಿಂದ ಶಕ್ತಿ ಬರಬೇಕಾದರೆ,. ನಮ್ಮ ದೇಹದ ಡೈಜಿಸ್ಟಿವ್ ಸಿಸ್ಟಮ್ ಸರಿಯಾಗಿ ಕೆಲಸ ಮಾಡಬೇಕು. ಆದ್ರೆ ಹಲಸಿನ ಹಣ್ಣು ತಿನ್ನುವುದರಿಂದ ಈ ಸಮಸ್ಯೆ ತಾನಾಗಿಯೇ ಬಗೆಹರಿಯುತ್ತದೆ. 

ಹಲಸಿನ ಹಣ್ಣಿನಲ್ಲಿ ಪೋಷಕಾಂಶಗಳು ಹಾಗೂ ಖನಿಜಗಳು ಹೆಚ್ಚಾಗಿರುವುದರಿಂದ ಇದು ಪ್ರೋಟೀನ್ , ಕಾರ್ಬೋಹೈಡ್ರೇಟ್ , ವಿಟಮಿನ್ ಗಳು ಬೇಕಾಗುತ್ತದೆ. ಇವೆಲ್ಲಾ ಒಟ್ಟಿಗೆ ಸಿಗಬೇಕಂದರೆ ಹಲಸಿನ ಹಣ್ಣನ್ನು ಸೇವಿಸಿ. ಇದು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನಿವಾರಿಸುತ್ತದೆ. 

ನಮ್ಮ ಆರೋಗ್ಯಕ್ಕೆ ಲಾಭದಾಯಕವಾದ ಹಲವಾರು ಪೋಷಕವಸ್ತುಗಳನ್ನು ಹಲಸು ಹೊಂದಿದೆ. ಇದರಲ್ಲಿ ವಿಟಮಿನ್ ಎ. ವಿಟಮಿನ್ ಸಿ. ಪೊಟೊಷಿಯಂ ಕ್ಯಾಲ್ಸಿಯಂ, ಐರ್‍ನ ಅಂಶಗಳಿವೆ. ಅಲ್ಲದೆ, ಇದರಲ್ಲಿ ಪೈಬರ್ ಅಂಶ ಇದೆ. 

1.ಹಲಸಿನ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚುತ್ತದೆ.

2. ಒಂದು ಕಪ್ ಹಲಸಿನಹಣ್ಣು ಈ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ.

3. ಹಲಸಿನ ಹಣ್ಣಿನ ಬೀಜಗಳನ್ನು ಹುರಿದು ಸೇವಿಸಿದರೆ ವೀರ್ಯವೃದ್ದಿಯಾಗುತ್ತದೆ.

4. ನೂರು ಗ್ರಾಂ ಹಲಸಿನ ಹಣ್ಣಿನಲ್ಲಿ 303 ಮಿ. ಗ್ರಾಂ ಪೊಟ್ಯಾಷಿಯಂ ಇರುತ್ತದೆ. ಪೊಟ್ಯಾಷಿಯಂ ಸೇವಿಸಿದರೆ ಅದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.

5. ಹಲಸಿನಲ್ಲಿ ಸ್ಯಾಪೋನಿನ್ಸ್, ಲಿಗ್ನಾನ್ಸ್ ಮತ್ತು ಐಸೋಫ್ಲೇವೋನ್ಸ್ ಎಂಬ ಪೋಷಕಾಂಶಗಳಿವೆ. ಇವು ದೇಹಕ್ಕೆ ಆಗಮಿಸಬಹುದಾದ ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಆವರಿಸದಂತೆ ತಡೆಯುತ್ತದೆ.

6. ಹಲಸಿನ ಹಣ್ಣಿನ ತೊಳೆಗಳನ್ನು ಅರೆದು ಹಾಲು ಸಕ್ಕರೆ ಬೆರಸಿ ಕುದಿಸಿ ಸೇವಿಸಿದರೆ ದೇಹಕ್ಕೆ ಪುಷ್ಟಿಕರವಾಗಿರುತ್ತದೆ.

7 ಹೆಚ್ಚು ದಾಹವಾಗುವ ಸಮಸ್ಯೆ ಇದ್ದರೆ ಹಲಸಿನ ಹಣ್ಣನ್ನು ಸಕ್ಕರೆ ಜೊತೆ ಸೇವಿಸಿದರೆ ದಾಹ ನಿವಾರಣೆಯಾಗುತ್ತದೆ.

8. ಹಲಸಿನ ಮರದ ಚಕ್ಕೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ಮತ್ತು ಬಾಯಲ್ಲಿ ಹುಳವಾಗಿದ್ದರೆ ಹುಳಗಳು ಶಮನವಾಗುತ್ತವೆ.

9 ಹಲಸಿನ ಹಣ್ಣು ವಿಟಮಿನ್ ಎ ಯಿಂದ ಸಮೃದ್ಧವಾಗಿದ್ದು, ಆರೋಗ್ಯಕರ ಕಣ್ಣು ಮತ್ತು ತ್ವಚೆಗಾಗಿ ಒಂದು ಶಕ್ತಿಯುತ ನ್ಯೂಟ್ರಿಯೆಂಟ್ ಆಗಿದೆ. 

10 ಹಲಸಿನ ಹಣ್ಣು ಇರುಳುಗುರುಡುತನ ಮತ್ತು ಅಕ್ಷಿಪಟಲದ ಅವನತಿ ಸಮಸ್ಯೆಯನ್ನು ದೂರಮಾಡುತ್ತದೆ.

11 ಹಲಸಿನ ತೊಳೆಗಳಿಗೆ ಬಾಳೆಹಣ್ಣಿನ ತಿರುಳು, ಹಸಿ ಕೊಬ್ಬರಿ ತುರಿ, ಜೇನು ತುಪ್ಪ, ಏಲಕ್ಕಿ ಸೇರಿಸಿ ಮಿಶ್ರಣ ಮಾಡಿ ಸೇವಿಸುವುದರಿಂದ ದುರ್ಬಲ ನರಗಳಿಗೆ ಬಲ ಬರುತ್ತದೆ.

12 ಹಲಸಿನ ಬೇರನ್ನು ಕುದಿಸಿ ಆ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ.

13 ಹಲಸಿನ ಹಣ್ಣಿನ ಪೋಷಕಾಂಶಗಳು ಹೆರಿಗೆಯ ಬಳಿಕ ಮಗುವಿಗೆ ಅಗತ್ಯವಿರುವ ತಾಯಿಹಾಲನ್ನು ಉತ್ಪಾದಿಸಲೂ ನೆರವಾಗುತ್ತವೆ.

14 ಹಲಸಿನ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್ ಮತ್ತು ಫ್ರುಕ್ಟೋಸ್ ನಿಮ್ಮ ಶಕ್ರಿಯನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.

15 ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ.

16 ಮುಖಕ್ಕೆ ಲಕ್ವ ಹೊಡೆದು ನೋವಿದ್ದರೆ ಹಲಸಿನ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಮುಖದ ಮೇಲೆ ಇಟ್ಟು ಕಟ್ಟಿದರೆ ನೋವು ಕಡಿಮೆಯಾಗುತ್ತದೆ.

17 ಹಲಸಿನ ಹಣ್ಣು ಮತ್ತು ಬೆಲ್ಲವನ್ನು ಜೊತೆಯಲ್ಲಿ ಸೇವಿಸಿದರೆ ಪಿತ್ತಶಮನವಾಗುತ್ತದೆ.

18 ಕಣ್ಣಿನ ಸುತ್ತ ನೆರಿಗೆಗಳ ನಿವಾರಣೆಗೆ. ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ. ಮೊಡವೆಗಳ ನಿವಾರಣೆಗು ಸಹ ಹಲಸು ಅತ್ಯುತ್ತಮ ಔಷಧವಾಗಿದೆ.

19 ಹಲಸಿನ ಹಣ್ಣಿನಲ್ಲಿರುವ ಕಬ್ಬಿಣದ ಅಂಶ ಅನೀಮಿಯಾವನ್ನು ದೂರ ಮಾಡಿ ದೇಹದ ಸೂಕ್ತ ರಕ್ತ ಸಂಚಲನೆಗೆ ಫಲಪ್ರದವಾಗಿದೆ.

20 ಹಥದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಕಾಯಿಲೆಯನ್ನು ಹಲಸಿನ ಹಣ್ಣು ಪರಿಹರಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ