ಹಲಸಿನ ಹಣ್ಣು ಸೇವಿಸಿ, ಅನಾರೋಗ್ಯದಿಂದ ದೂರವಿರಿ..!

  • by

ಹಲಸಿನ ಹಣ್ಣು ವಿಶ್ವದ ಅತಿದೊಡ್ಡ ಹಣ್ಣುಗಳಲ್ಲಿ ಒಂದು. ವಿಶೇಷವಾಗಿ ಭಾರತದಲ್ಲಿ ತರಕಾರಿ, ಉಪ್ಪಿನಕಾಯಿ ಮತ್ತು ಇತರ ಹಲವು ಟೇಸ್ಟಿ ಭಕ್ಷ್ಯಗಳನ್ನು ಈ ಹಣ್ಣಿನಿಂದ ತಯಾರಿಸಲಾಗಿದೆ. ಈ ಹಣ್ಣು ಕೇವಲ ರುಚಿ ಅಷ್ಟೇ ಅಲಲ್. ಇದು ತೂಕ ನಷ್ಟಕ್ಕೂ ಹೆಚ್ಚು ಸಹಾಯ ಕಾರಿ, ಜಾಕ್ ಫ್ರೂಟ್ ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.


Jackfruit , health benefits, ಹಲಸಿನ ಹಣ್ಣು, ಆರೋಗ್ಯ ಪ್ರಯೋಜನಗಳು

ಹಲಸಿನ ಹಣ್ಣು (ಜಾಕ್ ಫ್ರೂಟ್) ಎಂದರೇನು..?

ಹಲಸಿನ ಹಣ್ಣು ಇದು ಮುಖ್ಯವಾಗಿ ಉಷ್ಣವಲಯದ ಹಣ್ಣು ಎಂದು ಹೇಳಲಾಗಿದೆ.ಹಣ್ಣಿನ ವೈಜ್ಞಾನಿಕ ಹೆಸರು ಆರ್ಟೋಕಾರ್ಪಸ್ ಹೆಟೆರೊಫಿಲಸ್, ಜಾಕ್ ಫ್ರೂಟ್ ಹಣ್ಣಿನ ಮೇಲ್ಭಾಗ ದೊಡ್ಡಗಾತ್ರದಲ್ಲಿದ್ದರೂ ಹಣ್ಣು ಮಾತ್ರ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಈ ಹಣ್ಣು ಒಳಗಡೆ ಹಳದಿ ಬಣ್ಣ ಹೊಂದಿರುತ್ತದೆ.

ಆರೋಗ್ಯ ಪ್ರಯೋಜನಗಳು…!

ಹೃದಯರಕ್ತನಾಳದ ಆರೋಗ್ಯ..!

ಜಾಕ್ ಫ್ರೂಟ್ ಹಣ್ಣು ಹೃದಯ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಇದು ಉರಿಯೂತವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಮಾರಕ ಕಾಯಿಲೆಗಳನ್ನು ನಿಯಂತ್ರಿಸು್ತದೆ. ವವಿಟಮಿನ್ ಬಿ ಹೆಚ್ಚಾಗಿರುವುದರಿಂದ ಹೃದಯದ ಅಪಾಯವನ್ನು ಕಡಿಮೆ ಮಾಡುತ್ತದೆ.. ಈ ಹಣ್ಣಿನಲ್ಲಿ ಕಬ್ಬಿಣ ಅಂಶ ಹೃದಯವನ್ನು ಬಲವಾಗಿರಿಸುತ್ತದೆ.

ಫೈಬರ್ ಉತ್ತಮ ಮೂಲ!

ಜಾಕ್ ಫ್ರೂಟ್ ಹಣ್ಣು ಜೀರ್ಣಕಾರಿ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರುಳಿನ ಕೋಶಗಳನ್ನು ಆರೋಗ್ಯವಾಗಿಡಲು ಫೈಬರ್ ಕಾರ್ಯನಿರ್ವಹಿಸುತ್ತದೆ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಫೈಬರ್ ಭರಿತ ಆಹಾರಗಳು ಮಲಬದ್ಧತೆ, ಅತಿಸಾರ, ಮತ್ತು ಮುಂತಾದ ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸುತ್ತದೆ.

ತೂಕ ಇಳಿಕೆಗೆ ಸಹಕಾರಿ..

ಬೊಜ್ಜು ಅತಿ ಹೆಚ್ಚು ಜನರಲ್ಲಿ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಹೆಚ್ಚು ಅಪಾಯ ತಂದೊಡ್ಡಬಲ್ಲದ್ದು. ಸ್ಥೂಲಕಾಯತೆ ಅನೇಕ ಸಂದರ್ಭದಲ್ಲಿ ಆರೋಗ್ಯಕ್ಕೆ ಹಾನಿಕಾರಕ, ಮಧುಮೇಹ ಮತ್ತು ಕ್ಯಾನ್ಸರ್ ರೋಗಗಳಿಗೆ ಕಾರಣವಾಗಬಹುದು. ಜಾಕ್ ಫ್ರೂಟ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೂಳೆ ಆರೋಗ್ಯ !

ಮೂಳೆಗಳ ಆರೋಗ್ಯವನ್ನು ಕಾಪಾಡಲು ಹಲಸಿನ ಹಣ್ಣು ನೆರವಾಗುತ್ತದೆ. ಜಾಕ್ ಫ್ರೂಟ್ ನಲ್ಲಿ ಕ್ಯಾಲ್ಸಿಯಂ ಇದ್ದು, ಇದು ಮೂಳೆಯ ಶಕ್ತಿ ಮತ್ತು ಬೆಳವಣಿಗೆಗೆ ಅಗತ್ಯವಾದ ಅಂಶವಾಗಿದೆ. ಆರೋಗ್ಯಕರ ಮೂಳೆಗಳಿಗಾಗಿ ನಿಮ್ಮ ಡಯೆಟ್ ನಲ್ಲಿ ಹಲಸಿನ ಹಣ್ಣನ್ನು ಸೇರಿಸಿ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ..!

ಹಲಸಿನ ಹಣ್ಣು ದೇಹದ ಪ್ರತಿ ರಕ್ಷಣಾ ವ್ಯವಸ್ಥೆಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲಪಡಿಸಲು ಸಹಾಯ ಮಾಡುತ್ತದೆ. ರೋಗಗಳಿಂದ ದೂರವಿರಲು ನೆರವಾಗುತ್ತದೆ.

ಕಣ್ಣುಗಳಿಗೆ ಒಳ್ಳೆಯದು..

ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಎ ಸಮೃದ್ಧವಾಗಿದ್ದು, ಇದು ಪೋಷಕಾಂಶಗಳನ್ನು ಕಣ್ಣಿಗೆ ಒದಗಿಸುತ್ತದೆ. ಹೆಚ್ಚಾಗಿ ವಿಟಮಿನ್ ಸಿ ಆಹಾರಗಳನ್ನು ತೆಗೆದುಕೊಳ್ಳುವುದರಿಂದ ಕಣ್ಣಿನ ಸಮಸ್ಯೆಗಳನ್ನು ನಿವಾರಿಸಬಹುದು.

ರಕ್ತಹೀನತೆ ನಿವಾರಣೆ

ರಕ್ತಹೀನತೆ ನಿವಾರಿಸುವಲ್ಲಿ ಜಾಕ್ ಫ್ರೂಟ್ ನೆರವಾಗುತ್ತದೆ. ರಕ್ತಹೀನತೆ ರಕ್ತದಲ್ಲಿನ ಕೆಂಪು ಕೋಶಗಳ ಕೊರತೆಯಿಂದ ಉಂಟಾಗುತ್ತದೆ. ರಕ್ತಹೀನತೆ ತಡೆಗಟ್ಟಲು ಹಲಸಿನ ಹಣ್ಣನ್ನು ಸೇವಿಸಬಹುದು. ಏಕೆಂದರೆ ಕಬ್ಬಿಣದ ಉತ್ತಮ ಮೂಲವಾಗಿದೆ.
ಇದಲ್ಲದೇ ಈ ಹಣ್ಣಿನಲ್ಲಿ ಬಿ -6 ಕೂಡಾ ಅಧಿಕವಾಗಿದೆ. ಪ್ಯೋಟ್ಯಾಶಿಯಂ ಹಾಗೂ ಸೋಡಿಯಂ ಸಮೃದ್ದವಾಗಿದೆ. ರಕ್ತದೋತ್ತಡ ನಿವಾರಿಸುವಲ್ಲಿ ಸಹಕಾರಿಯಾಗಿದೆ.

Jackfruit , health benefits, ಹಲಸಿನ ಹಣ್ಣು, ಆರೋಗ್ಯ ಪ್ರಯೋಜನಗಳು

ಮಧುಮೇಹ ನಿಯಂತ್ರಣ

ಮಧುಮೇಹ ನಿಯಂತತ್ರಣದಲ್ಲಿಡಲು ಹಲಸಿನ ಹಣ್ಣನ್ನು ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಬಿ ಸಮೃದ್ಧವಾಗಿರುವುದರಿಂದ ಮಧುಮೇಹಿಗಳಿಗೆ ಇನ್ಸುಲಿನ್ ಅನ್ನು ಸುಧಾರಿಸುತ್ತದೆ.

ಥೈರಾಯ್ಡ್ ನಿವಾರಣೆ ಥೈರಾಯ್ಡ್ ನಿವಾರಣೆಯಲ್ಲಿ ಜಾಕ್ ಫ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಹೈಪೋಥೈರಾಯ್ಡ್ ರೋಗಿಗಳಿಗೆ ವಿಟಮಿನ್ ಸಿ ಅತ್ಯಧಿಕ ಉಪಯುಕ್ತ.

ಹಲಸಿನ ಹಣ್ಣು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಚರ್ಮಕ್ಕೆ ಈ ಹಣ್ಣು ಹೆಚ್ಚು ಪ್ರಯೋಜನಕಾರಿ ಎಂದು ಹೇಳಬಹುದು. ಇದು ಚರ್ಮದ ಹಾನಿ ಮಾಡುವ ರಾಡಿಕಲ್ ಗಳನ್ನು ತಡೆಗಟ್ಟುತ್ತದೆ. ಅದರ ವಿರುದ್ಧ ಹೋರಾಡಲು ನೆರವಾಗುತ್ತದೆ. ವಿಟಮಿನ್ ಸಿ ಹೆಚ್ಚಾಗಿರುವುದರಿಂಜ ಚರ್ಮಕ್ಕೆ ಪೋಷಕಾಂಶ ಒದಗಿಸುತ್ತದೆ. ಕೆಲವು ಅಧ್ಯಯಮ ಪ್ರಕಾರ, ವಿಟಮಿನ್ ಸಿ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಕಾರ್ಯ ನಿರ್ವಹಿಸುತ್ತದೆ.

ಅಲ್ಲದೇ ಚರ್ಮವನ್ನು ಹೈಡ್ರೇಟ್ ಮಾಡಲು ಈ ಹಣ್ಣು ನೆರವಾಗುತ್ತದೆ. ದೇಹದ ವಿಷವನ್ನು ಹೊರ ಹಾಕಲು ನೆರವಾಗುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಆಹಾರದಲ್ಲಿ ಹಲಸಿನ ಹಣ್ಣು ಸೇರಿಸಬಹುದು.

Jackfruit , health benefits, ಹಲಸಿನ ಹಣ್ಣು, ಆರೋಗ್ಯ ಪ್ರಯೋಜನಗಳು

ಹಲಸಿನ ಹಣ್ಣಿನ ಅಡ್ಡಪರಿಣಾಮಗಳು…!

ಜಾಕ್ ಫ್ರೂಟ್ ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಆದರೆ ಅತಿಯಾಗಿ ಸೇವಿಸುವುದರಿಂ ದೇಹಕ್ಕೆ ಹಾನಿಕಾರಕವಾಗಬಲ್ಲದ್ದು, ಸೈಡ್ ಎಫೆಕ್ಟ್ ಹೀಗಿವೆ..

ಮಧುಮೇಹ ಬರುವ ಸಾಧ್ಯತೆ ಹೆಚ್ಚು
ಅಲರ್ಜಿ
ಅತಿಸಾರ

ಸ್ನೇಹಿತರೇ, ಜಾಕ್ ಫ್ರೂಟ್ ಹಣ್ಣಿನಲ್ಲಿ ಔಷಧೀಯ ಗುಣಗಳಿವೆ. ಕಾಯಿಲೆ ಹಾಗೂ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಜಾಕ್ ಫ್ರೂಟ್ ಹಣ್ಣನ್ನು ಸೇರಿಸಿಕೊಳ್ಳಬಹುದು. ಆದ್ರೆ ನಿಯಮಿತ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ