ಶಿವ ಶಿವ ಎಂದರೆ ಭಯವಿಲ್ಲ.. ಶಿವರಾತ್ರಿ ಹಬ್ಬದ ಮಹತ್ವ.. ಹೇಗೆ ಆಚರಿಸಲಾಗುತ್ತದೆ?

  • by

ಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು… ಶಿವರಾತ್ರಿ ದಿನ ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಭಕ್ತವೃಂದ್ಧ ಶಿವನನ್ನು ಆರಾಧಿಸಿ, ಪುನೀತರಾಗುತ್ತಾರೆ. ಮಾಘ ಮಾಸದ ಬಹುಳ ಚತುದರ್ಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. 

ಶಿವರಾತ್ರಿಯ ಮಹಿಮೆ ಎಂಥದ್ದು?

ಶಿವನಿಗೆ ಶಿವರಾತ್ರಿ ಅಂದ್ರೆ ಪ್ರಿಯವಾದ ದಿನ..!

ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅಂದ್ರೆ ಅತ್ಯಂತ ಪ್ರಿಯವಾದ ದಿನ. ಈ ದಿನದಂದು ತನ್ನನ್ನು ಪೂಜಿಸಿ, ಭಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವಂತಃ ಶಿವನೇ ಪಾರ್ವತಿಯಲ್ಲಿ ಹೇಳಿರುತ್ತಾನೆ ಎಂದು ಶಿವ ಪುರಾಣ ಹೇಳುತ್ತದೆ. ವಿಶೇಷವೆಂದರೆ ಈ ದಿನ ಶಿವ-ಪಾರ್ವತಿ ಇಬ್ಬರು ವಿವಾಹವಾದ ದಿನ.. ಪಾರ್ವತಿ ಹಿಮವಂತನ ಮಗಳು, ಈ ದಿನ ಪಾರ್ವತಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಪೂಜಿಸಿ ವಿವಾಹವಾದಳು ಎಂಬುದು ಪ್ರತೀತಿ ಇದೆ. ಅಲ್ಲದೇ ನೀಲಕಂಠ ಶಿವ ಈ ದಿನದಂದೇ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರು ಮಧ್ಯೆ ಸಮುದ್ರ ಮಂಠನ ನಡೆದು ವಿಷ ಉದ್ಭವಾದಾಗ,, ಆಗ ವಿಷವನ್ನು ಶಿವ ಕುಡಿದು, ಜಗತ್ತನ್ನು ವಿನಾಶದಿಂದ ಪಾರು ಮಾಡಿದ್ದು ಕೂಡಾ ಮಾಡಿದ್ದು ಇದೇ ಸಮಯಲ್ಲಿ. ಆ ದಿನ ಪಾರ್ವತಿ ಇಡೀ ದಿನ ವಿಷ ಗಂಟಲೊಳಗೆ ಇಳಿಯದಂತೆ ತಡೆದಳು ಎಂದು ಹೇಳಲಾಗುತ್ತದೆ. ಹಾಗಾಗಿ ಶಿವರಾತ್ರಿ ದಿನದಂದು ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ಶಿವನನ್ನು ಆರಾಧಿಸುತ್ತಾರೆ. ಇನ್ನು ಭಗೀರಥನ ತಪ್ಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದಾನೆ.. ಇದ್ರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು. ಅಲ್ಲದೇ ಶಿವನ ಆದಿ ಹಾಗೂ ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ ಶಿವರಾತ್ರಿಯ ದಿನದಂದೇ ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬ ಪ್ರತೀತಿ ಇದೆ. 

ಹಬ್ಬದ ವೇಳೆ ಉಪವಾಸ 

ಈ ದಿನದಂದು ಭಕ್ತರು ಲಘು ಆಹಾರ, ಉಪಹಾರ ಸೇವಿಸಿದರೆ, ಮತ್ತೆ ಕೆಲ ಭಕ್ತರು ದಿನವಿಡಿ ಏನನ್ನೂ ತಿನ್ನದೇ, ನೀರನ್ನು ಕುಡಿಯದೆ ಉಪವಾಸ ಇರುತ್ತಾರೆ. ಭಸ್ಮ ಲೇಪಿಸಿಕೊಂಡು ಬಿಲ್ವಾರ್ಚನೆ ಮೂಲಕ ರುದ್ರ ಪಠಣ ಹಬ್ಬದ ವಿಶೇಷವಾಗಿದೆ. ಶಿವರಾತ್ರಿಯ ದಿನದಂದು ಭೋಲೇನಾಥನನ್ನು ಪೂಜಿಸಿ, ಸುಖ, ಶಾಂತಿ ಹಾಗೂ ಸಮೃದ್ಧಿ ದೊರೆಯುವುದೆಂದು ಹಲವು ಭಕ್ತರು ನಂಬಿದ್ದಾರೆ. 

ಬೇಡನ ಶಿವಭಕ್ತಿಗೆ ಒಲಿದಿದ್ದ ಶಿವ..! 

ಈ ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಯಾಡಲು ತೆರಳಿದ್ದನಂತೆ. ಆಗ ದಿನವಿಡೀ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ, ದಾರಿ ತಪ್ಪಿ ಆತ ಅರಣ್ಯದಲ್ಲೇ ಅಲೆಯ ತೊಡಗುತ್ತಾನೆ. ಆಗ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರೆದಿದ್ದವು ಎಂದು ಹೇಳಲಾಗುತ್ತದೆ. ಈ ವೇಳೆ ಭಯಗ್ರಸ್ತನಾದ ಬೇಡ ಮರವೇರಿ ಕುಳಿತುಕೊಳ್ಳುತ್ತಾನೆ. ಮನದಲ್ಲೇ ಶಿವನನ್ನು ಧ್ಯಾನಿಸುತ್ತ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಿಗುತ್ತಾನೆ.. ಈ ಸಮಯದಲ್ಲಿ ಆ ಎಲೆಗಳು ಬೇಡನಿಗೆ ಅರಿವಿಲ್ಲದಂತೆ ಕೆಳಗಡೆ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿ ದಿನ ಪೂರ್ತಿ ಜಾಗರಣೆ ಯಿದ್ದ ಬೇಡ, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ. ಬೇಡನಿಗೆ ಶಿವನೇ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದನಂತೆ. ಬಳಿಕ ಈ ಸುದ್ದಿ ಎಲ್ಲಾ ಕಡೆ ಹರಡಿತು. ಹೀಗಾಗಿಯೇ ಶಿವರಾತ್ರಿ ದಿನದಂದೇ ಜನರು ಶಿವನನ್ನು ಪೂಜಿಸಲು ಪ್ರಾರಂಭಿಸಿದರು. ಇನ್ನು ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. 

2 ಪುಣ್ಯ ಜ್ಯೋರ್ತಿಲಿಂಗಗಳು..!

ಸೋಮನಾಥ ದೇವಾಲಯ

ಮಲ್ಲಿಕಾರ್ಜುನ ದೇವಾಲಯ

ಮಹಾ ಕಾಲೇಶ್ವರ ದೇವಲಯ

ಓಂಕಾರೇಶ್ವರ

ಗ್ರೀಶನೇಶ್ವರ

ರಾಮೇಶ್ವರಂ 

ನಾಗನಾಥ

ವೈದ್ಯನಾಥ 

ತ್ರಯಂಭಕೇಶ್ವರ 

ವಿಶ್ವೇಶ್ವರ

ಭೀಮಾಶಂಕರ

ಕೇದಾರನಾಥ 

”ಹೇ ಮಹಾದೇವ ನನ್ನಿಂದ ತಿಳಿದೋ, ತಿಳಿಯದೆ ಆದ

ತಪ್ಪುಗಳನ್ನು ಮನ್ನಿಸು, ನಿನ್ನಲ್ಲಿ ಸದಾಕಾಲವು ಶರಣಾಗಿರುವಂತೆ 

ನೋಡಿಕೋ, ನೀನು ಕೊಟ್ಟ ಕೆಲಸಗಳನ್ನೇ ನನ್ನ ಕರ್ತವ್ಯವೆಂದುು

ಭಾವಿಸಿ, ಪ್ರೀತಿಸಿ ಮಾಡುವಂತೆ ನೋಡಿಕೋ..”

ಸರಳ ಶಿವ ಮಂತ್ರಗಳು…!

  1. ಶಿವ ಪಂಚಾಕ್ಷರಿ ಮಂತ್ರ..

ಓಂ ನಮಃ ಶಿವಾಯಂ 

2. ರುದ್ರ ಗಾಯತ್ರಿ ಮಂತ್ರಃ

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ

ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯಮಾಮೃತಾತ್

3. ರುದ್ರ ಮಂತ್ರ 

ಓಂ ನಮೋ ಭಗವತೇ ರುದ್ರಾಯ

ಪವಿತ್ರ ದೇವಾಲಯಗಳು!

ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ , ದೇಶದ ಹಲವು ಕಡೆಗಳಲ್ಲಿ ಶಿವ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು ನೆರವೇರುತ್ತವೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಧಿಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರ ಪಠಣದ ಜತೆ ಜಾಗರಣೆ ನಡೆಸಲಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ