ಬಿರಿಯಾನಿ ಅಂದ್ರೆ ಭಾರತೀಯರಿಗೆ ಅಚ್ಚು ಮೆಚ್ಚಂತೆ..!

  • by

ಪ್ರತಿಯೊಬ್ಬ ಭಾರತೀಯರಿಗೂ ಬಿರಿಯಾನಿ ಅಂದ್ರೆ ಅಚ್ಚುಮೆಚ್ಚಿನ ಖಾದ್ಯ, ನೂರಾರು ತರೇಹವಾರಿ ತಿಂಡಿಗಳು ನಮ್ಮ ಆಹಾರದಲ್ಲಿ ನಾವು ನಿತ್ಯವು ಸೇವಿಸುತ್ತೇವೆ. ಆದ್ರೆ ನಿಮಗೆ ಗೊತ್ತಾ , ಆಹಾರದ ವಿಷಯದಲ್ಲಿ ಭಾರತೀಯರು ಹೆಚ್ಚು ಬಿರಿಯಾನಿಯನ್ನು ಇಷ್ಟಪಡ್ತಾರಂತೆ. ಪ್ರತಿಯೊಬ್ಬರು ಬಿರಿಯಾನಿಯನ್ನು ಹೆಚ್ಚು ಆರ್ಡರ್ ಮಾಡುತ್ತಾರಂತೆ. ಹೀಗಾಗಿ ಆಹಾರದಲ್ಲಿ ಬಿರಿಯಾನಿ ಟಾಪ್ ಸ್ಥಾನ ಪಡೆದುಕೊಂಡಿದೆ. 

indians loved-dish, biryani, ಭಾರತೀಯರು, ಬಿರಿಯಾನಿ

ಬಿರಿಯಾನಿ ಅಂದ್ರೆ ಸಾಕು ಬಿರಿಯಾನಿ ಪ್ರಿಯರ ಬಾಯಲ್ಲಿ ನೀರು ಬರುವುದು ಸಹಜ… ಬಿರಿಯಾನಿ ಹೆಸರು ಕೇಳಿದರೆ ಸಾಕು ತಕ್ಷಣ ತಿನ್ನಬೇಕು ಎನ್ನಿಸದೇ ಇರದು.. ಈದ್, ಮದುವೆ ಸಮಾರಂಭ, ವಿಶೇಷ ಕಾರ್ಯಕ್ರಮಗಳಲ್ಲಿ ಬಿರಿಯಾನಿ ಎಲ್ಲರನ್ನು ಆಕರ್ಷಿಸುತ್ತದೆ. ಇನ್ನು ಹೈದ್ರಾಬಾದ್ ಬಿರಿಯಾನಿ ಬಗ್ಗೆ ನೀವು ಕೇಳಿರಬಹುದು. ಪ್ರಪಂಚದಾಂದ್ಯತ ಹೆಚ್ಚು ಪ್ರಖ್ಯಾತಿ ಪಡೆದಿದೆ. 

ಸ್ವಿಗ್ಗಿ ವಾರ್ಷಿಕ ವರದಿಯಲ್ಲಿ , ಪ್ರತಿ ನಿಮಿಷಕ್ಕೆ ೯೫ ಆರ್ಡರ್ ಗಳನ್ನು ಬಿರಿಯಾನಿ ಮಾಡಲಾಗುತ್ತದೆಯಂತೆ. ಯೆಸ್, ಬಿರಿಯಾನಿಯನ್ನು ಹೆಚ್ಚು ಜನರು ತುಂಬಾ ಇಷ್ಟಪಡುತ್ತಾರೆ. ಕಳೆದ ಎರಡು ವರ್ಷಗಳಿಂದ ಬಿರಿಯಾನಿ ಅತಿ ಹೆಚ್ಚು ಆರ್ಡರ್ ಗಳನ್ನು ಹೊಂದಿದೆಯಂತೆ. ಇನ್ನು ಹೆಚ್ಚಾಗಿ ಚಿಕನ್ ಬಿರಿಯಾನಿಯನ್ನೇ ಜನರು ಹೆಚ್ಚು ಇಷ್ಟಪಡ್ತಾರಂತೆ. 

ನಮ್ಮ ದೇಶದಲ್ಲಿ ಒಟ್ಟು ೨೦ ಬಗೆಯ ಬಿರಿಯಾನಿಗಳು ಕಂಡು ಬರುತ್ತವೆ. ಪ್ರತಿಯೊಂದು ಬಿರಿಯಾನಿ, ವಿಭಿನ್ನ ಸುಹಾಸನೆ , ರುಚಿಕರ, ಸ್ವಾದಿಷ್ಟಗಳನ್ನು ಹೊಂದಿದೆ. 

ಬಿರಿಯಾನಿಯ ವಿವಿಧ ಬಗೆಗಳು…! 

ಬಾಸುಮತಿ ಅಕ್ಕಿ ಬಿರಿಯಾನಿ ,ಕಲ್ಕತ್ತ ಬಿರಿಯಾನಿ , ಲಕ್ನೋವಿ ಬಿರಿಯಾನಿ ,ಮುಘಲೈ ಬಿರಿಯಾನಿ ,ಅಂಬೂರ ಬಿರಿಯಾನಿ , ಸಿಂಧಿ ಬಿರಿಯಾನಿ , ಭಟ್ಕಲಿ ಬಿರಿಯಾನಿ , ಬೇರಿ ಬಿರಿಯಾನಿ , ಅಸ್ಸಾಮೀಸ್ ಕಂಪುರಿ ಬಿರಿಯಾನಿ , ದಿಂಡಿಗಲ್ ತಲ್ಲಪ್ಪಕಟ್ಟಿ ಬಿರಿಯಾನಿ , ತಾಹಿರಿ ಬಿರಿಯಾನಿ , ಮೆಮೋನಿ ಬಿರಿಯಾನಿ , ಮಲಬಾರ್ ಬಿರಿಯಾನಿ, ಕಾಶ್ಮೀರಿ ಬಿರಿಯಾನಿ, ಹೈದರಾಬಾದಿ ದಮ್ ಚಿಕನ್ ಬಿರಿಯಾನಿ, ಸಿಗಡಿ ಬಿರಿಯಾನಿ , ಮಟನ್ ಬಿರಿಯಾನಿ , ಸೋಯಾ ಬಿರಿಯಾನಿ ಸೇರಿದಂತೆ ಹಲವು ಬಿರಿಯಾನಿ ಕಾಣಬಹುದು.

ಕಾಶ್ಮೀರಿ ಬಿರಿಯಾನಿ

ಕಾಶ್ಮೀರಿ ಬಿರಿಯಾನಿ ಹೆಚ್ಚು ಖ್ಯಾತಿ ಪಡೆದಿರುವ ಖಾದ್ಯಗಳಲ್ಲಿ ಒಂದು. ಕಾಶ್ಮೀರಿ ಬಿರಿಯಾನಿ ಜಗತ್ತಿನಾದ್ಯಂತ ಹೆಚ್ಚು ಸೇವಿಸಲ್ಪಡುವ ಖಾದ್ಯವಾಗಿದೆ.

indians loved-dish, biryani, ಭಾರತೀಯರು, ಬಿರಿಯಾನಿ

ಹೈದ್ರಾಬಾದಿ ಪಕ್ಕಿ ಬಿರಿಯಾನಿ

ಅತ್ಯಂತ ಆರೊಮ್ಯಾಟಿಕ್ ಮತ್ತು ಖಾರದ ತಿನಿಸುಗಳಲ್ಲಿ ಒಂದಾದ ಈ ಬಿರಿಯಾನಿಯನ್ನು ರೋಸ್ ವಾಟರ್ ನ್ನು ಹಾಗೂ ಕೇಸರಿಯನ್ನು ಇದಕ್ಕೆ ಚಿಮುಕಿಸಲಾಗುತ್ತದೆ. ಬಿರಿಯಾನಿ ಮೇಲೆ ಮೆಣಸಿನಕಾಯಿ ಪುದೀನಾ ಎಲೆಗಳಿಂದ ಲೇಯರ್ಡ್ ಮಾಡಲಾಗುತ್ತದೆ. ಹೈದ್ರಾಬಾದಿ ಪಕ್ಕಿ ಬಿರಿಯಾನಿ ಇತರ ಯಾವುದೇ ರೀತಿಯ ಬಿರಿಯಾನಿಗಳಿಗಿಂತ ಮಸಾಲೆಯುಕ್ತವಾಗಿದೆ. 

ಕಲ್ಕತ್ತಾ ಬಿರಿಯಾನಿ 

ಬೆಂಗಾಲಿ ಜನರ ಪ್ರಿಯವಾದ ಆಹಾರ ಅಂತಲೇ ಹೇಳಬಹುದು. ಕಲ್ಕತ್ತಾ ನಗರಗಳಲ್ಲಿ ಈ ಬಿರಿಯಾನಿ  ಹೆಚ್ಚು ಪ್ರಚಲಿತ. ಆಲುಗಡ್ಡೆ  ಹಾಗೂ ಬೇಯಿಸಿದ ಅಕ್ಕಿ, ಮೌಂಸ ಹಾಗೂ ಬೇಯಿಸಿದ ಮೊಟ್ಟೆಯೊಂದಿಗೆ  ಲೇಯರ್ಡ್ ಮಾಡಲಾಗುತ್ತದೆ. 

ಲಕ್ನೋವಿ ಬಿರಿಯಾನಿ 

ಲಕ್ನೋ ದಲ್ಲಿ ಬೀದಿ ಬೀದಿಗಳಲ್ಲಿ ಈ ಬಿರಿಯಾನಿ ಕಾಣಬಹುದು. ಇದು ಪರಿಮಳವನ್ನು ಹೊಂದಿರುತ್ತದೆ. ಇದು ತಯಾರಿಕೆಯಲ್ಲಿ ಕಲ್ಕತ್ತಾ ಬಿರಿಯಾನಿಯನ್ನು ಹೋಲುತ್ತದೆ. ಆದ್ರೆ ಆಲುಗಡ್ಡೆ ಇದಕ್ಕೆ ಬಳಸಲಾಗುವುದಿಲ್ಲ. ಇದಕ್ಕೆ ಕೆಲ ಮಸಾಲೆಗಳನ್ನು ಬಳಸಲಾಗುತ್ತದೆ. ಆದ್ರೆ ಸುವಾಸನೆ ಮತ್ತು ಸಮೃದ್ಧ ಪರಿಮಳವನ್ನು ಹೊಂದಿದೆ. 

ಮಲಬಾರ್ ಬಿರಿಯಾನಿ 

ಮಲಬಾರ್ ಬಿರಿಯಾನಿ ಭಾರತದ ಅತ್ಯಂಕ ಪ್ರಿಯವಾದ ಪಾಕವಿಧಾನಗಳಲ್ಲಿ ಒಂದು. ನಿಮ್ಮ ರುಚಿಗೆ ಅನುಗುಣವಾಗಿ ಸಿಹಿ ಮತ್ತು ಉಪ್ಪು ರುಚಿಯಲ್ಲಿ ಆನಂದಿಸಬಹುದು. ಇದನ್ನು ಚಿಕನ್ , ಅಕ್ಕಿ , ಅರಶಿಣ ಮತ್ತು ಮಸಾಲೆಗಳನ್ನು ಹಾಕಿ ತಯಾರಿಸಲಾಗುತ್ತದೆ. 

indians loved-dish, biryani, ಭಾರತೀಯರು, ಬಿರಿಯಾನಿ

ಮೊಘಲೈ ಬಿರಿಯಾನಿ ಭಕ್ಷ್ಯಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ನವಾಬರ ಕಾಲದಲ್ಲಿ ಮೊಘಲೈ ಹೆಚ್ಚು ಖ್ಯಾತಿ ಪಡೆದಿತ್ತು. ಹಾಗಾಗಿ ಇದರ ಹೆಸರು ಮೊಫಲೈ ಬಿರಿಯಾನಿ ಅಂತ ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ಬಿರಿಯಾನಿಯನ್ನು 

ಅಂಬೂರ ಬಿರಿಯಾನಿ 

ಅಂಬೂರ ಬಿರಿಯಾನಿಯನ್ನು ಹೆಚ್ಚಾಗಿ ತಮಿಳುನಾಡಿನಲ್ಲಿ ಕಾಣಬಹುದು. ತಯಾರಿಕೆಯಲ್ಲಿ ದಕ್ಷಿಣ ಭಾರತದ ವಿಶಿಷ್ಟತೆಯವನ್ನು ಅಂಬೂರ್ ಬಿರಿಯಾನಿ ಹೊಂದಿದೆ. 

ಸಿಂದಿ ಬಿರಿಯಾನಿ 

ಈ ಖಾದ್ಯವು ಬಿರಿಯಾನಿಗಿಂತ ಭಿನ್ನವಾಗಿದೆ. ಇದನ್ನು ನುಣ್ಣಗೆ ಕತ್ತರಿಸಿದ ಮೆಣಸಿನಕಾಯಿ, ಕೊತ್ತಂಬರಿ, ತಾಜಾ ಪುದೀನಾ ಹಾಗೂ ಹುರಿದ ಮಸಾಲೆ ಜತೆ ನೊಡಬಹುದು. 

ಭಟ್ಕಲಿ ಬಿರಿಯಾನಿ..!

ಕರ್ನಾಟಕದ ಕರಾವಳಿಯಲ್ಲಿ ಭಟ್ಕಲಿ ಬಿರಿಯಾನಿ ಹೆಚ್ಚು ತಯಾರಿಸಲಾಗುತ್ತದೆ. ಅಕ್ಕಿ ಹಾಗೂ ಕೋಳಿ ಮಾಂಸದಿಂದ ಇದನ್ನು ತಯಾರಿಸಲಾಗುತ್ತದೆ. ಅಕ್ಕಿ ಮತ್ತು ಕೋಳಿಯನ್ನು ಮಸಾಲೆಗಳಿಂದ ತಯಾರಿಸಲಾಗುತ್ತದೆ. 

ಬೇರಿ ಬಿರಿಯಾನಿ..!

ಇದು ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿರುವ ಮುಸ್ಲಿಂ ಸಮುದಾಯದಿಂದ ತಯಾರಿಸಲ್ಪಟ್ಟಿತ್ತು. ಬಿರಿಯಾನಿ ಗಿಂತ ತುಸು ಭಿನ್ನವಾಗಿ ಇದನ್ನು ತಯಾರಿಸಲಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ